RE Super Meteor 650: ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೋರ್ 650 ಖರೀದಿಗಾಗಿ ಬುಕಿಂಗ್ ಆರಂಭ
ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಹೊಸ ಸೂಪರ್ ಮಿಟಿಯೋರ್ 650 ಕ್ರೂಸರ್ ಬೈಕ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಬೈಕ್ ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದೆ.
ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್(Royal Enfield) ಕಂಪನಿಯು ತನ್ನ ಬಹುನೀರಿಕ್ಷಿತ ಸೂಪರ್ ಮಿಟಿಯೋರ್ 650(Super Meteor 650) ಬೈಕ್ ಆವೃತ್ತಿಯನ್ನು ಮುಂಬರುವ ಜನವರಿಯಲ್ಲಿ ಬಿಡುಗಡೆ ಮಾಡಲಿದ್ದು, ಇದೀಗ ಕಂಪನಿಯು ರೈಡರ್ ಮೆನಿಯಾದಲ್ಲಿ ಅನಾವರಣಗೊಳಿಸುವ ಮೂಲಕ ಅಧಿಕೃತ ಬುಕಿಂಗ್ ಆರಂಭಿಸಿದೆ. ಹೊಸ ಬೈಕ್ ಮಾದರಿಯನ್ನು ಇಟಾಲಿಯ ಮಿಲಾನಾದಲ್ಲಿ ನಡೆದ 2022ರ ಅಂತಾರಾಷ್ಟ್ರೀಯ ಮೋಟಾರ್ ಸೈಕಲ್ ಮತ್ತು ಆಕ್ಸೆಸರಿಸ್ ಎಕ್ಸಿಬಿಷನ್ ನಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದ ನಂತರ ಇದೀಗ ಭಾರತದಲ್ಲಿ ರೈಡರ್ ಮೆನಿಯಾದಲ್ಲಿ ಅನಾವರಣಗೊಳಿಸಿ ಬುಕಿಂಗ್ ಆರಂಭಿಸಿದೆ.
ಬಿಡುಗಡೆಯ ಅವಧಿ
ಮಾಹಿತಿಗಳ ಪ್ರಕಾರ ಹೊಸ ಬೈಕ್ ಮಾದರಿಯು 2023ರ ಜನವರಿಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಹೊಸ ಬೈಕ್ ಮಾದರಿಯು ಭಾರತದಲ್ಲಿ ಮಾತ್ರವಲ್ಲ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೂ ಲಗ್ಗೆಯಿಡಲಿದೆ. ಇದು ಕಂಪನಿಯ 650 ಸಿಸಿ ಬೈಕ್ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣಗೊಂಡಿದ್ದು, ಹಾರ್ಲೆ ಡೇವಿಡ್ಸನ್ ಕಂಪನಿಯ ಪ್ರಮುಖ ಎಂಟ್ರಿ ಲೆವಲ್ ಕ್ರೂಸರ್ ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಿದೆ.
ಇದನ್ನೂ ಓದಿ: ವಿಡಾ ವಿ1 ಪ್ಲಸ್ ಮತ್ತು ವಿ1 ಪ್ರೊ ವಿತರಣೆಗೂ ಮುನ್ನ ನಮ್ಮ ಬೆಂಗಳೂರಿನಲ್ಲಿ ಮೊದಲ ಶೋರೂಂ ಆರಂಭ
ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ಸೂಪರ್ ಮಿಟಿಯೋರ್ 650 ಕ್ರೂಸರ್ ಬೈಕಿನಲ್ಲಿ 648 ಸಿಸಿ ಪ್ಯಾರಾಲೆಲ್-ಟ್ವಿನ್ ಎಂಜಿನ್ ಜೋಡಣೆ ಪಡೆದುಕೊಂಡಿದ್ದು, ಇದು 6-ಸ್ಪೀಡ್ ಗೇರ್ ಬಾರ್ಕ್ಸ್ ನೊಂದಿಗೆ 46.3 ಬಿಎಚ್ ಪಿ ಮತ್ತು 52.3 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ. ನ್ಯೂ ಸ್ಟ್ರೀಲ್ ಟ್ಯುಬಲರ್ ಸ್ಪೀನ್ ಫ್ರೇಮ್ ಹೊಂದಿರುವ ಹೊಸ ಬೈಕಿನಲ್ಲಿ 43 ಎಂಎಂ ಅಪ್ ಸೈಡ್ ಡೌನ್ ಫೋರ್ಕ್ ಮತ್ತು 120 ಎಂಎಂ ಫ್ರಂಟ್ ಟ್ರಾವೆಲ್ ಟ್ವಿನ್ ಶಾಕ್ ಮತ್ತು ಹಿಂಬದಿಯಲ್ಲಿ 101 ಎಂಎಂ ಟ್ರಾವೆಲ್ ಸಸ್ಷೆಂಷನ್ ನೀಡಲಾಗಿದೆ.
ಉದ್ದಳತೆ ಮತ್ತು ಗ್ರೌಂಡ್ ಕ್ಲಿಯೆರೆನ್ಸ್
ಸೂಪರ್ ಮಿಟಿಯೋರ್ 650 ಬೈಕ್ ಮಾದರಿಯು ಕ್ರೂಸರ್ ಬೈಕ್ ಪ್ರಿಯರಾಗಿಯೇ ವಿಶೇಷವಾಗಿ ಸಿದ್ದವಾಗಿದ್ದು, ಹೊಸ ಬೈಕ್ ಮಾದರಿಯು 2,260 ಉದ್ದ, 890 ಎಂಎಂ ಅಗಲ, 1,155 ಎಂಎಂ ಎತ್ತರ, 740 ಎಂಎಂ ಸೀಟ್ ಎತ್ತರ ಮತ್ತು 135 ಗ್ರೌಂಡ್ ಕ್ಲಿಯೆರೆನ್ಸ್ ಪಡೆದುಕೊಂಡಿದೆ. ಇದರೊಂದಿಗೆ ಹೊಸ ಬೈಕಿನಲ್ಲಿ 15.7 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ನೀಡಲಾಗಿದ್ದು, ಒಟ್ಟಾರೆಯಾಗಿ ಹೊಸ ಬೈಕ್ ಬರೋಬ್ಬರಿ 241 ಕೆ.ಜಿ ತೂಕ ಹೊಂದಿರಲಿದೆ.
ಡಿಸೈನ್ ಮತ್ತು ಫೀಚರ್ಸ್
650 ಟ್ವಿನ್ ಬೈಕ್ ಮಾದರಿಗಳ ಜೊತೆ ಸ್ಟ್ಯಾಂಡರ್ಡ್ ಮಿಟಿಯೋರ್ ಆಧರಿಸಿರುವ ಹೊಸ ಬೈಕ್ ಮಾದರಿಯು ಅತ್ಯುತ್ತಮ ಡಿಸೈನ್ ಪಡೆದುಕೊಂಡಿದ್ದು, ಸ್ಪೋಟಿಯಾಗಿರುವ ಎಲ್ಇಡಿ ಲೈಟಿಂಗ್ಸ್ ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿದೆ. ಜೊತೆಗೆ ಕ್ಲಾಸಿಕ್ ಸ್ಟೈಲಿಷ್ ಲುಕ್ ಹೊಂದಿರುವ ಹೆಡ್ ಲ್ಯಾಂಪ್, ವೈಡ್ ಹ್ಯಾಂಡಲ್ ಬಾರ್, ಟಿಯರ್ ಡ್ರಾಪ್ ಶೈಲಿಯ ಫ್ಯೂಲ್ ಟ್ಯಾಂಕ್, ಫೀಟ್ ಫಾರ್ವಡ್ ಫುಟ್ ಕಂಟ್ರೋಲ್ ಸೌಲಭ್ಯಗಳಿವೆ. ಹಾಗೆಯೇ ಹೊಸ ಬೈಕಿನಲ್ಲಿ ಕಂಪನಿಯು ಆಸ್ಟ್ರಲ್ ಬ್ಲ್ಯಾಕ್, ಅಸ್ಟ್ರಾಲ್ ಬ್ಲ್ಯೂ, ಅಸ್ಟ್ರಾಲ್ ಗ್ರೀನ್, ಇಂಟರ್ಸ್ಟೆಲರ್ ಗ್ರೇ, ಇಂಟರ್ಸ್ಟೆಲರ್ ಗ್ರೀನ್, ಸೆಲೆಸ್ಟ್ರಿಯಲ್ ರೆಡ್, ಸೆಲೆಸ್ಟ್ರಿಯಲ್ ಬ್ಲ್ಯೂ ಬಣ್ಣಗಳ ಆಯ್ಕೆ ನೀಡಿದ್ದು, ಇದರಲ್ಲಿ ಸೆಲೆಸ್ಟ್ರಿಯಲ್ ಬಣ್ಣಗಳ ಆಯ್ಕೆ ಟಾಪ್ ಎಂಡ್ ಟೂರರ್ ವೆರಿಯೆಂಟ್ ಮಾತ್ರ ಖರೀದಿಗೆ ಲಭ್ಯವಿರಲಿವೆ.
ಇದನ್ನೂ ಓದಿ: ಬಿಡುಗಡೆಯಾಗಲಿದೆ ಬಲಶಾಲಿ ಹೀರೋ ಎಕ್ಸ್ ಪಲ್ಸ್ 200ಟಿ 4ವಿ ವರ್ಷನ್
ಸುರಕ್ಷಾ ಸೌಲಭ್ಯಗಳು
ಹೊಸ ಸೂಪರ್ ಮಿಟಿಯೋರ್ 650 ಬೈಕ್ ಮಾದರಿಯಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಭಾಗದ ಚಕ್ರದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು 300 ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯದೊಂದಿಗೆ ಟು ಪಿಸ್ಟನ್ ಕ್ಯಾಲಿಪರ್ ಸೌಲಭ್ಯಗಳನ್ನು ನೀಡಲಾಗಿದೆ. ಹಾಗೆಯೇ ಹೊಸ ಬೈಕಿನಲ್ಲಿ ಕಂಪನಿಯು ಡ್ಯುಯಲ್ ಚಾನೆಲ್ ಎಬಿಎಸ್, 19 ಇಂಚಿನ ಫ್ರಂಟ್ ವ್ಹೀಲ್ ಜೊತೆ 100/90 -19M/C 57H ಟ್ಯೂಬ್ ಲೆಸ್ ಟೈರ್ ಮತ್ತು 16 ಇಂಚಿನ ರಿಯರ್ ವ್ಹೀಲ್ ಜೊತೆ 150/80 B16 M/C 71H ಟ್ಯೂಬ್ ಲೆಸ್ ಟೈರ್ ಹೊಂದಿರಲಿದೆ.
Published On - 1:29 pm, Sun, 20 November 22