AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maruti Suzuki: 7 ಸೀಟರ್ ನಲ್ಲಿ ಬರಲಿದೆ ಹೊಸ ಗ್ರ್ಯಾಂಡ್ ವಿಟಾರಾ!

ಭಾರತದಲ್ಲಿ ಎಸ್ ಯುವಿ ಕಾರುಗಳಿಗೆ ಭಾರೀ ಬೇಡಿಕೆ ಹರಿದುಬರುತ್ತಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಎಸ್ ಯುವಿ ಮಾದರಿಗಳು ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿವೆ. ಬಿಡುಗಡೆಯಾಗಲಿರುವ ಹೊಸ ಎಸ್ ಯುವಿ ಕಾರುಗಳಲ್ಲಿ ಮಾರುತಿ ಸುಜುಕಿ ನಿರ್ಮಾಣದ 7 ಸೀಟರ್ ಆವೃತ್ತಿಯೊಂದು ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

Maruti Suzuki: 7 ಸೀಟರ್ ನಲ್ಲಿ ಬರಲಿದೆ ಹೊಸ  ಗ್ರ್ಯಾಂಡ್ ವಿಟಾರಾ!
ಬರಲಿದೆ ಹೊಸ 7 ಸೀಟರ್ ಗ್ರ್ಯಾಂಡ್ ವಿಟಾರಾ !
Praveen Sannamani
Praveen Sannamani|

Updated on:Jan 10, 2023 | 5:33 PM

Share

ಪ್ರಯಾಣಿಕರ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ(Maruti Suzuki) ಕಂಪನಿ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಸಿದ್ದತೆ ನಡೆಸುತ್ತಿದೆ. ಹೊಸ ಕಾರುಗಳಲ್ಲಿ ಕಂಪನಿಯು ಈ ಬಾರಿ ಸಣ್ಣ ಕಾರುಗಳಿಂತ ಎಸ್ ಯುವಿ ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಗ್ರ್ಯಾಂಡ್ ವಿಟಾರಾ(Grand Vitara) ಕಾರು ಮಧ್ಯಮ ಕ್ರಮಾಂಕದ ಎಸ್ ಯುವಿ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಇದೀಗ ಇದೇ ಕಾರು ಮಾದರಿಯನ್ನು ಆಧರಿಸಿ 7 ಸೀಟರ್ ಆವೃತ್ತಿ ಬಿಡುಗಡೆ ಮಾಡಲಾಗುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಕಾರು ಕಂಪನಿಗಳ ಹಲವು ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರು ಮಾದರಿಗಳು 5 ಸೀಟರ್ ಜೊತೆಗೆ 7 ಸೀಟರ್ ಆಯ್ಕೆಗಳನ್ನು ಹೊಂದಿದ್ದು, ಗ್ರ್ಯಾಂಡ್ ವಿಟಾರಾದಲ್ಲೂ ಕೂಡಾ ಹೊಸ ಆವೃತ್ತಿ ಬಿಡುಗಡೆಯ ನೀರಿಕ್ಷೆಯಿದೆ. ಹೊಸ ಆವೃತ್ತಿಗಾಗಿ ಮಾರುತಿ ಸುಜುಕಿ ಕಂಪನಿಯು ಈಗಾಗಲೇ ವೈ17 ಸಂಕೇತ ನಾಮದೊಂದಿಗೆ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ನಡೆಸುತ್ತಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ಪ್ರೇರಿತ ಗ್ರ್ಯಾಂಡ್ ವಿಟಾರಾ ಸಿಎನ್​ಜಿ ಬಿಡುಗಡೆ

ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳ ವಿಭಾಗದಲ್ಲಿ ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಟಾಟಾ ಸಫಾರಿ, ಮಹೀಂದ್ರಾ ಎಕ್ಸ್ ಯುವಿ700 ಮತ್ತು ಎಂಜಿ ಹೆಕ್ಟರ್ ಪ್ಲಸ್ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿವೆ. ಹೀಗಾಗಿ ಮಾರುತಿ ಸುಜುಕಿ ಕಂಪನಿಯು ಕೂಡಾ ಗ್ರ್ಯಾಂಡ್ ವಿಟಾರಾ ಮಾದರಿಯಲ್ಲಿಯೇ 5 ಸೀಟರ್ ಜೊತೆಗೆ 7 ಸೀಟರ್ ಮಾದರಿಯನ್ನು ಸಹ ಪರಿಚಯಿಸಲು ಮುಂದಾಗಿದೆ. ಆದರೆ ಹೊಸ ಕಾರಿನಲ್ಲಿ ಕಂಪನಿಯು ಮೂರನೇ ಸಾಲಿನ ಆಸನ ಹೊರತುಪಡಿಸಿ ಎಂಜಿನ್ ಆಯ್ಕೆ ಮತ್ತು ಫೀಚರ್ಸ್ ಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯೆಂತೆಯೇ ಮುಂದುವರಿಸಲಿದೆ.

ಆಸನ ಸೌಲಭ್ಯ ಮತ್ತು ಡಿಸೈನ್

ಗ್ರ್ಯಾಂಡ್ ವಿಟಾರಾ ಸಾಮಾನ್ಯ ಆವೃತ್ತಿಯು ಸದ್ಯ 4,345 ಎಂಎಂ ಉದ್ದಳತೆಯೊಂದಿಗೆ ಆರಾಮದಾಯಕವಾದ 5 ಸೀಟರ್ ಸೌಲಭ್ಯ ಹೊಂದಿದ್ದು, 7 ಸೀಟರ್ ಮಾದರಿಯು ಮೂರನೇ ಸಾಲಿನ ಆನಸಕ್ಕಾಗಿ ಹೆಚ್ಚುವರಿ ಉದ್ದಳತೆ ಹೊಂದಬಹುದಾಗಿದೆ. 7 ಸೀಟರ್ ಮಾದರಿಯು 4,500 ಎಂಎಂ ಗಿಂತಲೂ ಹೆಚ್ಚಿನ ಉದ್ದಳತೆ ಪಡೆದುಕೊಳ್ಳಬಹುದಾಗಿದ್ದು, ಇದು ಹಿಂಬದಿ ಆಸನದಲ್ಲಿ ಕೂರುವ ಪ್ರಯಾಣಿಕರಿಗೆ ಅರಾಮದಾಯಕ ಪ್ರಯಾಣ ಒದಗಿಸಲಿದೆ.

ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಪಡೆದುಕೊಳ್ಳಲಿವೆ ಈ ಟಾಪ್ 5 ಮಧ್ಯಮ ಕ್ರಮಾಂಕದ ಕಾರುಗಳು!

ಬಿಡುಗಡೆ ಮತ್ತು ಬೆಲೆ

ಇನ್ನು ಹೊಸ 7 ಸೀಟರ್ ಕಾರು ಮಾದರಿಯಲ್ಲಿ ಎಂಜಿನ್ ಆಯ್ಕೆಯು ಸಾಮಾನ್ಯ ಮಾದರಿಯಲ್ಲಿರುವಂತೆಯೇ ಮುಂದುವರಿಯಬಹುದಾಗಿದೆ. ಹೊಸ ಆವೃತ್ತಿಯ 1.5 ಲೀಟರ್ ಪೆಟ್ರೋಲ್ ಜೊತೆಗೆ 1.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ. ಇದರಲ್ಲಿ ಹೈಬ್ರಿಡ್ ಮಾದರಿಯು ಹೆಚ್ಚಿನ ಮಟ್ಟದ ಮೈಲೇಜ್ ನೀಡಲಿದ್ದು, ಬೆಲೆಯಲ್ಲೂ ಇದು ಗಮನಸೆಳೆಯಲಿದೆ. ಸದ್ಯ ಮಾರುಕಟ್ಟೆಯಲ್ಲಿ 5 ಸೀಟರ್ ಗ್ರ್ಯಾಂಡ್ ವಿಟಾರಾ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 10.45 ಲಕ್ಷದಿಂದ ರೂ. 19.65 ಲಕ್ಷ ಬೆಲೆ ಹೊಂದಿದೆ. ಆದರೆ ಹೈ ಎಂಡ್ ವೆರಿಯೆಂಟ್ ಆಧರಿಸಿರುವ 7 ಸೀಟರ್ ಮಾದರಿಯು ರೂ. 16 ಲಕ್ಷದಿಂದ ರೂ. 21 ಲಕ್ಷ ಬೆಲೆ ಹೊಂದಬಹುದಾಗಿದ್ದು, ಹೊಸ ಕಾರು ಮುಂದಿನ ಕೆಲವೇ ತಿಂಗಳಿನಲ್ಲಿ ಅಧಿೃತವಾಗಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

Published On - 5:33 pm, Tue, 10 January 23

Follow Us
Praveen Sannamani
Praveen Sannamani

Praveen Sannamani is a enthusiast and passionate Journalist in Kannada Language. Automobile and Current affairs are the interested areas

ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ