ಮಾರುತಿ ಸುಜುಕಿ ಜಿಮ್ನಿ ಎಸ್ ಯುವಿ ಖರೀದಿಯ ಮೇಲೆ ದಾಖಲೆಯ ಆಫರ್ ಘೋಷಣೆ
ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಜಿಮ್ನಿ 5 ಡೋರ್ ಆಫ್ ರೋಡ್ ಎಸ್ ಯುವಿ ಮಾದರಿಯ ಮೇಲೆ ಹಲವಾರು ಆಫರ್ ಗಳನ್ನು ಘೋಷಣೆ ಮಾಡಿದ್ದು, ಆಫ್ ರೋಡ್ ಎಸ್ ಯುವಿ ಖರೀದಿದಾರರಿಗೆ ಇದು ಸುವರ್ಣಾವಕಾಶ ಎನ್ನಬಹುದು.
ದೇಶದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ತನ್ನ ಪ್ರಮುಖ ನೆಕ್ಸಾ ಕಾರು ಮಾದರಿಗಳ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡಿದ್ದು, ಜಿಮ್ನಿ ಆಫ್ ರೋಡ್ ಎಸ್ ಯುವಿ ಕಾರು ಖರೀದಿಯ ಮೇಲೂ ಭರ್ಜರಿ ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ಕ್ಯಾಶ್ ಡಿಸ್ಕೌಂಟ್ ಜೊತೆಗೆ ಹಲವಾರು ಬೋಸನ್ ಆಫರ್ ಗಳನ್ನು ನೀಡಲಾಗುತ್ತಿದ್ದು, ಬಜೆಟ್ ಬೆಲೆಯಲ್ಲಿ ಎಸ್ ಯುವಿ ಕಾರು ಖರೀದಿಗೆ ಯೋಜನೆ ರೂಪಿಸುತ್ತಿರುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಆಯ್ಕೆ ಎನ್ನಬಹುದು.
ಜಿಮ್ನಿ ಎಸ್ ಯುವಿ ಮಾದರಿಯು ಪ್ರಮುಖ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರು ಇದರಲ್ಲಿ ಅಲ್ಫಾ ವೆರಿಯೆಂಟ್ ಖರೀದಿಯ ಹೆಚ್ಚಿನ ಆಫರ್ ಪಡೆದುಕೊಳ್ಳಬಹುದಾಗಿದೆ. ಹೊಸ ಆಫರ್ ನಲ್ಲಿ ಗರಿಷ್ಠ ರೂ. 3.30 ಲಕ್ಷದ ತನಕ ಉಳಿತಾಯ ಮಾಡಬಹುದಾಗಿದ್ದು, ಮಾರುತಿ ಸುಜುಕಿಯ ಸ್ಮಾರ್ಟ್ ಫೈನಾನ್ಸ್ ಮೂಲಕ ಖರೀದಿಸುವ ಗ್ರಾಹಕರಿಗೆ ಇನ್ನು ಹೆಚ್ಚಿನ ಆಫರ್ ದೊರೆಯುತ್ತವೆ.
ಆಫ್ ರೋಡ್ ಪ್ರಿಯರಿಗಾಗಿ ಹಲವಾರು ವಿಶೇಷತೆಗಳೊಂದಿಗೆ ಅಭಿವೃದ್ದಿಗೊಂಡಿದೆ ಜಿಮ್ನಿ ಕಾರಿನ ಜಿಟಾ ವೆರಿಯೆಂಟ್ ಖರೀದಿಯ ಮೇಲೆ ರೂ. 2.75 ಲಕ್ಷದಷ್ಟು ಆಫರ್ ಲಭ್ಯವಿದ್ದು, ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಗಳನ್ನು ಆಯ್ಕೆ ಮಾಡಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಜಿಮ್ನಿ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 12.74 ಲಕ್ಷದಿಂದ ರೂ. 14.95 ಲಕ್ಷ ಬೆಲೆ ಹೊಂದಿದ್ದು, ಇದು ಥಾರ್ ಕಾರಿಗೆ ಉತ್ತಮ ಪ್ರತಿಸ್ಪರ್ಧಿಯಾಗಿದೆ.
ಜಿಮ್ನಿ ಕಾರಿನಲ್ಲಿ ಸದ್ಯ ಮಾರುತಿ ಸುಜುಕಿ ಕಂಪನಿಯು 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, ಇದು 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಎಟಿ ಮತ್ತು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಹಾಗೆಯೇ ಹೊಸ ಕಾರು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 105 ಹಾರ್ಸ್ ಪವರ್, 134 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಇದರಲ್ಲಿ ಮ್ಯಾನುವಲ್ ಮಾದರಿಯಲ್ಲಿ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಮಾಡಲಿದೆ.
ಜೊತೆಗೆ ಹೊಸ ಕಾರು ಆಫ್ ರೋಡ್ ಪ್ರಯಾಣಕ್ಕೆ ಅನೂಕೂಲಕರವಾಗುವಂತೆ 210 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಗಳನ್ನು ನೀಡಲಾಗಿದೆ.