Maruti Suzuki Swift: ಭಾರತದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ನಿರ್ಮಾಣದ ಸ್ವಿಫ್ಟ್ ಕಾರು ಮಾದರಿಯು ಭಾರತದಲ್ಲಿ ಹಲವು ಹೊಸ ದಾಖಲೆಗಳನ್ನು ನಿರ್ಮಿಸಿದ್ದು, ಇದೀಗ ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದೆ.

Maruti Suzuki Swift: ಭಾರತದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಸ್ವಿಫ್ಟ್
ಮಾರುತಿ ಸುಜುಕಿ ಸ್ವಿಫ್ಟ್
Follow us
Praveen Sannamani
|

Updated on: May 12, 2024 | 3:56 PM

ದೇಶದ ಅಗ್ರಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ಕಂಪನಿಯು ಹಲವು ಹೊಸ ದಾಖಲೆಗಳನ್ನು ನಿರ್ಮಿಸಿದ್ದು, ಸ್ವಿಫ್ಟ್ (Swift) ಮೂಲಕ ಮೂಲಕ ಇದೀಗ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ್ದು, ಇದುವರೆಗೆ ಬರೋಬ್ಬರಿ 29 ಲಕ್ಷ ಯುನಿಟ್ ಗಳು ಮಾರಾಟಗೊಂಡಿದೆ. ಭಾರತದಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಗೊಂಡಿದ್ದ ಸ್ವಿಫ್ಟ್ ಕಾರು ಮಾದರಿಯು ತನ್ನ ವಿಶಿಷ್ಠ ತಾಂತ್ರಿಕ ಅಂಶಗಳೊಂದಿಗೆ ಇಂದಿಗೂ ಕೂಡಾ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯ ಕಾರು ಮಾದರಿಯಾಗಿ ಮುನ್ನುಗ್ಗುತ್ತಿದೆ.

ಮಧ್ಯಮ ಗಾತ್ರದ ಹ್ಯಾಚ್ ಬ್ಯಾಕ್ ಕಾರುಗಳ ವಿಭಾಗದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಸ್ವಿಫ್ಟ್ ಕಾರು ಮಾದರಿಯು ಇತ್ತೀಚೆಗೆ 4ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ತಲೆಮಾರಿನ ಗ್ರಾಹಕರಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದೆ. ಹೊಸ ಉತ್ಪಾದನಾ ಮಾನದಂಡಗಳೊಂದಿಗೆ ಈ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠತೆ ಮತ್ತು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಇದು ಕೂಡಾ ಈ ಹಿಂದಿನ ಮಾದರಿಗಿಂತಲೂ ಹೆಚ್ಚು ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

ಹೊಸ ತಲೆಮಾರಿನ ಸ್ವಿಫ್ಟ್ ಕುರಿತಾಗಿ ಮಾತನಾಡಿದ ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಅವರು, ಸ್ವಿಫ್ಟ್ ಪರಂಪರೆಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಕೊಂಡೊಯ್ಯಲು ಕಂಪನಿಯು ಬದ್ಧವಾಗಿದೆ ಎಂದಿದ್ದಾರೆ. ಜೊತೆಗೆ ಹೊಸ ಕಾರಿನಲ್ಲಿ ನೀಡಲಾಗಿರುವ ವಿಶೇಷ ಸೌಲಭ್ಯಗಳು ಚಾಲನಾ ಅನುಭವಗಳನ್ನು ಹೆಚ್ಚಿಸಲಿದ್ದು, ಹಿಂದೆಂದಿಗಿಂತಲೂ ಇದು ಹೆಚ್ಚು ಸುರಕ್ಷಿತವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಹೊಸ ಕಾರು ಖರೀದಿಸಿದ್ದೀರಾ? ಹಾಗಾದ್ರೆ ಈ ಟಿಪ್ಸ್ ತಪ್ಪದೇ ಪಾಲಿಸಿ..

Maruti Suzuki Swift (18)

ಇನ್ನು ಹೊಸ ತಲೆಮಾರಿನ ಸ್ವಿಫ್ಟ್ ಹೊಸ ಮಾದರಿಯು ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ(ಆಪ್ಷನ್), ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ಪ್ಲಸ್ ವೆರಿಯೆಂಟ್ ಗಳನ್ನು ಹೊಂದಿದ್ದು, ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 6.49 ಲಕ್ಷದಿಂದ ರೂ. 9.50 ಲಕ್ಷ ಬೆಲೆ ಪಡೆದುಕೊಂಡಿದೆ. ಇದರಲ್ಲಿ ಆಸಕ್ತ ಗ್ರಾಹಕರು ರೂ. 15 ಸಾವಿರ ಹೆಚ್ಚುವರಿ ಮೊತ್ತದೊಂದಿಗೆ ಡ್ಯುಯಲ್ ಟೋನ್ ವೆರಿಯೆಂಟ್ ಗಳನ್ನು ಖರೀದಿಸಬಹುದಾಗಿದ್ದು, ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಗಳೊಂದಿಗೆ ಅಭಿವೃದ್ದಿಗೊಂಡಿದೆ. ಹಾಗೆಯೇ ಹೊಸ ಕಾರು ಈ ಹಿಂದಿನ ಮಾದರಿಗಿಂತಲೂ ಹೆಚ್ಚುವರಿಯಾಗಿ 15 ಎಂಎಂ ಉದ್ದ, 40 ಎಂಎಂ ಅಗಲ ಮತ್ತು 30 ಎಂಎಂ ಎತ್ತರವನ್ನು ಪಡೆದುಕೊಂಡಿದ್ದು, ಇದು ಈ ಹಿಂದಿಗಿಂತಲೂ ಹೆಚ್ಚು ಅನುಕೂಲಕವಾದ ಅಂಶಗಳನ್ನು ಒಳಗೊಂಡಿದೆ.

ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್, ರೆಡಿಯರ್ ಗ್ರಿಲ್, ಹೆಡ್ ಲೈಟ್ಸ್ ಮತ್ತು ಫಾಗ್ ಲೈಟ್ಸ್ ನೀಡಲಾಗಿದ್ದು, ಹಿಂಬದಿಯಲ್ಲೂ ಮರುವಿನ್ಯಾಸಗೊಳಿಸಲಾದ ಸಿ ಆಕಾರದ ಟೈಲ್ ಲ್ಯಾಂಪ್ಸ್ ಜೊತೆಗೆ ಆಕರ್ಷಕವಾದ 15 ಇಂಚಿನ ಅಲಾಯ್ ವ್ಹೀಲ್ ಗಳನ್ನು ಜೋಡಣೆ ಮಾಡಲಾಗಿದೆ. ಒಳಭಾಗದಲ್ಲೂ ಹಲವು ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, 9 ಇಂಚಿನ ಫ್ಲೋಟರಿಂಗ್ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ಸೇರಿದಂತೆ ಪ್ರೀಮಿಯಂ ಆಗಿರುವ ಫ್ರಾಬ್ರಿಕ್ ಆಸನಗಳು, 4.2 ಇಂಚಿನ ಡಿಜಿಟಲ್ ಮಲ್ಟಿ ಇನ್ಫಾರ್ಮೆಷನ್ ಡಿಸ್ ಪ್ಲೇ, ವೈರ್ ಲೆಸ್ ಚಾರ್ಜಿಂಗ್, ರಿಯರ್ ಎಸಿ ವೆಂಟ್ಸ್, ಆಟೋ ಕ್ಲೈಮೆಟ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ವೈರ್ ಲೆಸ್ ಅಂಡ್ರಾಯಿಡ್ ಹಾಗೂ ಮತ್ತು ಆಟೋಕಾರ್ ಪ್ಲೇ ಮತ್ತು ಮರುವಿನ್ಯಾಸಗೊಳಿಸಲಾದ ಸೆಂಟ್ರಲ್ ಏರ್ ಕಾನ್ ವೆಂಟ್ಸ್ ಸೌಲಭ್ಯಗಳಿವೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!

Maruti Suzuki Swift (19)

ಹಾಗೆಯೇ ಹೊಸ ಸ್ವಿಫ್ಟ್ ನಲ್ಲಿ ಸುರಕ್ಷತೆಗಾಗಿ ಆರಂಭಿಕ ಮಾದರಿಯಲ್ಲೂ ಆರು ಏರ್ ಬ್ಯಾಗ್ ಗಳು, ಐಸೋಫಿಕ್ಸ್ ಆ್ಯಂಕರ್ಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆ ಇಬಿಡಿ, ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ. ಇದಲ್ಲದೆ ಹೊಸ ಕಾರು ಮಾದರಿಗಾಗಿ ರೇಸಿಂಗ್ ರೋಡ್ ಸ್ಟರ್ ಎನ್ನುವ ವಿನೂತನ ಆಕ್ಸೆಸರಿಸ್ ಸಹ ನೀಡಲಾಗುತ್ತಿದ್ದು, ಇವು ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ರೂ. 38,990 ಬೆಲೆಯಿಂದ ಆರಂಭಗೊಳ್ಳುತ್ತವೆ. ಇದರೊಂದಿಗೆ ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ನವೀಕೃತ 1.2 ಲೀಟರ್ ಜೆಡ್12ಇ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಇದು ಕಡಿಮೆ ಆರ್ ಪಿಎಂ ನಲ್ಲೂ ಕ್ವಿಕ್ ಪರ್ಫಾಮೆನ್ಸ್ ನೀಡಲಿದ್ದು, ಇದು ನಗರ ಪ್ರದೇಶಗಳಲ್ಲಿನ ಸಂಚಾರಕ್ಕೆ ಸಾಕಷ್ಟು ಸಹಕಾರಿಯಾಗುವುದರ ಜೊತೆಗೆ ಹೆಚ್ಚು ಇಂಧನ ದಕ್ಷತೆಯನ್ನು ಖಾತ್ರಿಪಡಿಸುತ್ತದೆ. ಇದರಲ್ಲಿ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್ ಗೆ 24.8 ಕಿ.ಮೀ ಮೈಲೇಜ್ ನೀಡಿದರೆ ಆಟೋಮ್ಯಾಟಿಕ್ ಮಾದರಿಯು 25.75 ಕಿ.ಮೀ ಮೈಲೇಜ್ ನೀಡಲಿದ್ದು, ಹೊಚ್ಚ ಹೊಸ ಸಸ್ಪೆನ್ಷನ್ ನೊಂದಿಗೆ ಕಂಫರ್ಟ್ ರೈಡ್ ಖಾತ್ರಿಪಡಿಸುತ್ತದೆ.

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್