ಮೊದಲ ಬಾರಿಗೆ ಹೊಸ ಕಾರು ಖರೀದಿಸಿದ್ದೀರಾ? ಹಾಗಾದ್ರೆ ಈ ಟಿಪ್ಸ್ ತಪ್ಪದೇ ಪಾಲಿಸಿ..

ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ವಾಹನ ಖರೀದಿಸುವ ಮಹಾದಾಸೆ ಇದ್ದೆ ಇರುತ್ತೆ. ಜನರ ಜೀವನ ಮಟ್ಟದ ಸುಧಾರಣೆಯಾಗಿರುವುದರಿಂದ ಇತ್ತೀಚೆಗೆ ಸ್ವಂತ ಕಾರುಗಳ ಖರೀದಿ ಟ್ರೆಂಡ್ ಇತ್ತೀಚೆಗೆ ಸಾಕಷ್ಟು ಹೆಚ್ಚಳವಾಗಿದ್ದು, ಹೊಸ ಕಾರುಗಳ ಖರೀದಿ ನಂತರ ಅದರ ಸರಿಯಾದ ನಿರ್ವಹಣೆ ಕೂಡಾ ಪ್ರಮುಖವಾದ ಅಂಶವಾಗಿದೆ.

ಮೊದಲ ಬಾರಿಗೆ ಹೊಸ ಕಾರು ಖರೀದಿಸಿದ್ದೀರಾ? ಹಾಗಾದ್ರೆ ಈ ಟಿಪ್ಸ್ ತಪ್ಪದೇ ಪಾಲಿಸಿ..
ಮೊದಲ ಬಾರಿಗೆ ಹೊಸ ಕಾರು ಖರೀದಿಸಿದ್ದೀರಾ? ಹಾಗಾದ್ರೆ ಈ ಟಿಪ್ಸ್ ತಪ್ಪದೇ ಪಾಲಿಸಿ..
Follow us
|

Updated on: Jan 03, 2024 | 4:53 PM

ಸ್ವಂತಕ್ಕೆ ಅಥವಾ ವಾಣಿಜ್ಯ ಬಳಕೆಗೆ ಕಾರುಗಳನ್ನು (Cars) ಖರೀದಿ ಮಾಡುವ ಮಾಲೀಕರು ಕೆಲವು ಬಾರಿ ಅವುಗಳ ನಿರ್ವಹಣಾ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಸಣ್ಣ ಪುಟ್ಟ ನಿರ್ಲಕ್ಷ್ಯಗಳು ಹೊಸ ಕಾರಿನ ಮೇಲೆ ಸಾಕಷ್ಟು ಪರಿಣಾಮ ಬೀರಲಿದ್ದು, ಕೊನೆಯಲ್ಲಿ ಭಾರೀ ಪ್ರಮಾಣದ ಬೆಲೆ ತೆರಬೇಕಾಗುತ್ತದೆ. ಅದರಲ್ಲೂ ಮೊದಲ ಬಾರಿಗೆ ಕಾರು ಖರೀದಿಸುವ ಮಾಲೀಕರು ಕೆಲವು ನಿರ್ವಹಣಾ ಸಲಹೆಯನ್ನು ತಪ್ಪದೇ ಪಾಲಿಸುವ ಅವಶ್ಯಕತೆಯಿದ್ದು, ಇಲ್ಲಿ ನೀಡಲಾಗಿರುವ ಪ್ರಮುಖ ಐದು ಕಾರು ನಿರ್ವಹಣಾ ಸಲಹೆಗಳು ನಿಮ್ಮ ಕಾರಿನ ಮೌಲ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ ಎನ್ನಬಹುದು.

ಟೈರ್ ಪ್ರೆಷರ್ ಬಗ್ಗೆ ಗಮನವಿರಲಿ 

How to car maintenance (5) ಟೈರ್ ಪ್ರೆಷರ್ ಬಗೆಗೆ ಪ್ರತಿಯೊಬ್ಬ ಕಾರು ಮಾಲೀಕರು ಸಾಕಷ್ಟು ಗಮನಹರಿಸಬೇಕಾದ ಮುಖ್ಯ ತಾಂತ್ರಿಕ ಅಂಶವಾಗಿದೆ. ಪ್ರತಿ ಬಾರಿಯೂ ಪ್ರಯಾಣದ ಆರಂಭಿಸುವುದಕ್ಕೂ ಮುನ್ನ ಚಕ್ರಗಳಲ್ಲಿ ಕನಿಷ್ಠ ಮಟ್ಟದ ಏರ್ ಪ್ರೆಷರ್ ಇದೆಯಾ? ಎನ್ನುವುದನ್ನು ಖಚಿತಪಡಿಸಿಕೊಂಡ ನಂತರವೇ ಪ್ರಯಾಣಿಸುವುದು ಒಳಿತು. ವಿಶೇಷವಾಗಿ ದೂರ ಪ್ರಯಾಣದ ಸಂದರ್ಭದಲ್ಲಿ ಟೈರ್ ಪ್ರೆಷರ್ ಪರೀಕ್ಷೆ ಮಾಡಲೇಬೇಕಿದ್ದು, ಕಡಿಮೆ ಏರ್ ಪ್ರೆಷರ್ ನಿಂದಾಗಿ ವೇಗದ ಚಾಲನೆ ವೇಳೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಪ್ರಯಾಣದ ವೇಳೆ ಕಾರುಗಳಲ್ಲಿ ಕನಿಷ್ಠ ಮಟ್ಟದ ಟೈರ್ ಪ್ರೆಷರ್ ಅವಶ್ಯವಿದ್ದು, ಇತ್ತೀಚಿನ ಹೊಸ ಕಾರುಗಳಲ್ಲಿ ಕಡ್ಡಾಯವಾಗಿ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೌಲಭ್ಯವನ್ನು ಜೋಡಿಸಲಾಗುತ್ತಿದೆ. ಇನ್ನು ಕಾರು ಮಾಲೀಕರು ತುರ್ತು ಸಂದರ್ಭಗಳಲ್ಲಿ ಸಹಕಾರಿಯಾಗಲು ಮೊಬೈಲ್ ಏರ್ ಪ್ರೆಷರ್ ಕಿಟ್ ಹೊಂದಿರುವುದು ಅವಶ್ಯವಿದ್ದು, ಸಾಧ್ಯವಾದಲ್ಲಿ ಟೈರ್ ಒತ್ತಡವು ಹೆಚ್ಚು ಸಮಯದವರೆಗೆ ಸ್ಥಿರವಾಗಿಸಲು ನೈಟ್ರೊಜನ್ ತುಂಬಿಸಬಹುದಾಗಿದೆ.

ಎಂಜಿನ್ ಆಯಿಲ್ ಬದಲಾಯಿಸಿ

How to car maintenance (5) ಕಾರು ಉತ್ಪಾದನಾ ಕಂಪನಿಗಳು ಶಿಫಾರಸ್ಸು ಮೇರೆಗೆ ಮಾಲೀಕರು ನಿಗದಿತ ಅವಧಿಯಲ್ಲಿ ಎಂಜಿನ್ ಆಯಿಲ್ ಬದಲಾಯಿಸುವುದು ತುಂಬಾ ಮುಖ್ಯವಾಗಿರುತ್ತದೆ. ಕಾರುಗಳಲ್ಲಿ ಸಾಮಾನ್ಯವಾಗಿ ಪ್ರತಿ 10 ಸಾವಿರ ಕಿ.ಮೀ ಗಳಿಗೆ ಒಂದು ಬಾರಿ ಎಂಜಿನ್ ಆಯಿಲ್ ಬದಲಾಯಿಸಲು ಸಲಹೆ ನೀಡಲಾಗುತ್ತದೆ. ಈ ವೇಳೆ ಕಾರು ಮಾಲೀಕರು ಕಡಿಮೆ ಬೆಲೆಯ ಎಂಜಿನ್ ಆಯಿಲ್ ಬಳಕೆ ಮಾಡದೆ ಕಾರು ಕಂಪನಿಗಳು ಶಿಫಾರಸ್ಸು ಮಾಡುವ ಗುಣಮಟ್ಟದ ಎಂಜಿನ್ ಆಯಿಲ್ ಬಳಕೆ ಮಾಡುವುದು ಮುಖ್ಯವಾಗಿರುತ್ತದೆ.

ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾದ ಬೆಸ್ಟ್ ಮೈಲೇಜ್ ಸಿಎನ್​ಜಿ ಕಾರುಗಳಿವು!

ಬ್ಯಾಟರಿ ನಿರ್ವಹಣೆ ಅವಶ್ಯಕ

How to car maintenance (5) ಕಾರು ಚಾಲನೆ ಆರಂಭಕ್ಕೆ ಬ್ಯಾಟರಿ ಪ್ರಮುಖವಾದ ತಾಂತ್ರಿಕ ಅಂಶವಾಗಿದೆ. ಹೀಗಾಗಿ ಹೊಸ ಕಾರು ಮಾಲೀಕರು ಬ್ಯಾಟರಿ ಸ್ಥಿತಿಗತಿಯನ್ನು ಆಗಾಗ ಪರೀಕ್ಷಿಸಬೇಕು. ಒಂದು ವೇಳೆ ಬ್ಯಾಟರಿ ಕಾರ್ಯಕ್ಷಮತೆ ಕುಗ್ಗಿದ್ದರೆ ಸರ್ವಿಸ್ ಅವಶ್ಯವಿದ್ದು, ಬ್ಯಾಟರಿ ಪವರ್ ಅನ್ನು ಕಾಯ್ದುಕೊಳ್ಳಲು ಕಾರನ್ನು ಆಗಾಗ ಚಾಲನೆ ಮಾಡುವುದನ್ನು ಮರೆಯಬಾರದು. ಕಾರನ್ನು ಕೆಲವು ದಿನಗಳ ತನಕ ಉಪಯೋಗ ಮಾಡದೆ ಇದ್ದಲ್ಲಿ ಬ್ಯಾಟರಿ ಸಾಮರ್ಥ್ಯ ಕುಗ್ಗುವ ಸಾಧ್ಯತೆಗಳಿದ್ದು, ಇದು ಬ್ಯಾಟರಿ ದೀರ್ಘಕಾಲದ ಬಾಳ್ವಿಕೆ ಮೇಲೆ ಪರಿಣಾಮ ಬೀರುತ್ತದೆ.

ಕಾರ್ ಕ್ಲಿನ್ ಮಾಡುವುದನ್ನು ಮರೆಯಬೇಡಿ

How to car maintenance (5) ಹೊಸ ಕಾರು ಖರೀದಿಸಿದ ಆರಂಭದಲ್ಲಿರುವ ಜೋಶ್ ನಂತರ ದಿನಗಳಲ್ಲಿ ಕಡಿಮೆಯಾಗುವುದು ಸಾಮಾನ್ಯ. ಆದರೆ ಕಾರನ್ನು ಆಗಾಗ ಶುಚಿಯಾಗಿ ಇಟ್ಟುಕೊಳ್ಳದಿದ್ದರೆ ಅದು ನಿಮ್ಮ ಕಾರಿನ ಅಂದ ಹಾಳಮಾಡಬಹುದಾಗಿದ್ದು, ಕಾರಿನ ಒಳಭಾಗದಲ್ಲೂ ಶುಚಿತ್ವಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಕಾರಿನ ಒಳಗೆ ಅಗತ್ಯ ಆಕ್ಸೆಸರಿಸ್ ಹೊರತಾಗಿ ಯಾವುದೇ ಅನವಶ್ಯಕ ಆಕ್ಸೆಸರಿಸ್ ಗಳು ಮತ್ತು ಲಗೇಜ್ ತುಂಬಿಸಬೇಡಿ. ಅನವಶ್ಯಕ ಆಕ್ಸೆಸರಿಸ್ ಗಳು ಮತ್ತು ಲಗೇಜ್ ಗಳು ಕಾರಿನ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರಬಹುದಾಗಿದ್ದು, ಅಗತ್ಯವಿದ್ದಲ್ಲಿ ಕಾರು ಉತ್ಪಾದನಾ ಕಂಪನಿಗಳೇ ಮಾರಾಟ ಮಾಡುವ ಆಕ್ಸೆಸರಿಸ್ ಬಳಕೆ ಮಾಡುವುದು ಉತ್ತಮವಾಗಿರುತ್ತದೆ.

ಇದನ್ನೂ ಓದಿ: ಬಜೆಟ್ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಕಾರುಗಳಿವು!

ಕ್ಯಾಬಿನ್ ಏರ್ ಫಿಲ್ಟರ್ ಬದಲಿಸಿ

How to car maintenance (7) ಧೂಳು ತುಂಬಿರುವ ರಸ್ತೆಗಳಲ್ಲಿ ಹೆಚ್ಚಾಗಿ ಕಾರು ಬಳಕೆ ಮಾಡುತ್ತಿದ್ದಲ್ಲಿ ಪ್ರತಿ ಆರು ತಿಂಗಳಿಗೆ ಒಂದು ಬಾರಿ ಏರ್ ಫಿಲ್ಟರ್ ಬದಲವಾಣೆ ಅವಶ್ಯವಿದ್ದು, ಕ್ಯಾಬಿನ್ ಏರ್ ಫಿಲ್ಟರ್ ಹಾಳಾಗಿದ್ದರೆ ಕಾರಿನ ಒಳಭಾಗದಲ್ಲಿರುವ ಎಸಿ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಏರ್ ಫಿಲ್ಟರ್ ಬದಲಿಸಲು ಸಾಧ್ಯವಿಲ್ಲದ್ದರೆ ಆಗಾಗ ಶುಚಿ ಮಾಡುವುದು ಅವಶ್ಯವಿದ್ದು, ಇದರೊಂದಿಗೆ ಸುಖಕರ ನಿಮ್ಮ ಕಾರು ಪ್ರಯಾಣವನ್ನು ಮತ್ತಷ್ಟು ಆನಂದಿಸಬಹುದಾಗಿದೆ.

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ