Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುಕಿಂಗ್ ಆರಂಭವಾದ ಮೊದಲ ದಿನವೇ ಹೊಸ ದಾಖಲೆ ನಿರ್ಮಿಸಿದ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್

MG Windsor EV: ಎಂಜಿ ಮೋಟಾರ್ ಕಂಪನಿಯು ತನ್ನ ಬಹುನೀರಿಕ್ಷಿತ ವಿಂಡ್ಸರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಿ ಬುಕಿಂಗ್ ಆರಂಭಿಸಿದ್ದು, ಹೊಸ ಇವಿ ಕಾರು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಬುಕಿಂಗ್ ಆರಂಭವಾದ ಮೊದಲ ದಿನವೇ ಹೊಸ ದಾಖಲೆ ನಿರ್ಮಿಸಿದ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್
ಎಂಜಿ ವಿಂಡ್ಸರ್ ಎಲೆಕ್ಟ್ರಿಕ್
Follow us
Praveen Sannamani
|

Updated on: Oct 07, 2024 | 10:08 PM

ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿರುವ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ (MG  Windsor Electric) ಕಾರು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಅಧಿಕೃತ ಬುಕಿಂಗ್ ಆರಂಭವಾದ ಮೊದಲ ದಿನವೇ ಹೊಸ ಕಾರು ಬರೋಬ್ಬರಿ 15,176 ಯುನಿಟ್ ಗಳಿಗೆ ಬೇಡಿಕೆ ದಾಖಲಾಗಿದೆ. ಎಲೆಕ್ಟ್ರಿಕ್ ಕಾರು ಮಾದರಿಯೊಂದಕ್ಕೆ ಒಂದೇ ದಿನದಲ್ಲಿ ಇಷ್ಟೊಂದು ಬೇಡಿಕೆ ದಾಖಲಾಗಿರುವ ಇದೇ ಮೊದಲು ಎನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ವಿಂಡ್ಸರ್ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ವಿಂಡ್ಸರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬ್ಯಾಟರಿ ಸಹಿತ ಮತ್ತು ಬ್ಯಾಟರಿ ರಹಿತ ಮಾದರಿಗಳಾಗಿ ಮಾರಾಟಗೊಳ್ಳಲಿದ್ದು, ಇದರಲ್ಲಿ ಬ್ಯಾಟರಿ ಜೋಡಣೆ ಹೊಂದಿರುವ ಎಕ್ಸೈಟ್ ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.50 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಎಕ್ಸ್ ಕ್ಲೂಸಿವ್ ವೆರಿಯೆಂಟ್ ರೂ. 14.50 ಲಕ್ಷ ಮತ್ತು ಎಸೆನ್ಸ್ ವೆರಿಯೆಂಟ್ ರೂ. 15.50 ಲಕ್ಷ ಬೆಲೆ ಹೊಂದಿದೆ.

ಬ್ಯಾಟರಿ ರಹಿತ ವಿಂಡ್ಸರ್ ಇವಿ ಖರೀದಿಸುವ ಗ್ರಾಹಕರು ಎಕ್ಸ್ ಶೋರೂಂ ಪ್ರಕಾರ ರೂ. 9.99 ಲಕ್ಷ ಆರಂಭಿಕ ಬೆಲೆ ಪಾವತಿಸಬೇಕಿದ್ದು, ಬ್ಯಾಟರಿ ಅನ್ನು ಪ್ರತಿ ತಿಂಗಳಿಗೆ ಅಥವಾ ವರ್ಷಕ್ಕೆ ಬಾಡಿಗೆ ಪಡೆದುಕೊಳ್ಳಬಹುದಾಗಿದೆ. ಬಾಡಿಗೆಗೆ ಪಡೆದುಕೊಳ್ಳಲಾಗುವ ಬ್ಯಾಟರಿಯನ್ನು ಎಂಜಿ ಕಂಪನಿಯೇ ಕಾರ್ಯನಿರ್ವಹಿಸಲಿದ್ದು, ಸಂಪೂರ್ಣ ಜವಾಬ್ದಾರಿಯೊಂದಿಗೆ ವಾರಂಟಿಯನ್ನು ನೀಡುತ್ತದೆ. ಹೊಸ ಇವಿ ಕಾರಿನ ಬ್ಯಾಟರಿಯನ್ನು ಪ್ರತಿ ಕಿ.ಮೀ ಗೆ ರೂ 3.5 ನಿಗದಿಪಡಿಸಿದ್ದು, ಮೂರು ವರ್ಷಗಳ ನಂತರವೂ ಹೊಸ ಇವಿ ಕಾರಿಗೆ ಶೇ.60 ರಷ್ಟು ಮೂಲ ಬೆಲೆಯೊಂದಿಗೆ ಬೈಬ್ಯಾಕ್ ಆಫರ್ ಸಿಗಲಿದೆ.

ವಿಂಡ್ಸರ್ ಇವಿ ಕಾರಿನಲ್ಲಿ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಮತ್ತು 38kWh ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಇದು 136 ಹಾರ್ಸ್ ಪವರ್ ಮತ್ತು 200 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 331 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಹೊಸ ಕಾರಿನಲ್ಲಿ ಇಕೋ ಪ್ಲಸ್, ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್ ಗಳಿದ್ದು, ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಮೊದಲ ಒಂದು ವರ್ಷ ಉಚಿತ ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಆಫರ್ ನೀಡಿದೆ.

ಇನ್ನು ಹೊಸ ಇವಿ ಕಾರಿನ ಎಂಜಿ ಕಂಪನಿಯು ವಿಶಿಷ್ಟ ವಿನ್ಯಾಸ ಮತ್ತು ಆಕಾರದೊಂದಿಗೆ ಐದು ಜನ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿದ್ದು, ಇದು ಮೂಲಭೂತವಾಗಿ ದೊಡ್ಡ ಹ್ಯಾಚ್ಬ್ಯಾಕ್ ಅನ್ನು ಹೋಲುತ್ತದೆ. ಹೊಸ ಕಾರಿನಲ್ಲಿ ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ಸ್, 360 ಡಿಗ್ರಿ ವ್ಯೂ ಕ್ಯಾಮೆರಾ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಟಿಪಿಎಂಎಸ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ.