AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್ಎಂ ಕಾರು ಖರೀದಿಸಿದ ಎಂಟಿಬಿ ನಾಗರಾಜ್

ಕರ್ನಾಟಕದ ಶ್ರೀಮಂತ ರಾಜಕಾರಣಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಎಂಟಿಬಿ ನಾಗರಾಜ್ ಅವರು ಇತ್ತೀಚೆಗೆ ಹೊಸ ಐಷಾರಾಮಿ ಕಾರು ಒಂದನ್ನು ಖರೀದಿಸಿದ್ದು, ಬಿಎಂಡಬ್ಲ್ಯು ಹೊಸ ಕಾರು ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳ ಕಾರ್ ಕಲೆಕ್ಷನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್ಎಂ ಕಾರು ಖರೀದಿಸಿದ ಎಂಟಿಬಿ ನಾಗರಾಜ್
ಬಿಎಂಡಬ್ಲ್ಯು ಎಕ್ಸ್ಎಂ ಕಾರು
Praveen Sannamani
|

Updated on: Dec 18, 2023 | 3:09 PM

Share

ದುಬಾರಿ ಬೆಲೆಯ ಹಲವಾರು ಐಷಾರಾಮಿ ಕಾರುಗಳ ಮಾಲೀಕತ್ವ ಹೊಂದಿರುವ ಹೊಸಕೋಟೆ ಬಿಜೆಪಿ ನಾಯಕರಾಗಿರುವ ಎಂಟಿಬಿ ನಾಗರಾಜ್ ಅವರು ಹೊಸದಾಗಿ ಬಿಎಂಡಬ್ಲ್ಯು ಎಕ್ಸ್ಎಂ ಕಾರು ಖರೀದಿಸಿದ್ದು, ಹೊಸ ಕಾರು ವಿತರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದುಮಾಡುತ್ತಿದೆ.

ಎಂಟಿಬಿ ನಾಗರಾಜ್ ಬಳಿ ಈಗಾಗಲೇ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಸೇರಿದಂತೆ ಪೋರ್ಷೆ ಕಯೆನ, ಫೆರಾರಿ ಎಫ್8, ಲ್ಯಾಂಡ್ ರೋವರ್ ಮತ್ತು ಮರ್ಸಿಡಿಸ್ ಬೆಂಝ್ ನಿರ್ಮಾಣದ ವಿವಿಧ ಕಾರುಗಳ ಸಂಗ್ರಹ ಹೊಂದಿದ್ದು, ಇದೀಗ ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಎಸ್ ಯುವಿ ಖರೀದಿಸಿದ್ದಾರೆ.

ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಎಸ್‌ಯುವಿ ಕಾರು ಮಾದರಿಯು ಎಕ್ಸ್ ಡ್ರೈವ್ ಎನ್ನುವ ವೆರಿಯೆಂಟ್ ನಲ್ಲಿ ಖರೀದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ.2.60 ಕೋಟಿ ಬೆಲೆ ಹೊಂದಿದೆ. ಇದು ಬೆಂಗಳೂರಿನಲ್ಲಿ ಸದ್ಯ ಇನ್ಸುರೆನ್ಸ್ ಮತ್ತು ಆರ್ ಟಿಒ ಶುಲ್ಕಗಳನ್ನು ಸೇರಿ ಆನ್ ರೋಡ್ ಪ್ರಕಾರ ರೂ. 3.24 ಕೋಟಿ ಬೆಲೆ ಹೊಂದಿದ್ದು, ಇದು ಬಿಎಂಡಬ್ಲ್ಯು ನಿರ್ಮಾಣದ ಪವರ್ ಫುಲ್ ಎಸ್ ಯುವಿ ಆವೃತ್ತಿಯಾಗಿದೆ.

BMW XM (1)

ಇದನ್ನೂ ಓದಿ: ಭವಾನಿ ರೇವಣ್ಣರ ಒಂದೂವರೆ ಕೋಟಿ ಕಾರಿನಲ್ಲಿ ಏನೆಲ್ಲಾ ಲಗ್ಷುರಿ ಫೀಚರ್ಸ್ ಗಳಿವೆ ನೋಡಿ..

ಪ್ಲಗ್ ಇನ್ ಹೈಬ್ರಿಡ್ ವೈಶಿಷ್ಟ್ಯತೆ ಹೊಂದಿರುವ ಹೊಸ ಕಾರಿನಲ್ಲಿ 4.4 ಲೀಟರ್(4395 ಸಿಸಿ) ವಿ8 ಪೆಟ್ರೋಲ್ ಹೈಬ್ರಿಡ್ ಎಂಜಿನ್ ನೀಡಲಾಗಿದ್ದು, ಇದು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಕೇವಲ ಪೆಟ್ರೋಲ್ ಮೂಲಕ 498 ಹಾರ್ಸ್ ಪವರ್ ಉತ್ಪಾದಿಸುತ್ತದೆ. ಇದು ಎಲೆಕ್ಟ್ರಿಕ್ ಮೋಟಾರ್ ಮತ್ತು ಪೆಟ್ರೋಲ್ ಸಹಯೋಗದೊಂದಿಗೆ ಒಟ್ಟಾರೆ 653 ಹಾರ್ಸ್ ಪವರ್ ಮತ್ತು 800 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಆಫ್ ರೋಡ್ ಕೌಶಲ್ಯಕ್ಕಾಗಿ ಎಂ ಎಕ್ಸ್ ಡ್ರೈವ್ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಪಡೆದುಕೊಂಡಿದೆ.

ಪವರ್ ಫುಲ್ ಎಂಜಿನ್ ನೊಂದಿಗೆ ಹೊಸ ಕಾರು ಕೇವಲ 4.3 ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗ ಪಡೆದುಕೊಳ್ಳಲಿದ್ದು, ಇದು ಪ್ರತಿ ಗಂಟೆಗೆ ಗರಿಷ್ಠ 249 ಕಿ.ಮೀ ಟಾಪ್ ಸ್ಪೀಡ್ ನೊಂದಿಗೆ ಆಕರ್ಷಕ ಇಂಧನ ದಕ್ಷತೆ ಹೊಂದಿದೆ. ಹೊಸ ಕಾರನ್ನು ಸಂಪೂರ್ಣವಾಗಿ ಪೆಟ್ರೋಲ್ ನೊಂದಿಗೆ ಚಾಲನೆ ಮಾಡಿದ್ದಲ್ಲಿ 11.8 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಸಂಯೋಜನೆಯೊಂದಿಗೆ ಪ್ರತಿ ಲೀಟರ್ ಗೆ 61.9 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇದನ್ನೂ ಓದಿ: ಭಾರತದ ಜನಪ್ರಿಯ ಎಸ್ ಯುವಿ ಕಾರು ಖರೀದಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗನ ಪುತ್ರಿ

ಇದರೊಂದಿಗೆ ಹೊಸ ಕಾರಿನಲ್ಲಿ 7 ಸೀಟರ್ ಸೌಲಭ್ಯದೊಂದಿಗೆ ಹಲವಾರು ಅತ್ಯಾಧುನಿಕ ತಾಂತ್ರಿಕ ಸಲಕರಣೆಗಳ ಜೋಡಣೆ ಮಾಡಲಾಗಿದ್ದು, ಇದು 5,110 ಎಂಎಂ ಉದ್ದಳತೆ, 2,210 ಎಂಎಂ ಅಗಲ ಮತ್ತು 1755 ಎಂಎಂ ಎತ್ತರದೊಂದಿಗೆ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ. ಹೊಸ ಕಾರಿನಲ್ಲಿ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂನೊಂದಿಗೆ ಆರು ಏರ್ ಬ್ಯಾಗ್ ಗಳು, ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್ ಗಳಿವೆ.