Renault Cars Offers: ರೆನಾಲ್ಟ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ
ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ವಿಶೇಷ ದಸರಾ ಆಫರ್ ಘೋಷಿಸಿದೆ.
ಅತ್ಯುತ್ತಮ ಎಂಟ್ರಿ ಲೆವಲ್ ಕಾರು ಮಾದರಿಗಳೊಂದಿಗೆ ಮುಂಚೂಣಿ ಸಾಧಿಸುತ್ತಿರುವ ರೆನಾಲ್ಟ್ ಇಂಡಿಯಾ(Renault India) ಕಂಪನಿಯು ದಸರಾ ಪ್ರಯುಕ್ತ ವಿಶೇಷ ಆಫರ್ ಘೋಷಣೆ ಮಾಡಿದ್ದು, ಕ್ವಿಡ್ ಹ್ಯಾಚ್ ಬ್ಯಾಕ್, ಕೈಗರ್ ಕಂಪ್ಯಾಕ್ಟ್ ಎಸ್ ಯುವಿ ಮತ್ತು ಟ್ರೈಬರ್ ಮಿನಿ ಎಂಪಿವಿ ಕಾರುಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ.
ಹೊಸ ಆಫರ್ ಗಳಲ್ಲಿ ರೆನಾಲ್ಟ್ ಕಂಪನಿಯು ಕ್ಯಾಶ್ ಬ್ಯಾಕ್, ಎಕ್ಸ್ ಚೆಂಜ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಲೊಯಾಲಿಟಿ ಆಫರ್ ನೀಡುತ್ತಿದ್ದು, ಹೊಸ ಆಫರ್ ಗಳಲ್ಲಿ ಗ್ರಾಹಕರು ವೆಹಿಕಲ್ ಸ್ಕಾರ್ಪೇಜ್ ಪಾಲಿಸಿ ಅಡಿಯಲ್ಲೂ ಕೆಲವು ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್..
ಕ್ವಿಡ್ ಹ್ಯಾಚ್ ಬ್ಯಾಕ್
ಹ್ಯಾಚ್ ಬ್ಯಾಕ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕ್ವಿಡ್ ಕಾರು ಮಾದರಿಯು 2015ರಿಂದಲೂ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕ್ವಿಡ್ ಕಾರಿನ ಮೇಲೆ ಕಂಪನಿಯು ಒಟ್ಟಾರೆ ರೂ. 60 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ರೂ. 25 ಸಾವಿರ ಮೌಲ್ಯದ ಕ್ಯಾಶ್ ಬ್ಯಾಕ್, ರೂ.20 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಆಫರ್ ಮತ್ತು ರೂ. 15 ಸಾವಿರ ಮೌಲ್ಯದ ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯವಿದೆ. ಬಿಎಸ್6 ಎರಡನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡ ಪೂರೈಸಿರುವ ಹೊಸ ಕ್ವಿಡ್ ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 4.69 ಲಕ್ಷದಿಂದ ರೂ. 6.45 ಲಕ್ಷ ಬೆಲೆ ಹೊಂದಿದೆ.
ಟ್ರೈಬರ್ ಮಿನಿ ಎಂಪಿವಿ
ರೆನಾಲ್ಟ್ ಕಂಪನಿಯು ಟ್ರೈಬರ್ ಮಿನಿ ಎಂಪಿವಿ ಖರೀದಿಯ ಮೇಲೆ ರೂ. 60 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ. ಆಯ್ದ ವೆರಿಯೆಂಟ್ ಗಳ ಖರೀದಿ ಮೇಲೆ ಹೆಚ್ಚಿನ ಆಫರ್ ಅನ್ವಯಿಸಲಿದ್ದು, ವೆಹಿಕಲ್ ಸ್ಕಾರ್ಪೇಜ್ ಪಾಲಿಸಿ ಅಡಿಯಲ್ಲೂ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಟ್ರೈಬರ್ ಕಾರು ಮಾದರಿಯು ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 6.33 ಲಕ್ಷದಿಂದ ರೂ. 8.97 ಲಕ್ಷ ಬೆಲೆ ಹೊಂದಿದ್ದು, 1.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.
ಇದನ್ನೂ ಓದಿ: ಎಂಜಿ ಜೆಡ್ಎಸ್ ಇವಿ ಮೇಲೆ ಭರ್ಜರಿ ಆಫರ್- ರೂ. 2.30 ಲಕ್ಷ ಬೆಲೆ ಇಳಿಕೆ..
ಕೈಗರ್ ಕಂಪ್ಯಾಕ್ಟ್ ಎಸ್ ಯುವಿ
ಕೈಗರ್ ಕಂಪ್ಯಾಕ್ಟ್ ಎಸ್ ಯುವಿ ಖರೀದಿಯ ಮೇಲೆ ರೆನಾಲ್ಟ್ ಕಂಪನಿಯು ಉತ್ತಮ ಆಫರ್ ನೀಡುತ್ತಿದ್ದು, ಗರಿಷ್ಠ ರೂ. 70 ಸಾವಿರ ಆಫರ್ ಘೋಷಿಸಿದೆ. ಹೊಸ ಆಫರ್ ಗಳು ಆಯ್ದ ವೆರಿಯೆಂಟ್ ಗಳ ಖರೀದಿ ಮೇಲೆ ಮಾತ್ರ ಅನ್ವಯಿಸಲಿದ್ದು, ವೆಹಿಕಲ್ ಸ್ಕಾರ್ಪೇಜ್ ಪಾಲಿಸಿ ಅಡಿಯಲ್ಲೂ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಇದು ಕೂಡಾ 1.0 ಲೀಟರ್ ಎನ್ಎ ಪೆಟ್ರೋಲ್ ಮತ್ತು 1.0 ಲೀಟರ್ ಟರ್ಬೊ ಪೆಟ್ರೋಲ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ರೆನಾಲ್ಟ್ ಇಂಡಿಯಾ ಕಂಪನಿಗೆ ಹೆಚ್ಚಿನ ಬೇಡಿಕೆ ತಂದುಕೊಡುತ್ತಿರುವ ಕಾರು ಮಾದರಿಯಾಗಿದೆ.