BMW i7 M70 and 740d M Sport: ಪವರ್ ಫುಲ್ ಬಿಎಂಡಬ್ಲ್ಯು ಐ7 ಎ70 ಮತ್ತು 770ಡಿ ಎಂ ಸ್ಪೋರ್ಟ್ ಬಿಡುಗಡೆ
ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಹೊಸ ಐ7 ಎ70 ಎಲೆಕ್ಟ್ರಿಕ್ ಸೆಡಾನ್ ಮತ್ತು 770ಡಿ ಎಂ ಸ್ಪೋರ್ಟ್ ಸೆಡಾನ್ ಕಾರುಗಳನ್ನು ಬಿಡುಗಡೆ ಮಾಡಿದೆ.
ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು (BMW) ತನ್ನ ಜನಪ್ರಿಯ ಐ7 ಮತ್ತು 7 ಸೀರಿಸ್ ಫ್ಲ್ಯಾಗ್ ಶಿಫ್ ಸೆಡಾನ್ ವಿಭಾಗದಲ್ಲಿ ಹೊಸದಾಗಿ ಐ7 ಎ70 (i7 M70) ಎಲೆಕ್ಟ್ರಿಕ್ ಸೆಡಾನ್ ಮತ್ತು 770ಡಿ ಎಂ ಸ್ಪೋರ್ಟ್ (740d M Sport) ಸೆಡಾನ್ ಕಾರುಗಳನ್ನು ಬಿಡುಗಡೆ ಮಾಡಿದೆ.
ಐ7 ಎ70 ಎಲೆಕ್ಟ್ರಿಕ್ ಸೆಡಾನ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2.50 ಕೋಟಿ ಬೆಲೆ ಹೊಂದಿದ್ದರೆ 770ಡಿ ಎಂ ಸ್ಪೋರ್ಟ್ ಸೆಡಾನ್ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 1.81 ಕೋಟಿ ಬೆಲೆ ಹೊಂದಿದೆ.
ಐ7 ಎ70 ಎಲೆಕ್ಟ್ರಿಕ್ ಸೆಡಾನ್
ಐ7 ವಿಭಾಗದಲ್ಲಿನ ಟಾಪ್ ಎಂಡ್ ವೆರಿಯೆಂಟ್ ಐ7 ಎ70 ಎಕ್ಸ್ ಡ್ರೈವ್ ಎಲೆಕ್ಟ್ರಿಕ್ ಸೆಡಾನ್ ಮಾದರಿಯು ಗರಿಷ್ಠ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ನೊಂದಿಗೆ ಪ್ರತಿ ಚಾರ್ಜ್ ಗೆ 560 ಕಿ.ಮೀ ಮೈಲೇಜ್ ನೀಡಲಿದ್ದು, ಇದು 650 ಹಾರ್ಸ್ ಪವರ್ ಮತ್ತು 1015 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪವರ್ ಫುಲ್ ಎಲೆಕ್ಟ್ರಿಕ್ ಸೆಡಾನ್ ಮಾದರಿಯಾಗಿ ಗುರುತಿಸಿಕೊಂಡಿದೆ. ಐ7 ಎ70 ಎಕ್ಸ್ ಡ್ರೈವ್ ಟಾಪ್ ಎಂಡ್ ವೆರಿಯೆಂಟ್ ನಲ್ಲಿ 101.7kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಲಾಗಿದ್ದು, ಇದು ಮರ್ಸಿಡಿಸ್ ಬೆಂಝ್ ಇಕ್ಯೂಎಸ್ 53 4ಮ್ಯಾಟಿಕ್ ಪ್ಲಸ್ ಆವೃತ್ತಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.
ಇದನ್ನೂ ಓದಿ: ಎಂಜಿ ಜೆಡ್ಎಸ್ ಇವಿ ಮೇಲೆ ಭರ್ಜರಿ ಆಫರ್- ರೂ. 2.30 ಲಕ್ಷ ಬೆಲೆ ಇಳಿಕೆ..
ಐ7 ಎ70 ಎಕ್ಸ್ ಡ್ರೈವ್ ಆವೃತ್ತಿಯಲ್ಲಿ ಬಿಎಂಡಬ್ಲ್ಯು ಕಂಪನಿಯು ಎಂ ಸ್ಪೆಷಲ್ ಆಕ್ಸೆಸರಿಸ್ ಪ್ಯಾಕೇಜ್ ಜೋಡಣೆ ಮಾಡಿದ್ದು, ಹೊಸ ಕಾರಿನ ಬಂಪರ್, ಸೈಡ್ ಸ್ಕರ್ಟ್, ಮಿರರ್, ರಿಯರ್ ಸ್ಪಾಯ್ಲರ್ ಆಕರ್ಷಕವಾಗಿವೆ. ಹಾಗೆಯೇ ಹೊಸ ಕಾರಿನಲ್ಲಿ ಕ್ರಿಸ್ಟಲ್ ಹೆಡ್ ಲ್ಯಾಂಪ್ಸ್, ಬ್ಲ್ಯಾಕ್ಡ್ ಔಟ್ ಫ್ರಂಟ್ ಗ್ರೀಲ್ ಜೊತೆ ವಿಂಡೋ ಲೈನ್, ಎಂ ಕ್ಯಾಲಿಪರ್ಸ್, ಕಾಂಟ್ರಾಸ್ಟಿಂಗ್ ರೂಫ್ ಮತ್ತು 8 ವಿವಿಧ ಬಣ್ಣದ ಆಯ್ಕೆಗಳನ್ನು ಹೊಂದಿದೆ. ಹಾಗೆಯೇ ಹೊಸ ಕಾರಿನ ಒಳಭಾಗವು ಕೂಡಾ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದ್ದು, ಎಂ ಲೆದರ್ ಸ್ಟೀರಿಂಗ್ ವ್ಹೀಲ್, 9 ವಿವಿಧ ಕ್ಯಾಬಿನ್ ಅಪ್ ಹೋಲ್ಸ್ಟ್ರೇ, ಎಕ್ಸಿಕ್ಯೂಟಿವ್ ಲಾಂಜ್ ಸೀಟಿಂಗ್, ವೆಂಟಿಲೆಷನ್ ಮತ್ತು ಮಸಾಜ್ ಸೀಟುಗಳು, ವೀಲ್ಸ್ಕೀನ್ ಡೈಮಂಡ್ ಆಡಿಯೋ ಸಿಸ್ಟಂ, ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್, ಸಾಫ್ಟ್ ಕ್ಲೋಸ್ ಡೋರ್ ಗಳು ಸೇರಿದಂತೆ ಹಲವಾರು ಫೀಚರ್ಸ್ ಗಳಿವೆ.
ಇದನ್ನೂ ಓದಿ: ರೂ. 4 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ 63 ಗ್ರ್ಯಾಂಡ್ ಎಡಿಷನ್ ಬಿಡುಗಡೆ
770ಡಿ ಎಂ ಸ್ಪೋರ್ಟ್
ಬಿಎಂಡಬ್ಲ್ಯು ಬಿಡುಗಡೆ ಮಾಡಿರುವ 770ಡಿ ಎಂ ಸ್ಪೋರ್ಟ್ ವೆರಿಯೆಂಟ್ 7 ಸೀರಿಸ್ ಸೆಡಾನ್ ಮಾದರಿಯ ಹೈ ಎಂಡ್ ಆವೃತ್ತಿಯಾಗಿದ್ದು, ಇದು ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 3.0 ಲೀಟರ್ ಇನ್ ಲೈನ್ ಸಿಕ್ಸ್ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ. ಇದರಲ್ಲಿ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನೊಂದಿಗೆ 48 ವಿ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದ್ದು, ಇದು 286 ಹಾರ್ಸ್ ಪವರ್ ಮತ್ತು 650 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯದಿಂದಾಗಿ ಹೆಚ್ಚುವರಿಯಾಗಿ 18 ಹಾರ್ಸ್ ಪವರ್ ಉತ್ಪಾದಿಸಲಿದ್ದು, ಇದು ಕೇವಲ 6 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ಸ್ಪೀಡ್ ಸಾಧಿಸುತ್ತದೆ.