ಹೊಸದಾಗಿ ಬಿಡುಗಡೆಯಾದ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಬೈಕ್ ವಿಶೇಷತೆಗಳಿವು..

|

Updated on: Jul 21, 2024 | 8:21 PM

ರಾಯಲ್‌ ಎನ್‌ಫೀಲ್ಡ್‌ ಕಂಪನಿಯು ತನ್ನ ಬಹುನಿರೀಕ್ಷಿತ ಗೆರಿಲ್ಲಾ 450 ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹಾಗಾದ್ರೆ ಹೊಸ ಬೈಕಿನಲ್ಲಿ ಏನೆಲ್ಲಾ ವಿಶೇಷತೆಗಳಿವೆ? ಬೆಲೆ ಎಷ್ಟು? ಈ ಎಲ್ಲಾ ಮಾಹಿತಿ ಇಲ್ಲಿದೆ.

ಹೊಸದಾಗಿ ಬಿಡುಗಡೆಯಾದ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಬೈಕ್ ವಿಶೇಷತೆಗಳಿವು..
ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450
Follow us on

ಮಾರ್ಡನ್ ಕ್ಲಾಸಿಕ್ ಬೈಕ್ ನಿರ್ಮಾಣದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ರಾಯಲ್‌ ಎನ್‌ಫೀಲ್ಡ್‌ (Royal Enfield) ಕಂಪನಿಯು ತನ್ನ ಗೆರಿಲ್ಲಾ 450 (Guerrilla 450) ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 2.39 ಲಕ್ಷದಿಂದ ರೂ.2.54 ಲಕ್ಷ ಬೆಲೆ ಹೊಂದಿದೆ. ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರುವ ಹೊಸ ಬೈಕ್ ಮಾದರಿಯು ಸ್ಟ್ರೀಟ್ ಫೈಟರ್ ವಿನ್ಯಾಸದೊಂದಿಗೆ ದೈನಂದಿನ ಚಾಲನೆಗಾಗಿ ಮತ್ತು ಅಡ್ವೆಂಚರ್ ಚಾಲನೆಗೂ ಅನೂಕರವಾಗಿದೆ.

ಗೆರಿಲ್ಲಾ 450 ಬೈಕ್ ಮಾದರಿಯು ಹಿಮಾಲಯನ್ 450 ಮಾದರಿಯಲ್ಲಿರುವಂತೆ ಹಲವಾರು ಫೀಚರ್ಸ್ ಹೊಂದಿದ್ದರೂ ವಿನ್ಯಾಸ ಮತ್ತು ತಾಂತ್ರಿಕ ಅಂಶಗಳ ಅಳವಳಡಿಕೆಯಲ್ಲಿ ಸಾಕಷ್ಟು ವಿಭಿನ್ನತೆ ಹೊಂದಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿರುವ 450 ಸಿಸಿ ಸೆಗ್‌ಮೆಂಟಿನಲ್ಲಿ ಬಿಡುಗಡೆಯಾದ ಅತ್ಯಂತ ಕಡಿಮೆ ಬೆಲೆಯ ಸ್ಟೈಲಿಶ್ ಮೋಟಾರ್‌ಸೈಕಲ್ ಮಾದರಿಯಾಗಿದೆ ಎನ್ನಬಹುದು.

ರಾಯಲ್ ಎನ್‌ಫೀಲ್ಡ್ ಕಂಪನಿಯು ಗೆರಿಲ್ಲಾ 450 ಮಾದರಿಯಲ್ಲಿ ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ಹಲವಾರು ಹೊಸ ತಾಂತ್ರಿಕ ಅಂಶಗಳನ್ನು ನೀಡಿದ್ದು, ಇದರಲ್ಲಿ ಆರಂಭಿಕ ಮಾದರಿಯಾಗಿ ಅನಲಾಗ್ ವೆರಿಯೆಂಟ್, ಮಧ್ಯಮ ಮಾದರಿಯಾಗಿ ಡ್ಯಾಶ್ ವೆರಿಯೆಂಟ್ ಮತ್ತು ಹೈ ಎಂಡ್ ಮಾದರಿಯಾಗಿ ಫ್ಲ್ಯಾಶ್ ವೆರಿಯೆಂಟ್ ಮಾರಾಟಗೊಳ್ಳಲಿದೆ. ಹಿಮಾಲಯನ್ 450 ಬೈಕ್‌ ಮಾದರಿಗೆ ಹೋಲಿಸಿದರೆ ಹೊಸ ಬೈಕ್ ವಿಭಿನ್ನವಾದ ಹಿಂಭಾಗದ ಸಬ್ ಫ್ರೇಮ್ ಅನ್ನು ಹೊಂದಿದ್ದು, ಇದು ಹಿಮಾಲಯನ್ ಮಾದರಿಗಿಂತಲೂ 11 ಕೆ.ಜಿ ಯಷ್ಟು ಹಗುರವಾಗಿದೆ.

ಇದನ್ನೂ ಓದಿ: ಕೇವಲ ರೂ. 15 ಸಾವಿರಕ್ಕೆ ಸಿಎನ್‌ಜಿ ಆವೃತ್ತಿಯಾಗಲಿವೆ ನಿಮ್ಮ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳು..

ಹಾಗೆಯೇ ಹೊಸ ಬೈಕ್ 169 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೊಂದಿಗೆ 17 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊಂದಿದ್ದು, ಮುಂಭಾಗದಲ್ಲಿ 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಬದಿಯಲ್ಲಿ ವಿವಿಧ ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸಸ್ಷೆಂಷನ್ ಅನ್ನು ಹೊಂದಿದೆ.

ಇದರೊಂದಿಗೆ ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ 310 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ನೊಂದಿಗೆ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಹೊಸ ಬೈಕಿನಲ್ಲಿ ರೌಂಡ್ ಇನ್ಟ್ರುಮೆಂಟ್ ಡಿಸ್ ಪ್ಲೇ, ಹೆಡ್ ಲೈಟ್, ಟರ್ನ್ ಬೈ ಟರ್ನ್ ನ್ಯಾವಿಗೇಟರ್, ಟಿಯರ್ ಡ್ರಾಫ್ ವಿನ್ಯಾಸದ 11 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಸೌಲಭ್ಯಗಳನ್ನು ನೀಡಲಾಗಿದ್ದು, ಒಟ್ಟು ಐದು ಹೊಸ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ಪ್ರೇರಿತ ಬಜಾಜ್ ಫ್ರೀಡಂ 125 ಸಿಎನ್​ಜಿ ಬೈಕ್ ವಿಶೇಷತೆಗಳಿವು!

ಇನ್ನು ಹೊಸ ಬೈಕ್ ಸ್ಟೀಲ್ ಟ್ಯೂಬ್ಲಾರ್ ಫ್ರೇಮ್ ನೊಂದಿಗೆ ಶೆರ್ಪಾ 452 ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಇದು ಅಧಿಕ ಎಂಜಿನ್ ಒತ್ತಡದಲ್ಲೂ ಅತ್ಯುತ್ತಮ ಕಾರ್ಯನಿರ್ವಹಣೆ ಮೂಲಕ 39.50 ಹಾರ್ಸ್ ಪವರ್ ಮತ್ತು 40 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Published On - 7:11 pm, Sun, 21 July 24