ಸೆಕೆಂಡ್ ಹ್ಯಾಂಡ್ ಕಾರು-ಬೈಕ್ ಮಾತ್ರವಲ್ಲ ವಿಮಾನ ಕೂಡ ಸಿಗುತ್ತೆ: ಬೆಲೆ ಎಷ್ಟು, ಎಲ್ಲಿ ಖರೀದಿಸಬಹುದು?

ನೀವು ಬಳಸಿದ ಅಂದರೆ ಸೆಕೆಂಡ್ ಹ್ಯಾಂಡ್ ವಿಮಾನವನ್ನು ಖರೀದಿಸಬಹುದು, ಇದಕ್ಕೆ ಒಳ್ಳೆಯ ಡಿಮ್ಯಾಂಡ್ ಇದೆ. ಬ್ರೋಕರ್‌ಗಳು, ಆನ್‌ಲೈನ್ ಮಾರುಕಟ್ಟೆಗಳು ಮತ್ತು ಹರಾಜುಗಳ ಮೂಲಕ ಅನೇಕ ವಿಮಾನಗಳು ಮಾರಾಟಕ್ಕೆ ಲಭ್ಯವಿವೆ.

ಸೆಕೆಂಡ್ ಹ್ಯಾಂಡ್ ಕಾರು-ಬೈಕ್ ಮಾತ್ರವಲ್ಲ ವಿಮಾನ ಕೂಡ ಸಿಗುತ್ತೆ: ಬೆಲೆ ಎಷ್ಟು, ಎಲ್ಲಿ ಖರೀದಿಸಬಹುದು?
ಸಾಂದರ್ಭಿಕ ಚಿತ್ರ (ವಿಮಾನ)
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 12, 2024 | 12:07 PM

ವಿಮಾನದಲ್ಲಿ ಕುಳಿತುಕೊಳ್ಳಲು ಯಾರು ಇಷ್ಟಪಡುವುದಿಲ್ಲ ಹೇಳಿ! ಪ್ರತಿಯೊಬ್ಬರೂ ವಿಮಾನದಲ್ಲಿ ಪ್ರಯಾಣಿಸಲು ಬಯಸುತ್ತಾರೆ, ವಿಮಾನದಲ್ಲಿ ಸವಾರಿ ಮಾಡುವುದು ಒಂದು ಕನಸು. ಅದನ್ನು ಖರೀದಿಸುವುದು ಕನಸಿನ ಮಾತು. ಆದರೆ, ನಿಮ್ಮ ಬಳಿ ಅಷ್ಟು ಹಣವಿದೆ ಎಂದರೆ ನೀವು ಸೆಕೆಂಡ್ ಹ್ಯಾಂಡ್ ಏರ್‌ಪ್ಲೇನ್‌ಗಳನ್ನು ಖರೀದಿಸಬಹುದು. ಇದನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತದೆ. ಅವುಗಳ ಬೆಲೆ ಎಷ್ಟು ಮತ್ತು ಅವುಗಳನ್ನು ಎಲ್ಲಿ ಖರೀದಿಸಬಹುದು ಎಂಬ ಕುರಿತ ಮಾಹಿತಿ ಇಲ್ಲಿದೆ.

ನೀವು ಬಳಸಿದ ಅಂದರೆ ಸೆಕೆಂಡ್ ಹ್ಯಾಂಡ್ ವಿಮಾನವನ್ನು ಖರೀದಿಸಬಹುದು, ಇದಕ್ಕೆ ಒಳ್ಳೆಯ ಡಿಮ್ಯಾಂಡ್ ಇದೆ. ಬ್ರೋಕರ್‌ಗಳು, ಆನ್‌ಲೈನ್ ಮಾರುಕಟ್ಟೆಗಳು ಮತ್ತು ಹರಾಜುಗಳ ಮೂಲಕ ಅನೇಕ ವಿಮಾನಗಳು ಮಾರಾಟಕ್ಕೆ ಲಭ್ಯವಿವೆ. ಬಳಸಿದ ವಿಮಾನವನ್ನು ಖರೀದಿಸುವಾಗ, ನಿರ್ವಹಣೆ ಹಿಸ್ಟರಿ, Airworthiness ಮತ್ತು ಏನಾದರು ಮಾರ್ಪಾಡು ಮಾಡಲಾಗಿದೆಯೆ ಎಂಬ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಭಾರತದಲ್ಲಿ ಬಳಸಿದ ವಿಮಾನಗಳ ಬೆಲೆ ಹಲವಾರು ಅಂಶಗಳನ್ನು ಅವಲಂಬಿಸಿ ಬದಲಾಗಬಹುದು.

ಭಾರತದಲ್ಲಿ ಸ್ಮಾಲ್ ಜನರಲ್ ಏವಿಯೇಷನ್ ​​ಏರ್‌ಕ್ರಾಫ್ಟ್ ಖಾಸಗಿ ವಿಮಾನವಾಗಿದ್ದು ಇದರ ಸೆಕೆಂಡ್ ಹ್ಯಾಂಡ್ ಬೆಲೆ 25 ಲಕ್ಷದಿಂದ 4 ಕೋಟಿ ರೂ. ಇದೆ. ಇವರ ವೆಬ್‌ಸೈಟ್‌ಗೆ ಹೋಗುವ ಮೂಲಕ ನೀವು ಸೆಸ್ನಾ ಅಥವಾ ಪೈಪರ್ ವಿಮಾನಗಳನ್ನು ಕಡಿಮೆ ಬೆಲೆಗೆ ಸುಲಭವಾಗಿ ಖರೀದಿಸಬಹುದು.

ಸಣ್ಣ ವಿಮಾನಗಳಾಗಿರುವ ಪ್ರಾದೇಶಿಕ ಜೆಟ್‌ಗಳನ್ನು ಕಡಿಮೆ ದೂರದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 100 ಕ್ಕಿಂತ ಕಡಿಮೆ ಜನರು ಕುಳಿತುಕೊಳ್ಳಬಹುದು. ಸೆಕೆಂಡ್ ಹ್ಯಾಂಡ್ ನಲ್ಲಿ ಇದನ್ನು ನೀವು 8 ಕೋಟಿಯಿಂದ 40 ಕೋಟಿ ರೂಪಾಯಿಗೆ ಖರೀದಿಸಬಹುದು. ಇದು Bombardier Q400 ಮತ್ತು Embraer E175 ನಂತಹ ವಿಮಾನಗಳನ್ನು ಹೊಂದಿದೆ.

ನ್ಯಾರೋ-ಬಾಡಿ ಜೆಟ್‌ಗಳು ಅಂದರೆ 100 ರಿಂದ 200 ಜನರು ಕುಳಿತುಕೊಳ್ಳಬಹುದಾದ ಸಣ್ಣ ಮತ್ತು ವಾಣಿಜ್ಯ ವಿಮಾನಗಳ ಬೆಲೆ 40 ರಿಂದ 240 ಕೋಟಿ ರೂ. ಆಗಿದೆ.

ವೈಡ್-ಬಾಡಿ ಏರ್‌ಕ್ರಾಫ್ಟ್ ಇದು ದೊಡ್ಡ ವಿಮಾನಗಳು. ಈ ವಿಮಾನವನ್ನು ದೀರ್ಘ-ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅನೇಕ ಪ್ರಯಾಣಿಕರು ಮತ್ತು ಸರಕುಗಳನ್ನು ಏಕಕಾಲದಲ್ಲಿ ಒಂದು ದೇಶದಿಂದ ಇನ್ನೊಂದಕ್ಕೆ ಸಾಗಿಸಬಹುದು. ಇದು ಬೋಯಿಂಗ್ 777 ಮತ್ತು ಏರ್‌ಬಸ್ A330 ನಂತಹ ವಿಮಾನಗಳನ್ನು ಒಳಗೊಂಡಿದೆ.

ನೀವು ಭಾರತದ ಹಲವು ಮೂಲಗಳಿಂದ ಸೆಕೆಂಡ್ ಹ್ಯಾಂಡ್ ವಿಮಾನಗಳನ್ನು ಖರೀದಿಸಬಹುದು. ವಾಯುಯಾನ ದಲ್ಲಾಳಿಗಳು, ಆನ್‌ಲೈನ್ ಮಾರುಕಟ್ಟೆ ಸ್ಥಳಗಳು, ವಾಯುಯಾನ ಹರಾಜುಗಳು, ವಿಮಾನ ತಯಾರಕರು, ವಿಮಾನ ನಿಲ್ದಾಣಗಳು ಮತ್ತು FBO ಗಳಿಂದ (ಸ್ಥಿರ ಬೇಸ್ ಆಪರೇಟರ್‌ಗಳು) ಈ ಕುರಿತ ಮಾಹಿತಿಯನ್ನು ಪಡೆಯಬಹುದು.

ಆಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್