AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರುತಿ ಸುಜುಕಿ ಮತ್ತು ಹ್ಯುಂಡೈ ಎದುರಾಳಿ ಸ್ಕೋಡಾ ಕೈಲಾಕ್ ಭರ್ಜರಿ ಎಂಟ್ರಿ

ಸ್ಕೋಡಾ ಇಂಡಿಯಾ ಕಂಪನಿಯು ಭಾರತರದಲ್ಲಿ ತನ್ನ ಹೊಸ ಕಂಪ್ಯಾಕ್ಟ್ ಎಸ್ ಯುವಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಅಧಿಕೃತ ಹೆಸರಿನ ಮಾಹಿತಿ ಇದೀಗ ಬಹಿರಂಗವಾಗಿದೆ.

ಮಾರುತಿ ಸುಜುಕಿ ಮತ್ತು ಹ್ಯುಂಡೈ ಎದುರಾಳಿ ಸ್ಕೋಡಾ ಕೈಲಾಕ್ ಭರ್ಜರಿ ಎಂಟ್ರಿ
ಸ್ಕೋಡಾ ಕೈಲಾಕ್
Praveen Sannamani
|

Updated on: Aug 21, 2024 | 6:28 PM

Share

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ಸ್ಕೋಡಾ ಇಂಡಿಯಾ (Skoda India) ಕಂಪನಿಯು ತನ್ನ ಯೋಜನೆಗಳ ಅಡಿಯಲ್ಲಿ ಮತ್ತಷ್ಟ ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಸ್ಕೋಡಾ ಹೊಸ ಕಾರುಗಳಲ್ಲಿ ಸಬ್ ಕಂಪ್ಯಾಕ್ಟ್ ಎಸ್​ಯುವಿ ಮಾದರಿಯೊಂದು ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಆಕರ್ಷಕ ಹೆಸರಿನಲ್ಲಿ ಬಿಡುಗಡೆಯಾಗಲಿದೆ.

ಹೊಸ ಕಾರು ಮಾದರಿಗಾಗಿ ವಿನೂತನ ಹೆಸರು ಸೂಚಿಸುವಂತೆ ಅಭಿಯಾನ ನಡೆಸಿದ್ದ ಸ್ಕೋಡಾ ಕಂಪನಿಯು ಇದೀಗ ಹಲವು ಹೆಸರನ್ನು ಆಧರಿಸಿ ಸಂಸ್ಕೃತ ಪದದಿಂದ ಆಯ್ದಕೊಳ್ಳಲಾದ ಕೈಲಾಕ್ (Kylaq) ಹೆಸರನ್ನು ಅಂತಿಮಗೊಳಿಸಿದೆ. ಕೆ ಅಕ್ಷರದಿಂದ ಆರಂಭವಾಗಿ ಕ್ಯೂ ಹೆಸರಿನಲ್ಲಿ ಅಂತಿಮಗೊಳ್ಳುವಂತಹ ಹೆಸರನ್ನು ಸೂಚಿಸುವಂತೆ ಮನವಿ ಮಾಡಿದ್ದ ಸ್ಕೋಡಾ ಕಂಪನಿಯು ಕುಶಾಕ್ ಮಾದರಿಯಲ್ಲಿ ಇದೀಗ ಕೈಲಾಕ್ ಹೆಸರನ್ನು ಬಳಕೆ ಮಾಡಲು ನಿರ್ಧರಿಸಿದೆ.

Skoda Kylaq (2)

ಸ್ಕೋಡಾ ಕೈಲಾಕ್ ಕಂಪ್ಯಾಕ್ಟ್ ಎಸ್ ಯುವಿ ಮಾದರಿಯು ಕುಶಾಕ್ ಮಾದರಿಗಿಂತಲೂ ಕೆಳಗಿನ ಸ್ಥಾನದಲ್ಲಿ ಮಾರಾಟಗೊಳ್ಳಲಿದ್ದು, ಇದು ಸ್ಪರ್ಧಾತ್ಮಕ ಬೆಲೆಯೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್ ಯುವಿ 3ಎಕ್ಸ್ಓ ಮತ್ತು ಕಿಯಾ ಸೊನೆಟ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಸ್ಕೋಡಾ ಕಂಪನಿಯು ಹೊಸ ಕಾರುಗಳನ್ನು ಬಜೆಟ್ ಬೆಲೆಯಲ್ಲಿ ಮಾರಾಟಕ್ಕಾಗಿ ಪೋಕ್ಸ್ ವ್ಯಾಗನ್ ಕಂಪನಿ ಜೊತೆಗೂಡಿ ಇಂಡಿಯಾ 2.0 ಯೋಜನೆ ಆರಂಭಿಸಿದ್ದು, ಈ ಹೊಸ ಯೋಜನೆ ಅಡಿ ಗರಿಷ್ಠ ಪ್ರಮಾಣದ ಸ್ಥಳೀಯ ಬಿಡಿಭಾಗಗಳನ್ನು ಉಪಯೋಗಿಸುವ ಗುರಿಹೊಂದಿದೆ. ಹೀಗಾಗಿ ಹೊಸ ಸಬ್ ಕಂಪ್ಯಾಕ್ಟ್ ಎಸ್​ಯುವಿ ಬಿಡುಗಡೆಯ ವೇಳೆಗೆ ಸ್ಕೋಡಾ ಕಂಪನಿಯು ಈ ಬಾರಿ ಶೇ. 75ರಿಂದ ಶೇ.76 ರಷ್ಟು ಸ್ಥಳೀಯ ಬಿಡಿಭಾಗಗಳನ್ನು ಬಳಕೆ ಮಾಡುವ ಗುರಿ ಹೊಂದಿದ್ದು, ಈ ಮೂಲಕ ಆಕರ್ಷಕ ಬೆಲೆಯಲ್ಲಿ ಹೊಸ ಕಾರನ್ನು ರಸ್ತೆಗಿಳಿಸುವ ಯೋಜನೆ ರೂಪಿಸಿದೆ.

ಜೊತೆಗೆ ಹೊಸ ಕಾರು ಕುಶಾಕ್ ಕಾರಿನಲ್ಲಿರುವಂತಹ ಎಂಜಿನ್ ಆಯ್ಕೆ ಜೊತೆಗೆ ಹಲವಾರು ಫೀಚರ್ಸ್ ಹೊಂದಿರಲಿದ್ದು, ಇದು ಪ್ರೀಮಿಯಂ ಫೀಚರ್ಸ್ ಹೊಂದಿರುವ ಕಾರುಗಳನ್ನು ಬಜೆಟ್ ಬಜೆಟ್ ಬೆಲೆಯಲ್ಲಿ ಖರೀದಿಸುವ ಗ್ರಾಹಕರಿಗೆ ಸಹಕಾರಿಯಾಗಲಿದೆ. ಸ್ಕೋಡಾ ಕಂಪನಿಯು ಹೊಸ ಕಾರನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆಯೊಂದಿಗೆ ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, ಕುಶಾಕ್ ಕಾರಿನಂತೆಯೇ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಸುರಕ್ಷತೆಗೆ ಅನುಗುಣವಾಗಿ ಗುಣಮಟ್ಟ ಹೊಂದಿರಲಿದೆ.

ಮಾಹಿತಿಗಳ ಪ್ರಕಾರ, ಸ್ಕೋಡಾ ಹೊಸ ಕಾರು 1.0 ಲೀಟರ್, 3-ಸಿಲಿಂಡರ್ ಪ್ರೇರಿತ ಟರ್ಬೊ ಪೆಟ್ರೋಲ್ ಎಂಜಿನ್‌ ನೀಡುವ ಸಾಧ್ಯತೆಗಳಿದ್ದು, ಇದು ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದೆ. ಈ ಮೂಲಕ ಇದು ಉತ್ತಮ ಇಂಧನ ದಕ್ಷತೆ ಮತ್ತು ಪರ್ಫಾಮೆನ್ಸ್ ನಲ್ಲಿ ಗಮನಸೆಳೆಯಲಿದ್ದು, ಇದು 2025ರ ಮೊದಲ ತ್ರೈಮಾಸಿಕ ವೇಳೆಗೆ ರೂ. 8 ಲಕ್ಷದಿಂದ ರೂ. 13 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?