AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TATA Cars Offer: ಟಾಟಾ ಮೋಟಾರ್ಸ್ ಕಾರುಗಳ ಮೇಲೆ ಬಂಪರ್ ರಿಯಾಯಿತಿ: ಎಷ್ಟು?, ಇಲ್ಲಿದೆ ಡಿಟೇಲ್ಸ್

ಟಾಟಾ ಮೋಟಾರ್ಸ್‌ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಲ್ಟ್ರೋಜ್‌ನ ಪೆಟ್ರೋಲ್ ರೂಪಾಂತರಗಳ ಮೇಲೆ ನೀವು ರೂ. 85,000 ವರೆಗಿನ ಭಾರಿ ರಿಯಾಯಿತಿಯನ್ನು ಪಡೆಯಬಹುದು, ಜೊತೆಗೆ ರೂ. 15,000 ಗಳ ವಿನಿಮಯ ಬೋನಸ್ ಅನ್ನು ಪಡೆಯಬಹುದು, ಅಂದರೆ ರೂ 1 ಲಕ್ಷದವರೆಗೆ ಉಳಿತಾಯ ಮಾಡಬಹುದು. ಡೀಸೆಲ್ ಮತ್ತು ಸಿಎನ್‌ಜಿ ರೂಪಾಂತರಗಳಲ್ಲಿ 65,000 ರೂ. ಗಳವರೆಗಿನ ಪ್ರಯೋಜನಗಳನ್ನು ಪಡೆಯಬಹುದು.

TATA Cars Offer: ಟಾಟಾ ಮೋಟಾರ್ಸ್ ಕಾರುಗಳ ಮೇಲೆ ಬಂಪರ್ ರಿಯಾಯಿತಿ: ಎಷ್ಟು?, ಇಲ್ಲಿದೆ ಡಿಟೇಲ್ಸ್
Tata Cars
ಪ್ರೀತಿ ಭಟ್​, ಗುಣವಂತೆ
| Updated By: Vinay Bhat|

Updated on:Feb 11, 2025 | 2:52 PM

Share

ಟಾಟಾ ಕಾರುಗಳು ಫೆಬ್ರವರಿ ರಿಯಾಯಿತಿ ಕೊಡುಗೆಗಳು: ಈ ತಿಂಗಳು ನೀವು ಟಾಟಾ ಕಂಪನಿಯ ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇದು ನಿಮಗೆ ಉತ್ತಮ ಅವಕಾಶ. ಟಾಟಾ ಮೋಟಾರ್ಸ್ ತನ್ನ 2024 ರ ಉತ್ಪಾದನಾ ವರ್ಷದ ಮಾದರಿಗಳ ಮೇಲೆ ಉತ್ತಮ ರಿಯಾಯಿತಿಗಳು ಮತ್ತು ವಿನಿಮಯ/ಸ್ಕ್ರ್ಯಾಪೇಜ್ ಬೋನಸ್ ಅನ್ನು ನೀಡುತ್ತಿದೆ. ಟಿಯಾಗೊ, ಟಿಗೋರ್, ಪಂಚ್, ನೆಕ್ಸಾನ್, ಆಲ್ಟ್ರೋಜ್, ಹ್ಯಾರಿಯರ್, ಸಫಾರಿ ಮುಂತಾದ ವಿವಿಧ ವಿಭಾಗಗಳ ಟಾಟಾ ಕಾರುಗಳ ಮೇಲೆ ನೀವು ಭಾರಿ ರಿಯಾಯಿತಿಗಳನ್ನು ಪಡೆಯಬಹುದು.

ಆಲ್ಟ್ರೋಜ್ ಪೆಟ್ರೋಲ್ ಮೇಲೆ ಅತ್ಯಧಿಕ ರಿಯಾಯಿತಿ:

ಟಾಟಾ ಮೋಟಾರ್ಸ್‌ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಲ್ಟ್ರೋಜ್‌ನ ಪೆಟ್ರೋಲ್ ರೂಪಾಂತರಗಳ ಮೇಲೆ ನೀವು ರೂ. 85,000 ವರೆಗಿನ ಭಾರಿ ರಿಯಾಯಿತಿಯನ್ನು ಪಡೆಯಬಹುದು, ಜೊತೆಗೆ ರೂ. 15,000 ಗಳ ವಿನಿಮಯ ಬೋನಸ್ ಅನ್ನು ಪಡೆಯಬಹುದು, ಅಂದರೆ ರೂ 1 ಲಕ್ಷದವರೆಗೆ ಉಳಿತಾಯ ಮಾಡಬಹುದು. ಇದರ ನಂತರ, ಆಲ್ಟ್ರೊಜ್‌ನ ಉಳಿದ ಡೀಸೆಲ್ ಮತ್ತು ಸಿಎನ್‌ಜಿ ರೂಪಾಂತರಗಳಲ್ಲಿ 65,000 ರೂ. ಗಳವರೆಗಿನ ಪ್ರಯೋಜನಗಳನ್ನು ಪಡೆಯಬಹುದು.

ಟಾಟಾದ ಅತ್ಯಂತ ಜನಪ್ರಿಯ SUV ಗಳ ಮೇಲೂ ರಿಯಾಯಿತಿ

ಟಾಟಾ ಮೋಟಾರ್ಸ್‌ನ ಅತ್ಯಂತ ವಿಶೇಷವಾದ SUV ನೆಕ್ಸಾನ್‌ನ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳನ್ನು ಖರೀದಿಸುವವರಿಗೆ ಈ ತಿಂಗಳು 35,000 ರೂ. ಗಳವರೆಗೆ ನಗದು ರಿಯಾಯಿತಿ ಮತ್ತು 10,000 ರೂ. ಗಳ ವಿನಿಮಯ ಬೋನಸ್ ಸಿಗುತ್ತದೆ.

Top Selling Car: ಮಾರಾಟದಲ್ಲಿ ದಾಖಲೆ ನಿರ್ಮಿಸಿದ ವ್ಯಾಗನ್ಆರ್: ಇದೀಗ ಮಾರುತಿಯ ನಂ. 1 ಕಾರು

ಹ್ಯಾರಿಯರ್ ಮತ್ತು ಸಫಾರಿ ಪ್ರಿಯರಿಗೆ ಉತ್ತಮ ಕೊಡುಗೆಗಳು

ಟಾಟಾ ಮೋಟಾರ್ಸ್ ತನ್ನ ಎರಡು ಶಕ್ತಿಶಾಲಿ SUV ಗಳಾದ ಹ್ಯಾರಿಯರ್ ಮತ್ತು ಸಫಾರಿ ಮೇಲೆ ರೂ. 50,000 ನಗದು ರಿಯಾಯಿತಿ ಜೊತೆಗೆ ರೂ. 25,000 ವಿನಿಮಯ ಬೋನಸ್ ಅನ್ನು ನೀಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಸಫಾರಿ ಅಥವಾ ಹ್ಯಾರಿಯರ್ ಖರೀದಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಇದು ಒಳ್ಳೆಯ ಅವಕಾಶ.

ಟಿಯಾಗೊ, ಟಿಗೋರ್ ಮತ್ತು ಪಂಚ್ ನಂತಹ ಬಜೆಟ್ ಕಾರುಗಳ ಮೇಲೆ ಉತ್ತಮ ಡೀಲ್‌ಗಳು:

ಟಾಟಾ ಮೋಟಾರ್ಸ್‌ನ ಹೆಚ್ಚು ಮಾರಾಟವಾಗುವ ಕಾರು ಪಂಚ್‌ನ ಪೆಟ್ರೋಲ್ ಮತ್ತು ಸಿಎನ್‌ಜಿ ರೂಪಾಂತರಗಳ ಮೇಲೆ ಗ್ರಾಹಕರು ಈ ತಿಂಗಳು 25,000 ರೂ. ಗಳವರೆಗೆ ಪ್ರಯೋಜನಗಳನ್ನು ಪಡೆಯಬಹುದು. ಅದೇ ಸಮಯದಲ್ಲಿ, ಗ್ರಾಹಕರು ಆರಂಭಿಕ ಹಂತದ ಕಾರುಗಳಾದ ಟಿಯಾಗೊ ಮತ್ತು ಟಿಗೋರ್ ಮೇಲೆ 20,000 ರೂ. ಗಳಿಂದ 30,000 ರೂ. ಗಳವರೆಗೆ ರಿಯಾಯಿತಿ ಮತ್ತು 15,000 ರೂ. ಗಳವರೆಗೆ ವಿನಿಮಯ ಬೋನಸ್ ಪಡೆಯಬಹುದು. ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ ಆಗಿದೆ. ಆದ್ದರಿಂದ ನೀವು ಆದಷ್ಟು ಬೇಗ ಶೀಘ್ರದಲ್ಲೇ ನಿಮ್ಮ ಹತ್ತಿರದ ಟಾಟಾ ಡೀಲರ್‌ಶಿಪ್‌ಗೆ ಭೇಟಿ ನೀಡಿ ಮತ್ತು ಈ ಆಫರ್ ಅನ್ನು ಪಡೆಯಿರಿ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Tue, 11 February 25

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ