AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕರ್ಷಕ ಬೆಲೆಗೆ ಭರ್ಜರಿ ಮೈಲೇಜ್ ನೀಡುವ ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಕರ್ವ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಭರ್ಜರಿ ಮೈಲೇಜ್ ಜೊತೆಗೆ ಆಕರ್ಷಕ ಬೆಲೆ ಹೊಂದಿದೆ.

ಆಕರ್ಷಕ ಬೆಲೆಗೆ ಭರ್ಜರಿ ಮೈಲೇಜ್ ನೀಡುವ ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರು ಬಿಡುಗಡೆ
ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರು ಬಿಡುಗಡೆ
Praveen Sannamani
|

Updated on: Aug 07, 2024 | 3:50 PM

Share

ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರುಗಳ (Electric Cars) ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ಬಹುನೀರಿಕ್ಷಿತ ಕರ್ವ್ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಪ್ರಮುಖ ಐದು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಕರ್ವ್ ಇವಿ ಕಾರಿನ ಆರಂಭಿಕ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 17.49 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 21.99 ಲಕ್ಷ ಬೆಲೆ ಹೊಂದಿದೆ.

Tata Curvv EV (4)

ಕರ್ವ್ ಎಲೆಕ್ಟ್ರಿಕ್ ಕಾರು ಮಾದರಿಯು ಬ್ಯಾಟರಿ ಆಯ್ಕೆಗೆ ಅನುಗುಣವಾಗಿ ಕ್ರಿಯೆಟಿವ್, ಅಕಂಪ್ಲಿಶೇಡ್, ಅಕಂಪ್ಲಿಶೇಡ್ ಪ್ಲಸ್ ಎಸ್, ಎಂಪೋವೆರೆಡ್ ಮತ್ತು ಎಂಪೋವೆರೆಡ್ ಪ್ಲಸ್ ಎ ಎನ್ನುವ ಐದು ವೆರಿಯೆಂಟ್ ಗಳನ್ನು ನೀಡಲಾಗಿದ್ದು, ಗ್ರಾಹಕರು ಇದರಲ್ಲಿ 45ಕೆವಿಹೆಚ್ ಮತ್ತು 55ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ಮಾಡಬಹುದಾಗಿದೆ.

45ಕೆವಿಹೆಚ್ ಬ್ಯಾಟರಿ ಹೊಂದಿರುವ ಕರ್ವ್ ಇವಿ ಕಾರು ಪ್ರತಿ ಚಾರ್ಜ್ ಗೆ ಗರಿಷ್ಠ 502 ಕಿ.ಮೀ ಮೈಲೇಜ್ ನೀಡಲಿದ್ದರೆ 55ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರುವ ಕರ್ವ್ ಇವಿ ಕಾರು ಪ್ರತಿ ಚಾರ್ಜ್ ಗೆ ಗರಿಷ್ಠ 585 ಕಿ.ಮೀ ಮೈಲೇಜ್ ನೀಡುತ್ತದೆ. ಹೊಸ ಇವಿ ಕಾರು ಫಾಸ್ಟ್ ಚಾರ್ಜಿಂಗ್ ಸಹಾಯದೊಂದಿಗೆ ಕೇವಲ 15 ನಿಮಿಷಗಳ ಚಾರ್ಜ್ ಮೂಲಕ 150 ಕಿ.ಮೀ ನಷ್ಟು ಮೈಲೇಜ್ ಖಾತ್ರಿಪಡಿಸಲಿದ್ದು, ಇದರಲ್ಲಿ ವೆಹಿಕಲ್ ಟು ವೆಹಿಕಲ್ ಚಾರ್ಜಿಂಗ್ ಸೌಲಭ್ಯವನ್ನು ಸಹ ನೀಡಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಲಿದೆ ಎಂಜಿ ಕ್ಲೌಡ್ ಎಲೆಕ್ಟ್ರಿಕ್ ಎಂಪಿವಿ

Tata Curvv EV (6)

ಹೊಸ ಕಾರು ಮಾದರಿಯಲ್ಲಿ ವೇಗದ ಚಾಲನೆಯಲ್ಲೂ ಉತ್ತಮ ಹಿಡಿತದೊಂದಿಗೆ ವೇಗ ನಿಯಂತ್ರಿಸಲು 50:50 ಅನುಪಾತದಲ್ಲಿ ತೂಕವನ್ನು ಮುಂಭಾಗ ಮತ್ತು ಹಿಂಭಾಗಕ್ಕೆ ಸಮನಾಗಿ ಹಂಚಿಕೆ ಮಾಡಲಾಗಿದ್ದು, ಇದು 190 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ 450 ಎಂಎಂ ನಷ್ಟು ನೀರಿನಲ್ಲೂ ಯಾವುದೇ ಅಡೆತಡೆಯಿಲ್ಲದೆ ಚಾಲನೆಗೊಳ್ಳುತ್ತದೆ.

ಇದರೊಂದಿಗೆ ಹೊಸ ಕಾರಿನಲ್ಲಿ ನೆಕ್ಸಾನ್ ಇವಿಯಲ್ಲಿರುವಂತೆ ಹಲವು ತಾಂತ್ರಿಕ ಸೌಲಭ್ಯಗಳು ಮತ್ತು ಕನೆಕ್ಟಿವಿಟಿ ಸೌಲಭ್ಯ ನೀಡಲಾಗಿದ್ದು, ಇದು ಕೂಪೆ ಎಸ್ ಯುವಿ ವಿನ್ಯಾಸದೊಂದಿಗೆ ಆಲ್ ಎಲ್ಇಡಿ ಲೈಟ್ಸ್, 18 ಇಂಚಿನ ಅಲಾಯ್ ವ್ಹೀಲ್ಸ್ ಸೇರಿದಂತೆ ಒಳಭಾಗದಲ್ಲಿ 12.3 ಇಂಚಿನ ಫ್ಲೋಟರಿಂಗ್ ಇನ್ಪೋಟೈನ್ ಮೆಂಟ್ ಸಿಸ್ಟಂ, 10.25 ಇಂಚಿನ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ನ್ಯಾವಿಗೇಷನ್ ನೊಂದಿಗೆ ವಿವಿಧ ಡ್ರೈವ್ ಮೋಡ್ ಆಯ್ಕೆಗಳು, ವೈರ್ ಲೆಸ್ ಚಾರ್ಜಿಂಗ್ ಪಾಡ್ ಹೊಂದಿರುವ ಸೆಂಟರ್ ಕನ್ಸೊಲ್ ಪಡೆದುಕೊಂಡಿದೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

Tata Curvv EV (5)

ಕರ್ವ್ ಇವಿ ಕಾರಿನ ಟಾಪ್ ಎಂಡ್ ಮಾದರಿಗಾಗಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದ್ದು, ಇದರಲ್ಲಿ ಆರು ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಫ್ರಂಟ್ ವೆಂಟಿಲೆಟೆಡ್ ಆಸನಗಳು, ಎರಡು ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಹಿಂಬದಿಯ ಆಸನಗಳು, ಪನೊರಮಿಕ್ ಸನ್ ರೂಫ್, ಜೆಬಿಎಲ್ ಸೌಂಡ್ ಸಿಸ್ಟಂ ಸೌಲಭ್ಯಗಳಿವೆ. ಹಾಗೆಯೇ ಸರಕ್ಷತೆಗಾಗಿ ಕರ್ವ್ ಇವಿ ಮಾದರಿಗಾಗಿ 6 ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಸ್ಟಾರ್ಟ್ ಅಸಿಸ್ಟ್ ನೊಂದಿಗೆ ವಿವಿಧ ಆಕ್ಟಿವ್ ಸೇಫ್ಟಿ ಫೀಚರ್ಸ್ ಹೊಂದಿರುವ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ ಹೊಂದಿದೆ.