Upcoming SUVs in India: ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಟಾಪ್ 5 ಎಸ್​ಯುವಿ ಕಾರುಗಳಿವು!

ಹೊಸ ಸಂಭ್ರಮದಲ್ಲಿ ವಿವಿಧ ಕಾರು ಉತ್ಪಾದನಾ ಕಂಪನಿಗಳು ತಮ್ಮ ಬಹುನೀರಿಕ್ಷಿತ ಕಾರು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿರುವ ಪ್ರಮುಖ ಐದು ಕಾರುಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Upcoming SUVs in India: ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಟಾಪ್ 5 ಎಸ್​ಯುವಿ ಕಾರುಗಳಿವು!
ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಟಾಪ್ 5 ಎಸ್​ಯುವಿ ಕಾರುಗಳಿವು!
Follow us
Praveen Sannamani
|

Updated on: Jan 01, 2024 | 6:54 PM

ದೇಶಿಯ ಆಟೋ ಉತ್ಪಾದನಾ ವಲಯವು ಕಳೆದ ಕೆಲ ವರ್ಷಗಳಿಂದ ಭಾರೀ ಪ್ರಮಾಣದ ಬದಲಾವಣೆ ಪಡೆದುಕೊಂಡಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಕಾರುಗಳ ಉತ್ಪಾದನೆ ಮತ್ತು ಮಾರಾಟವು ಸಾಕಷ್ಟು ಹೆಚ್ಚಳವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳು (New Cars) ಬಿಡುಗಡೆಗೆ ಸಿದ್ದವಾಗುತ್ತಿದ್ದು, ಬಿಡುಗಡೆಯಾಗಲಿರುವ ಹೊಸ ಕಾರುಗಳು ಈ ತಿಂಗಳಾಂತ್ಯಕ್ಕೆ ಖರೀದಿಗೆ ಲಭ್ಯವಿರಲಿವೆ. ಹಾಗಾದ್ರೆ ಈ ತಿಂಗಳು ಬಿಡುಗಡೆಯಾಗಲಿರುವ ಕಾರುಗಳು ಯಾವುವು? ಅವುಗಳ ವಿಶೇಷತೆಗಳೇನು? ಈ ಎಲ್ಲಾ ಮಾಹಿತಿ ಇಲ್ಲಿದೆ.

ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಫೇಸ್‌ಲಿಫ್ಟ್‌

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ ಇದೇ ತಿಂಗಳು 8ರಂದು ತನ್ನ ನವೀಕೃತ ಜಿಎಲ್ಎಸ್ ಫೇಸ್ ಲಿಫ್ಟ್ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮಾದರಿಯು ಸಂಪೂರ್ಣ ನವೀಕೃತ ವಿನ್ಯಾಸದ ಜೊತೆಗೆ ಅತ್ಯಾಧುನಿಕ ಎಂಬಿಯುಎಕ್ಸ್ ಇನ್ಪೋಟೈನ್ಮೆಂಟ್ ಸಿಸ್ಟಂ ಪಡೆದುಕೊಳ್ಳಲಿದೆ. ಹೊಸ ಕಾರಿನಲ್ಲಿ ಈ ಹಿಂದಿನ 3.0 ಲೀಟರ್ ಸಿಕ್ಸ್ ಸಿಲಿಂಡರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಮುಂದುವರೆಯುವ ಸಾಧ್ಯತೆಗಳಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.45 ಕೋಟಿಯಿಂದ ಟಾಪ್ ಎಂಡ್ ಮಾದರಿಯು ರೂ. 3.10 ಕೋಟಿ ಬೆಲೆ ಹೊಂದಿರಲಿದೆ.

ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾದ ಬೆಸ್ಟ್ ಮೈಲೇಜ್ ಸಿಎನ್​ಜಿ ಕಾರುಗಳಿವು!

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್‌

ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಹ್ಯುಂಡೈ ಕ್ರೆಟಾ ಮಾದರಿಯು ಇದೇ ತಿಂಗಳು 16ರಂದು ಹೊಸ ಆವೃತ್ತಿಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿದ್ದು, ಹೊಸ ಕಾರು ಮಾದರಿಯು ಬಲಿಷ್ಠ ಎಂಜಿನ್ ಆಯ್ಕೆ ಸೇರಿದಂತೆ ಪ್ರೀಮಿಯಂ ಫೀಚರ್ಸ್ ಮತ್ತು ಹಲವಾರು ಹೊಸ ಸೇಫ್ಟಿ ಫೀಚರ್ಸ್ ಪಡೆದುಕೊಂಡಿರಲಿದೆ. ಹೊಸ ಕಾರಿನ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಕ್ರೆಟಾ ಮಾದರಿಯಲ್ಲಿ ಎಡಿಎಎಸ್ ಫೀಚರ್ಸ್ ನೀಡಲಾಗಿದೆ. ಹೊಸ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯವು ಹೊಸ ಕಾರಿಗೆ ಮತ್ತಷ್ಟು ಸುರಕ್ಷತೆ ಒದಗಿಸಲಿದ್ದು, ಇದು ಸಂಭಾವ್ಯ ಅಪಘಾತಗಳನ್ನು ಪರಿಣಾಮಕಾರಿಯಾಗಿ ತಡೆಯಲಿದೆ.

ಕಿಯಾ ಸೊನೆಟ್ ಫೇಸ್‌ಲಿಫ್ಟ್‌

ಹೊಸ ವಿನ್ಯಾಸದೊಂದಿಗೆ ಸ್ಪೋರ್ಟಿ ಲುಕ್ ಹೊಂದಿರುವ ಕಿಯಾ ಸೊನೆಟ್ ಫೇಸ್‌ಲಿಫ್ಟ್‌ ಮಾದರಿಯು ಇದೇ ತಿಂಗಳು ಮಧ್ಯಂತರದಲ್ಲಿ ಬಿಡುಗಡೆಯಾಗಲಿದ್ದು, ಇದು ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಾನೆಟ್ ಮತ್ತು ಬಂಪರ್, ಸ್ಪೋರ್ಟಿಯಾಗಿರುವ ಹೊಸ ಎಲ್ಇಡಿ ಹೆಡ್ ಲೈಟ್ಸ್ ನೊಂದಿಗೆ ಸುರಕ್ಷತೆಗಾಗಿ ಎಡಿಎಎಸ್ ಸೇಫ್ಟಿ ಫೀಚರ್ಸ್ ಹೊಂದಿರಲಿದೆ. ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಎಮೆರ್ಜೆನ್ಸಿ ಬ್ರೇಕಿಂಗ್ ಸಿಸ್ಟಂ, ಹೈ ಭೀಮ್ ಅಸಿಸ್ಟ್, ಕೂಲಿಷನ್ ಅವಾಯ್ಡೆನ್ಸ್ ಮತ್ತು ಲೇನ್ ಕೀಪ್ ಅಸಿಸ್ಟ್ ಸೌಲಭ್ಯಗಳಿವೆ. ಇದರೊಂದಿಗೆ ಹೊಸ ಕಾರಿನಲ್ಲಿ ಆರು ಏರ್ ಬ್ಯಾಗ್ ಗಳು, ಪಾರ್ಕಿಂಗ್ ಸೆನ್ಸಾರ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್ ಗಳಿವೆ.

ಮಹೀಂದ್ರಾ ಎಕ್ಸ್ ಯುವಿ300 ಫೇಸ್‌ಲಿಫ್ಟ್‌

ಮಹೀಂದ್ರಾ ಕಂಪನಿಯು ಈ ತಿಂಗಳಾಂತ್ಯಕ್ಕೆ ಎಕ್ಸ್ ಯುವಿ300 ಫೇಸ್‌ಲಿಫ್ಟ್‌ ಬಿಡುಗಡೆ ಮಾಡುತ್ತಿದ್ದು, ಹೊಸ ಆವೃತ್ತಿಯು ಪ್ರತಿಸ್ಪರ್ಧಿ ಟಾಟಾ ನೆಕ್ಸಾನ್ ಗೆ ಪೈಪೋಟಿಯಾಗಿ ಮಹತ್ವದ ಬದಲಾವಣೆ ಪಡೆದುಕೊಳ್ಳುತ್ತಿದೆ. ಮಹೀಂದ್ರಾ ಕಂಪನಿಯ ಮಹತ್ವದ ಯೋಜನೆಯಾದ ಬಾರ್ನ್ ಎಲೆಕ್ಟ್ರಿಕ್ ಪ್ರೇರಣೆ ಹೊಂದಿರುವ ಹೊಸ ಎಕ್ಸ್ ಯುವಿ300 ಕಾರು ಈ ಹಿಂದಿನಂತೆಯೇ 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದ್ದು, ಕಾರಿನ ಒಳಭಾಗದಲ್ಲೂ ಹಲವಾರು ಬದಲಾವಣೆಗಳೊಂದಿಗೆ ಹೆಚ್ಚಿನ ಮಟ್ಟದ ಫೀಚರ್ಸ್ ನೀಡಲಾಗುತ್ತಿದೆ.

ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾದ ಹೊಸ ಎಡಿಎಎಸ್ ಫೀಚರ್ಸ್ ಕಾರುಗಳಿವು!

ಮಹೀಂದ್ರಾ ಎಕ್ಸ್ ಯುವಿ400 ಫೇಸ್‌ಲಿಫ್ಟ್‌

ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಲಗ್ಗೆಯಿಟ್ಟಿದ್ದ ಎಕ್ಸ್ ಯುವಿ400 ಇವಿ ಕಾರು ನೀರಿಕ್ಷಿತ ಬೇಡಿಕೆ ಪಡೆದಿಲ್ಲವಾದರೂ ತನ್ನ ವಿನೂತನ ಫೀಚರ್ಸ್ ನೊಂದಿಗೆ ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ಪಡೆದುಕೊಂಡಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಎಕ್ಸ್ ಯುವಿ400 ಫೇಸ್‌ಲಿಫ್ಟ್‌ ಆವೃತ್ತಿಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಗಳಿದ್ದು, ಬ್ಯಾಟರಿ ಪ್ಯಾಕ್ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಸದ್ಯ ಪ್ರತಿ ಚಾರ್ಜ್ ಗೆ ಗರಿಷ್ಠ 456 ಕಿ.ಮೀ ಮೈಲೇಜ್ ನೀಡುತ್ತಿದ್ದು, ಫೇಸ್‌ಲಿಫ್ಟ್‌ ಆವೃತ್ತಿಯು ಇನ್ನು ಹೆಚ್ಚಿನ ಮೈಲೇಜ್ ರೇಂಜ್ ನೊಂದಿಗೆ ತುಸು ದುಬಾರಿ ಬೆಲೆ ಹೊಂದಿರಲಿದೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್