AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾನ್ಯವಾಗಿ ಕಾರಿನ ಮುಂಭಾಗದಲ್ಲಿಯೇ ಎಂಜಿನ್ ಇರುತ್ತದೆ ಏಕೆ? ಕುತೂಹಲಕಾರಿ ಸಂಗತಿಗಳು ನಿಮಗಾಗಿ

ಎಂಜಿನ್‌ ಮುಂಭಾಗದಲ್ಲಿಡುವ ವ್ಯವಸ್ಥೆಯಿಂದ ಕಾರಿನ ಆಕ್ಸಲ್ ಅನ್ನು ನಿಯಂತ್ರಣದಲ್ಲಿಡಬಹುದು. ಎಂಜಿನ್ ಆಕ್ಸಲ್ ಮೇಲಿರುತ್ತದೆ. ಇದು ಕಾರನ್ನು ಓಡಿಸಲು ಸುಲಭವಾಗುತ್ತದೆ.

ಸಾಮಾನ್ಯವಾಗಿ ಕಾರಿನ ಮುಂಭಾಗದಲ್ಲಿಯೇ ಎಂಜಿನ್ ಇರುತ್ತದೆ ಏಕೆ? ಕುತೂಹಲಕಾರಿ ಸಂಗತಿಗಳು ನಿಮಗಾಗಿ
ಕಾರಿನ ಮುಂಭಾಗದಲ್ಲಿಯೇ ಎಂಜಿನ್ ಇರುತ್ತದೆ ಏಕೆ?
ಸಾಧು ಶ್ರೀನಾಥ್​
|

Updated on: Jun 23, 2023 | 3:15 PM

Share

ಇತ್ತೀಚಿನ ದಿನಗಳಲ್ಲಿ ಕಾರುಗಳು (car) ದುಬಾರಿಯಾಗಿದ್ದರೂ ಕಾರು ಖರೀದಿ ಅಗ್ಗವಾಗಿದೆ. ಬಹುತೇಕ ಮಂದಿ ತಮ್ಮದೇ ಸ್ವಂತ ಕಾರು ಹೊಂದಲು ಬಯಸುತ್ತಾರೆ. ಕಾರು ಇಲ್ಲದವರೂ ಡ್ರೈವಿಂಗ್ ಕಲಿಯಬಹುದು. ಅಂದರೆ ಕಾರಿನ ಬಗ್ಗೆ ಸಾಮಾನ್ಯಜ್ಞಾನ ಎಂಬುದು ಎಲ್ಲರಿಗೂ ಸಾಮಾನ್ಯ ಸಂಗತಿಯಾಗುತ್ತಿದೆ. ಹಾಗಾದರೆ ಈ ವಿಚಾರದ ಬಗ್ಗೆ ನಿಮಗೆ ಮಾಹಿತಿ ಇದೆಯಾ, ಹೇಳೀ? ಯಾವುದೇ ವಾಹನಕ್ಕೆ ಎಂಜಿನ್ (Engine) ಮುಖ್ಯವಾಗುತ್ತದೆ. ಇನ್ನು ಇಲ್ಲಿ ಚರ್ಚಿಸುತ್ತಿರುವ ಕಾರಿನಲ್ಲಿಯೂ ಎಂಜಿನ್ ಇರುತ್ತದೆ. ಆದಾಗ್ಯೂ, ಈ ಎಂಜಿನ್ ಕಾರಿನ ಮುಂಭಾಗದಲ್ಲಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಕೆಲವು ಸ್ಪೋರ್ಟ್ಸ್ ಕಾರುಗಳು ಹಿಂದಿನ ಎಂಜಿನ್ ಹೊಂದಿದ್ದರೆ, 99 ಪ್ರತಿಶತ ಕಾರುಗಳು ಮುಂಭಾಗದಲ್ಲಿ ಎಂಜಿನ್ ಹೊಂದಿವೆ. ಹೆಚ್ಚಾಗಿ, ಎಂಜಿನ್ ಅನ್ನು ಕಾರಿನ ಮಧ್ಯದಲ್ಲಿ ಅಥವಾ ಹಿಂಭಾಗದಲ್ಲಿ ಏಕೆ ಇಡುವುದಿಲ್ಲ? ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಕಾರಿನ ಮುಂಭಾಗದಲ್ಲಿ ಎಂಜಿನ್ ಅನ್ನು ಏಕೆ ಸ್ಥಾಪಿಸಲಾಗಿದೆ? ಇದರ ಹಿಂದಿನ ಕಾರಣವೇನು? ಈಗ ಈ ಬಗ್ಗೆ ಪ್ರಮುಖ ವಿವರಗಳನ್ನು ತಿಳಿಯೋಣ…(Automobile)

ಕಾರುಗಳಲ್ಲಿ ಮುಂಭಾಗದ ಎಂಜಿನ್‌ಗೆ ವಾಸ್ತವವಾಗಿ ಒಂದು ದೊಡ್ಡ ಕಾರಣವಿದೆ. ಎಲ್ಲ ಅಂಶಗಳನ್ನು ಪರಿಗಣಿಸಿ ವೈಜ್ಞಾನಿಕವಾಗಿ ಎಂಜಿನ್ ವ್ಯವಸ್ಥೆ ಮಾಡಲಾಗಿದೆ. ಎಂಜಿನ್ ವಾಹನದಲ್ಲಿ ಭಾರದ/ತೂಕದ ಪರಿಕರವಾಗಿದೆ. ಹಾಗಾಗಿ ಈ ಭಾರದಿಂದ ಮುಂದೆ ಸಾಗಲು ಸುಲಭವಾಗುತ್ತದೆ. ಕಾರಿನ ಸ್ಟೀರಿಂಗ್ ಅನ್ನು ಉತ್ತಮವಾಗಿ ನಿಯಂತ್ರಿಸಬಹುದು ಎಂಬ ಲಾಜಿಕ್​ ಇಲ್ಲಿ ಮನೆಮಾಡಿದೆ.

ಜಾಗ, ಇತರೆ ಸೌಲಭ್ಯಗಳನ್ನು ನೋಡುವುದಾದರೆ… ಕಾರಿನ ಮುಂಭಾಗದಲ್ಲಿ ಕಾರ್ ಎಂಜಿನ್ ಅನ್ನು ಜೋಡಿಸಲು ಎರಡು ಕಾರಣಗಳಿವೆ ಎಂದು ತಜ್ಞರು ಹೇಳುತ್ತಾರೆ. ಎಂಜಿನ್ ಮುಂದೆಯೇ ಇಟ್ಟರೆ ಕಾರಿನ ಆಂತರಿಕ ಜಾಗ ಹೆಚ್ಚಾಗಿ ಸಿಗುತ್ತದೆ.

ತಾಂತ್ರಿಕ ಅಂಶಗಳು.. ಎಂಜಿನ್‌ ಮುಂಭಾಗದಲ್ಲಿಡುವ ವ್ಯವಸ್ಥೆಯಿಂದ ಕಾರಿನ ಆಕ್ಸಲ್ ಅನ್ನು ನಿಯಂತ್ರಣದಲ್ಲಿಡಬಹುದು. ಎಂಜಿನ್ ಆಕ್ಸಲ್ ಮೇಲಿರುತ್ತದೆ. ಇದು ಕಾರನ್ನು ಓಡಿಸಲು ಸುಲಭವಾಗುತ್ತದೆ. ಕಾರಿನ ಟೈರ್‌ಗಳು ಎಂಜಿನ್‌ಗೆ ಹತ್ತಿರವಾಗಿರುವುದರಿಂದ, ಎಂಜಿನ್‌ ಶಕ್ತಿಯು ವೃದ್ಧಿಸುತ್ತದೆ.

ವಾಹನದ ಸಮತೋಲನ.. ಕಾರಿನ ಮುಂಭಾಗದಲ್ಲಿರುವ ಎಂಜಿನ್‌ನ ತೂಕದಿಂದಾಗಿ.. ವೇಗವರ್ಧನೆಯ ಸಮಯದಲ್ಲಿ, ವೇಗವಾಗಿ ಚಲಾಯಿಸುವಾಗ ವಾಹನ ಸಮತೋಲನದಲ್ಲಿರುತ್ತದೆ. ಗಾಳಿಯ ಒತ್ತಡವನ್ನು ನಿಯಂತ್ರಿಸುತ್ತದೆ. ತುಂಬಾ ವೇಗವಾಗಿ ಹೋದರೂ.. ನಿಯಂತ್ರಣ ತಪ್ಪುವುದಿಲ್ಲ.

ಕೂಲಿಂಗ್, ಸುರಕ್ಷತೆ … ಕಾರಿನ ಮುಂಭಾಗದಲ್ಲಿ ಎಂಜಿನ್ ಇರುವುದರಿಂದ, ಎದುರು ಭಾಗದಿಂದ ಬರುವ ಗಾಳಿಯಿಂದ ಅದು ತಂಪಾಗುತ್ತದೆ. ಕಾರು ಚಾಲನೆಯಲ್ಲಿರುವಾಗ ಗಾಳಿಯು ನೇರವಾಗಿ ಎಂಜಿನ್ ಭಾಗಕ್ಕೆ ಹೊಡೆಯುತ್ತದೆ. ಇದು ಎಂಜಿನ್ ಅನ್ನು ತಂಪಾಗಿಸುತ್ತದೆ. ಜೊತೆಗೆ.. ಇದು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಉಪಯುಕ್ತವಾಗಿದೆ. ಯಾವುದೇ ಅಪಾಯದ ಸಂದರ್ಭದಲ್ಲಿ ಮೊದಲಿಗೆ ಎಂಜಿನ್ ಮಾತ್ರ ಹಾನಿಗೊಳಗಾಗುತ್ತದೆ. ಒಳಗಿರುವ ಪ್ರಯಾಣಿಕರು ಸುರಕ್ಷಿತವಾಗಿತ್ತಾರೆ.

(ಗಮನಿಸಿ: ಮೇಲೆ ತಿಳಿಸಿದ ತಾಂತ್ರಿಕ ಅಂಶಗಳನ್ನು ಅಂತರ್ಜಾಲದಲ್ಲಿ ಲಭ್ಯವಿರುವ ವಿವರಗಳ ಪ್ರಕಾರ ನೀಡಲಾಗಿದೆ. ಟಿವಿ9 ಕನ್ನಡ ಈ ಅಂಶಗಳನ್ನು ಖಚಿತಪಡಿಸುತ್ತಿಲ್ಲ)

ಆಟೋಮೊಬೈಲ್​​​ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ