Best Year-End Discounts: ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಡಿಸ್ಕೌಂಟ್

ಮಾರುತಿ ಸುಜುಕಿ ಕಂಪನಿಯು ತನ್ನ ಪ್ರಮುಖ ಅರೆನಾ ಕಾರುಗಳ ಖರೀದಿ ಮೇಲೆ ವರ್ಷಾಂತ್ಯದ ಆಫರ್ ಗಳನ್ನು ಘೋಷಣೆ ಮಾಡಿದ್ದು, ಆಫರ್ ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.

Best Year-End Discounts: ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಡಿಸ್ಕೌಂಟ್
ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಡಿಸ್ಕೌಂಟ್
Follow us
Praveen Sannamani
|

Updated on:Dec 21, 2022 | 8:09 PM

ಪ್ರಯಾಣಿಕರ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ(Maruti Suzuki) ಕಂಪನಿಯು ವರ್ಷಾಂತ್ಯದಲ್ಲಿ ಭಾರೀ ಪ್ರಮಾಣದ ಕಾರುಗಳ ಮಾರಾಟ ಯೋಜನೆಯಲ್ಲಿದ್ದು, ಕಂಪನಿಯು ಇದೀಗ ಅರೆನಾ(Arena) ಕಾರು ಮಾದರಿಗಳ ಮೇಲೆ ಅತ್ಯುತ್ತಮ ಆಫರ್ ಗಳನ್ನು ಘೋಷಣೆ ಮಾಡಿದೆ. ಹೊಸ ಆಫರ್ ಗಳಲ್ಲಿ ಕಂಪನಿಯು ಕಾರ್ಪೊರೇಟ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್ ಮತ್ತು ಕ್ಯಾಶ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೊಸ ಆಫರ್ ಗಳು ಕಂಪನಿಯ ಅರೆನಾ ಶೋರೂಂಗಳಲ್ಲಿನ ಮಾದರಿಗಳ ಮೇಲೆ ಮಾತ್ರ ಅನ್ವಯಿಸುತ್ತವೆ.

ಮಾರುತಿ ಸುಜುಕಿ ಕಂಪನಿಯು ಕಾರುಗಳ ಮಾರಾಟಕ್ಕಾಗಿ ಅರೆನಾ ಮತ್ತು ನೆಕ್ಸಾ ಶೋರೂಂಗಳನ್ನು ಹೊಂದಿದ್ದು, ಅರೆನಾ ಕಾರು ಮಾರಾಟ ಮಳಿಗೆಗಳಲ್ಲಿ ಸಾಮಾನ್ಯ ಕಾರು ಮಾದರಿಗಳನ್ನು ಮತ್ತು ನೆಕ್ಸಾ ಶೋರೂಂಗಳಲ್ಲಿ ಪ್ರೀಮಿಯಂ ಕಾರುಗಳನ್ನು ಮಾರಾಟ ಮಾಡುತ್ತದೆ. ಇದರಲ್ಲಿ ಇದೀಗ ಕಂಪನಿಯು ಅರೆನಾ ಮಾದರಿಗಳ ಮೇಲೆ ಮಾತ್ರ ಆಫರ್ ನೀಡುತ್ತಿದ್ದು, ಅರೆನಾ ಮಾದರಿಗಳಾದ ಆಲ್ಟೋ ಕೆ10, ಎಸ್-ಪ್ರೆಸ್ಸೊ, ಸೆಲೆರಿಯೊ, ವ್ಯಾಗನ್ ಆರ್, ಆಲ್ಟೋ 800, ಡಿಜೈರ್, ಸ್ವಿಫ್ಟ್ ಮಾದರಿಗಳ ಮೇಲೆ ಆಫರ್ ಲಭ್ಯವಿರಲಿದೆ. ಹಾಗಾದ್ರೆ ಡಿಸೆಂಬರ್ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು ಘೋಷಣೆ ಮಾಡಿರುವ ಆಫರ್ ಗಳು ಯಾವುವು? ಎನ್ನುವುದನ್ನು ಇಲ್ಲಿ ತಿಳಿಯೋಣ.

ಮಾರುತಿ ಸುಜುಕಿ ಆಲ್ಟೋ ಕೆ10

ಡಿಸೆಂಬರ್ ತಿಂಗಳ ಹೊಸ ಆಫರ್ ಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಆಲ್ಟೊ ಕೆ10 ಮ್ಯಾನುವಲ್ ಮಾದರಿಯ ಮೇಲೆ ರೂ. 52 ಸಾವಿರ ತನಕ ಆಫರ್ ಘೋಷಣೆ ಮಾಡಿದ್ದು, ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ರೂ. 22 ಸಾವಿರ ತನಕ ಆಫರ್ ಘೋಷಣೆ ಮಾಡಿದೆ. ಹೊಸ ಆಫರ್ ನಲ್ಲಿ ಆಲ್ಟೋ ಕೆ10 ಸಿಎನ್ ಜಿ ಮಾದರಿಯ ಮೇಲೂ ರೂ. 45,100 ತನಕ ಉಳಿತಾಯಕ್ಕೆ ಅವಕಾಶ ನೀಡಲಾಗಿದ್ದು, ಡೀಲರ್ಸ್ ಮಟ್ಟದಲ್ಲೂ ಕೆಲವು ಆಫರ್ ಗಳು ಲಭ್ಯವಿರಲಿವೆ.

ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಗಾಗಿ ಸಿದ್ದಗೊಂಡಿರುವ ಹೊಸ ಕಾರುಗಳಿವು!

ಮಾರುತಿ ಸುಜುಕಿ ಸೆಲೆರಿಯೊ

ಹೊಸ ಆಫರ್ ಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಸೆಲೆರಿಯೊ ಸಿಎನ್ ಜಿ ಮಾದರಿಯ ಮೇಲೆ ರೂ. 45,100 ತನಕ ಆಫರ್ ಘೋಷಣೆ ಮಾಡಿದ್ದು, ಪೆಟ್ರೋಲ್ ಮ್ಯಾನುವಲ್ ಆವೃತ್ತಿಯ ಮೇಲೆ ರೂ. 36 ಸಾವಿರ ತನಕ ಆಫರ್ ಘೋಷಣೆ ಮಾಡಿದೆ. ಹೊಸ ಆಫರ್ ನಲ್ಲಿ ಸೆಲೆರಿಯೊ ಪೆಟ್ರೋಲ್ ಎಎಂಟಿ ಮಾದರಿಯ ಮೇಲೆ ರೂ. 21 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಲಾಗಿದ್ದು, ಇದರಲ್ಲಿ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ ಗರಿಷ್ಠ 26.68 ಕಿ.ಮೀ ಇಂಧನ ದಕ್ಷತೆಯೊಂದಿಗೆ ಉತ್ತಮ ಬೇಡಿಕೆ ಹೊಂದಿದೆ.

ಮಾರುತಿ ಸುಜುಕಿ ವ್ಯಾಗನ್ಆರ್

ಹೊಸ ಆಫರ್ ಗಳಲ್ಲಿ ಮಾರುತಿ ಸುಜುಕಿ ಕಂಪನಿಯು ವ್ಯಾಗನ್ಆರ್ ಮ್ಯಾನುವಲ್ ಮಾದರಿಯ ಮೇಲೆ ರೂ. 42 ಸಾವಿರ ತನಕ ಆಫರ್ ಘೋಷಣೆ ಮಾಡಿದೆ. ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ರೂ. 22 ಸಾವಿರ ತನಕ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ನಲ್ಲಿ ವ್ಯಾಗನ್ಆರ್ ಸಿಎನ್ ಜಿ ಮಾದರಿಯ ಮೇಲೆ ರೂ. 22 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದೆ.

ಇದನ್ನೂ ಓದಿ:  ನವೆಂಬರ್ ನಲ್ಲಿ ಬಿಡುಗಡೆಯಾದ ಟಾಪ್ 5 ಕಾರುಗಳಿವು!

ಮಾರುತಿ ಸುಜುಕಿ ಡಿಜೈರ್

ವರ್ಷಾಂತ್ಯದಲ್ಲಿ ಹೊಸ ಆಫರ್ ಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಡಿಜೈರ್ ಎಎಂಟಿ ಮಾದರಿಯ ಮೇಲೆ ರೂ. 32 ಸಾವಿರ ತನಕ ಆಫರ್ ಘೋಷಣೆ ಮಾಡಿದೆ. ಡಿಜೈರ್ ಕಾರಿನ ಮ್ಯಾನುವಲ್ ಮಾದರಿಯು ಮೇಲೆ ರೂ. 17 ಸಾವಿರ ತನಕ ಆಫರ್ ಘೋಷಣೆ ಮಾಡಿದೆ. ಹೊಸ ಆಫರ್ ನಲ್ಲಿ ಸಿಎನ್ ಜಿ ಮಾದರಿಯ ಮೇಲೆ ಯಾವುದೇ ಆಫರ್ ಘೋಷಣೆ ಮಾಡಿಲ್ಲವಾದರೂ ಡೀಲರ್ಸ್ ಮಟ್ಟದಲ್ಲೂ ಕೆಲವು ಆಫರ್ ಗಳು ಲಭ್ಯವಿರಲಿವೆ.

ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಹೊಸ ಆಫರ್ ಗಳಲ್ಲಿ ಸ್ವಿಫ್ಟ್ ಮಾದರಿಯ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳ ಮೇಲೆ ರೂ. 32 ಸಾವಿರ ತನಕ ಆಫರ್ ಘೋಷಣೆ ಮಾಡಿದೆ. ಹಾಗೆಯೇ ಸ್ವಿಫ್ಟ್ ಸಿಎನ್ ಜಿ ಮಾದರಿಯ ಮೇಲೆ ಮಾರುತಿ ಸುಜುಕಿ ಕಂಪನಿಯು ರೂ. 15,100 ಆಫರ್ ನೀಡಿದ್ದು, ಈ ತಿಂಗಳಾಂತ್ಯದ ತನಕ ಆಫರ್ ಲಭ್ಯವಿರಲಿವೆ.

Published On - 1:09 pm, Sat, 3 December 22