ನೃತ್ಯ ಕ್ಷೇತ್ರದಲ್ಲಿ ಬೆಳೆಯುವ ಮಕ್ಕಳಿಗೆ ಸ್ಪೂರ್ತಿ ಕಿರಣ್ ಮುರಳಿ

ಮನುಷ್ಯ ಆರೋಗ್ಯವಂತ ಆಗಿರಬೇಕಾದರೆ ಆತನ ಆರೋಗ್ಯ ಮೊದಲು ಚೆನ್ನಾಗಿರಬೇಕು ಆರ್ಥಿಕ ಸಮಸ್ಯೆಯಿಂದ ಯಾರಿಗಾದರೂ ಚಿಕಿತ್ಸೆಗೇ ಹಣವಿಲ್ಲದೆ ಇದ್ದರೆ ಅಂಥವರ ಬಗ್ಗೆ ವಿಚಾರಿಸಿ ತಮ್ಮ ಕೈಲಾಗುವ  ಸಹಾಯವನ್ನು ಮಾಡಲು ಇವರ ಗೆಳೆಯರ ತಂಡ ಎಂದಿಗೂ ಒಂದು ಹೆಜ್ಜೆ ಮುಂದಾಗುತ್ತದೆ.

ನೃತ್ಯ ಕ್ಷೇತ್ರದಲ್ಲಿ ಬೆಳೆಯುವ ಮಕ್ಕಳಿಗೆ ಸ್ಪೂರ್ತಿ ಕಿರಣ್ ಮುರಳಿ
Kiran Murali
Follow us
ಅಕ್ಷಯ್​ ಪಲ್ಲಮಜಲು​​
|

Updated on: Jun 24, 2022 | 8:30 AM

ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಒಳ್ಳೆ ಕನಸನ್ನು ಕಾಣುವಷ್ಟು ತಾಳ್ಮೆ ಹಾಗೂ ಮನಸ್ಸು ಹೊಂದಿರಬೇಕು. ಹಾಗೆಯೇ ಕಂಡ ಕನಸು ನನಸಾಗಿಸುವ ಧ್ಯೇಯ ಎಲ್ಲರಲ್ಲೂ ಇರಬೇಕು. ಹೀಗೆ ಕಂಡ ಕನಸನ್ನು ನನಸಾಗಿಸಿ ದವರಲ್ಲಿ ನೆಹರೂನಗರ ಪುತ್ತೂರಿನ ಕಿರಣ್ ಮುರಳಿ ಒಬ್ಬರು. ಇವರು ಮೂಲತಃ  ದಕ್ಷಿಣ ಕನ್ನಡ ಜಿಲ್ಲೆ ನೆಹರೂನಗರ ಪುತ್ತೂರಿನ ಮುರಳಿ ನಿಲಯದ ಜಯ ಹಾಗೂ ಕಲಾವತಿ ದಂಪತಿಯ ಪುತ್ರ. ತನ್ನ ಬಾಲ್ಯದ ಶಿಕ್ಷಣವನ್ನು ಸುಧಾನ ಆಂಗ್ಲ ಮಾಧ್ಯಮ ಶಾಲೆ ಪುತ್ತೂರಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ವಿವೇಕಾನಂದ ಕಾಲೇಜು ಪುತ್ತೂರು, ನಂತರದ ಐಟಿಐ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಪುತ್ತೂರಿನಲ್ಲಿ ಪೂರ್ಣಗೊಳಿಸಿದರು. ಪ್ರಸ್ತುತ ಮುರಳಿ ಬ್ರದರ್ಸ್ ಪುತ್ತೂರು ಎಂಬ ನೃತ್ಯ ತರಬೇತಿ ಕೇಂದ್ರವನ್ನು ತೆರೆದು ಸುಮಾರು ಹದಿಮೂರು ವರ್ಷಗಳಿಂದ ಅನೇಕ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿಯನ್ನು ನೀಡುತ್ತಿದ್ದಾರೆ.

ಸಾಧಕ ಬೆಳೆದು ಬಂದ ಹಾದಿ

ನೃತ್ಯ ಎಂದರೆ ಇವರಿಗೆ ಚಿಕ್ಕ ವಯಸ್ಸಿನಲ್ಲೇ ಹೆಚ್ಚಿನ ಒಲವು. ಇವರಿಗೆ ನೃತ್ಯದ ಮೇಲಿನ ಆಸಕ್ತಿ ಇರುವುದನ್ನು ಗುರುತಿಸಿದ ಹೆತ್ತವರು ಸುಧಾನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿದ್ದ ರಾಜ್ ಬ್ರದರ್ಸ್ ಎಂಬ ತಂಡದಲ್ಲಿ ರಾಜೇಶ್ ಎಂಬ ತರಬೇತುದಾರರೊಂದಿಗೆ ನೃತ್ಯ ಕಲಿಕೆಗಾಗಿ ಸೇರಿಸಿದರು. ಹಲವು ವರ್ಷಗಳ ಕಾಲ ಅವರ ಜೊತೆಯಲ್ಲಿ ತರಬೇತಿಯನ್ನು ಪಡೆದು ಗುರುವಿನ ಅಪ್ಪಣೆಯ ಮೇರೆಗೆ ತಾನು ಸ್ವತಹ ಮುರಳಿ ಬ್ರದರ್ಸ್ ಪುತ್ತೂರು ಎಂಬ ನೃತ್ಯ ತರಬೇತಿ ಕೇಂದ್ರವನ್ನು ಪುತ್ತೂರಿನಲ್ಲಿ ಪ್ರಾರಂಭಿಸಿದರು. ಇದನ್ನು ಪ್ರಾರಂಭಿಸಿ ಸುಮಾರು 13 ವರ್ಷಗಳು ಆಯಿತು. ಇದರಲ್ಲಿ ಎರಡು ತಂಡವಿದೆ ಒಂದು ನೃತ್ಯ ತಂಡವಾದರೆ ಇನ್ನೊಂದು ಟೈಗರು ಗ್ರೂಪ್ ಎನ್ನುವ ಇವರ ಗೆಳೆಯರ ತಂಡ ಈ ತಂಡದಲ್ಲಿ ಗೆಳೆಯರೆಲ್ಲ ಸೇರಿ ನವರಾತ್ರಿಯ ಸಂದರ್ಭದಲ್ಲಿ ಹುಲಿ ವೇಷ ಹಾಕಿ ಪ್ರದರ್ಶನ ನೀಡುತ್ತಾರೆ. ಹಾಗೆಯೇ ಇದೇ ತಂಡ ತುಳುನಾಡ ಸಂಸ್ಕೃತಿ ಸಾಹಿತ್ಯಕ್ಕೆ ಸಂಬಂಧಪಟ್ಟ ಹಲವಾರು ಕಾರ್ಯಕ್ರಮಗಳಲ್ಲಿ ಸ್ಪರ್ಧೆಗಳಲ್ಲಿ ನಮ್ಮ ಸಂಸ್ಕೃತಿಗೆ ಒಳಪಟ್ಟಂತಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಾರೆ. ಇದು ಮಾತ್ರವಲ್ಲದೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಇದುವರೆಗೆ ಸುಮಾರು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಇವರ ಶಿಷ್ಯಂದಿರು ಅನೇಕ ಟಿವಿ ಶೋಗಳಲ್ಲಿ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ
Image
Indian book of Record: ಚಂದ್ರಹಾಸ ಅವರ ಕೃತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವ
Image
Gallstone: ಶಸ್ತ್ರಚಿಕಿತ್ಸೆಯಿಲ್ಲದೆ ಪಿತ್ತಕೋಶದ ಕಲ್ಲುಗಳನ್ನು ತೆಗೆಯಲು ಸಾಧ್ಯವೆ! ಇಲ್ಲಿದೆ ಮನೆಮದ್ದು

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ; ಹುಡುಗರೇ…ನೀವು ಹೀಗಿದ್ದರೆ ಹುಡುಗಿಯರಿಗೆ ಬಹಳ ಇಷ್ಟವಂತೆ! ಇಲ್ಲಿದೆ ನೋಡಿ ಸಲಹೆ

ಸಾಧನೆಗೆ ನೀಡಿದ ಗೌರವ 

ಇವರ ಸಾಧನೆಯನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ , ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಸಾಧಕರ ಪ್ರಶಸ್ತಿ ಹೀಗೆ ಅನೇಕ ಸಂಘಸಂಸ್ಥೆಗಳಿಂದ ಸನ್ಮಾನ ಪುರಸ್ಕಾರ ಗಳು ನಡೆದಿವೆ. ಇವರ ಮುರಳಿ ಬ್ರದರ್ಸ್ ಎಂಬ ತಂಡವು ಮೂರು ನಾಲ್ಕು ಬಾರಿ ರಾಜ್ಯಮಟ್ಟದಲ್ಲಿ ಗುರುತಿಸಿ ಕೊಂಡಿರುತ್ತದೆ. ಅನೇಕ ಶಾಲಾ ಕಾಲೇಜುಗಳಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಿಗೆ ಅಥವಾ ಸ್ಪರ್ಧೆಗಳಿಗೆ ಮಕ್ಕಳಿಗೆ ತರಬೇತಿ ಕೊಟ್ಟಿರುತ್ತಾರೆ. ಅದರಲ್ಲೂ ಮಕ್ಕಳು ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಅಲ್ಲದೆ ಕೆಲವು ಸಿನಿಮಾಗಳಿಗೆ ಇವರ ಶಿಷ್ಯಂದಿರು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ತಾನು ಕಲಿಸುವ ನೃತ್ಯದಿಂದ ಕಲಿಯುವ ಮಕ್ಕಳಿಗೆ ಏನಾದರೂ ಸಹಾಯ ಆಗಬೇಕು ಎನ್ನುತ್ತಾರೆ ಕಿರಣ್ ಮುರಳಿ, ನಾನು ಕಲಿಸುವ ನೃತ್ಯ ತರಬೇತಿಯಿಂದ ಮಕ್ಕಳಿಗೆ ಸಹಾಯ ಆಗಬೇಕು .ಅವರು ಸಾಧನೆ ಮಾಡಬೇಕು. ಅವರು ಸಾಧನೆ ಮಾಡಿದರೆ ಅದೇ ಅವರು ನನಗೆ ಕೊಡುವ ಕೊಡುಗೆ. ಅದರಲ್ಲಿ ನಾನು ಸಂತೋಷಪಡುತ್ತೇನೆ. ಮಕ್ಕಳಿಗೆ ತರಬೇತಿಯನ್ನು ನೀಡಿ ಅವರನ್ನು ಸಿದ್ಧಪಡಿಸಿ ಜವಾಬ್ದಾರಿಯಿಂದ ನೋಡಿಕೊಳ್ಳುವ ಜವಾಬ್ದಾರಿ ನನ್ನದು.ಹಾಗೆಯೇ ಮಕ್ಕಳ ಪೋಷಕರು ಕೂಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಎಷ್ಟು ಪ್ರೋತ್ಸಾಹ ನೀಡುತ್ತಾರೋ ಹಾಗೆಯೇ ಅವರಿಗೆ ಆಸಕ್ತಿಯುಳ್ಳ ಕ್ಷೇತ್ರದಲ್ಲಿಯೂ ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಬೇಕು. ಮಕ್ಕಳಿಗೆ ಪೋಷಕರ ಸಹಕಾರ ಪ್ರೋತ್ಸಾಹ ಎಷ್ಟಿರುತ್ತದೆಯೋ ಅದೇ ರೀತಿ ಎತ್ತರಕ್ಕೆ ಬೆಳೆಯುತ್ತಾರೆ ಹಾಗೆಯೇ ಸಾಧನೆ ಮಾಡುತ್ತಾರೆ ಎನ್ನುತ್ತಾರೆ ಕಿರಣ್ ಮುರಳಿ.

ಸಮಾಜಸೇವೆ ಮಾಡುತ್ತಿರುವ ಗೆಳೆಯರ ತಂಡ 

ಮನುಷ್ಯ ಆರೋಗ್ಯವಂತ ಆಗಿರಬೇಕಾದರೆ ಆತನ ಆರೋಗ್ಯ ಮೊದಲು ಚೆನ್ನಾಗಿರಬೇಕು ಆರ್ಥಿಕ ಸಮಸ್ಯೆಯಿಂದ ಯಾರಿಗಾದರೂ ಚಿಕಿತ್ಸೆಗೇ ಹಣವಿಲ್ಲದೆ ಇದ್ದರೆ ಅಂಥವರ ಬಗ್ಗೆ ವಿಚಾರಿಸಿ ತಮ್ಮ ಕೈಲಾಗುವ  ಸಹಾಯವನ್ನು ಮಾಡಲು ಇವರ ಗೆಳೆಯರ ತಂಡ ಎಂದಿಗೂ ಒಂದು ಹೆಜ್ಜೆ ಮುಂದಾಗುತ್ತದೆ. ಬಡವರಿಗೆ ಏನಾದರೂ ಸಹಾಯ ಬೇಕಾದಲ್ಲಿ ಯಾವುದೇ ಕಾರಣಕ್ಕೂ ಹಿಂಜರಿಯದೆ ಸಹಾಯಕ್ಕಾಗಿ ಮುಂದೆ ನಿಲ್ಲುತ್ತಾರೆ.  ಕೊರೊನಾ ಸಮಯದಲ್ಲೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದೆ ಈ ತಂಡ.

ತನ್ನಿಂದ ಇನ್ನೊಬ್ಬರ ಬಾಳು ಬೆಳಕಾಗಬೇಕು ಎಂಬ ಒಳ್ಳೆಯ ಮನಸ್ಸು ಇವರದು. ಇಂತಹ ಸಾಧಕರನ್ನು ಎಲ್ಲರೂ ಗುರುತಿಸಬೇಕು. ಅವರಿಗೆ ಇನ್ನೂ ಪ್ರೋತ್ಸಾಹ ನೀಡಬೇಕು. ಇಂತಹ ಸಾಧಕರು ಇನ್ನು ಎತ್ತರಕ್ಕೆ ಬೆಳೆಯಲಿ ದೇವರು ಅವರನ್ನು ಸದಾ ಸುಖವಾಗಿ ಇಟ್ಟಿರಲಿ ಎಂದು ಆಶಿಸೋಣ.

ನನ್ನ ಸಾಧನೆಗೆ ಸಹಕರಿಸಿದ ನನ್ನ ಪೋಷಕರಿಗೆ ಮನದಾಳದಿಂದ ಅಭಿನಂದನೆಯನ್ನು ಹೇಳುತ್ತೇನೆ . ನನಗೆ ಮೊದಲು ನೃತ್ಯ ತರಬೇತಿ ನೀಡಿದ ಗುರುಗಳಿಗೂ ವಂದನೆಗಳನ್ನು ತಿಳಿಸುತ್ತಾ ಮುರಳಿ ಬ್ರದರ್ಸ್ ನೃತ್ಯ ಸಂಸ್ಥೆಯನ್ನು ತೆರೆದ ಕ್ಷಣದಿಂದ ಇಲ್ಲಿಯವರೆಗೂ ಸುಮಾರು 40 ಮಕ್ಕಳಿದ್ದರೂ ಅವರು ಇಷ್ಟು ವರ್ಷವೂ ನನ್ನ ಜೊತೆಗಿದ್ದು ಸಹಕರಿಸಿದ್ದಾರೆ. ಈ ಸಂಸ್ಥೆಯನ್ನು ಸ್ಥಾಪನೆ ಮಾಡುವ ಸಂದರ್ಭದಲ್ಲಿ  ಗೆಳೆಯರು ಗೌತಮ್ ಹಾಗೂ ಅಣ್ಣ ಧನಂಜಯ್,  ಸಹಕರಿಸಿದ ಊರಿನ ಜನರಿಗೂ ಎಂದೆಂದಿಗೂ ನಾನು ಚಿರಋಣಿ

ಸಾಧಕ ಕಿರಣ್ ಮುರಳಿ

ನನ್ನ ಮಗನಿಗೆ ನೃತ್ಯದಲ್ಲಿ ತುಂಬಾ ಸಣ್ಣ ವಯಸ್ಸಿನಿಂದಲೇ ಆಸಕ್ತಿ ಇತ್ತು .ಅದರಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕನಸನ್ನು ಕಂಡಿದ್ದ ಆದ್ದರಿಂದ ಅವನ ಕನಸಿಗೆ ನಾನು ಕೂಡ ಸಹಕರಿಸಿದೆ. ಹಾಗೆ ಎಲ್ಲಾ ಪೋಷಕರು ನಿಮ್ಮ ಮಕ್ಕಳ ಪ್ರತಿಭೆ ಸಹಕರಿಸಿ ಅವರ ಆಸಕ್ತಿಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿ . ಮಕ್ಕಳು ಸಾಧನೆ ಮಾಡಿದಾಗ ನಿಮ್ಮ ಸಾಧನೆಗೆ ಕಾರಣವಾದ ಗುರುಗಳನ್ನು ಎಂದಿಗೂ ಮರೆಯಬಾರದು, ಅವರ ಸಹಕಾರ,ಅನುಮತಿಯಿಂದ ಪ್ರತಿ ಹೆಜ್ಜೆಯನ್ನು ಇಡಬೇಕು.ಅವರಿಗೆ ಮತ್ತು ಪೋಷಕರಿಗೆ ಅಗೌರವ ತರುವಂತಹ ಕೆಲಸವನ್ನು ಮಾಡಬೇಡಿ. ಆಗ ನೀವುಕಲಿತ ಪ್ರತಿಯೊಂದು ವಿಷಯಕ್ಕೂ ಪ್ರತಿಫಲ ಗೌರವ ಸಿಗುತ್ತದೆ.  (ತಂದೆಯ ಮಾತು)

ದೀಪ್ತಿ ಅಡ್ಡಂತ್ತಡ್ಕ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ