Yakshagana: ಯಕ್ಷಗಾನದ ಹಿಮ್ಮೇಳದ ಮದ್ದಳೆಯ ನಾದ, ಸ್ವರ, ತಾಳದ ಹಿನ್ನೆಲೆ ಇಲ್ಲಿದೆ

|

Updated on: Jun 11, 2023 | 8:42 AM

ಹಿಂದಿನ ಕಾಲದಲ್ಲಿ ಯಕ್ಷಗಾನದಲ್ಲಿ ಮೊದಲು ಚೆಂಡೆ ಮತ್ತು ಚಕ್ರತಾಳಗಳ ಬಳಕೆ ಇರಲಿಲ್ಲ. ತಾಳ ಮತ್ತು ಮದ್ದಳೆ ಪ್ರಚಲಿತದಲ್ಲಿತ್ತು. ಮದ್ದಳೆಯನ್ನು ದೇವವಾದ್ಯ ಎಂದು ಕರೆಯಲಾಗುತ್ತದೆ. ಪುರಾಣ ಕಾಲದಲ್ಲಿ ಶಿವನ ತಾಂಡವ ನೃತ್ಯಕ್ಕೆ ಬಳಸಲಾಗುತ್ತಿತ್ತು.

Yakshagana: ಯಕ್ಷಗಾನದ ಹಿಮ್ಮೇಳದ ಮದ್ದಳೆಯ ನಾದ, ಸ್ವರ, ತಾಳದ ಹಿನ್ನೆಲೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಯಕ್ಷಗಾನ ದಕ್ಷಿಣ ಕನ್ನಡದ ಗಂಡು ಕಲಾ ಪ್ರಕಾರ. ನಿರ್ದಿಷ್ಟ ಕತೆಯನ್ನು ಇಟ್ಟುಕೊಂಡು ಅದಕ್ಕೆ ಅನುಗುಣವಾಗಿ ಬರೆದ ಪ್ರಸಂಗದ ಹಾಡುಗಳನ್ನು ಆಧರಿಸಿ ನೃತ್ಯ, ಅಭಿನಯ ಮತ್ತು ಮಾತುಗಳಿಂದ ಕತೆಯನ್ನು ನಿರೂಪಿಸುವುದು ಇದರ ಸ್ವಭಾವ. ಯಕ್ಷಗಾನದಲ್ಲಿ ಅನೇಕ ವಿಭಾಗಗಳಿವೆ. ತೆಂಕುತಿಟ್ಟು, ಬಡಗುತಿಟ್ಟು, ನಡುತಿಟ್ಟು ಇತ್ಯಾದಿ. ತಾಳ,ಚೆಂಡೆ, ಮದ್ದಳೆ, ಚಕ್ರತಾಳಗಳನ್ನು ಒಳಗೊಂಡ ಯಕ್ಷಗಾನದಲ್ಲಿ ಮದ್ದಳೆಯು ಪ್ರಮುವಾಗಿದೆ.

ಹಿಂದಿನ ಕಾಲದಲ್ಲಿ ಯಕ್ಷಗಾನದಲ್ಲಿ ಮೊದಲು ಚೆಂಡೆ ಮತ್ತು ಚಕ್ರತಾಳಗಳ ಬಳಕೆ ಇರಲಿಲ್ಲ. ತಾಳ ಮತ್ತು ಮದ್ದಳೆ ಪ್ರಚಲಿತದಲ್ಲಿತ್ತು. ಮದ್ದಳೆಯನ್ನು ದೇವವಾದ್ಯ ಎಂದು ಕರೆಯಲಾಗುತ್ತದೆ. ಪುರಾಣ ಕಾಲದಲ್ಲಿ ಶಿವನ ತಾಂಡವ ನೃತ್ಯಕ್ಕೆ ಬಳಸಲಾಗುತ್ತಿತ್ತು. ಆ ಕಾಲದಿಂದ ಬಂದಂತಹ ವಾದ್ಯವೇ ಮದ್ದಳೆ. ಇದು ಒಂದು ಚರ್ಮವಾದ್ಯ. ಮದ್ದಳೆಯ ಮಧ್ಯ ಭಾಗದಲ್ಲಿರುವುದು ಕಳಸೆ,ಇದನ್ನು ಹಲಸಿನ ಮರದಿಂದ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಉತ್ತಮವಾದ ಮರಗಳನ್ನು ಆಯ್ದು ಕೊಂಡು ತಯಾರಿಸುತ್ತಾರೆ. ಕಳಸೆಯನ್ನು ಬಿಟ್ಟು ಉಳಿದ ಭಾಗಗಳನ್ನು ಚರ್ಮದಿಂದ ತಯಾರಿಸಲಾಗುತ್ತದೆ. ಇದಕ್ಕೆ ದಪ್ಪ ಚರ್ಮದ ಅವಶ್ಯಕತೆ ಇದೆ. ನೀರಿನ ಹನಿ ತಾಗಿದ್ದಲ್ಲಿ ಮದ್ದಳೆ ಹಾಳಾಗುತ್ತದೆ.

ಇದನ್ನೂ ಓದಿ:Yakshagana: ಯಕ್ಷಗಾನದ ಯುವಪ್ರತಿಭಾ ಕಲಶ ಪೂಜಾ ಆಚಾರ್ಯ

ಮದ್ದಳೆಯ ಮದ್ಯದ ಕಪ್ಪು ಭಾಗವನ್ನು ಕರ್ಣ ಎಂದು ಕರೆಯುತ್ತಾರೆ. ಕಲ್ಲನ್ನು ಅರಿದು ಹುಡಿ ಮಾಡಿ ಅವಲಕ್ಕಿ ಮತ್ತು ಗುಲಗಂಜಿಯನ್ನು ಸೇರಿಸಿ ಪೇಸ್ಟ್ ಮಾಡಿ ತಿಕ್ಕಬೇಕು. ತಿಕ್ಕಿದ ಬಳಿಕ ಕೊನೆಗೆ ಲೇಯರ್ ಉಬ್ಬಿ ನಿಲ್ಲಬೇಕು ಇದು ಚರ್ಮದ ಗುಣದ ಮೇಲೆ ಆಧಾರವಾಗಿರುತ್ತದೆ. ಸಾಮಾನ್ಯವಾಗಿ ಆರರಿಂದ ಏಳು ಲೇಯರ್ ಇರಬೇಕು. ಏಳು ಲೇಯರ್ ಇರುವುದು ಸಪ್ತ ಸ್ವರಗಳಿದ್ದಂತೆ. ತಾಂ, ಧೋಂ, ಧೋ, ತಾ, ಟಾ, ನಾ ಇವುಗಳಿಷ್ಟು ಬಲ ಭಾಗದಲ್ಲಿರುತ್ತವೆ. ಹಾಗೆಯೇ ಎಡಭಾಗದಲ್ಲಿಯು ಉಪಯೋಗಿಸುತ್ತಾರೆ. ಆದರೆ ಎಡಭಾಗದಲ್ಲಿ ಮಂದಸ್ವರ ಬೇಕಾಗುವುದರಿಂದ, ಧೀ, ಕೀ, ಕ ಬಾಯಿತಾಳಗಳು ಎಡಭಾಗದಲ್ಲಿ ಬರುತ್ತದೆ. ಇವು ಮದ್ದಳೆಯ ಭಾಗಗಳು. ಮದ್ದಳೆಯನ್ನು ತರಬೇತಿ ಹೊಂದಿರುವವರು ಬಾರಿಸಬೇಕಾಗುತ್ತದೆ, ಏಕೆಂದರೆ ಮದ್ದಳೆಯ ಶೃತಿಗಳು ಬದಲಾವಣೆಯನ್ನು ಹೊಂದುತ್ತದೆ. ಮದ್ದಳೆಯ ವಿಶೇಷತೆಗಳ ಬಗ್ಗೆ ವಿವರಣೆ ಕೊಡುತ್ತಾ ಹೋದರೆ ಅನೇಕ ವಿಷಯಗಳಿವೆ. ಒಟ್ಟಾರೆಯಾಗಿ ಯಕ್ಷಗಾನದ ಪ್ರತಿಯೊಂದು ಅಂಶವೂ ಆಳ ಮತ್ತು ವಿಸ್ತಾರ.

ಲೇಖನ: ಶ್ರಾವ್ಯ ಪ್ರಭು ಎ. ಎಸ್

ಪುತ್ತೂರು