Yakshagana: ಉದಯೋನ್ಮುಖ ಪ್ರತಿಭೆ ರಾಮಪ್ರಕಾಶ ಕಲ್ಲೂರಾಯ ಯಕ್ಷಗಾನ ಭಾಗವತಿಕೆಗೂ ಸೈ , ಸಂಗೀತಕ್ಕೂ ಜೈ

ಉದಯೋನ್ಮುಖ ಪ್ರತಿಭೆ ರಾಮಪ್ರಕಾಶ ಕಲ್ಲೂರಾಯ ಮೆಕ್ಯಾನಿಕಲ್ ಇಂಜಿನಿಯರ್ ವೃತ್ತಿಯಲ್ಲಿರುವ ಇವರ ಯಕ್ಷಗಾನ ಒಲವು ಅಪಾರ. ಮೂಲತಃ ಕಾಸರಗೋಡು ಜಿಲ್ಲೆಯ ಮದೂರು ನಿವಾಸಿಗಳಾದ ಮೋಹನ ಕಲ್ಲೂರಾಯ ಮತ್ತು ಸುವರ್ಣ ಕುಮಾರಿ ದಂಪತಿಗಳ ಸುಪುತ್ರ.

Yakshagana: ಉದಯೋನ್ಮುಖ ಪ್ರತಿಭೆ ರಾಮಪ್ರಕಾಶ ಕಲ್ಲೂರಾಯ ಯಕ್ಷಗಾನ ಭಾಗವತಿಕೆಗೂ ಸೈ , ಸಂಗೀತಕ್ಕೂ ಜೈ
ರಾಮಪ್ರಕಾಶ ಕಲ್ಲೂರಾಯ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 01, 2023 | 7:10 AM

ಕರಾವಳಿಯ ಸಂಪ್ರದಾಯಿಕ ಗಂಡುಕಲೆ ಎಂದೇ ಕರೆಯಲ್ಪಡುವ ಯಕ್ಷಗಾನಕ್ಕೆ ಅದರದ್ದೆ ಆದ ಗಾಂಭೀರ್ಯ ಇದೆ. ರಂಗಸ್ಥಳದಲ್ಲಿ ಕಲಾವಿದನ ಅರ್ಥಗರ್ಭಿತ ಮಾತುಗಳಿಗೆ ಮನಸೋಲದವರು ಯಾರು ಇಲ್ಲಾ.! ಯಕ್ಷಗಾನ ಇಂದು ದೇಶ ವಿದೇಶದಲ್ಲಿಯೂ ತನ್ನದೇ ಆದ ಹೊಸ ಛಾಪನ್ನು ಮೂಡಿಸುತ್ತಿರುವುದು ಇದಕ್ಕೆ ಸಿಕ್ಕಿದ ಮತ್ತೊಂದು ಗರಿಮೆಯೆಂದೇ ಹೇಳಬಹುದು. ಇಂತಹ ಕಲೆಯಲ್ಲಿ ತೊಡಗಿಕೊಂಡಿರುವ ಓರ್ವ ಉದಯೋನ್ಮುಖ ಪ್ರತಿಭೆ ರಾಮಪ್ರಕಾಶ ಕಲ್ಲೂರಾಯ. ಮೆಕ್ಯಾನಿಕಲ್ ಇಂಜಿನಿಯರ್ ವೃತ್ತಿಯಲ್ಲಿರುವ ಇವರ ಯಕ್ಷಗಾನ ಒಲವು ಅಪಾರ. ಮೂಲತಃ ಕಾಸರಗೋಡು ಜಿಲ್ಲೆಯ ಮದೂರು ನಿವಾಸಿಗಳಾದ ಮೋಹನ ಕಲ್ಲೂರಾಯ ಮತ್ತು ಸುವರ್ಣ ಕುಮಾರಿ ದಂಪತಿಗಳ ಸುಪುತ್ರ. ತನ್ನ ಎಂಟನೇ ವಯಸಿನಲ್ಲಿಯೇ ವೇದಿಕೆ ಹತ್ತುವುದರ ಮೂಲಕ ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಮ್ಮ ಕುಟುಂಬದಲ್ಲಿಯೇ ಹಿರಿಯ ಯಕ್ಷಗಾನ ವೇಷದಾರಿಗಳು , ಭಾಗವತಿಕೆ , ಪ್ರಧಾನ ಕರ್ತೃ, ಹಿಮ್ಮೆಳ, ಚಂಡೆ, ಮದ್ದಳೆ ವಾದಕರು ಇದ್ದುದರಿಂದ ಹಾಗೂ ಯಕ್ಷಗಾನ ಕಲಾವಿದರಾದ ತಂದೆ ಮೋಹನ್ ಕಲ್ಲೂರಾಯರವರಿಂದ ಪ್ರೇರೇಪಿತರಾಗಿ ಯಕ್ಷಗಾನದ ವಾತಾವರಣದಲ್ಲಿಯೇ ಬೆಳೆದ ಕಾರಣ ಈ ಗಂಡುಕಲೆಯಲ್ಲಿ ಒಲವು ಹುಟ್ಟಿಕೊಂಡಿತು. ಚಂಡೆ ವಾದಕರಾಗಿ 6 ವರ್ಷದಿಂದ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಗುರುಗಳಾದ ಮುಡ್ರುಪಾಡಿ ಶ್ರೀಧರ್ ರಾವ್ , ಮೋಹನ ಬೈಪಡಿತ್ತಾಯ ಉಜಿರೆ , ಮೃದಂಗವನ್ನು ಗುರುವಾಯನಕೆರೆ ಚಂದ್ರಶೇಖರ ಆಚಾರ್ಯ ಹಾಗೂ ಮದ್ದಳೆಯನ್ನು ಕೃಷ್ಣ ಪ್ರಕಾಶ ಉಳಿತ್ತಾಯ ಇವರಿಂದ ಅಭ್ಯಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ:Yakshagana: ಬದುಕಿಗಾಗಿ ಮುದ್ರಣ, ಸಂತೋಷಕ್ಕಾಗಿ ಜನ್ಮದತ್ತ ಯಕ್ಷಗಾನ, ಪುರಾಣಗಳನ್ನು ಮನೆ ಮನೆಗೆ ಪಸರಿಸಿದ ಸಾಧಕ ಸಚ್ಚಿದಾನಂದ ಪ್ರಭು

ಯಕ್ಷಗಾನ ಅಲ್ಲದೇ ಸಂಗೀತ, ವಾಲಿಬಾಲ್, ಕ್ರಿಕೆಟ್ ನಲ್ಲಿ ತಮ್ಮ ಅತೀವವಾದ ಆಸಕ್ತಿಯನ್ನು ಹೊಂದಿದ್ದಾರೆ. ಎಂ,ಟೆಕ್ ಮುಗಿಸಿ ಇದೀಗ ಪಿಎಚ್ ಡಿ ಮಾಡುತ್ತಿದ್ದಾರೆ. ಸುಮಧುರ ಕಂಠವುಳ್ಳ ಸ್ವರ ಮಾಂತ್ರಿಕ ರಾಮಪ್ರಕಾಶ ಕಲ್ಲೂರಾಯ ಸಂಗೀತದಲ್ಲಿ ಜೂನಿಯರ್ ಕ್ಲಾಸ್ , ಗಮಕದಲ್ಲಿ ಗಮಕ ಪಾರೀಣ ಮತ್ತು ಗಮಕಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಆಕಾಶವಾಣಿ ಮಂಗಳೂರಿನಲ್ಲಿ ಭಕ್ತಿಗೀತೆಯ ವಿಭಾಗದಲ್ಲಿ ಸುಮಾರು 6 ವರ್ಷಗಳಿಂದ ಕಾರ್ಯಕ್ರಮವನ್ನು ಕೊಡುತ್ತಾ ಬರುತ್ತಿದ್ದಾರೆ.

ಯಕ್ಷಗಾನ ಎಂದರೆ ಅದು ಸಮುದ್ರದಂತೆ ನಾವು ಅದನ್ನು ಎಷ್ಟೇ ಬಗೆದರೂ ಅದರ ಆಳ ತಿಳಿಯುದಿಲ್ಲ , ಅಂತಹ ಒಂದು ಕ್ಷೇತ್ರದಲ್ಲಿ ಪ್ರತಿದಿನ ಹೊಸ ಹೊಸ ವಿಚಾರವನ್ನು ಕಲಿಯಲು ಸಿಗುತ್ತದೆ. ಈ ರೀತಿ ದೊರಕುವ ವಿಚಾರವನ್ನು ಅಭ್ಯಾಹಿಸುತ್ತಾ ಹೋದರೆ ನಮ್ಮ ಜ್ಞಾನ ವೃದ್ಧಿಯಾಗುತ್ತದೆ. ನಮ್ಮ ಅನುಭವವೂ ಒಂದು ಪಕ್ವಕ್ಕೆ ಬರುತ್ತದೆ. ಹಾಗಾಗಿ ಯಕ್ಷಗಾನವನ್ನು ಗೌರವದಿಂದ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಯಕ್ಷಗಾನ ಕಲೆಯೂ ಈಗೀನ ಕಾಲದಲ್ಲಿ ಬದಲಾಯಿಸಿಕೊಂಡು ಹೋದರು ಕೂಡ ಅದರ ಮೂಲ ಸ್ವಂತಿಕೆಯನ್ನು ಬದಲುಮಾಡಬಾರದು. ಕಲಾರಾಧಕರಿಗೆ ಯಕ್ಷಗಾನದ ಸ್ವಂತಿಕೆಯನ್ನು ಉಣಬಡಿಸುವಲ್ಲಿ ಸಫಲರಾಗಬೇಕು ಎನ್ನುವ ಇವರ ಮುಂದಿನ ಯಕ್ಷಗಾನ ಜೀವನ ಸುಖಮಯವಾಗಿರಲಿ ಎಂದು ಆಶೀಸೋಣ.

ಲೇಖನ: ನೀತಾ ರವೀಂದ್ರ

ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ