ಕೊರೊನಾದಿಂದ ತಣ್ಣಗಾಗಿದ್ದ ಚಿತ್ರರಂಗದಲ್ಲಿ ಮತ್ತೆ ಚಟುವಟಿಕೆಗಳು ಆರಂಭವಾಗಿವೆ. ಒಂದರ ಹಿಂದೊಂದು ಹೊಸ ಸಿನಿಮಾಗಳು ತೆರೆಕಾಣಲು ಸಜ್ಜಾಗುತ್ತಿವೆ. ಇದೀಗ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೋಟಿಗೊಬ್ಬ 3 ಕುರಿತಾದ ಬಿಸಿಬಿಸಿ ಸುದ್ದಿಯೊಂದು ಹೊರಬಿದ್ದಿದ್ದು, ಆಡಿಯೋ ರಿಲೀಸ್ ಶೀಘ್ರದಲ್ಲೇ ಆಗಲಿದೆ ಎನ್ನುವ ವಿಚಾರವನ್ನು ಸುದೀಪ್ ಅಭಿಮಾನಿಗಳು ಹಂಚಿಕೊಂಡಿದ್ದಾರೆ.
ಮೊನ್ನೆಯಷ್ಟೇ ಕಿಚ್ಚ ಸುದೀಪ ಚಿತ್ರರಂಗಕ್ಕೆ ಕಾಲಿಟ್ಟು 25ವರ್ಷ ಪೂರೈಸಿದ ಸಂಭ್ರಮದಲ್ಲಿ ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಮೇಲೆ ನಿಂತು ತಮ್ಮ ಹೊಸ ಸಿನಿಮಾ ವಿಕ್ರಾಂತ್ ರೋಣ ಟೈಟಲ್ ಅನಾವರಣಗೊಳಿಸಿದ್ದಾರೆ. ಈ ಮೂಲಕ ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ಅಭಿಮಾನಿಗಳನ್ನು ಹೊಂದಿರುವ ಸುದೀಪ್ ಅವರ ಹೊಸ ಸಿನಿಮಾ ವಿಕ್ರಾಂತ್ ರೋಣ ಭಾರತದ ಭಾಷೆಗಳಲ್ಲಷ್ಟೇ ಅಲ್ಲದೇ ವಿದೇಶಿ ಭಾಷೆಯಲ್ಲೂ ತೆರೆಕಾಣಲಿದೆ ಎನ್ನಲಾಗಿದೆ.
#Kotigobba3 audio launch on March28
Get ready for Dhamaka..!#Kotigobba3audioonmarch28 #K3audioonmarch28@KicchaSudeep @ArjunJanya3 @AshikaRanganath @KicchanHudugru @KicchaFC @TheSudeepTrends pic.twitter.com/jOowuDvg9L
— SUDHIR Devadiga (@SudhirMudrady) February 3, 2021
ಇದೀಗ ವಿಕ್ರಾಂತ್ ರೋಣಕ್ಕೂ ಮುನ್ನ ತೆರೆಗಪ್ಪಳಿಸಲು ಸಜ್ಜಾಗಿರುವ ಕೋಟಿಗೊಬ್ಬ 3 ಸಿನಿಮಾ ಕುರಿತು ಸುದೀಪ್ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ. ಹೀಗಾಗಿ ಸಿನಿಮಾ ತಂಡಕ್ಕೂ ಮುನ್ನವೇ ಚಿತ್ರದ ಆಡಿಯೋ ರಿಲೀಸ್ಗೆ ದಿನಾಂಕ ನಿಗದಿಪಡಿಸಿರುವ ಅಭಿಮಾನಿಗಳು ಮಾರ್ಚ್ 28ರಂದು ಆಡಿಯೋ ಬಿಡುಗಡೆಯಾಗಲಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ.
ಕೆಲ ಮೂಲಗಳ ಪ್ರಕಾರ ಕೋಟಿಗೊಬ್ಬ3 ಚಿತ್ರತಂಡ ಕೂಡ ಮಾರ್ಚ್ 28ಕ್ಕೆ ಆಡಿಯೋ ಬಿಡುಗಡೆ ಮಾಡಲು ಸಜ್ಜಾಗಿದ್ದು, ಏಪ್ರಿಲ್ 29ಕ್ಕೆ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ ಎನ್ನಲಾಗುತ್ತಿದೆ. ಸದ್ಯ ಟ್ವಿಟರ್ನಲ್ಲಿ #Kotigobba3audioonmarch28 #K3audioonmarch28 ಎಂಬ ಹ್ಯಾಶ್ಟ್ಯಾಗ್ಗಳು ಸಖತ್ ಸದ್ದು ಮಾಡುತ್ತಿದ್ದು, ಸಿನಿಪ್ರೇಮಿಗಳ ಕುತೂಹಲ ಕೆರಳಿಸಿದೆ.
Here is a greater quality video of @VikrantRona‘s sneak peek & Logo launch on @BurjKhalifa .
#VikrantRonaOnBurjKhalifa #WorldGetsANewHero @shaliniartss @JackManjunath
— Kichcha Sudeepa (@KicchaSudeep) February 1, 2021
Vikrant Rona On Burj Khalifa ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ ಕಿಚ್ಚ ಸುದೀಪ್ ಕಟೌಟ್!