FY27ರ ವೇಳೆಗೆ ಭಾರತದ ನಾಮಿನಲ್ ಜಿಡಿಪಿಯಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಲಿದೆ ಎಂದ ಸಿಇಎ ಅನಂತ ನಾಗೇಶ್ವರನ್

| Updated By: Srinivas Mata

Updated on: Feb 01, 2022 | 7:24 PM

ಹಣಕಾಸು ವರ್ಷ 2027ರ ಹೊತ್ತಿಗೆ ಭಾರತದ ನಾಮಿನಲ್ ಜಿಡಿಪಿಯಲ್ಲಿ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಆಗಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವೆಂಕಟರಾಮನ್ ಅನಂತ ನಾಗೇಶ್ವರನ್ ಹೇಳಿದ್ದಾರೆ.

FY27ರ ವೇಳೆಗೆ ಭಾರತದ ನಾಮಿನಲ್ ಜಿಡಿಪಿಯಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಲಿದೆ ಎಂದ ಸಿಇಎ ಅನಂತ ನಾಗೇಶ್ವರನ್
ಸಾಂದರ್ಭಿಕ ಚಿತ್ರ
Follow us on

ಭಾರತದ ಮುಖ್ಯ ಆರ್ಥಿಕ ಸಲಹೆಗಾರ (CEA) ವಿ. ಅನಂತ ನಾಗೇಶ್ವರನ್ (V Anantha Nageswararan) ಮಂಗಳವಾರದಂದು ಮಾತನಾಡಿ, ದೇಶದ ನೈಜ ಜಿಡಿಪಿ ಬೆಳವಣಿಗೆಯು ಶೇ 8ರ ಹಾದಿಯನ್ನು ಉಳಿಸಿಕೊಂಡರೆ ಅದು ಶೇ 8 ಡಾಲರ್ ಜಿಡಿಪಿ ಬೆಳವಣಿಗೆಗೆ ಅನುವಾದಿಸುತ್ತದೆ. “ನಾವು ಆ ಪದ್ಧತಿಯನ್ನು ವಿಸ್ತರಣೆ ಮಾಡಿದರೆ ಹಣಕಾಸು ವರ್ಷ 2025-26 ಅಥವಾ ಹಣಕಾಸು ವರ್ಷ 2026-27ರಲ್ಲಿ ನಾಮಿನಲ್ ಜಿಡಿಪಿಗೆ ಸಂಬಂಧಿಸಿದಂತೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಿರುತ್ತೇವೆ,” ಎಂದು ಹೇಳಿದ್ದಾರೆ. 2021-22 ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 9.2ರಷ್ಟು ಜಿಡಿಪಿ ಬೆಳವಣಿಗೆಯೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಆಗಲಿದೆ ಮತ್ತು 2022-23ರಲ್ಲಿ ಶೇ 8ರಿಂದ ಶೇ 8.5ರಷ್ಟು ವ್ಯಾಪ್ತಿಯಲ್ಲಿ ಉಳಿಯುವ ನಿರೀಕ್ಷೆಯಿದೆ.

2022-23ರಲ್ಲಿನ ಬೆಳವಣಿಗೆಯು ವ್ಯಾಪಕವಾದ ಲಸಿಕೆ ಕವರೇಜ್, ಪೂರೈಕೆ ಕಡೆಯ ಸುಧಾರಣೆಗಳಿಂದ ಲಾಭಗಳು ಮತ್ತು ನಿಯಮಗಳ ಸರಾಗಗೊಳಿಸುವಿಕೆ, ದೃಢವಾದ ರಫ್ತು ಬೆಳವಣಿಗೆ ಹಾಗೂ ಬಂಡವಾಳದ ವೆಚ್ಚವನ್ನು ಹೆಚ್ಚಿಸಲು ಆರ್ಥಿಕ ಅವಕಾಶದ ಲಭ್ಯತೆಯಿಂದ ಬೆಂಬಲಿತವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ವಾರ್ಷಿಕ ಸಮೀಕ್ಷಾ ವರದಿ ಪ್ರಕಾರ, 2023-24ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇಕಡಾ 7.1ಕ್ಕೆ ನಿಧಾನ ಆಗಲಿದೆ ಎಂದು ಅಂದಾಜಿಸಲಾಗಿದೆ. “ಅತ್ಯಂತ ಸಂಪ್ರದಾಯವಾದಿ ಅಂದಾಜಿನ ಪ್ರಕಾರವೂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲಿದೆ,” ಎಂದು ಹಣಕಾಸು ಸಚಿವಾಲಯದ ಪ್ರಧಾನ ಆರ್ಥಿಕ ಸಲಹೆಗಾರ ಮತ್ತು ವರದಿಯ ಪ್ರಮುಖ ಲೇಖಕ ಸಂಜೀವ್ ಸನ್ಯಾಲ್ ಹೇಳಿದ್ದಾರೆ.

ಆದರೆ, ಕೊವಿಡ್-19 ಹೊಸ ರೂಪಾಂತರಗಳಿಂದ ಉಂಟಾಗುವ ಸವಾಲುಗಳು ಮತ್ತು ಜಾಗತಿಕ ಆರ್ಥಿಕತೆ ಹಾಗೂ ಹಣದುಬ್ಬರದಲ್ಲಿನ ಅನಿಶ್ಚಿತತೆಗಳನ್ನು ವರದಿಯಲ್ಲಿ ದಾಖಲಿಸಲಾಗಿದೆ. ಸುಧಾರಿತ ಮತ್ತು ಉದಯೋನ್ಮುಖ ಆರ್ಥಿಕತೆಗಳಲ್ಲಿ ಹಣದುಬ್ಬರವು ಜಾಗತಿಕ ಸಮಸ್ಯೆಯಾಗಿ ಮತ್ತೆ ಕಾಣಿಸಿಕೊಂಡಿದೆ ಹಾಗೂ ಭಾರತವು “ಆಮದು ಮಾಡಿದ ಹಣದುಬ್ಬರ”ದ ಬಗ್ಗೆ ಜಾಗರೂಕ ಆಗಿರಬೇಕು, ವಿಶೇಷವಾಗಿ ಹೆಚ್ಚಿನ ತೈಲ ಬೆಲೆಗಳಿಂದಾಗಿ ಎಚ್ಚರಿಕೆಯಿಂದ ಇರಬೇಕು. “ಹಣದುಬ್ಬರವು ಮುಂದುವರಿದ ಮತ್ತು ಉದಯೋನ್ಮುಖ ಆರ್ಥಿಕತೆಗಳೆರಡರಲ್ಲೂ ಜಾಗತಿಕ ಸಮಸ್ಯೆಯಾಗಿ ಕಾಣಿಸಿಕೊಂಡಿದೆ. ಭಾರತದ ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರವು ವರ್ಷದಿಂದ ವರ್ಷಕ್ಕೆ 2021ರ ಡಿಸೆಂಬರ್​ನಲ್ಲಿ ಶೇಕಡಾ 5.6 ದರದಲ್ಲಿ ಇದ್ದು, ಇದು ಆರ್​ಬಿಐನ ಗುರಿಯ ಅಳತೆಯಲ್ಲೇ ಇದೆ,” ಎಂದು ವರದಿ ಹೇಳಿದೆ.

“ಆದರೆ, ಸಗಟು ಬೆಲೆ ಹಣದುಬ್ಬರವು ಎರಡಂಕಿಯಲ್ಲಿ ಸಾಗುತ್ತಿದೆ. ಇದು ಸ್ವಲ್ಪ ಮಟ್ಟಿಗೆ ಮೂಲ ಪರಿಣಾಮಗಳಿಂದ ಕೂಡಿದೆ. ಆದರೂ ಭಾರತವು ಆಮದು ಮಾಡಿಕೊಳ್ಳುವ ಹಣದುಬ್ಬರದ ಬಗ್ಗೆ, ವಿಶೇಷವಾಗಿ, ಅದರಲ್ಲೂ ಹೆಚ್ಚಿದ ಜಾಗತಿಕ ಇಂಧನ ಬೆಲೆಗಳಿಂದ ಹುಷಾರಾಗಿ ಇರಬೇಕು,” ಎಂದು ಅದು ಹೇಳಿದೆ. “ಜಾಗತಿಕ ಪರಿಸರವು ಇನ್ನೂ ಅನಿಶ್ಚಿತವಾಗಿದೆ,” ಎಂದು ವರದಿಯು ದಾಖಲಿಸಿದೆ.

“ವರದಿ ಬರೆಯುವ ಸಮಯದಲ್ಲಿ ಒಮಿಕ್ರಾನ್ ರೂಪಾಂತರದ ರೂಪದಲ್ಲಿ ಹೊಸ ಅಲೆಯು ಪ್ರಪಂಚದಾದ್ಯಂತ ವ್ಯಾಪಿಸುತ್ತಿದೆ. ಹೆಚ್ಚಿನ ದೇಶಗಳಲ್ಲಿ ಹಣದುಬ್ಬರವು ಹೆಚ್ಚಾಗಿದೆ ಮತ್ತು ಪ್ರಮುಖ ಕೇಂದ್ರೀಯ ಬ್ಯಾಂಕ್​ಗಳಿಂದ ಲಿಕ್ವಿಡಿಟಿ ಹಿಂತೆಗೆದುಕೊಳ್ಳುವಿಕೆ ಸೈಕಲ್ (ಚಕ್ರ) ಪ್ರಾರಂಭಿಸಲಾಯಿತು. ಭಾರತದ ಸ್ಥೂಲ ಆರ್ಥಿಕ ಸ್ಥಿರತೆಯ ಸೂಚಕಗಳು ಮತ್ತು ಅದಕ್ಕೂ ಮೇಲ್ಪಟ್ಟು ಒತ್ತಡಗಳ ವಿರುದ್ಧ ಬಫರ್ ಅನ್ನು ಒದಗಿಸುವ ಅವುಗಳ ಸಾಮರ್ಥ್ಯವನ್ನು ನೋಡಲು ವಿಶೇಷವಾಗಿ ಮುಖ್ಯವಾಗಿದೆ,” ಎಂದು ಹೇಳಲಾಗಿದೆ. ಒಟ್ಟಾರೆಯಾಗಿ, ಸ್ಥೂಲ ಆರ್ಥಿಕ ಸ್ಥಿರತೆಯ ಸೂಚಕಗಳು ಭಾರತೀಯ ಆರ್ಥಿಕತೆಯು 2022-23ರ ಸವಾಲುಗಳನ್ನು ತೆಗೆದುಕೊಳ್ಳಲು ಉತ್ತಮ ಸ್ಥಾನದಲ್ಲಿದೆ ಎಂದು ಸೂಚಿಸುತ್ತದೆ ಎಂದು ಹೇಳಿವೆ.

ಭಾರತೀಯ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿರಲು ಅದರ ವಿಶಿಷ್ಟ ಪ್ರತಿಕ್ರಿಯೆ ತಂತ್ರವು ಒಂದು ಕಾರಣ. ಕಟ್ಟುನಿಟ್ಟಿನ ಪ್ರತಿಕ್ರಿಯೆಗೆ ಮುಂಚಿತವಾಗಿ ಬದ್ಧರಾಗುವ ಬದಲು ಭಾರತ ಸರ್ಕಾರವು ಒಂದು ಕಡೆ ದುರ್ಬಲ ವರ್ಗಗಳಿಗೆ ಸುರಕ್ಷತಾ-ಜಾಲಗಳನ್ನು ಬಳಸಲು ಆಯ್ಕೆ ಮಾಡಿತು ಮತ್ತು ಮಾಹಿತಿಯ ಬೇಸಿಯನ್-ಅಪ್‌ಡೇಟ್‌ನ ಆಧಾರದ ಮೇಲೆ ಪುನರಾವರ್ತಿತವಾಗಿ ಪ್ರತಿಕ್ರಿಯಿಸುತ್ತದೆ. ಈ “ಬಾರ್ಬೆಲ್ ತಂತ್ರ” ಕಳೆದ ವರ್ಷದ ಆರ್ಥಿಕ ಸಮೀಕ್ಷೆಯಲ್ಲಿ ಚರ್ಚಿಸಲಾಗಿದೆ. ಈ ಹೊಂದಿಕೊಳ್ಳುವ, ಪುನರಾವರ್ತನೆಯ “ಸುಲಭವಾಗಿ ಹಾಗೂ ಸಲೀಸಾಗಿ ಮುಂದಕ್ಕೆ ಚಲಿಸುವ” ವಿಧಾನದ ಪ್ರಮುಖ ಸಕ್ರಿಯಗೊಳಿಸುವಿಕೆಯು ತೀವ್ರ ಅನಿಶ್ಚಿತತೆಯ ವಾತಾವರಣದಲ್ಲಿ 80 ಹೈ-ಫ್ರೀಕ್ವೆನ್ಸಿ ಇಂಡಿಕೇಟರ್‌ಗಳ (HFIs) ಬಳಕೆಯಾಗಿದೆ.

ಇದನ್ನೂ ಓದಿ: Budget 2022: ವಿದ್ಯುತ್, ಸಾರಿಗೆ, ಮೂಲಸೌಕರ್ಯದಲ್ಲಿ ಹಲವು ಪಟ್ಟು ವೃದ್ಧಿ: ಆರ್ಥಿಕ ಸಮೀಕ್ಷೆಯಲ್ಲಿ ಮಾಹಿತಿ ನೀಡಿದ ಕೇಂದ್ರ ಸರ್ಕಾರ

Published On - 7:23 pm, Tue, 1 February 22