2023-24ರ ಆರ್ಥಿಕ ಸಮೀಕ್ಷೆಯಲ್ಲಿ ದೇಶದ ಸ್ಥಿತಿ ಬಗ್ಗೆ ಏನು ಚಿತ್ರಣ ಇದೆ? ಇಲ್ಲಿದೆ ವರದಿ ಹೈಲೈಟ್ಸ್

|

Updated on: Jul 22, 2024 | 5:16 PM

Economic Survey 2024 highlights: ಜುಲೈ 22ರಂದು ಮಂಡನೆಯಾದ ಆರ್ಥಿಕ ಸಮೀಕ್ಷಾ ವರದಿಯಲ್ಲಿ ದೇಶದ ಆರ್ಥಿಕತೆಯ ಚಿತ್ರಣವನ್ನು ಅಂದಾಜು ಮಾಡಲಾಗಿದೆ. ಭಾರತದ ಆರ್ಥಿಕತೆಯ ಪ್ರಸಕ್ತ ಓಟವನ್ನು ಚೀನಾ 1980ರಿಂದ ಮಾಡಿದ ಸಾಧನೆಗೆ ಹೋಲಿಕೆ ಮಾಡಲಾಗಿದೆ. 2030ರವರೆಗೂ ಪ್ರತೀ ವರ್ಷ 78 ಲಕ್ಷ ಉದ್ಯೋಗಗಳ ಸೃಷ್ಟಿಯಾಗುವ ಅಗತ್ಯ ಇದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

2023-24ರ ಆರ್ಥಿಕ ಸಮೀಕ್ಷೆಯಲ್ಲಿ ದೇಶದ ಸ್ಥಿತಿ ಬಗ್ಗೆ ಏನು ಚಿತ್ರಣ ಇದೆ? ಇಲ್ಲಿದೆ ವರದಿ ಹೈಲೈಟ್ಸ್
ಆರ್ಥಿಕ ಸಮೀಕ್ಷೆ
Follow us on

ನವದೆಹಲಿ, ಜುಲೈ 22: ಬಜೆಟ್​ಗೆ ಪೂರ್ವಭಾವಿಯಾಗಿ ಒಂದು ದಿನ ಮುಂಚೆ ಆರ್ಥಿಕ ಸಮೀಕ್ಷೆ ಮಂಡನೆ ಆಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಎಕನಾಮಿಕ್ ಸರ್ವೆ ವರದಿಯನ್ನು ಸಂಸತ್​ನಲ್ಲಿ ಇಂದು ಮಂಡಿಸಿದರು. ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದಲ್ಲಿ ರೂಪಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ, ಭಾರತದ ಆರ್ಥಿಕ ಪ್ರಗತಿಯ ಓಟವನ್ನು ಚೀನಾ 1980ರಿಂದ 2015ರವರೆಗೆ ಮಾಡಿದ ಸಾಧನೆಗೆ ಹೋಲಿಕೆ ಮಾಡಿದೆ. ಜಿಡಿಪಿ ದರ, ಹಣಕಾಸು ಪರಿಸ್ಥಿತಿ ಇತ್ಯಾದಿ ಬಗ್ಗೆ ಆರ್ಥಿಕ ಸಮೀಕ್ಷೆ ಆಶಾದಾಯಕವೆನಿಸುವ ಚಿತ್ರಣ ನೀಡಿದೆ. ಆರ್ಥಿಕ ಬೆಳವಣಿಗೆಯ ಓಟಕ್ಕೆ ತಡೆಯಾಗಿರುವ ಕೆಲ ಅಂಶಗಳ ಬಗ್ಗೆಯೂ ಈ ಸಮೀಕ್ಷೆ ಎಚ್ಚರಿಸುವ ಕೆಲಸ ಮಾಡಿದೆ.

ಪ್ರತೀ ವರ್ಷ 78 ಲಕ್ಷ ಉದ್ಯೋಗಗಳ ಸೃಷ್ಟಿ ಅಗತ್ಯ

ದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಬೇಕಾದರೆ 2030ರವರೆಗೂ ಕೃಷಿಯೇತರ ಕ್ಷೇತ್ರದಲ್ಲಿ ಪ್ರತೀ ವರ್ಷ ಸರಾಸರಿಯಾಗಿ 78.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅವಶ್ಯಕತೆ ಇದೆ ಎಂದು ಆರ್ಥಿಕ ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಅರ್ಧದಷ್ಟು ಭಾರತೀಯರು ಉದ್ಯೋಗಕ್ಕೆ ತಯಾರಿಲ್ಲ

ಆರ್ಥಿಕ ಸಮೀಕ್ಷೆ ಪ್ರಕಾರ ಪ್ರತೀ ಇಬ್ಬರು ಭಾರತೀಯರಲ್ಲಿ ಒಬ್ಬರು ತತ್​ಕ್ಷಣಕ್ಕೆ ಉದ್ಯೋಗಕ್ಕೆ ತಯಾರಾಗಿಲ್ಲ. ಅವರು ಕಾಲೇಜು ಶಿಕ್ಷಣ ಈಗಷ್ಟೇ ಮುಗಿಸಿ ಹೊರಬಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕೇಂದ್ರದ ಈ ಬಜೆಟ್ ಮುಂದಿನ ಐದು ವರ್ಷಗಳ ಮಾರ್ಗಸೂಚಿ: ಪ್ರಧಾನಿ ಮೋದಿ

ಸರ್ವಿಸ್ ಸೆಕ್ಟರ್​ನಲ್ಲಿ ಈಗಲೂ ಕೂಡ ಹೆಚ್ಚು ಉದ್ಯೋಗ ಸೃಷ್ಟಿ ಆಗುತ್ತಿದೆ. ಇದರ ಜೊತೆಗೆ ಕಟ್ಟಡ ನಿರ್ಮಾಣ ವಲಯ ಕೂಡ ಇತ್ತೀಚೆಗೆ ಉದ್ಯೋಗಸೃಷ್ಟಿಯಲ್ಲಿ ಮುಂಚೂಣಿಗೆ ಬರುತ್ತಿದೆ. ಮ್ಯಾನುಫ್ಯಾಕ್ಚರಿಂಗ್ ವಲಯದಲ್ಲಿ ಉದ್ಯೋಗಸೃಷ್ಟಿ ಕಳೆದ ದಶಕದಲ್ಲಿ ಕಡಿಮೆ ಆಗಿತ್ತು. 2021-22ರಿಂದ ಈಚೆ ಈ ಕ್ಷೇತ್ರದಲ್ಲಿ ಉದ್ಯೋಗಸೃಷ್ಟಿ ಹೆಚ್ಚಾಗುತ್ತಿದೆ ಎಂದು ಈ ವರದಿ ಪ್ರಸ್ತಾಪಿಸಿದೆ.

ಜಿಡಿಪಿ ದರ 2024-25ರಲ್ಲಿ ಶೇ. 6.5ರಿಂದ ಶೇ. 7

2024-25ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7ರಷ್ಟು ಬೆಳೆಯಬಹುದು ಎಂದು ಐಎಂಎಫ್, ಎಡಿಬಿ ಇತ್ಯಾದಿ ಗ್ಲೋಬಲ್ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ. ನಾವು ಸಂಭಾವ್ಯ ರಿಸ್ಕ್ ಇತ್ಯಾದಿಯನ್ನು ಗಮನದಲ್ಲಿರಿಸಿಕೊಂಡು ಜಿಡಿಪಿ ದರ ಕನಿಷ್ಠ ಶೇ. 6.5ರಿಂದ 7ರಷ್ಟು ಇರಬಹುದು ಎಂದು ನಿರೀಕ್ಷಿಸುತ್ತಿದ್ದೇವೆ.

ಹಣದುಬ್ಬರ ಶೇ. 4.5ರಷ್ಟಿರುವ ಸಾಧ್ಯತೆ

ಆರ್ಥಿಕ ಸಮೀಕ್ಷೆಯು ಹಣದುಬ್ಬರದ ಬಗ್ಗೆ ತೀರಾ ಆಶಾದಾಯಕವಾಗಿಲ್ಲ. ಜಾಗತಿಕ ವಿದ್ಯಮಾನಗಳು ಮತ್ತು ಪ್ರತಿಕೂಲ ಹವಾಮಾನವು ಹಣದುಬ್ಬರದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿರುವ ಈ ವರದಿಯ ಪ್ರಕಾರ, 2024-25ರಲ್ಲಿ ಹಣದುಬ್ಬರ ದರ ಶೇ. 4.5ರಷ್ಟು ಇರಬಹುದು.

ಇದನ್ನೂ ಓದಿ: ಯುವಕರ ಬಾಳಿಗೆ ಭರವಸೆಯ ಬೆಳಕು ನೀಡಲು ಬಜೆಟ್​ನಲ್ಲಿ ನಿರೀಕ್ಷೆಗಳೇನು?

ಉದ್ಯೋಗಸೃಷ್ಟಿಯಲ್ಲಿ ಖಾಸಗಿ ವಲಯ ಹೆಚ್ಚು ಜವಾಬ್ದಾರರಾಗಬೇಕು

ಭಾರತದ ಕಾರ್ಪೊರೇಟ್ ವಲಯ ಸಾಕಷ್ಟು ಹಣಕಾಸು ಲಾಭ ಪಡೆದಿದೆ. 33,000ಕ್ಕೂ ಹೆಚ್ಚು ಕಂಪನಿಗಳನ್ನು ಅವಲೋಕಿಸಿದಾಗ 2019-20ರಿಂದ 2022-23ರವರೆಗೆ ಮೂರು ವರ್ಷದಲ್ಲಿ ಕಾರ್ಪೊರೇಟ್ ಸೆಕ್ಟರ್​ನ ಲಾಭ ಹೆಚ್ಚುಕಡಿಮೆ ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆ, ಇದಕ್ಕೆ ತಕ್ಕಂತೆ ನೇಮಕಾತಿ ಆಗುತ್ತಿಲ್ಲ, ಉದ್ಯೋಗಿಗಳಿಗೆ ಸಂಬಳ ಹೆಚ್ಚುತ್ತಿಲ್ಲ ಎಂದು ಆರ್ಥಿಕ ಸಮೀಕ್ಷೆಯು ಹೇಳಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Mon, 22 July 24