ನವದೆಹಲಿ, ಜುಲೈ 22: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಜುಲೈ 23) ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಫೆಬ್ರುವರಿಯಲ್ಲಿ ನಡೆದ ಮಧ್ಯಂತರ ಬಜೆಟ್ ಅನ್ನೂ ಸೇರಿ ನಿರ್ಮಲಾ ಸೀತಾರಾಮನ್ ಅವರಿಗೆ ಇದು ಸತತ ಏಳನೇ ಬಜೆಟ್ ಮಂಡನೆಯಾಗಿದೆ. ಈ ವಿಚಾರದಲ್ಲಿ ಅವರು ದಾಖಲೆ ಬರೆದಿದ್ದಾರೆ. ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇದಾಗಿರುವುದರಿಂದ ಸಾಕಷ್ಟು ಕುತೂಹಲ ಇದೆ. 2024-25ರ ಹಣಕಾಸು ವರ್ಷದ ಈ ಪೂರ್ಣ ಬಜೆಟ್ ಮಂಡನೆಯನ್ನು ನಿರ್ಮಲಾ ಸೀತಾರಾಮನ್ ಮಂಗಳವಾರ ಬೆಳಗ್ಗೆ 11 ಗಂಟೆಗೆ ಆರಂಭಿಸಲಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಎರಡರಿಂದ ಮೂರು ಗಂಟೆ ಅವಧಿ ಇರುವ ನಿರೀಕ್ಷೆ ಇದೆ. ಮಧ್ಯಂತರ ಬಜೆಟ್ನಲ್ಲಿ ಅವರ ಭಾಷಣ 87 ನಿಮಿಷಗಳಷ್ಟು ಮಾತ್ರ ಇತ್ತು. 2020ರ ಬಜೆಟ್ನ ಭಾಷಣ 160 ನಿಮಿಷ, ಅಂದರೆ 2 ಗಂಟೆ 40 ನಿಮಿಷದಷ್ಟು ಸುದೀರ್ಘ ಇತ್ತು. ಮಧ್ಯಾಹ್ನ ಎರಡು ಗಂಟೆಯವರೆಗೂ ಈ ಬಾರಿಯ ಬಜೆಟ್ ಭಾಷಣ ಇರಬಹುದು.
2024ರ ಕೇಂದ್ರ ಬಜೆಟ್ ಭಾಷಣ ಮಂಡನೆ ಹಲವೆಡೆ ಲೈವ್ ಆಗಿ ಪ್ರಸಾರ ಆಗಲಿದೆ. ಕೇಂದ್ರ ಸರ್ಕಾರದಿಂದ ನಿರ್ವಹಿಸಲಾಗುವ ಸಂಸದ್ ಟಿವಿ ಮತ್ತು ದೂರದರ್ಶನ್ ಟಿವಿ ವಾಹಿನಿಗಳಲ್ಲಿ ನೇರ ಪ್ರಸಾರ ಇರುತ್ತದೆ. ಈ ವಾಹಿನಿಗಳ ಯೂಟ್ಯೂಬ್ ಚಾನಲ್ಗಳಲ್ಲೂ ನೇರ ಪ್ರಸಾರ ಇರುತ್ತದೆ. ಇಂಡಿಯಾ ಬಜೆಟ್ ವೆಬ್ಸೈಟ್ನಲ್ಲೂ ಲೈವ್ ಸ್ಟ್ರೀಮ್ ಇರುತ್ತದೆ.
ಇವಲ್ಲದೇ ಟಿವಿ9 ವಾಹಿನಿಯಲ್ಲಿ ಲೈವ್ ಪ್ರಸಾರದ ಜೊತೆಗೆ ಬಜೆಟ್ ಹೈಲೈಟ್ಸ್ ಎಲ್ಲವೂ ಲಭ್ಯ ಇರುತ್ತದೆ. ಟಿವಿ9 ವಾಹಿನಿಯ ಯೂಟ್ಯೂಬ್ ಹಾಗೂ ವೆಬ್ಸೈಟ್ನಲ್ಲೂ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು. ವೆಬ್ಸೈಟ್ನಲ್ಲಿ ಲೈವ್ ಸ್ಟ್ರೀಮಿಂಗ್ ಜೊತೆಗೆ ಲೈವ್ ಬ್ಲಾಗ್, ಹೈಲೈಟ್ಸ್, ಪ್ರಮುಖ ಘೋಷಣೆಗಳು, ಆದಾಯ ತೆರಿಗೆ ಬದಲಾವಣೆ ಇತ್ಯಾದಿ ಹಲವು ಅಂಶಗಳ ಬ್ರೇಕಿಂಗ್ ನ್ಯೂಸ್ ಪಡೆಯಬಹುದು.
ಇದನ್ನೂ ಓದಿ: ಅಭಿವೃದ್ಧಿ ಹಾದಿಯಲ್ಲಿ ಭಾರತಕ್ಕಿರುವ ಸವಾಲು ಯಾರಿಗೂ ಎದುರಾಗಿರಲಿಲ್ಲ: ಸಿಇಎ ಅನಂತನಾಗೇಶ್ವರನ್
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:23 pm, Mon, 22 July 24