ನವದೆಹಲಿ, ಜುಲೈ 10: ನಾಳೆಯ ದಿನಗಳಿಗೆ ಇವತ್ತಿನಿಂದಲೇ ತಯಾರಾಗುವುದು ಅಗತ್ಯ. ಖಾಸಗಿ ಕ್ಷೇತ್ರದಲ್ಲಿ ನಿವೃತ್ತಿ ಬಳಿಕ ಪಿಂಚಣಿ ಸಿಗುವುದಿಲ್ಲ. ಇಪಿಎಫ್ ಹೊರತಾಗಿ ಹೆಚ್ಚಿನ ರಿಟೈರ್ಮೆಂಟ್ ಯೋಜನೆಗಳಿಲ್ಲ. ಆದ್ದರಿಂದ ನಿವೃತ್ತಿ ನಂತರದ ಬದುಕಿನ ನಿರ್ವಹಣೆಗಾಗಿ ಬಹಳ ಮುಂಚಿನಿಂದಲೇ ಪ್ಲಾನ್ ಮಾಡಬೇಕಾಗುತ್ತದೆ. 35 ವರ್ಷ ದಾಟುವ ಮುನ್ನವೇ ರಿಟೈರ್ಮೆಂಟ್ ಪ್ಲಾನ್ಗೆ ಅಡಿ ಇಡುವುದು ಉತ್ತಮ. ಇಲ್ಲವಾದರೆ ನಿವೃತ್ತಿ ಬಳಿಕ ಜೀವನ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಯುವಜನರು ರಿಟೈರ್ಮೆಂಟ್ ಪ್ಲಾನ್ ಅನ್ನು ಅಪ್ಪಿಕೊಳ್ಳಲು ಸರ್ಕಾರವೇ ಉತ್ತೇಜಿಸಬೇಕು. ಈ ಬಗ್ಗೆ ಮಾತನಾಡಿರುವ ಅಕ್ಯೂಬ್ ವೆಂಚರ್ಸ್ನ ನಿರ್ದೇಶಕ ಆಶೀಶ್ ಅಗರ್ವಾಲ್ ಅವರು, ಬಜೆಟ್ನಲ್ಲಿ ಹೆಚ್ಚುವರಿ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಕೊಡಬೇಕು ಎಂದು ಸಲಹೆ ನೀಡಿದ್ದಾರೆ.
ಎನ್ಪಿಎಸ್ ಇತ್ಯಾದಿ ಹೂಡಿಕೆಗೆ ಟ್ಯಾಕ್ಸ್ ಡಿಡಕ್ಷನ್ ಇರುವಂತೆ ಯೂತ್ ರಿಟೈರ್ಮೆಂಟ್ ಬೆನಿಫಿಟ್ ಯೋಜನೆ ಪರಿಚಯಿಸಿ ಅದರಲ್ಲಿ ಮಾಡುವ ಹೂಡಿಕೆಗೆ 25,000 ರೂವರೆಗೆ ಡಿಡಕ್ಷನ್ ಕಲ್ಪಿಸಬಹುದು. 35 ವರ್ಷದೊಳಗಿನ ಯುವಕರಿಗೆ ಈ ಸ್ಕೀಮ್ ತರಬಹುದು. ಇದರಿಂದ ಬಹಳ ಚಿಕ್ಕ ವಯಸ್ಸಿನಲ್ಲೇ ಜನರು ರಿಟೈರ್ಮೆಂಟ್ಗೆ ಹಣ ಹೊಂದಿಸುವ ಕೆಲಸ ಆರಂಭಿಸಬಹುದು.
ಇದನ್ನೂ ಓದಿ: ನಿಮ್ಮ ಆದಾಯದಲ್ಲಿ ಗರಿಷ್ಠ ಎಷ್ಟು ಮೊತ್ತದಷ್ಟು ಟ್ಯಾಕ್ಸ್ ಡಿಡಕ್ಷನ್ಸ್ ಪಡೆಯಬಹುದು? ಇಲ್ಲಿದೆ ಪಟ್ಟಿ
ಅಮೆರಿಕದ ಮಾದರಿಯಲ್ಲಿ ಕಡಿಮೆ ಆದಾಯದ ವರ್ಗದವರಿಗೆ ರಿಟೈರ್ಮೆಂಟ್ ಸೇವಿಂಗ್ಸ್ ಕ್ರೆಡಿಟ್ ಸ್ಕೀಮ್ ಅನ್ನು ಜಾರಿಗೆ ತನ್ನಿ ಎಂದು ಫಿನ್ಕಾರ್ಪಿಟ್ ಕನ್ಸಲ್ಟಿಂಗ್ ಸಂಸ್ಥೆಯ ಅಸೋಸಿಯೇಟ್ ಡೈರೆಕ್ಟರ್ ಗೌರವ್ ಸಿಂಗ್ ಪಾರ್ಮಾರ್ ಹೇಳಿದ್ದಾರೆ. ಕೆಳ ಆದಾಯ ಗುಂಪಿನ ಜನರು ತಮ್ಮ ರಿಟೈರ್ಮೆಂಟ್ ಪ್ಲಾನ್ನ ಖಾತೆಗಳಿಗೆ ಹಣ ತೊಡಗಿಸಲು ಉತ್ತೇಜನ ನೀಡಲು 10,000 ರೂ ಟ್ಯಾಕ್ಸ್ ಕ್ರೆಡಿಟ್ ಅನ್ನು ಸರ್ಕಾರ ಕೊಡಬೇಕು ಎನ್ನುವುದು ಅವರ ಒತ್ತಾಯ.
ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ನಿವೃತ್ತಿ ಬಳಿಕ ಶೇ. 60ರವರೆಗೆ ಫಂಡ್ ಹಣ ಹಿಂಪಡೆಯಬಹುದು. ಈ ಮಿತಿಯನ್ನು ಶೇ. 80ಕ್ಕೆ ಹೆಚ್ಚಿಸಬೇಕು ಎಂದು ಗೌರವ್ ಸಿಂಗ್ ಪಾರ್ಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2024: ಮಹಿಳೆಯರಿಗೆ ವಿಶೇಷ ತೆರಿಗೆ ಲಾಭ ಸಿಗುತ್ತದಾ? ನಿರೀಕ್ಷೆಗಳಿವು…
ವಿಭವಂಗಲ್ ಅಂಕುಲಕಲರ ಪ್ರೈ ಲಿ ಸಂಸ್ಥೆಯ ಸಂಸ್ಥಾಪಕ ಸಿದ್ಧಾರ್ಥ್ ಮೌರ್ಯ ಅವರು ರಿಟೈರ್ಮೆಂಟ್ ಸೇವಿಂಗ್ಸ್ ಮ್ಯಾಚ್ ಪ್ರೋಗ್ರಾಮ್ ಎನ್ನುವ ವಿನೂತನ ಸ್ಕೀಮ್ನ ಪ್ರಸ್ತಾಪ ಮಾಡಿದ್ದಾರೆ. ಕೆಳಗಿನ ತೆರಿಗೆ ಗುಂಪಿಗೆ ಸೇರುವ ವ್ಯಕ್ತಿಗಳು ತಮ್ಮ ರಿಟೈರ್ಮೆಂಟ್ ಅಕೌಂಟ್ಗೆ ತುಂಬಿಸುವ ಹಣದಲ್ಲಿ ಪ್ರತೀ ಐದು ಸಾವಿರ ರೂಗೆ ಸರ್ಕಾರ ಒಂದು ಸಾವಿರ ರೂ ಸೇರಿಸಬೇಕು ಎನ್ನುವುದು ಅವರ ಸಲಹೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ