ದೆಹಲಿ ಫೆಬ್ರವರಿ 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಗುರುವಾರ ಬೆಳಗ್ಗೆ ಈ ವರ್ಷದ ಮಧ್ಯಂತರ ಬಜೆಟ್ (Interim Union Budget) ಮಂಡಿಸಿದ್ದಾರೆ. ಹಣಕಾಸು ಸಚಿವರಾಗಿ ಆರನೇ ಬಜೆಟ್ ಮಂಡಿಸಿದ್ದಾರೆ ನಿರ್ಮಲಾ. 2024 ರ ಲೋಕಸಭೆ ಚುನಾವಣೆಗೆ ಕೇವಲ 2-3 ತಿಂಗಳ ಮುಂಚಿತವಾಗಿ ಮಧ್ಯಂತರ ಬಜೆಟ್ ಮಂಡಿಸಲಾಗಿದ್ದು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದರಲ್ಲಿ ಏನೇನು ಘೋಷಣೆ ಆಗಿದೆ ಎಂಬುದನ್ನು ನೋಡೋಣ.
ಈ ವರ್ಷ ಸರ್ಕಾರದ ಗಮನವು ಮಹಿಳೆಯರು, ಯುವಕರು, ರೈತರು ಮತ್ತು ಬಡವರ ಮೇಲೆ ಕೇಂದ್ರೀಕರಿಸುತ್ತದೆ. ಅವರ ಅಗತ್ಯಗಳು ಹೆಚ್ಚಿನ ಆದ್ಯತೆಗಳಾಗಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಗರ್ಭಕಂಠದ ಕ್ಯಾನ್ಸರ್ ಲಸಿಕೆಗಳ ಘೋಷಣೆಗಳಿಂದ ಹಿಡಿದು ತಾಯಂದಿರು ಮತ್ತು ಮಕ್ಕಳ ಪ್ರತಿರಕ್ಷಣೆಯವರೆಗೆ, ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳನ್ನು ವಿಸ್ತರಿಸಿರುವುದು ಈ ಬಜೆಟ್ ನ ಹೈಲೈಟ್.
ಮಹಿಳೆಯ ಗರ್ಭಕಂಠದಲ್ಲಿ ಬೆಳವಣಿಗೆಯಾಗುವ ಗರ್ಭಕಂಠದ ಕ್ಯಾನ್ಸರ್, ಭಾರತದಲ್ಲಿ ಮಹಿಳೆಯರಲ್ಲಿ ಎರಡನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ. ಇದು ಹ್ಯೂಮನ್ ಪ್ಯಾಪಿಲೋಮವೈರಸ್ (HPV) ನಿಂದ ನಿರಂತರ ಸೋಂಕಿನಿಂದ ಉಂಟಾಗುತ್ತದೆ. ವಿಶ್ವದ ಎಲ್ಲಾ ಗರ್ಭಕಂಠದ ಕ್ಯಾನ್ಸರ್ ಸಾವುಗಳಲ್ಲಿ ಭಾರತವು ಸುಮಾರು ನಾಲ್ಕನೇ ಒಂದು ಭಾಗವನ್ನು ಹೊಂದಿದೆ.
ಇದನ್ನೂ ಓದಿ: ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ಆಗಿಲ್ಲ ಬದಲಾವಣೆ; ಹಿಂದಿನ ವರ್ಷದ ಟ್ಯಾಕ್ಸ್ ರೇಟ್ ಎಷ್ಟಿದೆ?
ದೇಶದಲ್ಲಿ ಅಸ್ತಿತ್ವದಲ್ಲಿರುವ ಆಸ್ಪತ್ರೆ ಮೂಲಸೌಕರ್ಯಗಳನ್ನು ಬಳಸಿಕೊಂಡು ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಗಮನಹರಿಸಲಿದೆ ಎಂದು ಹಣಕಾಸು ಸಚಿವರು ಘೋಷಿಸಿದರು ಅದೇ ವೇಳೆ ಸೂಕ್ತ ಶಿಫಾರಸುಗಳನ್ನು ಮಾಡಲು ಸಮಿತಿಯನ್ನು ರಚಿಸಲಾಗುವುದು ಎಂದು ಅವರು ಹೇಳಿದರು.
ನಿರ್ಮಲಾ ಸೀತಾರಾಮನ್ ಅವರು ನರೇಂದ್ರ ಮೋದಿಯವರ ಸರ್ಕಾರದ ಕೊನೆಯ ಬಜೆಟ್ ಅನ್ನು ಲೋಕಸಭಾ ಚುನಾವಣೆಗಳಿಗೆ ಮೊದಲು ಮಂಡಿಸಿದ್ದು, ಕಳೆದ ದಶಕದಲ್ಲಿ ಮೋದಿ ಸರ್ಕಾರವು ಕೈಗೊಂಡ ಯೋಜನೆಗಳನ್ನು ವಿವರಿಸಲು ಅವರು ವೇದಿಕೆಯನ್ನು ಬಳಸಿಕೊಂಡಿದ್ದಾರೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ