ಮುಂದಿನ ತಿಂಗಳ ಮೊದಲ ತಾರೀಖಿನಂದು (ಫೆ. 1) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಮಂಡನೆಯಾಗುತ್ತಿರುವುದರಿಂದ ಇದು ಮಧ್ಯಂತರ ಬಜೆಟ್ (Interim Budget) ಮಾತ್ರವೇ ಆಗಿರುತ್ತದೆ. ಆದರೂ ಕೂಡ ಪೂರ್ಣಪ್ರಮಾಣದ ಬಜೆಟ್ ಮಂಡನೆಗೆ ಬೇಕಾದ ಕೆಲಸಗಳು ಮಧ್ಯಂತರ ಬಜೆಟ್ಗೂ ಬೇಕಾಗುತ್ತವೆ.
ಒಂದು ಬಜೆಟ್ ಅನ್ನು ತಯಾರಿಸುವ ಪ್ರಕ್ರಿಯೆ ಆರು ತಿಂಗಳ ಹಿಂದೆಯೇ ಆರಂಭವಾಗುತ್ತದೆ. ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸುವುದು ಮಾತ್ರವಲ್ಲದೇ ವಿವಿಧ ಉದ್ಯಮ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಬಳಿಕ ಬಜೆಟ್ ಅನ್ನು ಅಂತಿಮಗೊಳಿಸಲಾಗುತ್ತದೆ.
ಬಜೆಟ್ ತಯಾರಿಸಲು ಒಬ್ಬಿಬ್ಬರ ಶ್ರಮ ಮಾತ್ರವೇ ಅಲ್ಲ, ವಿವಿಧ ಇಲಾಖೆಗಳ ಸಂಯೋಜಿತ ಕ್ರಿಯೆಯಾಗಿರುತ್ತದೆ. ಈ ಬಾರಿಯ ಮಧ್ಯಂತರ ಬಜೆಟ್ನ ರೂವಾರಿಗಳಲ್ಲಿ ಹಲವರಿದ್ದಾರೆ. ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿ ಅರವಿಂದ್ ಶ್ರೀವಾಸ್ತವ ಕೂಡ ಅವರಲ್ಲಿ ಒಬ್ಬರು.
ಇದನ್ನೂ ಓದಿ: Facts: ಬಜೆಟ್ ಮಂಡನೆ ಫೆಬ್ರುವರಿ ಕೊನೆಯ ದಿನದ ಬದಲು 1ರಂದು ಯಾಕೆ? ಸಂಜೆ 5ರ ಬದಲು ಬೆಳಗ್ಗೆ 11ಗಂಟೆಗೆ ಬದಲಾಗಿದ್ದು ಯಾಕೆ?
ಈ ಪಟ್ಟಿಯಲ್ಲಿರುವ ಕೊನೆಯ ಐವರು ವ್ಯಕ್ತಿಗಳು ಪ್ರಧಾನಿ ಕಾರ್ಯಾಲಯ ಅಥವಾ ಪಿಎಂಒದಲ್ಲಿರುವ ಪ್ರಮುಖ ವ್ಯಕ್ತಿಗಳಾಗಿದ್ದಾರೆ.
ಅರವಿಂದ್ ಶ್ರೀವಾಸ್ತವ ಅವರು ಕರ್ನಾಟಕ ಕೇಡರ್ನ 1994ರ ಬ್ಯಾಚ್ನ ಐಎಎಸ್ ಅಧಿಕಾರಿ. ಹಣಕಾಸು ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ ಆಗಿದ್ದ ಇವರನ್ನು ಪಿಎಂಒದಲ್ಲಿ ಹಣಕಾಸು ಮತ್ತು ಆರ್ಥಿಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಫೆಬ್ರುವರಿ 1ರ ಬಜೆಟ್: ರಫ್ತು ಸುಂಕ, ರೈಲ್ವೆ, ಕೃಷಿ ವಿಚಾರದಲ್ಲಿ ಸಂಭವನೀಯ ಘೋಷಣೆಗಳೇನು? ಇಲ್ಲಿದೆ ಡೀಟೇಲ್ಸ್
ಈ ಮೇಲಿನ ಟೀಮ್ನಲ್ಲಿ ಗಮನ ಸೆಳೆಯುವ ವ್ಯಕ್ತಿ ಪಿ ಕೆ ಮಿಶ್ರಾ. ಸರ್ಕಾರದ ಎಲ್ಲಾ ಪ್ರಮುಖ ನೀತಿಗಳ ಮೇಲೆ ಇವರ ನಿಗಾ ಇರುತ್ತದೆ. ಈ ಐಎಎಸ್ ಅಧಿಕಾರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿದೆ. ವಿವಿಧ ಸಚಿವಾಲಯಗಳ ಬಗ್ಗೆ ಹಾಗೂ ಅವುಗಳಿಂದ ಪಡೆದ ಮಾಹಿತಿಯನ್ನು ಇವರು ಪ್ರಧಾನಿಗಳಿಗೆ ಒದಗಿಸುತ್ತಿರುತ್ತಾರೆ. ಒಂದು ರೀತಿಯಲ್ಲಿ ಪ್ರಧಾನಿಗಳಿಗೆ ಆಡಳಿತದ ಕಣ್ಣು ಮತ್ತು ಕಿವಿಯಾಗಿ ಪಿಕೆ ಮಿಶ್ರಾ ಅವರಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ