ಕರ್ನಾಟಕ ಬಜೆಟ್​: ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ, ಆರ್ಥಿಕ ಶಿಸ್ತಿನಿಂದ ಸರ್​ಪ್ಲಸ್ ಬಜೆಟ್ ಮಂಡಿಸಿದ್ದೇವೆ; ಬೊಮ್ಮಾಯಿ

| Updated By: Digi Tech Desk

Updated on: Feb 17, 2023 | 2:48 PM

ಕಳೆದ ಬಜೆಟ್​​​ನಲ್ಲಿ ಉಲ್ಲೇಖಿಸಿರುವ ಯೋಜನೆಗಳು ಅನುಷ್ಠಾನ ಆಗಿಲ್ಲ ಎಂಬ ಪ್ರತಿಪಕ್ಷಗಳ ಆರೋಪ ಸುಳ್ಳು. ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಎಲ್ಲ ಅಂಕಿಅಂಶ ನೀಡಿದ್ದೇವೆ, ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ಬಜೆಟ್​: ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ, ಆರ್ಥಿಕ ಶಿಸ್ತಿನಿಂದ ಸರ್​ಪ್ಲಸ್ ಬಜೆಟ್ ಮಂಡಿಸಿದ್ದೇವೆ; ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಸಾಲದ ಪ್ರಮಾಣವನ್ನು ಕಡಿಮೆ ಮಾಡಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವ ಮೂಲಕ ಮಿಗತೆ (ಸರ್​ಪ್ಲಸ್) ಬಜೆಟ್ (Karnataka Budget 2023) ಮಂಡನೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಬಜೆಟ್ ಮಂಡನೆ ಮಾಡಿದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಯಾವ ಸರ್ಕಾರವೂ ಈ ಸಾಧನೆ ಮಾಡಿಲ್ಲ. ಹಿಂದೆ ಜಾರಿಗೊಳಿಸಿದ್ದ ಅನೇಕ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು, ಪ್ರಗತಿಯ ಹಾದಿಯಲ್ಲಿದೆ. ಕಳೆದ ಬಾರಿಯ ಬಜೆಟ್​​ನಲ್ಲಿ ಏನು ಹೇಳಿದ್ದೆವೋ ಅದೇ ರೀತಿ ವೆಚ್ಚವನ್ನು ಹೆಚ್ಚು ಮಾಡಿದ್ದೇವೆ. ಉದಾಹರಣೆಗೆ; ರೆವೆನ್ಯೂ ಎಕ್ಸ್​ಪೆಂಡಿಚರ್, ಕ್ಯಾಪಿಟಲ್ ಎಕ್ಸ್​ಪೆಂಡಿಚರ್ ಕೂಡ ಹೆಚ್ಚಾಗಿದೆ. ಯಾವ ಯೋಜನೆಯಲ್ಲಿ ಎಷ್ಟು ಖರ್ಚಾಗಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಹೇಳಿದರು.

ಕಳೆದ ಬಜೆಟ್​​​ನಲ್ಲಿ ಉಲ್ಲೇಖಿಸಿರುವ ಯೋಜನೆಗಳು ಅನುಷ್ಠಾನ ಆಗಿಲ್ಲ ಎಂಬ ಪ್ರತಿಪಕ್ಷಗಳ ಆರೋಪ ಸುಳ್ಳು. ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಎಲ್ಲ ಅಂಕಿಅಂಶ ನೀಡಿದ್ದೇವೆ, ನೀಡುತ್ತಿದ್ದೇವೆ. ಬಜೆಟ್ ಗಾತ್ರ 43,462 ಕೋಟಿ ರೂ.ನಷ್ಟು ಹೆಚ್ಚಾಗಿದೆ. ಇದು ಈ ವರ್ಷದ ನಮ್ಮ ಹಣಕಾಸಿನ ಬೆಳವಣಿಗೆ ದರವನ್ನು, ಬೆಳವಣಿಗೆಯನ್ನು ಸೂಚಿಸುತ್ತದೆ. ಆರ್ಥಿಕ ಕ್ಷಮತೆಯ ಮೇಲಿನ ವಿಶ್ವಾಸದೊಂದಿಗೆ ಈ ವರ್ಷ ಬಜೆಟ್​ ಗಾತ್ರ ಶೇ 16ರಷ್ಟು ಹೆಚ್ಚಳವಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಇದು ಶೇ 6ರಿಂದ 7ರಷ್ಟು ಹೆಚ್ಚಾಗುತ್ತದೆಯಷ್ಟೆ ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: Karnataka Budget PDF Download: ಕರ್ನಾಟಕ ಬಜೆಟ್​ ಪಿಡಿಎಫ್ ಕಾಪಿ ಇಲ್ಲಿ ಲಭ್ಯ

ದೇಶದಲ್ಲಿ ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಕೃಷಿ, ಉತ್ಪಾದನೆ, ಕೈಗಾರಿಕಾ ಕ್ಷೇತ್ರದಲ್ಲಿ ನಾವು ಮುಂದೆ ಇದ್ದೇವೆ. ಕೊರೊನಾ ನಂತರ ಆರ್ಥಿಕ ಸ್ಥಿತಿ ಸುಧಾರಣೆಗೆ ಕಷ್ಟ ಎಂದು ತಜ್ಞರು ಹೇಳಿದ್ದರು. ಆರ್ಥಿಕ ಕೊರತೆ ನೀಗಲು 5 ವರ್ಷ ಬೇಕಾಗಬಹುದು ಎಂದಿದ್ದರು. ಆದರೆ, ನಾವು ಕೇವಲ ಎರಡನೇ ವರ್ಷದಲ್ಲಿ ರೆವಿನ್ಯೂ ಸರ್​​​ಪ್ಲಸ್​ ಬಜೆಟ್​ ಮಂಡಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಕೃಷಿ, ಉತ್ಪಾದನೆ, ಕೈಗಾರಿಕಾ ಕ್ಷೇತ್ರದಲ್ಲಿ ನಾವು ಸಾಕಷ್ಟು ಸಾಧಿಸಿದ್ದು, ಮುಂಚೂಣಿಯಲ್ಲಿದ್ದೇವೆ. ಹಣಕಾಸಿನ ನಿರ್ವಹಣೆ ದಕ್ಷವಾಗಿದ್ದಾಗ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಕಳೆದ ಬಜೆಟ್​ನಲ್ಲಿ ಘೋಷಿಸಿದ್ದ ಶೇ 90ರಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಹಿಂದಿನ ಯಾವುದೇ ಸರ್ಕಾರಗಳು ಇಷ್ಟು ಯಶಸ್ವಿಯಾಗಿರಲಿಲ್ಲ. ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಆದಾಯವೂ ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕರ್ನಾಟಕ ಬಜೆಟ್ ಹೈಲೈಟ್ಸ್

ಕರ್ನಾಟಕ ಬಜೆಟ್ ಮತ್ತಷ್ಟು ಸುದ್ದಿಗಳು

Published On - 2:27 pm, Fri, 17 February 23