Magic Number: ಬಜೆಟ್​ನಲ್ಲಿ ಕಂಡುಬಂದ 1111111 ಎಂಬ ಮ್ಯಾಜಿಕ್ ನಂಬರ್; ಇದರದ್ದು ಧನಾತ್ಮಕ ಪರಿಣಾಮ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 02, 2024 | 12:21 PM

Union Budget 2024: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣವು ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಿದೆ. ಯಾವುದೇ ಹೊಸ ಯೋಜನೆ, ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಅಥವಾ ಯಾವುದೇ ಯೋಜನೆಗೆ ಯಾವುದೇ ಪ್ರಮುಖ ಬಜೆಟ್ ಹಂಚಿಕೆಯನ್ನು ಘೋಷಿಸಲಿಲ್ಲ. ಆದರೆ ಸರ್ಕಾರದ ಬಂಡವಾಳ ವೆಚ್ಚ ಹೆಚ್ಚಿಸುವ ಮತ್ತು ಮೂಲಸೌಕರ್ಯಗಳ ಮೇಲೆ ಖರ್ಚು ಮಾಡುವ ಗುರಿಯನ್ನು ಇಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ.

Magic Number: ಬಜೆಟ್​ನಲ್ಲಿ ಕಂಡುಬಂದ 1111111 ಎಂಬ ಮ್ಯಾಜಿಕ್ ನಂಬರ್; ಇದರದ್ದು ಧನಾತ್ಮಕ ಪರಿಣಾಮ
ನಿರ್ಮಲಾ ಸೀತಾರಾಮನ್
Follow us on

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ (ಫೆ. 1) 2024 ರ ಮಧ್ಯಂತರ ಬಜೆಟ್ (Interim budget) ಅನ್ನು ಮಂಡಿಸಿದರು. ಮಧ್ಯಂತರ ಬಜೆಟ್​ನಲ್ಲಿ ನಿರೀಕ್ಷೆಯಂತೆ ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡಿಲ್ಲ. ಆದರೆ, ಕೆಲವಿಷ್ಟು ಕುತೂಹಲಕಾರಿ ಅಂಶಗಳನ್ನು ಈ ಬಜೆಟ್ ಒಳಗೊಂಡಿತ್ತು. ನಿರ್ಮಲಾ ಸೀತಾರಾಮನ್ (Nirmala Sitharaman) ತಮ್ಮ ಬಜೆಟ್ ಭಾಷಣದಲ್ಲಿ ಹನ್ನೊಂದು ಕೋಟಿ ಹನ್ನೊಂದು ಲಕ್ಷ ಹನ್ನೊಂದು ಸಾವಿರದ ಹನ್ನೊಂದು ರುಪಾಯಿ (11,11,111 ಕೋಟಿ ರೂ) ಹಣದ ಮೊತ್ತವನ್ನು ಹೇಳಿದರು. ಈ 1111111 ಸಂಖ್ಯೆ ಎಲ್ಲರ ಗಮನ ಸೆಳೆಯಿತು. ಈ ಸಂಖ್ಯೆಯ ಹಿಂದಿನ ಗಣಿತ ಯಾವುದು? ದೇಶದ ಪ್ರಗತಿಗೆ ಅದು ಹೇಗೆ ಹೊಣೆ?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಮೂಲಸೌಕರ್ಯಗಳ (ಇನ್​ಫ್ರಾಸ್ಟ್ರಕ್ಚರ್) ಮೇಲೆ ಹೆಚ್ಚು ಕೇಂದ್ರೀಕರಿಸಿದೆ. ಆದರೆ ಮೋದಿ ಸರ್ಕಾರವು ಯಾವುದೇ ಹೊಸ ಯೋಜನೆ ಘೋಷಿಸಲಿಲ್ಲ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಅಥವಾ ಯಾವುದೇ ಯೋಜನೆಗೆ ಪ್ರಮುಖ ಬಜೆಟ್ ಹಂಚಿಕೆ ಪ್ರಕಟಿಸಲಿಲ್ಲ. ಆದರೆ ಅವರು ಸರ್ಕಾರದ ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಮತ್ತು ಮೂಲಸೌಕರ್ಯಗಳ ಮೇಲೆ ಖರ್ಚು ಮಾಡುವ ಗುರಿಯನ್ನು ತೋರ್ಪಡಿಸಿದರು.

ಇದನ್ನೂ ಓದಿ: Noteban Effect: ನೋಟ್ ಬ್ಯಾನ್ ಗುರಿತಪ್ಪಿಲ್ಲ ಎನ್ನುವುದಕ್ಕೆ ಈ ಬಜೆಟ್ ಸಾಕ್ಷಿ; ಹೇಗೆ ನೋಡಿ ಈ ಕುತೂಹಲಕಾರಿ ಸಂಗತಿ

11,11,111 ರ ಲೆಕ್ಕಾಚಾರ ಏನು?

ಈ ಬಾರಿಯ ಬಜೆಟ್‌ನಲ್ಲಿಯೂ ಸರ್ಕಾರ ಬಂಡವಾಳ ವೆಚ್ಚವನ್ನು (ಕ್ಯಾಪೆಕ್ಸ್- ಕ್ಯಾಪಿಟಲ್ ಎಕ್ಸ್​ಪೆಂಡಿಚರ್) ಹೆಚ್ಚಿಸಿದೆ. 2024-25 ರ ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚವು 11.1 ಶೇಕಡಾ ಹೆಚ್ಚಾಗಿದೆ. ಹೀಗಾಗಿ ಈಗ ಈ ಮೊತ್ತ 11,11,111 ಕೋಟಿ ರೂ ತಲುಪಿದೆ. ಇದು ದೇಶದ ಜಿಡಿಪಿಯ ಶೇ. 3.4ರಷ್ಟಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಸರಕಾರ 10,000 ಕೋಟಿ ರೂ ಬಂಡವಾಳ ವೆಚ್ಚದ ಗುರಿ ಹೊಂದಿತ್ತು.

ಕ್ಯಾಪೆಕ್ಸ್ ಮೂರು ಪಟ್ಟು ಹೆಚ್ಚು

ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರದ ಬಂಡವಾಳ ವೆಚ್ಚ (ಕ್ಯಾಪೆಕ್ಸ್) ಮೂರು ಪಟ್ಟು ಹೆಚ್ಚಾಗಿದೆ. ಇದು ದೇಶವು ತ್ವರಿತ ಆರ್ಥಿಕ ಪ್ರಗತಿಯನ್ನು ಸಾಧಿಸಲು ಸಹಾಯ ಮಾಡಿದೆ. ಅದೇ ಸಮಯದಲ್ಲಿ ದೇಶದಲ್ಲಿ ಉದ್ಯೋಗವೂ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಯಿತು. ಸರ್ಕಾರದ ಬಂಡವಾಳ ವೆಚ್ಚ ಹೆಚ್ಚಿದಷ್ಟೂ ಆರ್ಥಿಕತೆಯಲ್ಲಿ ಧನಾತ್ಮಕ ಪರಿಣಾಮ ಉಂಟುಮಾಡುತ್ತದೆ. ಮೂರು ಪಟ್ಟು ಪ್ರಯೋಜನ ಪಡೆಯುತ್ತದೆ ಎಂಬುದು ಆರ್ಥಿಕ ತಜ್ಞರ ಅಭಿಮತ.

ಇದನ್ನೂ ಓದಿ: ಮಧ್ಯಂತರ ಬಜೆಟ್ ವಿಕಸಿತ್ ಭಾರತ್​​ನತ್ತ ಮೆಟ್ಟಿಲು: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

2024-25ರ ಆರ್ಥಿಕ ವರ್ಷದ ಬಜೆಟ್‌ನ ಒಟ್ಟು ಗಾತ್ರವು 6.1 ಪ್ರತಿಶತದಷ್ಟು ಹೆಚ್ಚಿ 47.66 ಲಕ್ಷ ಕೋಟಿ ರೂ.ಗೆ ಏರಿದೆ. ಸರ್ಕಾರದ ವೆಚ್ಚದಲ್ಲಿ ಹೆಚ್ಚಳ, ಕ್ಯಾಪೆಕ್ಸ್ ಹೆಚ್ಚಳ ಮತ್ತು ಸಾಮಾಜಿಕ ಕ್ಷೇತ್ರದ ಯೋಜನೆಗಳಿಗೆ ಹೆಚ್ಚಿನ ಹಂಚಿಕೆಯಿಂದಾಗಿ ಬಜೆಟ್ ಗಾತ್ರ ಹೆಚ್ಚಾಗಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ