Noteban Effect: ನೋಟ್ ಬ್ಯಾನ್ ಗುರಿತಪ್ಪಿಲ್ಲ ಎನ್ನುವುದಕ್ಕೆ ಈ ಬಜೆಟ್ ಸಾಕ್ಷಿ; ಹೇಗೆ ನೋಡಿ ಈ ಕುತೂಹಲಕಾರಿ ಸಂಗತಿ

Union Budget 2024: ಈ ಬಾರಿಯ ಮಧ್ಯಂತರ ಬಜೆಟ್ ಬಹಳ ಚಿಕ್ಕದಾಗಿದ್ದರೂ ಹಲವು ಆಸಕ್ತಿಕರ ಅಂಶಗಳನ್ನು ಕಾಣಬಹುದಾಗಿದೆ. ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಆದಾಯ ತೆರಿಗೆಯೂ ಸೇರಿದೆ. ನೋಟ್ ಬ್ಯಾನ್ ಅಥವಾ ಅಪನಗದೀಕರಣವು ಆದಾಯ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಇರುವ ಕಾರಣಗಳಲ್ಲಿ ಒಂದಾಗಿದೆ. ನೋಟು ಅಪನಗದೀಕರಣ ಕ್ರಮ ಗುರಿ ತಪ್ಪಿಲ್ಲ ಎನ್ನುವುದಕ್ಕೆ ಇದು ಸಾಕ್ಷ್ಯವಾಗಿದೆ.

Noteban Effect: ನೋಟ್ ಬ್ಯಾನ್ ಗುರಿತಪ್ಪಿಲ್ಲ ಎನ್ನುವುದಕ್ಕೆ ಈ ಬಜೆಟ್ ಸಾಕ್ಷಿ; ಹೇಗೆ ನೋಡಿ ಈ ಕುತೂಹಲಕಾರಿ ಸಂಗತಿ
ಬಜೆಟ್
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 02, 2024 | 11:44 AM

ಈ ಬಾರಿ ಕೇಂದ್ರದಿಂದ ಮಂಡನೆಯಾದ ಮಧ್ಯಂತರ ಬಜೆಟ್​ನಲ್ಲಿ (Interim budget) ಬಹಳ ಅಚ್ಚರಿಯಾದ ಅಂಶವೊಂದು ಕಂಡುಬಂದಿದೆ. ಅದೇ ರೀತಿ ಗಂಭೀರವಾದ ವಿಚಾರವೊಂದು ತಪ್ಪಿಹೋಗಿದೆ. ಆ ಎರಡನ್ನೂ ನಿಮ್ಮ ಮುಂದೆ ಇಡಬೇಕು ಎಂಬ ಕಾರಣಕ್ಕೆ ಈ ಲೇಖನ ಓದುತ್ತಿದ್ದೀರಿ. ಮೊದಲಿಗೆ ಅಚ್ಚರಿಯ ಅಂಶ ಏನು ಎಂಬುದನ್ನು ತಿಳಿದುಕೊಂಡುಬಿಡಿ. ಸರ್ಕಾರಕ್ಕೆ ಬರುವಂಥ ಆದಾಯದಲ್ಲಿ (Government Revenues) ಯಾವುದರ ಪಾಲು ಎಷ್ಟು ಅನ್ನೋದನ್ನು ತಿಳಿಸಲಾಗಿದೆ. ಆ ಲೆಕ್ಕಾಚಾರದ ಪ್ರಕಾರ, ಒಟ್ಟು ಆದಾಯದಲ್ಲಿ ಶೇಕಡಾ ಹದಿನೆಂಟರಷ್ಟು ಜಿಎಸ್​ಟಿ ಮತ್ತು ಇತರ ತೆರಿಗೆಯಿಂದಲೂ ಶೇಕಡಾ ಹದಿನೇಳರಷ್ಟು ಕಾರ್ಪೊರೇಟ್ ತೆರಿಗೆಯಿಂದಲೂ ಹಾಗೂ ಶೇಕಡಾ ಹತ್ತೊಂಬತ್ತರಷ್ಟು ಆದಾಯ ತೆರಿಗೆಯಿಂದಲೂ ಬರಬಹುದು ಎಂದು ಅಂದಾಜಿಸಲಾಗಿದೆ.

ಆದಾಯ ತೆರಿಗೆ ಮೂಲಕ ಬರುವಂಥ ಸರ್ಕಾರದ ಆದಾಯವು ಜಿಎಸ್​ಟಿ, ಕಾರ್ಪೊರೇಟ್ ತೆರಿಗೆಯನ್ನೂ ಮೀರಿಸುತ್ತದೆ ಎಂಬುದು ತೆರಿಗೆ ಸಂಗ್ರಹದಲ್ಲಿ ಆಗಿರುವಂಥ ಅತಿ ದೊಡ್ಡ ಸುಧಾರಣೆ ಎನ್ನುತ್ತಾರೆ ಸಹಾಯ ಪ್ರಾಧ್ಯಾಪಕರೂ ಆಗಿರುವಂಥ ಗರಣಿ ಕೃಷ್ಣಮೂರ್ತಿ. ಈ ಬಗ್ಗೆ ಮಾತನಾಡಿದ ಅವರು, “ಅಪನಗದೀಕರಣ”ದ (Demonetisation) ಫಲವನ್ನು ಕಾಣುವುದಕ್ಕೆ ಆರಂಭಿಸಿದ್ದೇವೆ ಎಂಬುದರ ಸೂಚನೆಯಲ್ಲಿ ಇದೂ ಒಂದು ಎಂದು ಅಭಿಪ್ರಾಯ ಪಡುತ್ತಾರೆ. ತೆರಿಗೆ ವ್ಯಾಪ್ತಿಯಲ್ಲಿ ಬರುವಂಥ ಆದಾಯದ ಪ್ರಮಾಣದಲ್ಲಿ ದೊಡ್ಡ ಪ್ರಮಾಣದ ಹೆಚ್ಚಳವಾಗಿದೆ. ಆದಾಯ ತೆರಿಗೆ ಸಂಗ್ರಹವು ತುಂಬ ಪರಿಣಾಮಕಾರಿಯಾಗಿ ಆಗುತ್ತಿದೆ ಎಂಬುದರ ಸುಳಿವು ಇದು. ಅದೇ ರೀತಿ ಸರ್ಕಾರದ ನಿರೀಕ್ಷೆಗೂ ಮೀರಿ ದೇಶದಲ್ಲಿ ಡಿಜಿಟಲ್ ಆರ್ಥಿಕತೆ ಗಟ್ಟಿಯಾಗುತ್ತಿದೆ. ಅದರಿಂದ ತೆರಿಗೆ ಸಂಗ್ರಹವು ಇಷ್ಟು ಚೆನ್ನಾಗಿ ಆಗುವುದರಲ್ಲಿ ಆ ಕೊಡುಗೆ ಸಹ ಇದೆ ಎಂದರು.

ಇದನ್ನೂ ಓದಿ: Budget Highlights: ಬಜೆಟ್​ನಲ್ಲಿ ಅಭಿವೃದ್ಧಿಗೆ ಪೂರಕವಾಗಿರುವ ಅಂಶಗಳೇನು, ನೋಡಿ ಡೀಟೇಲ್ಸ್

‘ಅಪನಗದೀಕರಣದ ಘೋಷಣೆ ಮಾಡಿದಾಗ ಕಪ್ಪು ಹಣಕ್ಕೆ ತಡೆ ಒಡ್ಡುವುದು, ಭಯೋತ್ಪಾದನೆಗೆ ಹಣಕಾಸಿನ ನೆರವು ಸಿಗದಂತೆ ಮಾಡುವುದು, ಕೊನೆಗೆ ಡಿಜಿಟಲ್ ಆರ್ಥಿಕತೆಯನ್ನು ಬಲಗೊಳಿಸುವುದು ಸರ್ಕಾರದ ಗುರಿ ಆಗಿತ್ತು. ಆ ನಿಟ್ಟಿನಲ್ಲಿ ಡಿಜಿಟಲ್ ಆರ್ಥಿಕತೆ ಆಗುವ ಗುರಿಯಲ್ಲಿ ಭಾರತ ತುಂಬ ಮುಂದೆ ಸಾಗಿದೆ. ಇನ್ನು ಶತಮಾನದಲ್ಲಿ ಒಮ್ಮೆ ಎನ್ನುವಂತೆ ಆದಾಯ ತೆರಿಗೆ ಸಂಗ್ರಹದಲ್ಲಿ ಇಂಥದ್ದೊಂದು ಸಾಧನೆಯನ್ನು ನಿರೀಕ್ಷೆ ಮಾಡಬಹುದಾಗಿದೆ. ನೀವು ಕಳೆದ ಕೆಲವು ವರ್ಷಗಳಿಂದ ಆದಾಯ ತೆರಿಗೆಯಿಂದ ಅಂದಾಜು ಮಾಡಿದಂತಹ ಪ್ರಮಾಣವನ್ನು ಗಮನಿಸಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯ ತೆರಿಗೆ ಸಂಗ್ರಹದ ಬಜೆಟ್ ಅಂದಾಜಿನಲ್ಲಿ 3-4 ಪರ್ಸೆಂಟ್ ಹೆಚ್ಚಳವಾಗಿದೆ. ಇದು ಖಂಡಿತಾ ಒಳ್ಳೆ ಸೂಚನೆ’ ಎಂದು ಗರಣಿ ಕೃಷ್ಣಮೂರ್ತಿ ಹೇಳಿದರು.

ಆದಾಯ ತೆರಿಗೆ ಹೆಚ್ಚಳದಲ್ಲಿ ಎಂಎಸ್ಎಂಇ ಕೊಡುಗೆ

ಇನ್ನು ಎಂಎಸ್ಎಂಇಗಳು (ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು) ಬಹಳ ಹೆಚ್ಚಾಗಿವೆ. ಇವುಗಳ ಆದಾಯವನ್ನು ಕಾರ್ಪೊರೇಟ್ ತೆರಿಗೆಯಲ್ಲಿ ಪರಿಗಣಿಸದೆ ಆದಾಯ ತೆರಿಗೆಯ ಅಡಿಯಲ್ಲಿ ಪರಿಗಣಿಸಲಾಗುತ್ತದೆ. ಅಂದರೆ “ಬಿಜಿನೆಸ್ ಇನ್ಕಮ್” ಎಂದು ಲೆಕ್ಕಾಚಾರ ಹಾಕಲಾಗುತ್ತದೆ. ಜತೆಗೆ ಸಂಸ್ಥೆಯ ಒಟ್ಟು ಹಣಕಾಸಿನ ವ್ಯವಹಾರ ಸಹ ಇದರಲ್ಲಿ ನಿಗದಿ ಆಗಿದೆ. ಎಂಎಸ್ಎಂಇಗಳ ಆದಾಯಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಉತ್ತೇಜನಕಾರಿಯಾದ ಆದಾಯ ತೆರಿಗೆ ನಿಯಮಗಳನ್ನು ಪರಿಚಯಿಸಲಾಗಿದೆ. ಇದರಿಂದಾಗಿ ಆದಾಯ ತೆರಿಗೆ ಸಂಗ್ರಹ ವ್ಯಾಪ್ತಿಗೆ ಇದು ಸಹ ಬಂದು, ಇದೀಗ ಸರ್ಕಾರಕ್ಕೆ ಆದಾಯ ತರುವ ಮೂಲದಲ್ಲಿ ಆದಾಯ ತೆರಿಗೆ ಮೊದಲ ಸಾಲಿನಲ್ಲಿ ನಿಂತಿದೆ.

ಇದನ್ನೂ ಓದಿ: ಮಧ್ಯಂತರ ಬಜೆಟ್ ವಿಕಸಿತ್ ಭಾರತ್​​ನತ್ತ ಮೆಟ್ಟಿಲು: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ವ್ಯವಹಾರಗಳನ್ನು ಕಣ್ಣು ತಪ್ಪಿಸುವುದು ಕಷ್ಟ

ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹದ ಪ್ರಮಾಣದಲ್ಲಿ ಗಣನೀಯ ಏರಿಕೆಯನ್ನು ಕಾಣಬಹುದು. ಭಾರತದಂಥ ಮುಂದುವರಿಯುತ್ತಿರುವ ಆರ್ಥಿಕತೆ ಹಾಗೂ ಕೊರೊನಾದ ನಂತರದಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ಆಗಿರುವ ವೃದ್ಧಿಯ ಸಮಯದಲ್ಲಿ ತೆರಿಗೆ ಸಂಗ್ರಹವು ಪರಿಣಾಮಕಾರಿಯಾಗಿ ಆದಲ್ಲಿ ಅದು ಹೇಗೆ ಸರ್ಕಾರದ ಪಾಲಿಗೆ ಉತ್ತಮ ಆದಾಯ ಆಗಬಲ್ಲದು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ಚುನಾವಣೆಗೆ ಮುನ್ನ ಜನಪ್ರಿಯ ಘೋಷಣೆಗಳನ್ನು ಮಾಡುವುದು ಸರ್ಕಾರಗಳಿಗೆ ಕಷ್ಟವೇನಲ್ಲ. ಹಾಗೂ ಚುನಾವಣೆಗೆ ಮುನ್ನ ಜನಪ್ರಿಯ ಘೋಷಣೆಗಳನ್ನು ಮಾಡುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಇಂಥದ್ದನ್ನು ಕೇಂದ್ರ ಸರ್ಕಾರ ಮಾಡಿಲ್ಲ.

ಆದಾಯ ತೆರಿಗೆ ಪಾವತಿದಾರರಿಗೆ ಸಂತೋಷಗೊಳಿಸುವುದಕ್ಕೆ ಪ್ರಯತ್ನಿಸಬಹುದಿತ್ತು. ಆದರೆ ಕಳೆದ ವರ್ಷದ ನಿಯಮವನ್ನೇ ಮುಂದುವರಿಸಲಾಗಿದೆ. ಅದೇ ರೀತಿ ಉಳಿದ ವಲಯಗಳಲ್ಲೂ ಮಾಡಬಹುದಿತ್ತು. ಆದರೆ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ತಾವು ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯುವುದು ಖಾತ್ರಿ ಎಂಬಂಥ ವಿಶ್ವಾಸ ಕಾಣುತ್ತಿದೆ. ಒಂದು ವೇಳೆ ಈಗೇನಾದರೂ ಜನಪ್ರಿಯ ಘೋಷಣೆಗಳನ್ನು ಮಾಡಿದಲ್ಲಿ ಅದರ ಆರ್ಥಿಕ ಹೊರೆಯನ್ನು ಮುಂದೆ ಅಧಿಕಾರಕ್ಕೆ ಬಂದ ನಂತರ ತಾವೇ ಹೊರಬೇಕು ಎಂದು ಯೋಚಿಸಿರಲಿಕ್ಕೂ ಸಾಕು.

ಇದನ್ನೂ ಓದಿ: Budget Positives: ಕೇಂದ್ರ ಬಜೆಟ್​ನಲ್ಲಿ ಯಾರಿಗೆ ಮಂದಹಾಸ, ಯಾರಿಗೆ ನಿರಾಸೆ, ಇಲ್ಲಿದೆ ಡೀಟೇಲ್ಸ್

ಆರ್ಥಿಕ ಸಮೀಕ್ಷೆ ಮಂಡಿಸಬೇಕಿತ್ತು

ಎಕನಾಮಿಕ್ ಸರ್ವೇ ಅಥವಾ ಆರ್ಥಿಕ ಸಮೀಕ್ಷೆ ಮಂಡಿಸಬೇಕಾದದ್ದು ಸರ್ಕಾರಗಳಿಗೆ ಕಡ್ಡಾಯವೇನಲ್ಲ. ಆದರೂ ಒಂದು ದೇಶದ ಆರ್ಥಿಕ ಆರೋಗ್ಯದ ನಿಲುವುಗನ್ನಡಿ “ಆರ್ಥಿಕ ಸಮೀಕ್ಷೆ”. ಹಿಂದಿನ ವರ್ಷ ಸರ್ಕಾರ ಅಂದುಕೊಂಡಿದ್ದೇನು, ಆಗಿದ್ದೇನು ಎಂಬುದರ ಅಂಕಿ- ಅಂಶಗಳು ಅದರಲ್ಲಿ ಇರುತ್ತವೆ. ಇದು ಒಂದು ಸರ್ಕಾರದ ಆರ್ಥಿಕ ಯಶಸ್ಸನ್ನು ಸಹ ಅಳೆಯುವುದಕ್ಕೆ ಅಳತೆಗೋಲಿನಂಥದ್ದು. ಆದ್ದರಿಂದ ಆರ್ಥಿಕ ಸಮೀಕ್ಷೆ ಮಂಡಿಸದೇ ಇದ್ದದ್ದು ಹಾಗೂ ಅದನ್ನು ಪ್ರಶ್ನೆ ಮಾಡದೇ ಹೋದದ್ದು ಖಂಡಿತಾ ಸರಿಯಲ್ಲ. ಮಧ್ಯಂತರ ಬಜೆಟ್ ಎಂಬ ಕಾರಣಕ್ಕೆ ಎಕನಾಮಿಕ್ ಸರ್ವೇ ಬದಲಿಗೆ ಮುನ್ನೋಟ ಬಿಡುಗಡೆ ಮಾಡಲಾಗಿದೆ. ಹಾಗೂ ಅದರಲ್ಲಿ ಈ ಹಿಂದಿನ ಸ್ಥಿತಿಯ ಅವಲೋಕನ ಇದೆ.

ಆದರೆ, ಆರ್ಥಿಕ ಸಮೀಕ್ಷೆ ಬಿಡುಗಡೆ ಮಾಡಬೇಕು ಎಂದು ವಿಪಕ್ಷಗಳು ಒತ್ತಾಯಿಸಬಹುದಿತ್ತು. ಆರಂಭದಲ್ಲೇ ಹೇಳಿದಂತೆ ಒಂದು ದೇಶದ ಆರ್ಥಿಕ ಆರೋಗ್ಯವನ್ನು ತಿಳಿಸುವಂಥ ವರದಿ ಇದಾಗಿರುವುದರಿಂದ ಬಹಳ ಮುಖ್ಯದ್ದಾಗಿತ್ತು.

ಮಾಹಿತಿ: ಶ್ರೀನಿವಾಸ ಮಠ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ