Budget Highlights: ಬಜೆಟ್​ನಲ್ಲಿ ಅಭಿವೃದ್ಧಿಗೆ ಪೂರಕವಾಗಿರುವ ಅಂಶಗಳೇನು, ನೋಡಿ ಡೀಟೇಲ್ಸ್

Union Budget 2024: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮಧ್ಯಂತರ ಬಜೆಟ್​ನಲ್ಲಿ ಸರ್ಕಾರ ಮಾಡಲು ಉದ್ದೇಶಿಸಿರುವ ಕೆಲವಿಷ್ಟು ಯೋಜನೆಗಳ ವಿವರ ನೀಡಿದ್ದಾರೆ. ವಾಯುಶಕ್ತಿ ಬಳಸಿ ವಿದ್ಯುತ್ ಉತ್ಪಾದನೆ, ಇ ಬಸ್ಸುಗಳ ಹೆಚ್ಚಳ, ರೈಲ್ವೆ ಕಾರಿಡಾರ್, ಏರ್​ಪೋರ್ಟ್​ಗಳು, ವಸತಿ ಇತ್ಯಾದಿಗೆ ಸರ್ಕಾರ ಯೋಜನೆಗಳನ್ನು ಹಾಕಿದೆ.

Budget Highlights: ಬಜೆಟ್​ನಲ್ಲಿ ಅಭಿವೃದ್ಧಿಗೆ ಪೂರಕವಾಗಿರುವ ಅಂಶಗಳೇನು, ನೋಡಿ ಡೀಟೇಲ್ಸ್
ನಿರ್ಮಲಾ ಸೀತಾರಾಮನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 01, 2024 | 6:22 PM

ನವದೆಹಲಿ, ಫೆಬ್ರುವರಿ 1: ನಿರ್ಮಲಾ ಸೀತಾರಾಮನ್ (Nirmala Sitharaman) ತಮ್ಮ ಚುಟುಕು ಬಜೆಟ್​ನಲ್ಲಿ (Interim Budget) ಮುಂದಿನ ದಿನಗಳ ಬಗ್ಗೆ ಸರ್ಕಾರಕ್ಕಿರುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ದೀರ್ಘಾವಧಿಯಲ್ಲಿ ಸ್ವಾವಲಂಬನೆ (Atmanirbhar Bharat) ಸಾಧಿಸಲು ಸರ್ಕಾರದ ಗುರಿಗಳೇನು, ಯಾವ್ಯಾವ ಕಾರ್ಯಕ್ರಮಗಳಿಗೆ ಒತ್ತುಕೊಡಲಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದು ಮಂಡಿಸಬಹುದಾದ ಬಜೆಟ್​ನಲ್ಲಿ ಯಾವೆಲ್ಲಾ ಅಂಶಗಳು ಇರಬಹುದು ಎಂಬುದಕ್ಕೆ ಈ ಮಧ್ಯಂತರ ಬಜೆಟ್ ಟ್ರೇಲರ್ ರೀತಿ ಇದೆ. ಬಜೆಟ್​ನಲ್ಲಿ ಸರ್ಕಾರ ಹಾಕಿರುವ ಮತ್ತು ಉದ್ದೇಶಿಸಿರುವ ಯೋಜನೆಗಳ ವಿವರ ಇಲ್ಲಿದೆ.

ಸುಸ್ಥಿರ ಅಭಿವೃದ್ಧಿ

  • 2070ರೊಳಗೆ ಕಾರ್ಬನ್ ಹೊರಸೂಸುವಿಕೆಯ ಪ್ರಮಾಣ ಶೂನ್ಯಕ್ಕೆ ತರುವ ಬದ್ಧತೆ
  • ವಿಂಡ್ ಎನರ್ಜಿ ಉತ್ಪಾದನೆಗೆ ವಯಬಿಲಿಟಿ ಗ್ಯಾಪ್ ಫಂಡಿಂಗ್
  • ಕಲ್ಲಿದ್ದಲು ಅನಿಲೀಕರಣ ಮತ್ತು ಜಲೀಕರಣ ಘಟಕ ಆರಂಭ
  • ಸಿಎನ್​ಜಿ, ಪಿಎನ್​ಜಿ ಮತ್ತು ಒತ್ತಡೀಕೃತ ಬಯೋಗ್ಯಾಸ್​ನ ಮಿಶ್ರಣವನ್ನು ಹಂತ ಹಂತವಾಗಿ ಕಡ್ಡಾಯಗೊಳಿಸಲಾಗುವುದು.
  • ಸೂರಿನ ಮೇಲೆ ಸೌರಫಲಕ ಹಾಕುವ ಯೋಜನೆ ಮೂಲಕ ಒಂದು ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್​ಗಳವರೆಗೆ ಉಚಿತ ವಿದ್ಯುತ್ ಸಿಗುವಂತೆ ಮಾಡುವ ಗುರಿ ಇದೆ.
  • ಸಾರ್ವಜನಿಕ ಸಾರಿಗೆಗೆ ಇ ಬಸ್ಸುಗಳ ಬಳಕೆ
  • ಬಯೋ ಮ್ಯಾನುಫ್ಯಾಕ್ಚರಿಂಗ್ ಮತ್ತು ಬಯೋ ಫೌಂಡ್ರಿಯ ಹೊಸ ಯೋಜನೆ

ಇದನ್ನೂ ಓದಿ: ಕೇಂದ್ರ ಬಜೆಟ್​ನಲ್ಲಿ ಯಾರಿಗೆ ಮಂದಹಾಸ, ಯಾರಿಗೆ ನಿರಾಸೆ, ಇಲ್ಲಿದೆ ಡೀಟೇಲ್ಸ್

ಇನ್​ಫ್ರಾಸ್ಟ್ರಕ್ಚರ್ ಮತ್ತು ಹೂಡಿಕೆ

  • ಪಿಎಂ ಗತಿ ಶಕ್ತಿ ಯೋಜನೆ ಅಡಿಯಲ್ಲಿ 3 ಪ್ರಮುಖ ರೈಲ್ವೆ ಕಾರಿಡಾರ್ ಯೋಜನೆಗಳ ಜಾರಿ
  • ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳ ಮೂಲಕ ವಿದೇಶೀ ಹೂಡಿಕೆ ಬರಮಾಡಿಕೊಳ್ಳಲಾಗುವುದು.
  • ಉಡಾನ್ ಸ್ಕೀಮ್ ಅಡಿಯಲ್ಲಿ ಈಗಿರುವ ಏರ್​ಪೋರ್ಟ್ ಅಭಿವೃದ್ದಿಪಡಿಸಲಾಗುವುದ. ಹೊಸ ಏರ್​ಪೋರ್ಟ್ ಸ್ಥಾಪಿಸಲಾಗುವುದು.
  • ಮೆಟ್ರೋ ರೈಲು ಮತ್ತು ನಮೋ ಭಾರತ್ ಮೂಲಕ ನಗರ ಪ್ರದೇಶದಲ್ಲಿ ಪರಿವರ್ತನೆ ತರಲಾಗುವುದು.

ಆರೋಗ್ಯ ಕ್ಷೇತ್ರಕ್ಕೆ

  • 9ರಿಂದ 14 ವರ್ಷ ವಯೋಮಾನದ ಬಾಲಕಿಯವರಿಗೆ ಸರ್ವಿಕಲ್ ಕ್ಯಾನ್ಸರ್ ಲಸಿಕೆ ಹಾಕಿಸಿಕೊಳ್ಳಲು ಅಭಿಯಾನ
  • ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಮೂಲಕ ಎಳೆಕೂಸುಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವ ಯೋಜನೆ
  • ಲಸಿಕೆ ಒದಗಿಸುವ ಕಾರ್ಯಕ್ಕೆ ಯು-ವಿನ್ ಪ್ಲಾಟ್​ಫಾರ್ಮ್ ಅಭಿವೃದ್ಧಿ
  • ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರನ್ನು ಆಯುಷ್ಮಾನ್ ಭಾರತ್ ಸ್ಕೀಮ್ ವ್ಯಾಪ್ತಿಗೆ ತರಲಾಗುವುದು.

ವಸತಿ ಯೋಜನೆಗಳು

  • ಪಿಎಂ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳನ್ನು ಕಟ್ಟುವ ಗುರಿಗೆ ಸಮೀಪ ಇದ್ದೇವೆ. ಮುಂದಿನ 5 ವರ್ಷದಲ್ಲಿ ಇನ್ನೂ 2 ಕೋಟಿ ಹೆಚ್ಚು ಮನೆಗಳ ಗುರಿ ಇಡಲಾಗಿದೆ.
  • ಮಧ್ಯಮ ವರ್ಗದವರು ತಮ್ಮದೇ ಸ್ವಂತ ಮನೆ ಹೊಂದುವ ಕನಸು ನನಸು ಮಾಡಿಕೊಳ್ಳಲು ಯೋಜನೆ.

ಇದನ್ನೂ ಓದಿ: ಬಜೆಟ್ 2024: ಸರ್ಕಾರದ ಆದಾಯ ಮತ್ತು ಖರ್ಚು ಹೇಗೆ? ಯಾವುದಕ್ಕೆ ಎಷ್ಟು ಹಣ ವಿನಿಯೋಗ? ಇಲ್ಲಿದೆ ಡೀಟೇಲ್ಸ್

ಪ್ರವಾಸೋದ್ಯಮ

  • ಲಕ್ಷದ್ವೀಪ್ ಸೇರಿದಂತೆ ವಿವಿಧ ದ್ವೀಪ ಪ್ರದೇಶಗಳಲ್ಲಿ ಪೋರ್ಟ್ ಕನೆಕ್ಟಿವಿಟಿ, ಟೂರಿಸಂ ಇನ್​ಫ್ರಾಸ್ಟ್ರಕ್ಚರ್ ಯೋಜನೆ ಕೈಗೊಳ್ಳಲಾಗುವುದು.
  • ವಿವಿಧ ರಾಜ್ಯಗಳಿಗೆ ಪ್ರವಾಸೋದ್ಯ ಅಭಿವೃದ್ಧಿಪಡಿಸಲು ಬಡ್ಡಿರಹಿತ ಸಾಲಗಳನ್ನು ಒದಗಿಸಲಾಗುವುದು.

ಕೃಷಿ ಮತ್ತು ಆಹಾರ ಸಂಸ್ಕರಣೆ

  • ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿಯ ವೇಗವನ್ನು ಚುರುಕುಗೊಳಿಸಲಾಗುವುದು.
  • ಐದು ಸಮಗ್ರ ಆಕ್ವಾಪಾರ್ಕ್​ಗಳನ್ನು ಸ್ಥಾಪಿಸಲಾಗುವುದು.
  • ಎಣ್ಣೆಬೀಜಗಳಲ್ಲಿ ಸ್ವಾವಲಂಬನೆ ಸಾಧಿಸಲು ಯೋಜನೆ
  • ಹಾಲು ಉತ್ಪನ್ನ ಅಭಿವೃದ್ಧಿಗೆ ಸಮಗ್ರ ಯೋಜನೆ

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ