ಸ್ಟ್ಯಾಂಡರ್ಡ್ ಡಿಡಕ್ಷನ್ ಒಂದು ಲಕ್ಷ ರೂಗೆ ಏರಿಕೆ ಸಾಧ್ಯತೆ; ಬಜೆಟ್​ನಿಂದ ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ..!

|

Updated on: Jul 04, 2024 | 12:07 PM

Union Budget 2024 updates: ಈ ಬಾರಿಯ ಬಜೆಟ್​ನಲ್ಲಿ ಮಧ್ಯಮವರ್ಗದವರಿಗೆ ಮತ್ತು ತೆರಿಗೆ ಪಾವತಿದಾರರಿಗೆ ಸಾಕಷ್ಟು ರಿಲೀಫ್ ಕೊಡುವ ಸಾಧ್ಯತೆ ಇದೆ. ವರದಿ ಪ್ರಕಾರ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಈಗಿರುವ 50,000 ರೂನಿಂದ 1 ಲಕ್ಷ ರೂಗೆ ಹೆಚ್ಚಿಸಬಹುದು ಎನ್ನಲಾಗುತ್ತಿದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಎಂಬುದು ಸಂಬಳದಾರರ ಟ್ಯಾಕ್ಸಬಲ್ ಇನ್ಕಮ್ ಅನ್ನು ಕಡಿಮೆ ಮಾಡುವ ಒಂದು ಸೌಲಭ್ಯ.

ಸ್ಟ್ಯಾಂಡರ್ಡ್ ಡಿಡಕ್ಷನ್ ಒಂದು ಲಕ್ಷ ರೂಗೆ ಏರಿಕೆ ಸಾಧ್ಯತೆ; ಬಜೆಟ್​ನಿಂದ ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ..!
ಆದಾಯ ತೆರಿಗೆ
Follow us on

ನವದೆಹಲಿ, ಜುಲೈ 4: ಬಜೆಟ್ ಬಂತೆಂದರೆ ಒಂದಷ್ಟು ಅಪೇಕ್ಷೆ, ನಿರೀಕ್ಷೆ, ಅಂದಾಜು ಇವೆಲ್ಲವೂ ಇರುತ್ತವೆ. ಈ ಬಾರಿಯ ಬಜೆಟ್​ನಲ್ಲೂ ಕೆಲ ನಿರೀಕ್ಷೆಗಳಿವೆ. ಈ ನಿರೀಕ್ಷೆಗಳ ಮಧ್ಯೆ ಸರ್ಕಾರ ತೆರಿಗೆ ಪಾವತಿದಾರರಿಗೆ ಹೊರೆ ಇಳಿಸುವ ಆಲೋಚನೆಯಲ್ಲಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅದು ಸ್ಟ್ಯಾಂಡರ್ಡ್ ಡಿಡಕ್ಷನ್ ವಿಚಾರ. ಮನಿಕಂಟ್ರೋಲ್ ವರದಿ ಪ್ರಕಾರ ಈಗಿರುವ 50,000 ರೂ ಮೊತ್ತದ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 1,00,000 ರೂಗೆ ಏರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಮೂಲಭೂತ ಟ್ಯಾಕ್ಸ್ ಡಿಡಕ್ಷನ್ ಅಥವಾ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಬೇಕೆನ್ನುವ ಕೂಗು ಕಳೆದ ಎರಡು ವರ್ಷದಿಂದಲೂ ಕೇಳಿಬರುತ್ತಿದೆ. ಈ ಬಾರಿಯ ಬಜೆಟ್​ನಲ್ಲಿ ಇದಕ್ಕೆ ಸ್ಪಂದನೆ ಸಿಗುವ ನಿರೀಕ್ಷೆ ಇದೆ.

ಸ್ಟ್ಯಾಂಡರ್ಡ್ ಡಿಡಕ್ಷನ್ ಎಂದರೇನು?

ಇದು ಎಲ್ಲಾ ಸಂಬಳದಾರರಿಗೆ ಲಭ್ಯ ಇರುವ ರಿಯಾಯಿತಿ. ತೆರಿಗೆಗೆ ಅರ್ಹವಾದ ಆದಾಯವನ್ನು ಕಡಿಮೆ ಮಾಡುತ್ತದೆ ಇದು. ಯಾವ ಹೂಡಿಕೆಯ ಅಗತ್ಯವೂ ಇರುವುದಿಲ್ಲ. ಒಂದು ರೀತಿಯಲ್ಲಿ ಮೂಲಭೂತವಾಗಿ ನೀಡಲಾಗುವ ತೆರಿಗೆ ವಿನಾಯಿತಿ. ಆದರೆ, ಟ್ಯಾಕ್ಸಬಲ್ ಇನ್ಕಮ್ ಅನ್ನೂ ಇದು ಕಡಿಮೆ ಮಾಡುವುದರಿಂದ ಸ್ಟ್ಯಾಂಡರ್ಡ್ ಡಿಡಕ್ಷನ್ ಬಹಳ ಮಹತ್ವ ಎನಿಸುತ್ತದೆ.

ಇದನ್ನೂ ಓದಿ: ನಿಮ್ಮ ಆದಾಯದಲ್ಲಿ ಗರಿಷ್ಠ ಎಷ್ಟು ಮೊತ್ತದಷ್ಟು ಟ್ಯಾಕ್ಸ್ ಡಿಡಕ್ಷನ್ಸ್ ಪಡೆಯಬಹುದು? ಇಲ್ಲಿದೆ ಪಟ್ಟಿ

ಸದ್ಯ ಹೊಸ ಮತ್ತು ಹಳೆಯ ಟ್ಯಾಕ್ಸ್ ರೆಜಿಮೆ, ಎರಡರಲ್ಲೂ 50,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಇದೆ. ಇದು ಸಂಬಳದಾರರಿಗೆ ಮತ್ತು ಪಿಂಚಣಿದಾರರಿಗೆ ಲಭ್ಯ ಇರುತ್ತದೆ. ಬೇರೆ ಆದಾಯಗಳಿಗೆ ಅನ್ವಯ ಆಗುವುದಿಲ್ಲ.

ಸ್ಟ್ಯಾಂಡರ್ಡ್ ಡಿಡಕ್ಷನ್ ಒಂದು ಲಕ್ಷವಾದರೆ ಎಷ್ಟು ಪ್ರಯೋಜನ?

ಒಂದು ವೇಳೆ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50,000 ರೂನಿಂದ ಒಂದು ಲಕ್ಷ ರೂಗೆ ಹೆಚ್ಚಿಸಿದಲ್ಲಿ ಟ್ಯಾಕ್ಸಬಲ್ ಇನ್ಕಮ್ ಕಡಿಮೆ ಆಗುತ್ತದೆ. ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಈಗಿರುವ ಡಿಡಕ್ಷನ್ ಮತ್ತು ರಿಬೇಟ್ ಅನುಸಾರ ವರ್ಷಕ್ಕೆ ಏಳೂವರೆ ಲಕ್ಷ ರೂ ಆದಾಯಕ್ಕೆ ತೆರಿಗೆ ಕಟ್ಟುವ ಅವಶ್ಯತೆ ಇರುವುದಿಲ್ಲ. ಈಗ ಆ ಮಿತಿ 8 ಲಕ್ಷ ರೂಗೆ ಏರಬಹುದು.

ಇದನ್ನೂ ಓದಿ: ಜುಲೈ 23ಕ್ಕೆ ಆರ್ಥಿಕ ಸಮೀಕ್ಷೆ, ಜುಲೈ 24ಕ್ಕೆ ಬಜೆಟ್ ಮಂಡನೆ ಸಾಧ್ಯತೆ: ವರದಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ ಕೊನೆಯ ವಾರ ಬಜೆಟ್ ಮಂಡನೆ ಮಾಡಲಿದ್ದಾರೆ. ವರದಿಗಳ ಪ್ರಕಾರ ಜುಲೈ 22ಕ್ಕೆ ಬಜೆಟ್ ಅಧಿವೇಶನ ಆರಂಭವಾಗಿ ಜುಲೈ 24ಕ್ಕೆ ಬಜೆಟ್ ಪ್ರಸ್ತುತಪಡಿಸಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ