Union Budget 2023: ಹಿರಿಯ ನಾಗರಿಕರಿಗೆ ಶುಭ ಸುದ್ದಿ; ಠೇವಣಿ ಮಿತಿ 30 ಲಕ್ಷ ರೂ.ಗೆ ಹೆಚ್ಚಳ

ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಇಡಬಹುದಾದ ಠೇವಣಿ ಮಿತಿಯನ್ನು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್​ನಲ್ಲಿ 15 ಲಕ್ಷ ರೂ.ನಿಂದ 30 ಲಕ್ಷ ರೂ.ಗೆ ಹೆಚ್ಚಳ ಮಾಡಿದೆ

Union Budget 2023: ಹಿರಿಯ ನಾಗರಿಕರಿಗೆ ಶುಭ ಸುದ್ದಿ; ಠೇವಣಿ ಮಿತಿ 30 ಲಕ್ಷ ರೂ.ಗೆ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Feb 01, 2023 | 2:29 PM

ನವದೆಹಲಿ: ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ (Senior Citizens Savings Scheme) ಇಡಬಹುದಾದ ಠೇವಣಿ ಮಿತಿಯನ್ನು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್​ನಲ್ಲಿ (Union Budget 2023) 15 ಲಕ್ಷ ರೂ.ನಿಂದ 30 ಲಕ್ಷ ರೂ.ಗೆ ಹೆಚ್ಚಳ ಮಾಡಿದೆ. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಘೋಷಣೆ ಮಾಡಿದರು. ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ 2023ರ ಜನವರಿ – ಮಾರ್ಚ್ ಅವಧಿಗೆ ಶೇ 8ರ ಬಡ್ಡಿ ದರವನ್ನು ಜನವರಿ ಆರಂಭದಲ್ಲಿ ಸರ್ಕಾರ ನಿಗದಿ ಮಾಡಿತ್ತು. ಹಿರಿಯ ನಾಗರಿಕರ ಉಳಿತಾಯಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಮಿತಿ ಹೆಚ್ಚಳ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಉಳಿತಾಯಕ್ಕೆ ಕನಿಷ್ಠ 1,000 ರೂ. ಇರುವುದು ಮುಂದುವರಿಯಲಿದೆ. 5 ವರ್ಷಗಳ ಮೆಚ್ಯೂರಿಟಿ ಅವಧಿಯ ಯೋಜನೆ ಇದಾಗಿದೆ. ಜತೆಗೆ ಮಾಸಿಕ ಆದಾಯ ಮಾದರಿಯ ಠೇವಣಿಗಳ ಗರಿಷ್ಠ ಮಿತಿಯನ್ನು 4.5 ಲಕ್ಷ ರೂ.ನಿಂದ 9 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ.

‘ಹಿರಿಯ ನಾಗರಿಕರ ಉಳಿತಾಯದ ಮಿತಿಯನ್ನು ಹೆಚ್ಚಿಸಿರುವುದು ಈ ಬಜೆಟ್​ನ ಸಕಾರಾತ್ಮಕ ಅಂಶ. ಸದ್ಯ ಈ ಯೋಜನೆಯಡಿ ವಾರ್ಷಿಕ ಶೇ 8ರ ಬಡ್ಡಿ ನೀಡಲಾಗುತ್ತಿದೆ. ಇದೀಗ ಮಿತಿ ಹೆಚ್ಚಿಸಿರುವುದರಿಂದ ಹಿರಿಯ ನಾಗರಿಕರು ದೊಡ್ಡ ಮೊತ್ತದ ಹೂಡಿಕೆದಾರರಾಗಲು ಅನುವು ಮಾಡಿಕೊಟ್ಟಂತಾಗಿದೆ’ ಎಂದು ಫಿಂಟೂ ಸಂಸ್ಥಾಪಕ ಮನೀಷ್ ಪಿ. ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Income Tax Rebate: ಸಿಹಿ ಸುದ್ದಿ; ಆದಾಯ ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ವಿಸ್ತರಣೆ

ಇಷ್ಟೇ ಅಲ್ಲದೆ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಥವಾ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಮಹಿಳೆಯರಿಗಾಗಿ ಸರ್ಕಾರ ‘ಮಹಿಳಾ ಸಮ್ಮಾನ್ ಬಚತ್ ಪತ್ರ’ ಸಣ್ಣ ಉಳಿತಾಯ ಯೋಜನೆ ಆರಂಭಿಸಲಿದೆ. ಒಂದು ಬಾರಿಯ ಸಣ್ಣ ಉಳಿತಾಯ ಯೋಜನೆ ಇದಾಗಿದ್ದು, ಎರಡು ವರ್ಷಗಳ ಅವಧಿಗೆ ಠೇವಣಿ ಇಡಬಹುದಾಗಿದೆ. 2025ರ ಮಾರ್ಚ್​​​ವರೆಗಿನ ಅವಧಿಗೆ ಈ ಯೋಜನೆ ಮುಕ್ತವಾಗಿರಲಿದೆ. 2 ಲಕ್ಷ ರೂ.ವರೆಗೆ ಈ ಯೋಜನಯಡಿ ಹೂಡಿಕೆ ಮಾಡಬಹುದಾಗಿದ್ದು, ಶೇ 7.5ರ ಬಡ್ಡಿ ದೊರೆಯಲಿದೆ.

ಬ್ಯಾಂಕ್​ಗಿಂತ ಹೆಚ್ಚು ಸಿಗುತ್ತೆ ಬಡ್ಡಿ

ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಅಥವಾ ಎಸ್​ಸಿಎಸ್​ಎಸ್ ಬಡ್ಡಿ ದರ ಈಗ ಶೇ 8 ಆಗಿದೆ. ಇದು ಬ್ಯಾಂಕ್​ಗಳು ಹಿರಿಯ ನಾಗರಿಕರ ಠೇವಣಿಗೆ ನೀಡುವ ಬಡ್ಡಿಗಿಂತಲೂ 50ರಿಂದ 75 ಮೂಲಾಂಶದಷ್ಟು ಹೆಚ್ಚಾಗಿದೆ. 60 ವರ್ಷ ಮೇಲ್ಪಟ್ಟವರು ಈ ಠೇವಣಿ ಇಡಬಹುದಾಗಿದೆ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, 55 ವರ್ಷ ಮೇಲ್ಪಟ್ಟವರಾದರೆ ಸ್ವಯಂ ನಿವೃತ್ತಿ ಯೋಜನೆಯಡಿ ಠೇವಣಿ ಇಡಬಹುದಾಗಿದೆ.

ಬಜೆಟ್​ ಕುರಿತ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:03 pm, Wed, 1 February 23

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ