
ನವದೆಹಲಿ: ಕೇಂದ್ರ ಬಜೆಟ್ನ ಮೊದಲ ಎಂಜಿನ್ ಕೃಷಿ ಕ್ಷೇತ್ರವಾಗಿದ್ದರೆ ಎರಡನೇ ಎಂಜಿನ್ ಎಂಎಸ್ಎಂಇಗಳಾಗಿವೆ. ಪ್ರಸ್ತುತ ನಮ್ಮ ಉತ್ಪಾದನೆಯ ಶೇ. 37ರಷ್ಟು ಉತ್ಪಾದಿಸುವ 1 ಕೋಟಿಗೂ ಹೆಚ್ಚು ನೋಂದಾಯಿತ ಎಂಎಸ್ಎಂಇಗಳು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಇರಿಸಲು ಒಟ್ಟಾಗಿವೆ. ಈ MSMEಗಳು ನಮ್ಮ ರಫ್ತಿನ ಶೇ. 45ರಷ್ಟು ಕೊಡುಗೆ ನೀಡುತ್ತವೆ. ಈ ಕ್ಷೇತ್ರಕ್ಕೆ ಸಹಾಯ ಮಾಡಲು ಎಲ್ಲಾ MSMEಗಳ ವರ್ಗೀಕರಣಕ್ಕಾಗಿ ಹೂಡಿಕೆ ಮಿತಿಯನ್ನು ಎರಡೂವರೆ ಪಟ್ಟು ಮತ್ತು ವಹಿವಾಟು ಮಿತಿಗಳನ್ನು ಎರಡು ಪಟ್ಟು ಹೆಚ್ಚಿಸಲಾಗುವುದು. ಇದು ನಮ್ಮ ಯುವಕರಿಗೆ ಬೆಳೆಯಲು ಮತ್ತು ಉದ್ಯೋಗವನ್ನು ಸೃಷ್ಟಿಸಲು ಉತ್ತೇಜನ ನೀಡುತ್ತದೆ” ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಪ್ರಸ್ತುತ 1 ಕೋಟಿಗೂ ಹೆಚ್ಚು MSME ಗಳು 7.5 ಕೋಟಿ ಜನರಿಗೆ ಉದ್ಯೋಗ ನೀಡುತ್ತಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. “ಸಾಲದ ಪ್ರವೇಶವನ್ನು ಸುಧಾರಿಸಲು ಕ್ರೆಡಿಟ್ ವ್ಯಾಪ್ತಿಯನ್ನು ಹೆಚ್ಚಿಸಲಾಗುವುದು. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಇದನ್ನು 5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು. ಸ್ಟಾರ್ಟ್‌ಅಪ್‌ಗಳಿಗೆ, ಇದನ್ನು 10 ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು. ಉತ್ತಮವಾಗಿ ನಡೆಸುವ ರಫ್ತುದಾರ ಎಂಎಸ್ಎಂಇಗಳಿಗೆ 20 ಕೋಟಿ ರೂ.ಗಳ ಅವಧಿ ಸಾಲಗಳನ್ನು ನೀಡಲಾಗುವುದು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಸಾಲ ಪ್ರಮಾಣ 5 ಲಕ್ಷ ರೂಗೆ ಹೆಚ್ಚಳ; ಬಜೆಟ್ನಲ್ಲಿ ಕೃಷಿಕರಿಗೆ ಸಿಕ್ಕ ಕೊಡುಗೆಗಳು…
New Classification Criteria for MSMEs
· Investment limit for MSME classification to be made 2.5 times
· Turnover limits for MSME classification to be doubled#ViksitBharatBudget2025 #Budget2025 #UnionBudget2025 pic.twitter.com/ymPVjGfn3x— Ministry of Finance (@FinMinIndia) February 1, 2025
ಸೂಕ್ಷ್ಮ ಉದ್ಯಮಗಳಿಗೆ MSME ಕ್ರೆಡಿಟ್ ಗ್ಯಾರಂಟಿ ಕವರ್ ಅನ್ನು 5 ಕೋಟಿಯಿಂದ 10 ಕೋಟಿ ರೂ.ಗೆ ದ್ವಿಗುಣಗೊಳಿಸಲಾಗುವುದು. ಇದರಿಂದಾಗಿ ಮುಂದಿನ 5 ವರ್ಷಗಳಲ್ಲಿ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ಸಾಲ ದೊರೆಯುತ್ತದೆ. ಉದ್ಯಮ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸಣ್ಣ ವ್ಯವಹಾರಗಳಿಗೆ 5 ಲಕ್ಷ ಮಿತಿಯೊಂದಿಗೆ ಕಸ್ಟಮೈಸ್ ಮಾಡಿದ ಕ್ರೆಡಿಟ್ ಕಾರ್ಡ್‌ಗಳನ್ನು ಪ್ರಾರಂಭಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.
Finance Minister @nsitharaman Ji is presenting the Union Budget in Parliament. https://t.co/3CYGZzC7iO
— Narendra Modi (@narendramodi) February 1, 2025
ಮೊದಲ ವರ್ಷದಲ್ಲಿ ಸುಮಾರು 10 ಲಕ್ಷ ವ್ಯವಹಾರಗಳಿಗೆ ಈ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ಸೀತಾರಾಮನ್ ಹೇಳಿದರು. MSME ವರ್ಗೀಕರಣದ ಹೂಡಿಕೆ ಮಿತಿಯನ್ನು 2.5 ಪಟ್ಟು ಮಾಡಲಾಗುವುದು ಮತ್ತು MSME ವರ್ಗೀಕರಣದ ವಹಿವಾಟು ಮಿತಿಗಳನ್ನು ಸಹ ದ್ವಿಗುಣಗೊಳಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ