Agriculture Budget 2025: ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಸಾಲ ಪ್ರಮಾಣ 5 ಲಕ್ಷ ರೂಗೆ ಹೆಚ್ಚಳ; ಬಜೆಟ್​ನಲ್ಲಿ ಕೃಷಿಕರಿಗೆ ಸಿಕ್ಕ ಕೊಡುಗೆಗಳು…

Budget announcements for farmers: ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಸಿಗುವ ಸಾಲದ ಮಿತಿಯನ್ನು 3 ಲಕ್ಷ ರೂನಿಂದ 5 ಲಕ್ಷ ರೂಗೆ ಏರಿಸಿದ್ದಾರೆ. ಪಿಎಂ ಧನ್ ಧಾನ್ಯ ಯೋಜನೆ ಅಡಿಯಲ್ಲಿ ಬೆಳೆ ಇಳುವರಿ ಕಡಿಮೆ ಇರುವ 100 ಜಿಲ್ಲೆಗಳನ್ನು ಗುರಿಯಾಗಿಸಿ, ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಯೋಜನೆ ಇದು.

Agriculture Budget 2025: ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಸಾಲ ಪ್ರಮಾಣ 5 ಲಕ್ಷ ರೂಗೆ ಹೆಚ್ಚಳ; ಬಜೆಟ್​ನಲ್ಲಿ ಕೃಷಿಕರಿಗೆ ಸಿಕ್ಕ ಕೊಡುಗೆಗಳು...
ಕೃಷಿ ಕ್ಷೇತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 01, 2025 | 11:51 AM

ನವದೆಹಲಿ, ಫೆಬ್ರುವರಿ 1: ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ನೀಡಲಾಗುವ ಕಿರು ಸಾಲದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಮೂರು ಲಕ್ಷ ರೂ ಇದ್ದ ಸಾಲದ ಮಿತಿಯನ್ನು ಐದು ಲಕ್ಷ ರೂಗೆ ಏರಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಂಟನೇ ಬಜೆಟ್​ನಲ್ಲಿ ಈ ಘೋಷಣೆ ಮಾಡಿದ್ದಾರೆ. ಏಳು ಕೋಟಿಗೂ ಹೆಚ್ಚು ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಅವರಿಗೆ ಬಹಳ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ.

ಬೇಳೆ ಕಾಳುಗಳಲ್ಲಿ ಸ್ವಾವಲಂಬನೆಗೆ 6 ವರ್ಷದ ಮಿಷನ್

ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಒತ್ತು ಕೊಡುತ್ತಿರುವುದಾಗಿ ತಿಳಿಸಿದ್ದಾರೆ. ಬೇಳೆಕಾಳು ಇತ್ಯಾದಿಯಲ್ಲಿ ಸ್ವಾವಲಂಬನೆ ಸಾಧಿಸುವ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಬೇಳೆಕಾಳುಗಳಲ್ಲಿ ಸ್ವಾವಲಂಬನೆ ಸಾಧಿಸುವ ಆರು ವರ್ಷದ ಮಿಷನ್ ಅನ್ನು ಅವರು ಪ್ರಕಟಿಸಿದ್ದಾರೆ. ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆಗಳಾದ ಎನ್​ಎಎಫ್​ಇಇ, ಎನ್​ಸಿಸಿಎಫ್ ಇತ್ಯಾದಿ ಸಂಸ್ಥೆಗಳೊಂದಿಗೆ ರೈತರು ಒಪ್ಪಂದ ಮಾಡಿಕೊಂಡು, ಬೇಳೆಕಾಳುಗಳನ್ನು ಮಾರಬಹುದು. ಇದರಿಂದ ರೈತರಿಗೆ ಸುಲಭ ಮಾರುಕಟ್ಟೆ ಸಿಕ್ಕಂತಾಗುತ್ತದೆ.

ಪಿಎಂ ಧನ್ ಧಾನ್ಯ ಕೃಷಿ ಯೋಜನೆ….

ಬಜೆಟ್​ನಲ್ಲಿ ಪಿಎಂ ಧನ್ ಧಾನ್ಯ್ ಕೃಷಿ ಯೋಜನೆಯನ್ನು ಪ್ರಕಟಿಸಲಾಗಿದೆ. ಕಡಿಮೆ ಉತ್ಪನ್ನ ಇರುವ 100 ಜಿಲ್ಲೆಗಳನ್ನು ಗುರಿಯಾಗಿಸಿ, ರಾಜ್ಯಗಳ ಸಹಭಾಗಿತ್ವದಲ್ಲಿ ಈ ಯೋಜನೆ ರೂಪಿಸಲಾಗಿದೆ. ಬಹುಬೆಳೆ, ಸುಸ್ಥಿರ ಕೃಷಿ ವಿಧಾನ, ನೀರಾವರಿ ಸೌಲಭ್ಯ, ಸಾಲ ಸೌಲಭ್ಯ ಇತ್ಯಾದಿ ಮೂಲಕ ಕೃಷಿ ಉತ್ಪನ್ನವನ್ನು ಹೆಚ್ಚಿಸುವುದು ಈ ಯೋಜನೆ ಗುರಿ. 1.7 ಕೋಟಿ ರೈತರ ಜೀವನಕ್ಕೆ ಇದರಿಂದ ಅನುಕೂಲವಾಗಲಿದೆ.

ಇದನ್ನೂ ಓದಿ: ಬಜೆಟ್ ಮುನ್ನ 200 ಅಂಕಗಳಷ್ಟು ಏರಿದ ಸೆನ್ಸೆಕ್ಸ್; ಒಟ್ಟಾರೆ ಹಸಿರುಬಣ್ಣದಲ್ಲಿ ಷೇರುಪೇಟೆ

ಗ್ರಾಮೀಣ ಆರ್ಥಿಕತೆಗೆ ಇಂಡಿಯಾ ಪೋಸ್ಟ್ ಶಕ್ತಿ

ಇಂಡಿಯಾ ಪೋಸ್ಟ್ ಸಂಸ್ಥೆಯನ್ನು ದೊಡ್ಡ ಸಾರ್ವಜನಿಕ ಲಾಜಿಸ್ಟಿಕ್ ಸಂಸ್ಥೆಯಾಗಿ ಪರಿವರ್ತಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿರುವ ಒಂದೂವರೆ ಲಕ್ಷ ಅಂಚೆ ಕಚೇರಿಗಳನ್ನು ಇದಕ್ಕಾಗಿ ಬಳಕೆ ಮಾಡಲಾಗುತ್ತದೆ. ಇದರಿಂದ ಗ್ರಾಮೀಣ ಆರ್ಥಿಕತೆಗೆ ಅನುಕೂಲವಾಗಲಿದೆ.

ಬಜೆಟ್ ಲೈವ್ ಅಪ್​ಡೇಟ್ಸ್​ಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:44 am, Sat, 1 February 25

‘ಇದೊಂದು ಬಾರಿ ಕ್ಷಮಿಸಿಬಿಡಿ’; ಅಭಿಮಾನಿಗಳಿಗೆ ದರ್ಶನ್ ವಿಡಿಯೋ ಸಂದೇಶ
‘ಇದೊಂದು ಬಾರಿ ಕ್ಷಮಿಸಿಬಿಡಿ’; ಅಭಿಮಾನಿಗಳಿಗೆ ದರ್ಶನ್ ವಿಡಿಯೋ ಸಂದೇಶ
ಚಾಂಪಿಯನ್ಸ್ ಟ್ರೋಫಿ ಜೆರ್ಸಿ ಅನಾವರಣಗೊಳಿಸಿದ ಪಾಕಿಸ್ತಾನ್
ಚಾಂಪಿಯನ್ಸ್ ಟ್ರೋಫಿ ಜೆರ್ಸಿ ಅನಾವರಣಗೊಳಿಸಿದ ಪಾಕಿಸ್ತಾನ್
Delhi Result Live: ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ನೇರ ಪ್ರಸಾರ
Delhi Result Live: ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ನೇರ ಪ್ರಸಾರ
ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?