ಬಜೆಟ್ ಮುನ್ನ 200 ಅಂಕಗಳಷ್ಟು ಏರಿದ ಸೆನ್ಸೆಕ್ಸ್; ಒಟ್ಟಾರೆ ಹಸಿರುಬಣ್ಣದಲ್ಲಿ ಷೇರುಪೇಟೆ
Sensex, Nifty indices gain before budget: ಕಳೆದ ಕೆಲ ತಿಂಗಳಿಂದ ಹಿನ್ನಡೆಯಲ್ಲಿರುವ ಷೇರು ಮಾರುಕಟ್ಟೆ ಅಪರೂಪಕ್ಕೆ ಇವತ್ತು ಹಸಿರುಬಣ್ಣಕ್ಕೆ ತಿರುಗಿದೆ. ಬಜೆಟ್ ಮಂಡನೆಗೆ ಮುನ್ನ ಪೇಟೆ ಹೊಸ ಕಳೆ ಮತ್ತು ಉತ್ಸಾಹ ಪಡೆದುಕೊಂಡಂತಿದೆ. ಸೆನ್ಸೆಕ್ಸ್, ನಿಫ್ಟಿ ಸೇರಿದಂತೆ ಬಿಎಸ್ಇ ಮತ್ತು ಎನ್ಎಸ್ಇನ ಹೆಚ್ಚಿನ ಸೂಚ್ಯಂಕಗಳು ಗಣನೀಯ ವೃದ್ಧಿ ಕಂಡಿವೆ. ಬಿಎಸ್ಇ ಸೆನ್ಸೆಕ್ಸ್ ಬೆಳಗ್ಗೆ 10:30ರಲ್ಲಿ 200 ಅಂಕಗಳಷ್ಟು ಏರಿಕೆ ಕಂಡಿದೆ.

ಮುಂಬೈ, ಫೆಬ್ರುವರಿ 1: ಇವತ್ತು ಬಜೆಟ್ ಮಂಡನೆ ಇರುವ ಪ್ರಯುಕ್ತ, ಶನಿವಾರವಾದರೂ ಷೇರು ಮಾರುಕಟ್ಟೆ ಕಾರ್ಯ ನಿರ್ವಹಿಸುತ್ತಿದೆ. ಬಜೆಟ್ನ ಬಿಸಿಯಲ್ಲಿ ಟ್ರೇಡಿಂಗ್ ಮಾಡಲು ಇವತ್ತು ಅವಕಾಶ ಸಿಕ್ಕಿದೆ. ಬಜೆಟ್ನಲ್ಲಿ ಹಲವು ಸುಧಾರಣಾ ಕ್ರಮಗಳು ಜಾರಿಯಾಗುವ ಆಶಾಭಾವನೆಯಲ್ಲಿ ಷೇರು ಮಾರುಕಟ್ಟೆ ಬೆಳಗ್ಗೆಯೇ ಗರಿಗೆದರಿ ನಿಂತಿದೆ. ಬೆಳಗ್ಗೆ 11 ಗಂಟೆಗೆ ಬಜೆಟ್ ಪ್ರಸ್ತುತಿ ನಡೆಯುತ್ತದೆ. ಬೆಳಗ್ಗೆ 9ಕ್ಕೆ ಆರಂಭವಾದ ಮಾರುಕಟ್ಟೆ 10 ಗಂಟೆಯಷ್ಟರಲ್ಲಿ ಉತ್ತಮವಾಗಿ ಏರಿಕೆ ಕಂಡಿತ್ತು. ಬಿಎಸ್ಇ ಸೆನ್ಸೆಕ್ಸ್ 200 ಅಂಕಗಳಷ್ಟು ಹೆಚ್ಚಳ ಕಂಡಿತು. ನಿಫ್ಟಿ ಕೂಡ 70 ಅಂಕಗಳಷ್ಟು ಏರಿಕೆ ಕಂಡಿತು.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಪ್ರಮುಖ ಸೂಚ್ಯಂಕವಾದ ಸೆನ್ಸೆಕ್ಸ್ ಸೇರಿದಂತೆ ಹೆಚ್ಚಿನ ಇಂಡೆಕ್ಸ್ಗಳು ಇಂದು ಶನಿವಾರ ಪಾಸಿಟಿವ್ನಲ್ಲಿ ಇವೆ.
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲೂ ನಿಫ್ಟಿ 50 ಸೇರಿದಂತೆ ಹೆಚ್ಚಿನ ಸೂಚ್ಯಂಕಗಳು ಹಸಿರು ಬಣ್ಣದಲ್ಲೇ ಇವೆ. ಐಟಿ, ಆಯಿಲ್ ಅಂಡ್ ಗ್ಯಾಸ್ ಇತ್ಯಾದಿ ಬೆರಳೆಣಿಕೆಯಷ್ಟು ಇಂಡೆಕ್ಸ್ಗಳು ಮಾತ್ರವೇ ತುಸು ಹಿನ್ನಡೆ ಕಂಡಿವೆ. ಉಳಿದಂತೆ ಎಲ್ಲಾ ನಿಫ್ಟಿ ಇಂಡೆಕ್ಸ್ಗಳು ಪಾಸಿಟಿವ್ ಇವೆ. ನಿಫ್ಟಿ ಸ್ಮಾಲ್ಕ್ಯಾಪ್ 100 ಇಂಡೆಕ್ಸ್ ಬಹುತೇಕ ಶೇ. 1ರಷ್ಟು ಏರಿಕೆ ಕಂಡಿದೆ. ನಿಫ್ಟಿ ಮಿಡ್ಕ್ಯಾಪ್ 100, ನಿಫ್ಟಿ ನೆಕ್ಸ್ಟ್ 50, ನಿಫ್ಟಿ ಸ್ಮಾಲ್ಕ್ಯಾಪ್ 50, ನಿಫ್ಟಿ ರಿಯಾಲ್ಟಿ ಸೂಚ್ಯಂಕಗಳು 0.70 ಪ್ರತಿಶತಕ್ಕಿಂತ ಹೆಚ್ಚಿನ ಮಟ್ಟದ ಏರಿಕೆ ಕಂಡಿರುವುದು ಗಮನಾರ್ಹ.
ಬಿಎಸ್ಇನಲ್ಲೂ ಸ್ಮಾಲ್ಕ್ಯಾಪ್ ಸೂಚ್ಯಂಕ ಶೇ. 0.80ರಷ್ಟು ಹೆಚ್ಚಳ ಕಂಡಿದೆ. ಬಿಎಸ್ಇ ಇಂಡಸ್ಟ್ರಿಯಲ್ಸ್ ಸೂಚ್ಯಂಕವಂತೂ ಶೇ. 1.32ರಷ್ಟು ಏರಿಕೆ ಕಂಡಿತು. ಬಿಎಸ್ಇನಲ್ಲಿ ಐಟಿ ಸ್ಟಾಕ್ಗಳು ಪಾಸಿಟಿವ್ ಇವೆ. ಬಿಎಸ್ಇ ಯುಟಿಲಿಟೀಸ್ ಸೂಚ್ಯಂಕ ಕೂಡ ಶೇ 1ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ.
ಇದನ್ನೂ ಓದಿ: ಫೆ. 1ರ ಬಳಿಕ ಮಾರುಕಟ್ಟೆ ಕುಸಿಯುತ್ತದಾ? ಬಜೆಟ್ನಲ್ಲಿ ಸಂಭಾವ್ಯ ಘೋಷಣೆಗಳಿವು…
ನಿಫ್ಟಿ 50ಯಲ್ಲಿ ಅತಿಹೆಚ್ಚಳ ಕಾಣುತ್ತಿರುವ ಐದು ಷೇರುಗಳು (ಬೆಳಗ್ಗೆ 10:30ಕ್ಕೆ)
- ಎಲ್ ಅಂಡ್ ಟಿ: ಶೇ. 10.87
- ಮಹೀಂದ್ರ ಅಂಡ್ ಮಹೀಂದ್ರ: ಶೇ. 8.66
- ಬಿಇಎಲ್: ಶೇ. 8.46
- ಅಲ್ಟ್ರಾಟೆಕ್ ಸಿಮೆಂಟ್: ಶೇ. 4.84
- ಇನ್ಫೋಸಿಸ್: ಶೇ. 4.59
ನಿಫ್ಟಿ50ಯಲ್ಲಿ ಕುಸಿಯುತ್ತಿರುವ ಷೇರುಗಳು
- ಟೈಟಾನ್ ಕಂಪನಿ: ಶೇ. 5.22 ಕುಸಿತ
- ನೆಸ್ಲೆ: ಶೇ. 3.96 ಕುಸಿತ
- ಐಟಿಸಿ: ಶೇ. 2.89 ಕುಸಿತ
- ಗ್ರಾಸಿಂ ಇಂಡಸ್ಟ್ರೀಸ್: ಶೇ. 2.21 ಕುಸಿತ
- ಎಚ್ಸಿಎಲ್ ಟೆಕ್: ಶೇ. 1.73 ಕುಸಿತ
ಬಜೆಟ್ ಲೈವ್ ಅಪ್ಡೇಟ್ಸ್ಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ