Speech Duration: ಕೇಂದ್ರ ಬಜೆಟ್ ಮಂಡನೆ ಅವಧಿ ಎಷ್ಟಿರಬೇಕು?
ನವದೆಹಲಿ, ಜನವರಿ 23: ಮುಂದಿನ ಹಣಕಾಸು ವರ್ಷಕ್ಕೆ ಆದಾಯ ಮತ್ತು ವೆಚ್ಚದ ಅಂದಾಜು ಲೆಕ್ಕಪತ್ರವನ್ನು ಕೇಂದ್ರ ಸರ್ಕಾರ ಪ್ರಸ್ತುಪಡಿಸುವುದೇ ಬಜೆಟ್ (Union Budget 2024) ಆಗಿರುತ್ತದೆ. ಕೆಲ ಬಜೆಟ್ ಮಂಡನೆ ದೀರ್ಘಾವಧಿ ಇರುತ್ತದೆ. ಕೆಲವು ಬೇಗನೇ ಮುಗಿಯಬಹುದು. ಇದರ ನಿಯಮಗಳೇನುಂಟು...? ಇಲ್ಲಿದೆ ಡೀಟೇಲ್ಸ್...
1 / 6
ಒಂದು ಬಜೆಟ್ ಭಾಷಣ ಸಾಮಾನ್ಯವಾಗಿ 90 ನಿಮಿಷದಿಂದ 120 ನಿಮಿಷಗಳವರೆಗೆ ಇರುತ್ತದೆ. ಅಂದರೆ ಬಜೆಟ್ ಮಂಡನೆ ಒಂದೂವರೆಯಿಂದ ಎರಡು ಗಂಟೆ ಅವಧಿಯವರೆಗೆ ಇರಬಹುದು. ಆದರೆ ಅದೇ ಮಿತಿಯಲ್ಲಿ ಇರಬೇಕು ಎಂದಿಲ್ಲ.
2 / 6
ಕೆಲ ಬಜೆಟ್ಗಳು ಹೆಚ್ಚು ಅವಧಿ ಕಾಲ ಮಂಡನೆ ಆಗಿದ್ದು ಇದೆ. ಇನ್ನೂ ಕೆಲ ಬಜೆಟ್ ಮಂಡನೆ ಕಡಿಮೆ ಅವಧಿಯಲ್ಲಿ ಅಂತ್ಯವಾಗಿದೆ.
3 / 6
ನಿರ್ಮಲಾ ಸೀತಾರಾಮನ್ ಅವರ 2020ರ ಬಜೆಟ್ ಭಾಷಣ ಬರೋಬ್ಬರಿ 160 ನಿಮಿಷ ಕಾಲ ಇತ್ತು. ಅದು ಅತೀ ದೀರ್ಘದ ಬಜೆಟ್ ಮಂಡನೆ ಎನಿಸಿದೆ.
4 / 6
ನಿರ್ಮಲಾ ಸೀತಾರಾಮನ್ ಹೆಚ್ಚು ಅವಧಿ ಎಂಬ ದಾಖಲೆ ಬರೆದರೆ, ಅತಿ ಉದ್ದದ ಬಜೆಟ್ ಭಾಷಣ ಮನಮೋಹನ್ ಸಿಂಗ್ ಅವರದ್ದಾಗಿದೆ. ಅವರ 1991ರ ಬಜೆಟ್ ಭಾಷಣ 18,650 ಪದಗಳನ್ನು ಹೊಂದಿತ್ತು.
5 / 6
ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ಹೀರೂಭಾಯ್ ಎಂ ಪಟೇಲ್ 1977ರಲ್ಲಿ ಮಾಡಿದ ಬಜೆಟ್ ಭಾಷಣದಲ್ಲಿ ಕೇವಲ 800 ಪದಗಳಿದ್ದವು. ಅದು ಭಾರತದ ಅತ್ಯಂತ ಕಿರು ಬಜೆಟ್ ಭಾಷಣ ಎನಿಸಿದೆ. (Photo credit: BCCL)
6 / 6
ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಮೊರಾರ್ಜಿ ದೇಸಾಯಿ ಅವರದ್ದಾಗಿದೆ. ಅವರು 10 ಬಾರಿ ಬಜೆಟ್ ಮಂಡಿಸಿದ್ದಾರೆ. ಪಿ ಚಿದಂಬರಮ್ (9), ಪ್ರಣಬ್ ಮುಖರ್ಜಿ (8) ಮತ್ತು ಯಶವಂತ್ ಸಿನ್ಹಾ (8) ನಂತರದ ಸ್ಥಾನದಲ್ಲಿದ್ದಾರೆ. ನಿರ್ಮಲಾ ಸೀತಾರಾಮನ್ 5 ಬಾರಿ ಬಜೆಟ್ ಮಂಡಿಸಿದ್ದಾರೆ.