CBDT: 1986ರ ಬ್ಯಾಚ್​ನ ಐಆರ್​ಎಸ್ ಅಧಿಕಾರಿ ನಿತಿನ್ ಗುಪ್ತಾರನ್ನು ಸಿಬಿಡಿಟಿ ಅಧ್ಯಕ್ಷರಾಗಿ ನೇಮಿಸಿದ ಕೇಂದ್ರ ಸರ್ಕಾರ

ಸಿಬಿಡಿಟಿಯ ಹೊಸ ಅಧ್ಯಕ್ಷರಾಗಿ 1986ನೇ ಬ್ಯಾಚಿನ ಇಂಡಿಯನ್ ರೆವಿನ್ಯೂ ಸರ್ವೀಸ್ ಅಧಿಕಾರಿಯಾದ ನಿತಿನ್ ಗುಪ್ತಾ ಅವರನ್ನು ನೇಮಕ ಮಾಡಲಾಗಿದೆ.

CBDT: 1986ರ ಬ್ಯಾಚ್​ನ ಐಆರ್​ಎಸ್ ಅಧಿಕಾರಿ ನಿತಿನ್ ಗುಪ್ತಾರನ್ನು ಸಿಬಿಡಿಟಿ ಅಧ್ಯಕ್ಷರಾಗಿ ನೇಮಿಸಿದ ಕೇಂದ್ರ ಸರ್ಕಾರ
ನಿತಿನ್ ಗುಪ್ತಾ (ಸಂಗ್ರಹ ಚಿತ್ರ)
Edited By:

Updated on: Jun 27, 2022 | 5:42 PM

ಕೇಂದ್ರ ನೇರ ತೆರಿಗೆ ಮಂಡಳಿ ಅಧ್ಯಕ್ಷರಾಗಿ (CBDT) ನಿತಿನ್ ಗುಪ್ತಾ ಅವರನ್ನು ನೇಮಿಸಲಾಗಿದೆ. ಈ ನೇಮಕವನ್ನು ಕೇಂದ್ರ ಸಂಪುಟದ ನೇಮಕಾತಿ ಸಮಿತಿಯು ಅನುಮೋದಿಸಿದೆ. ಈ ಸಂಬಂಧವಾಗಿ ಜೂನ್ 25ನೇ ತಾರೀಕಿನಂದು ಅಧಿಸೂಚನೆ ಹೊರಡಿಸಲಾಗಿದೆ. ಭಾರತೀಯ ಕಂದಾಯ ಸೇವೆ (IRS) ಅಧಿಕಾರಿ ಆಗಿರುವ ನಿತಿನ್ ಗುಪ್ತಾ ಅವರು 2023ನೇ ಇಸವಿಯ ಸೆಪ್ಟೆಂಬರ್​ಗೆ ನಿವೃತ್ತರಾಗಲಿದ್ದಾರೆ. ಸದ್ಯಕ್ಕೆ ನಿತಿನ್ ಗುಪ್ತಾ ಅವರು ಸದಸ್ಯರಾಗಿ (ತನಿಖೆ) ಸೇವೆ ಸಲ್ಲಿಸುತ್ತಿದ್ದಾರೆ. ಉಸ್ತುವಾರಿ ವಹಿಸಿಕೊಂಡ ದಿನದಿಂದ ಅಧ್ಯಕ್ಷರಾಗಿ ಜವಾಬ್ದಾರಿ ತೆಗೆದಕೊಳ್ಳಲಿದ್ದಾರೆ. 1986ರ ಬ್ಯಾಚ್​ನ ಐಆರ್​ಎಸ್ ಅಧಿಕಾರಿಯಾದ ಸಂಗೀತಾ ಸಿಂಗ್ ಅವರು ಹೆಚ್ಚುವರಿಯಾಗಿ ಅಧ್ಯಕ್ಷ ಹುದ್ದೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಜೆಬಿ ಮೊಹಪಾತ್ರಾ ಅವರು ನೇರ ತೆರಿಗೆ ಆಡಳಿತದ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾದ ಏಪ್ರಿಲ್ 30ರಿಂದ ಸಿಂಗ್ ಅವರು ಈ ಹುದ್ದೆಯಲ್ಲಿ ಇದ್ದಾರೆ.

ನಿತಿನ್ ಗುಪ್ತಾ ಅವರು 2021ರ ಸೆಪ್ಟೆಂಬರ್​ನಲ್ಲಿ ಸದಸ್ಯರಾಗಿ (ತನಿಖೆ) ಜವಾಬ್ದಾರಿ ವಹಿಸಿಕೊಂಡರು. ಅದಕ್ಕೂ ಮುನ್ನ ಈ ಹುದ್ದೆ ಮೂರು ವರ್ಷಗಳ ಕಾಲ ಖಾಲಿ ಇತ್ತು. ಸಿಬಿಡಿಟಿಯ ಪಿಸಿ ಮೋಡಿ, ಸುಶೀಲ್ ಚಂದ್ರ ಹಾಗೂ ಸಿಂಗ್ ಹೆಚ್ಚುವರಿಯಾಗಿ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಸಿಬಿಡಿಯನ್ನು ಅಧ್ಯಕ್ಷರು ಮುನ್ನಡೆಸುತ್ತಾರೆ. ಅದರಲ್ಲಿ ಗರಿಷ್ಠ 6 ಸದಸ್ಯರು ಇರಬಹುದು. ಸದ್ಯಕ್ಕೆ ಐವರು ಸದಸ್ಯರು ಮಾತ್ರ ಮಂಡಳಿಯಲ್ಲಿ ಇದ್ದಾರೆ. ಆ ಪೈಕಿ 1985ರ ಬ್ಯಾಚ್​ನ ಐಆರ್​ಎಸ್ ಅಧಿಕಾರಿಯಾದ ಅನುಜ್ ಸಾರಂಗಿ ಬಹಳ ಹಿರಿಯರು. ಇತರ ಸದಸ್ಯರು ಅಂದರೆ ಪ್ರಗ್ಯಾ ಸಹಾಯ್ ಸಕ್ಸೇನಾ ಮತ್ತು ಶುಭಶ್ರೀ ಅನಂತಕೃಷ್ಣನ್. ಇವರಿಬ್ಬರೂ 1987ರ ಬ್ಯಾಚ್​ನ ಐಆರ್​ಎಸ್. ಈ ಎಲ್ಲ ಅಧಿಕಾರಿಗಳು ಸಹ ವಿಶೇಷ ಕಾರ್ಯದರ್ಶಿಯ ಶ್ರೇಣಿಯಲ್ಲಿದ್ದಾರೆ.

CBDT ಅಥವಾ ಕೇಂದ್ರ ನೇರ ತೆರಿಗೆ ಮಂಡಳಿ ಕೆಲಸ ಏನು ಅಂತ ನೋಡಿದರೆ, ಆದಾಯ ತೆರಿಗೆ ಇಲಾಖೆ ನೀತಿಗೆ ಸಂಬಂಧಿಸಿದಂತೆ ಚೌಕಟ್ಟನ್ನು ರೂಪಿಸುತ್ತದೆ ಮತ್ತು ಕಚೇರಿ ಸದಸ್ಯರು (ತನಿಖೆ) ಇಲಾಖೆಯ ತನಿಖೆ, ಶೋಧ, ವಶ ಮುಂತಾದ ಚಟುವಟಿಕೆಗಳ ಮೇಳೆ ನಿಗಾ ವಹಿಸುತ್ತಾರೆ. ತೆರಿಗೆ ಕಳುವು ತಪ್ಪಿಸುವ ಉದ್ದೇಶದಿಂದ ಈ ಮಂಡಳಿಯು ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿ: PF New Rules: ಪಿಎಫ್​ ಮೇಲೆ ತೆರಿಗೆ ಹಾಕುವುದಕ್ಕೆ ಏಪ್ರಿಲ್​ನಿಂದ ಎರಡು ಖಾತೆ; ಏನಿದು ಲೆಕ್ಕಾಚಾರ?

Published On - 5:41 pm, Mon, 27 June 22