58 ಉನ್ನತ ದರ್ಜೆಯ ಕಂಪನಿ ಸಿಇಒಗಳು ಭಾರತೀಯ ಮೂಲದವರು: ನಿರ್ಮಲ ಸೀತಾರಾಮನ್
ಟಾಪ್ 500 ಉನ್ನತ ದರ್ಜೆಯ ಕಂಪನಿಗಳ ಪೈಕಿ 58 ಕಂಪನಿಗಳಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ಸಿಇಒ ಆಗಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹೇಳಿದ್ದಾರೆ.
ದೆಹಲಿ: ಉನ್ನತ ದರ್ಜೆಯ ಕಂಪನಿಗಳ ಪೈಕಿ 58 ಕಂಪನಿಗಳಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ಸಿಇಒ ಆಗಿದ್ದಾರೆ. ಟಾಪ್ 500 ಕಂಪನಿಗಳ ಪಟ್ಟಿಯ ಪ್ರಕಾರ ಭಾರತೀಯ ಸಿಇಒಗಳ ಸಂಖ್ಯೆಯು ಯುನೈಟೆಡ್ ಸ್ಟೇಟ್ಸ್‌ನ ನಂತರದ ಸ್ಥಾನದಲ್ಲಿದೆ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹೇಳಿದ್ದಾರೆ. ಕಾಂಚೀಪುರಂನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್‌ನ ಘಟಿಕೋತ್ಸವ ಸಮಾರಂಭದಲ್ಲಿ ಅವರು ಹೇಳಿದರು.
ಭಾರತದಲ್ಲಿ ಉನ್ನತ ಶಿಕ್ಷಣವು ಅತ್ಯುತ್ತಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಉತ್ಪಾದಿಸುತ್ತಿದೆ. ಭಾರತೀಯ ಮೂಲದ ಹಲವಾರು ಸಿಇಒಗಳನ್ನು ಜಾಗತಿಕ ಕಂಪನಿಗಳು ನೇಮಕ ಮಾಡಿಕೊಳ್ಳುತ್ತಿವೆ. 58 ಉನ್ನತ ದರ್ಜೆಯ ಕಂಪನಿ ಸಿಇಒಗಳು ಭಾರತೀಯ ಮೂಲದವರಾಗಿದ್ದಾರೆ ಎಂದರು.
“ಈ ಸಂಸ್ಥೆಗಳು 1 ಟ್ರಿಲಿಯನ್ ಆದಾಯವನ್ನು ಹೊಂದಿದ್ದು, 4 ಟ್ರಿಲಿಯನ್ ವಹಿವಾಟು ಹೊಂದಿದೆ. 58 ಭಾರತದ ವಿದ್ಯಾವಂತ ಸಿಇಒಗಳು ಈ ಪ್ರಮಾಣದ ಕಾರ್ಪೊರೇಟ್ ಗಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಕೆಲಸ ಮಾಡಬೇಕಾಗಿಲ್ಲ ಎಂದು ಅರ್ಥವಲ್ಲ. ಇಂತಹ ಸಾಹಸಗಳನ್ನು ಮುಂದುವರಿಸಲು ನಾವು ವ್ಯವಸ್ಥೆಯನ್ನು ಮುಂದುವರಿಸಬೇಕು” ಎಂದರು.
ಜಾಗತಿಕ ಸಂಸ್ಥೆಗಳ ನಿರ್ವಹಣೆಯಲ್ಲಿ ಭಾರತವು ಅಮೆರಿಕದ ನಂತರದ ಸ್ಥಾನದಲ್ಲಿದೆ ಎಂದು ತಮ್ಮ ಭಾಷಣದಲ್ಲಿ ಸೇರಿಸಿದ ವಿತ್ತ ಸಚಿವರು, “ಸಿಲಿಕಾನ್ ವ್ಯಾಲಿ ಸ್ಟಾರ್ಟ್ಅಪ್ಗಳಲ್ಲಿ 25 ಪ್ರತಿಶತವನ್ನು ಭಾರತೀಯರು ನಿರ್ವಹಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ನಿಮ್ಮ ಕಾಲರ್ ಅನ್ನು ಮೇಲಕ್ಕೆತ್ತಿ” ಎಂದರು.
ಭಾರತದ ದುಡಿಯುವ ಜನಸಂಖ್ಯೆಯು 2028ರಲ್ಲಿ ಚೀನಾವನ್ನು ಹಿಂದಿಕ್ಕಲಿದೆ, 2019ರಿಂದ ವಿಶ್ವಸಂಸ್ಥೆಯ ಜನಸಂಖ್ಯೆಯ ಡೇಟಾವನ್ನು ಉಲ್ಲೇಖಿಸಿ ಸೀತಾರಾಮನ್ ಹೇಳಿದರು. “ಆ ದುಡಿಯುವ ವಯಸ್ಸಿನ ಜನಸಂಖ್ಯೆಯು 2036ರ ವೇಳೆಗೆ ಇಡೀ ಜನಸಂಖ್ಯೆಯ ಶೇ.65ರ ಮಟ್ಟವನ್ನು ತಲುಪಲಿದೆ” ಎಂದರು.
ದುಡಿಯುವ ವರ್ಗ ಹೆಚ್ಚಾದರೆ ಭಾರತದ ಜಿಡಿಪಿ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. “ದುಡಿಯುವ ವರ್ಗಕ್ಕೆ ತರಬೇತಿ ಮತ್ತು ಸಮಾನ ಅವಕಾಶಗಳನ್ನು ನೀಡಿದಾಗ ಮಾತ್ರ ಲಿಂಗ ಮತ್ತು ವರ್ಗವನ್ನು ಲೆಕ್ಕಿಸದೆ ಅವರು ದೇಶದ ಬೆಳವಣಿಗೆಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ವಿತ್ತ ಸಚಿವರು ಹೇಳಿದರು.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:41 pm, Mon, 12 September 22