ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸೇವೆಗಳನ್ನು ಸರಳಗೊಳಿಸಲು ವಿಭಿನ್ನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವ ಪ್ರಯತ್ನವಾಗಿ ಇಪಿಎಫ್‌ಒ ತನ್ನ ವಿವಿಧ ಸೇವೆಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ತರುವಲ್ಲಿ ನಿರತವಾಗಿದೆ. ಈಗ ಇಪಿಎಫ್‌ಒ ಸದಸ್ಯ ಪೋರ್ಟಲ್ – unifiedportal-mem.epfindia.gov.in/memberinterfaceನಲ್ಲಿ ಲಾಗ್ ಇನ್ ಮಾಡುವ ಮೂಲಕ ಸದಸ್ಯರು ಹೆಚ್ಚಿನ ಇಪಿಎಫ್‌ಒ ಸೇವೆಗಳನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು. ಇಪಿಎಫ್ ವರ್ಗಾವಣೆ ಆನ್‌ಲೈನ್ ಇಪಿಎಫ್‌ಒ ಸೇವೆಗಳಲ್ಲಿ ಒಂದಾಗಿದೆ. ಇದನ್ನು ಇಪಿಎಫ್‌ಒ ಸದಸ್ಯ ಪೋರ್ಟಲ್‌ನಲ್ಲಿ ಲಾಗ್ ಇನ್ ಆಗುವ ಮೂಲಕ ಆನ್‌ಲೈನ್‌ನಲ್ಲಿ ಮಾಡಬಹುದಾಗಿದೆ. ಭವಿಷ್ಯ ನಿಧಿ ಅಥವಾ ಪಿಎಫ್ ಖಾತೆ ವರ್ಗಾವಣೆಯನ್ನು ಆನ್‌ಲೈನ್‌ನಲ್ಲಿ ಹೆಚ್ಚು ಸರಳಗೊಳಿಸಲು ಇಪಿಎಫ್‌ಒ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ 6 ಸರಳ ಹಂತಗಳನ್ನು ಸೂಚಿಸಿದೆ.
ಈಗ ಇಪಿಎಫ್ ಖಾತೆದಾರನು ತಮ್ಮ ಹಿಂದಿನ ಮತ್ತು ಪ್ರಸ್ತುತ ಉದ್ಯೋಗದಾತರ ಕಚೇರಿಗೆ ಸುತ್ತಾಡದೆ ಪಿಎಫ್ ಖಾತೆಯನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಬಹುದು. ಇಪಿಎಫ್‌ಒ ಹೇಳಿಕೊಂಡಿರುವ ಪ್ರಕಾರ, 6 ಸರಳ ಹಂತಗಳನ್ನು ಅನುಸರಿಸಿದ ನಂತರ ಇಪಿಎಫ್ ಖಾತೆದಾರರು ನಿವೃತ್ತಿ ನಿಧಿಯಲ್ಲಿ ಹೂಡಿಕೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಭವಿಷ್ಯ ನಿಧಿ ನಿಯಂತ್ರಕ ಸಂಸ್ಥೆಯು ಇತ್ತೀಚೆಗೆ ಆನ್‌ಲೈನ್ ಇಪಿಎಫ್ ಖಾತೆ ವರ್ಗಾವಣೆಯ ಕುರಿತು ಟ್ವೀಟ್ ಮಾಡಿದ್ದು, ಇಪಿಎಫ್‌ಒ ಚಂದಾದಾರರಿಗೆ ಕೆಳಗೆ ತಿಳಿಸಲಾದ 6 ಸರಳ ಹಂತಗಳನ್ನು ಸಲಹೆ ಮಾಡಿದೆ:
1] ಇಪಿಎಫ್‌ಒ ಸದಸ್ಯ ಪೋರ್ಟಲ್‌ನಲ್ಲಿ ಲಾಗಿನ್ ಮಾಡಬೇಕು — unifiedportal-mem.epfindia.gov.in/memberinterface/ — ಮತ್ತು UAN ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಬೇಕು;
2] ‘ಆನ್‌ಲೈನ್ ಸರ್ವೀಸಸ್’ಗೆ ತೆರಳಿ ಮತ್ತು ‘ಒನ್ ಮೆಂಬರ್ ಒನ್ ಅಕೌಂಟ್(ವರ್ಗಾವಣೆ ವಿನಂತಿ)’ ಕ್ಲಿಕ್ ಮಾಡಬೇಕು;
3] ಪ್ರಸ್ತುತ ಉದ್ಯೋಗಕ್ಕಾಗಿ ‘ವೈಯಕ್ತಿಕ ಮಾಹಿತಿ’ ಮತ್ತು ‘PF ಖಾತೆ’ ಪರಿಶೀಲಿಸಬೇಕು;
4] ‘ವಿವರಗಳನ್ನು ಪಡೆಯಿರಿ’ನಲ್ಲಿ ಕ್ಲಿಕ್ ಮಾಡಬೇಕು, ಹಿಂದಿನ ಉದ್ಯೋಗದ ಪಿಎಫ್ ಖಾತೆಯ ವಿವರಗಳು ಕಾಣಿಸುತ್ತವೆ;
5] ಫಾರ್ಮ್ ಅನ್ನು ದೃಢೀಕರಿಸಲು ‘ಹಿಂದಿನ ಉದ್ಯೋಗದಾತ’ ಅಥವಾ ‘ಪ್ರಸ್ತುತ ಉದ್ಯೋಗದಾತ’ ಆಯ್ಕೆ ಮಾಡಬೇಕು; ಮತ್ತು
6] ನಿಮ್ಮ UAN ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಸ್ವೀಕರಿಸಲು ‘OTP ಪಡೆಯಿರಿ’ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. OTP ನಮೂದಿಸಿ ಮತ್ತು ‘ಸಲ್ಲಿಸು’ (Submit) ಬಟನ್ ಕ್ಲಿಕ್ ಮಾಡಬೇಕು.
ಆಯ್ಕೆ ಮಾಡಿದ ನೇಮಕಾತಿದಾರರಿಂದ ದೃಢೀಕರಣದ ನಂತರ ಇಪಿಎಫ್ಒದಿಂದ ಇಪಿಎಫ್ ಖಾತೆಯನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ಇಪಿಎಫ್ ಖಾತೆಯಲ್ಲಿ ಮಾಸಿಕ ಇಪಿಎಫ್ ಕೊಡುಗೆಯನ್ನು ಮುಂದುವರಿಸಲು ಮತ್ತು ನಿಮ್ಮ ಹೊಸ ಖಾತೆಯನ್ನು ಸಕ್ರಿಯಗೊಳಿಸುವುದಕ್ಕೆ ಸಾಧ್ಯಗೊಳಿಸುತ್ತದೆ.
ಇದನ್ನೂ ಓದಿ: EPFO: ಡಿಸೆಂಬರ್ ತಿಂಗಳ ಕೊನೆಯೊಳಗೆ ಇಪಿಎಫ್ ಚಂದಾದಾರರು ಈ ಜವಾಬ್ದಾರಿ ಪೂರ್ಣಗೊಳಿಸಿ