ಶೀಘ್ರದಲ್ಲೇ ಘೋಷಿಸಲಿರುವ ಡಿಯರ್ನೆಸ್ ಅಲೋವೆನ್ಸ್ (ಡಿಎ) ಹೆಚ್ಚಳದೊಂದಿಗೆ, ಕೇಂದ್ರ ಸರ್ಕಾರಿ ನೌಕರರ ಮಾಸಿಕ ವೇತನವು 3,000 ರೂಪಾಯಿಯಿಂದ 30,000 ರೂಪಾಯಿ ತನಕ ಏರಿಕೆ ಆಗಬಹುದು ಎಂದು ವರದಿಯೊಂದು ತಿಳಿಸಿದೆ. ಡಿಎ ಹೆಚ್ಚಳದ ನಂತರ ಮಾಸಿಕ ವೇತನ ಹೆಚ್ಚಳವು ನೌಕರರ ಆಯಾ ವೇತನ ಮಾಪಕಗಳನ್ನು ಅವಲಂಬಿಸಿರುತ್ತದೆ. ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಡಿಯರ್ನೆಸ್ ರಿಲೀಫ್ (ಡಿಆರ್) ಹೆಚ್ಚಳವನ್ನು ಸರ್ಕಾರ ಪ್ರಕಟಿಸುವ, ತಡೆ ಹಿಡಿದಿದ್ದ ಮೂರು ಕಂತುಗಳನ್ನು ಕೇಂದ್ರ ಸರ್ಕಾರವು ಮತ್ತೆ ಆರಂಭಿಸುವ ನಿರೀಕ್ಷೆಯಿದೆ. ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಜುಲೈ ಕಂತು ಡಿಎ/ ಡಿಆರ್ ಘೋಷಿಸುತ್ತದೆ. ಈ ಘೋಷಣೆಯ ಮೂಲಕ ಡಿಎ/ ಡಿಆರ್ ದರಗಳನ್ನು ನೌಕರರು ಮತ್ತು ಪಿಂಚಣಿದಾರರಿಗೆ ಕ್ರಮವಾಗಿ ಈಗಿರುವ ಮೂಲ ವೇತನದ ಶೇ 17ರಷ್ಟರಿಂದ ಶೇಕಡಾ 30ಕ್ಕೆ ಏರಿಕೆ ಆಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಮೂಲ ವೇತನ ಮತ್ತು ಪಿಂಚಣಿ ಆರಂಭಿಕವಾಗಿ 23,000 ರೂಪಾಯಿಗಳಿಂದ ಶುರುವಾಗಿ ಗರಿಷ್ಠ 2.25 ಲಕ್ಷ ರೂಪಾಯಿ ಆಗುತ್ತದೆ. ನಿರೀಕ್ಷಿತ ಡಿಎ ಮತ್ತು ಡಿಆರ್ ಹೆಚ್ಚಳದ ಕಾರಣಕ್ಕೆ ಹಬ್ಬದ ಋತುವಿಗೆ ಮುಂಚಿತವಾಗಿ ವೆಚ್ಚಕ್ಕೆ ಉತ್ತೇಜನ ನೀಡುತ್ತದೆ. ಡಿಎ ಮತ್ತು ಡಿಆರ್ ಹೆಚ್ಚಳ ಜುಲೈ 1ರಿಂದ ಜಾರಿಗೆ ಬರಲಿದೆ. ಡಿಎ ಮತ್ತು ಡಿಆರ್ ಹೆಚ್ಚಳದಿಂದ ಕೇಂದ್ರ ಸರ್ಕಾರದ ಬಜೆಟ್ ಮೇಲೆ ಸುಮಾರು 30,000 ಕೋಟಿ ರೂಪಾಯಿ ಪರಿಣಾಮ ಬೀರುತ್ತದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳು ಸಹ ತಮ್ಮ ಉದ್ಯೋಗಿಗಳಿಗೆ ಸುಮಾರು 60,000 ಕೋಟಿ ರೂಪಾಯಿಯಷ್ಟು ಡಿಎ/ಡಿಆರ್ ಹೆಚ್ಚಳವನ್ನು ಘೋಷಿಸುತ್ತವೆ. ಅಂದಹಾಗೆ ರಾಜ್ಯಗಳು ಸಾಮಾನ್ಯವಾಗಿ ಕೇಂದ್ರ ಸರ್ಕಾರವನ್ನು ಅನುಸರಿಸುತ್ತವೆ. 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಹೆಚ್ಚಳವನ್ನು ಜಾರಿಗೆ ತರಲಾಗಿದೆ. ಆದರೆ ಕೊವಿಡ್ನಿಂದಾಗಿ ಲಾಕ್‌ಡೌನ್ ಘೋಷಿಸಿದ ನಂತರದಲ್ಲಿ ಆರ್ಥಿಕ ಒತ್ತಡದಿಂದಾಗಿ ಸರ್ಕಾರವು 2020ರ ಜನವರಿಯಿಂದ 2021ರ ಜೂನ್ವರೆಗೆ ಡಿಎ ಮತ್ತು ಡಿಆರ್ ಅನ್ನು ಸ್ಥಗಿತಗೊಳಿಸಿತ್ತು.
ಭವಿಷ್ಯದ ಕಂತು ಡಿಎ ಮತ್ತು ಡಿಆರ್ ಬಾಕಿಗಳನ್ನು 2021ರ ಜುಲೈ 1ರಿಂದ ಬಿಡುಗಡೆ ಮಾಡುವ ನಿರ್ಧಾರವನ್ನು ಘೋಷಿಸಿದಾಗ ನಿರೀಕ್ಷಿತ ರೀತಿಯಲ್ಲಿ ಮತ್ತೆ ಆರಂಭಿಸಲಾಗುವುದು ಎಂದು ಕಚೇರಿ ಮೆಮೊರಂಡಂನಲ್ಲಿ ಏಪ್ರಿಲ್ 23, 2020ರಂದು ಹಣಕಾಸು ಸಚಿವಾಲಯ ಕಚೇರಿ ಜ್ಞಾಪಕ ಪತ್ರದಲ್ಲಿ ತಿಳಿಸಿತ್ತು. “ಜುಲೈ 1, 2021ರಿಂದ ಭವಿಷ್ಯದ ಕಂತು ಡಿಎ ಮತ್ತು ಡಿಆರ್ ಅನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಾಗ, ಡಿಎ ಮತ್ತು ಡಿಆರ್ ದರಗಳು ಜನವರಿ 1, 2020, ಜುಲೈ 2020 ಮತ್ತು ಜನವರಿ 1, 2021 ರಿಂದ ಜಾರಿಗೆ ಬರುತ್ತವೆ. ಜುಲೈ 1, 2021 ರಿಂದ ಜಾರಿಗೆ ಬರುವ ಸಂಚಿತ ಪರಿಷ್ಕೃತ ದರದಲ್ಲಿ ಕ್ಯುಮಲೇಟಿವ್ ಲೆಕ್ಕದಲ್ಲಿ ನೀಡಲು ಮತ್ತೆ ಆರಂಭಿಸಲಾಗುವುದು,” ಎಂದು ಹಣಕಾಸು ಸಚಿವಾಲಯ ಹೇಳಿದೆ.
ಡಿಎ ಮತ್ತು ಡಿಆರ್ ಎಂದರೇನು?
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತಮ್ಮ ಸಂಬಳ/ಪಿಂಚಣಿಯ ಭಾಗವಾಗಿ ಕ್ರಮವಾಗಿ ಡಿಎ ಮತ್ತು ಡಿಆರ್ ಅನ್ನು 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಪಡೆಯುತ್ತಾರೆ. ಹಣದುಬ್ಬರದ ಪ್ರಭಾವವನ್ನು ಸರಿದೂಗಿಸಲು ಡಿಎ ಮತ್ತು ಡಿಆರ್ ಒದಗಿಸಲಾಗಿದೆ.
ಡಿಎ ಹೆಚ್ಚಳ ದಿನಾಂಕ: ಡಿಎ / ಡಿಆರ್ ಹೆಚ್ಚಳವನ್ನು ಯಾವಾಗ ನಿರೀಕ್ಷಿಸಬಹುದು?
ವರದಿಯ ಪ್ರಕಾರ, ಜುಲೈ 1 ರಿಂದ ಜಾರಿಗೆ ಬರುವ ದರಗಳನ್ನು ಎರಡು-ಮೂರು ತಿಂಗಳ ಬಾಕಿಯೊಂದಿಗೆ ದಸರಾ (ಅಕ್ಟೋಬರ್ 15) ಮೊದಲು ಪಾವತಿಸಬಹುದು. ಇದರಿಂದಾಗಿ ಖರ್ಚು ಮಾಡುವುದಕ್ಕೆ ನೌಕರರ ಬಳಿ ಉತ್ತಮ ಮೊತ್ತವನ್ನು ಒದಗಿಸುತ್ತದೆ. ಸದ್ಯಕ್ಕೆ 48.3 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65.3 ಲಕ್ಷ ಪಿಂಚಣಿದಾರರಿದ್ದಾರೆ.
ಇದನ್ನೂ ಓದಿ: 7th Pay Commission: ಕೇಂದ್ರದಿಂದ ಉದ್ಯೋಗಿಗಳಿಗೆ ಡಿಎ, ಡಿಆರ್ ಬಾಕಿ ಪಾವತಿ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರ
( According to report, after 7th pay commission DA/DR hike central govt employees and pensioners DA/DR likely to hike Rs 3000 to Rs 30,000)