ಏಳನೇ ವೇತನ ಆಯೋಗ: ಕೇಂದ್ರ ಸರ್ಕಾರದಿಂದ ಆರು ಪ್ರಮುಖ ಭತ್ಯೆ ಪರಿಷ್ಕರಣೆ; ಇಲ್ಲಿದೆ ಡೀಟೇಲ್ಸ್

7th Pay Commission, Allowance Updates: ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಇತ್ತೀಚೆಗೆ ಆರು ಭತ್ಯೆಗಳ ಪರಿಷ್ಕರಣೆ ಮಾಡಲಾಗಿದೆ. ಮಕ್ಕಳ ಶಿಕ್ಷಣ ವೆಚ್ಚಕ್ಕೆ ಶೇ. 25ರಷ್ಟು ಭತ್ಯೆ ಕೊಡಲಾಗಿದೆ. ವಿಶೇಷ ಚೇತನದ ಮಹಿಳಾ ಉದ್ಯೋಗಿಗಳ ಮಕ್ಕಳ ಪಾಲನೆಗೆ ತಿಂಗಳಿಗೆ 3,000 ರೂ ಭತ್ಯೆ ಕೊಡಲಾಗುತ್ತಿದೆ. ಓವರ್​ಟೈಮ್ ಅಲೋಯನ್ಸ್, ನೈಟ್ ಡ್ಯೂಟಿ ಅಲೋಯನ್ಸ್ ಇತ್ಯಾದಿ ಕೆಲ ಭತ್ಯೆಗಳನ್ನು ಪರಿಷ್ಕರಿಸಲಾಗಿದೆ.

ಏಳನೇ ವೇತನ ಆಯೋಗ: ಕೇಂದ್ರ ಸರ್ಕಾರದಿಂದ ಆರು ಪ್ರಮುಖ ಭತ್ಯೆ ಪರಿಷ್ಕರಣೆ; ಇಲ್ಲಿದೆ ಡೀಟೇಲ್ಸ್
ಏಳನೇ ವೇತನ ಆಯೋಗ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 07, 2024 | 2:14 PM

ನವದೆಹಲಿ, ಏಪ್ರಿಲ್ 7: ನೀವು ಕೇಂದ್ರ ಸರ್ಕಾರದ ಉದ್ಯೋಗಿಯಾಗಿದ್ದರೆ ಖುಷಿ ಸುದ್ದಿ. ಏಳನೇ ವೇತನ ಆಯೋಗದ (7th Pay Commission) ಅಡಿಯಲ್ಲಿ ಕೇಂದ್ರ ಸರ್ಕಾರ ಆರು ಪ್ರಮುಖ ಭತ್ಯೆಗಳನ್ನು ಪರಿಷ್ಕರಿಸಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಭತ್ಯೆ ಪರಿಷ್ಕರಣೆಯ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಮಕ್ಕಳ ಶಿಕ್ಷಣ, ರಾತ್ರಿ ಪಾಳಿ, ಓವರ್ ಟೈಮ್ ಡ್ಯೂಟಿ ಭತ್ಯೆಯೂ ಇದರಲ್ಲಿ ಒಳಗೊಂಡಿದೆ. ಮಹಿಳೆಯರಿಗೆ ನೀಡಲಾಗುವ ವಿಶೇಷ ಭತ್ಯೆಯಲ್ಲಿ ಬದಲಾವಣೆ ಮಾಡಲಾಗಿದೆ. ಅಪಾಯಕಾರಿ ಎನಿಸುವ ಕೆಲಸಗಳನ್ನು ಮಾಡುವವರಿಗೆ ನೀಡಲಾಗುವ ಭತ್ಯೆಯಲ್ಲೂ ಪರಿಷ್ಕರಣೆ ಮಾಡಲಾಗಿದೆ. ಪರಿಷ್ಕರಿಸಲಾಗಿರುವ ಆರು ಭತ್ಯೆಗಳ ವಿವರ ಇಲ್ಲಿದೆ.

ಮಕ್ಕಳ ಶಿಕ್ಷಣ ಭತ್ಯೆ

ಉದ್ಯೋಗಿಯ ಮಗು ಶಿಕ್ಷಣ ಅಥವಾ ಹಾಸ್ಟಲ್ ವೆಚ್ಚಕ್ಕೆ ಶೇ. 25ರಷ್ಟು ಭತ್ಯೆ ನೀಡಲಾಗುತ್ತದೆ. ಇಬ್ಬರು ಮಕ್ಕಳಿಗೆ ಈ ಅವಕಾಶ ಇರುತ್ತದೆ. ಮಗು ವಿಶೇಷಚೇತನದ್ದಾಗಿದ್ದರೆ ಭತ್ಯೆ ಪ್ರಮಾಣ ಎರಡು ಪಟ್ಟು ಹೆಚ್ಚುತ್ತದೆ.

ರಿಸ್ಕ್ ಅಲೋಯನ್ಸ್

ಅಪಾಯಕಾರಿ ಎನಿಸುವ ಕೆಲಸ ಅಥವಾ ಕರ್ತವ್ಯ ಮಾಡುವ ಉದ್ಯೋಗಿಗಳಿಗೆ ರಿಸ್ಕ್ ಅಲೋಯನ್ಸ್ ಇರುತ್ತದೆ. ಏಪ್ರಿಲ್ 2ರಂದು ಈ ಭತ್ಯೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ನಿಮ್ಮ ಹೂಡಿಕೆ ಹೇಗಿರಬೇಕು, ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

ನೈಟ್ ಡ್ಯೂಟಿ ಭತ್ಯೆ

ತಿಂಗಳಿಗೆ 43,600 ಮೂಲ ವೇತನ ಪಡೆಯುತ್ತಿರುವ ಸರ್ಕಾರಿ ಉದ್ಯೋಗಿಗಳಿಗೆ ನೀಡಲಾಗುವ ನೈಟ್ ಡ್ಯೂಟಿ ಅಲೋಯನ್ಸ್ ಅನ್ನು ಪರಿಷ್ಕರಿಸಲಾಗಿದೆ.

ವಿಶೇಷ ಭತ್ಯೆ

ಸಂಸತ್ ಅಧಿವೇಶನದ ಸಂದರ್ಭದಲ್ಲಿ ಸಂಪೂರ್ಣವಾಗಿ ಸಂಸದೀಯ ಕರ್ತವ್ಯದಲ್ಲಿ ತೊಡಗುವ ಸಹಾಯಕರಿಗೆ ವಿಶೇಷ ಭತ್ಯೆ ನೀಡಲಾಗುತ್ತಿದೆ. ಇದನ್ನೂ ಪರಿಷ್ಕರಿಸಲಾಗಿದೆ.

ಓವರ್ ಟೈಮ್ ಅಲೋಯನ್ಸ್

ಹೆಚ್ಚುವರಿ ಅವಧಿ ಕೆಲಸ ಮಾಡುವ ಅಥವಾ ಓವರ್​ಟೈಮ್ ಡ್ಯೂಟಿಗೆ ಅಲೋಯನ್ಸ್ ಪಡೆಯಲು ಅರ್ಹರಿರುವ ಸಿಬ್ಬಂದಿಯ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಮೂಲಕ ಓವರ್​ಟೈಮ್ ಡ್ಯೂಟಿ ವಿಧಾನಗಳನ್ನು ಪರಿಷ್ಕರಿಸಲಾಗುತ್ತಿದೆ.

ಇದನ್ನೂ ಓದಿ: ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಬಾರಿಗೆ ಮೈಸೂರಿನ ಉದ್ಯಮಿ ರಮೇಶ್​ಗೆ ಸ್ಥಾನ; ಚಂದ್ರಯಾನಕ್ಕೆ ಕೊಡುಗೆ ಕೊಟ್ಟಿದ್ದರ ಫಲಶ್ರುತಿ

ವಿಶೇಷಚೇತನ ಮಹಿಳಾ ಉದ್ಯೋಗಿಗಳಿಗೆ ಭತ್ಯೆ

ವಿಶೇಷ ಚೇತನದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 3,000 ರೂ ವಿಶೇಷ ಭತ್ಯೆ ನೀಡಲಾಗುತ್ತದೆ. ಅದರಲ್ಲೂ ವಿಶೇಷ ಚೇತನದ ಮಕ್ಕಳನ್ನು ಹೊಂದಿರುವ ಇಂಥ ಮಹಿಳಾ ಉದ್ಯೋಗಿಗಳಿಗೆ ಈ ಹೆಚ್ಚುವರಿ ಧನಸಹಾಯ ನೀಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ