8 Years Of Narendra Modi Government: ನವೀಕೃತ ಇಂಧನದಲ್ಲಿ ನರೇಂದ್ರ ಮೋದಿ ಸರ್ಕಾರದ ಎತ್ತರದ ಸಾಧನೆ

Narendra Modi Govt. Schemes: ಕಳೆದ ಎಂಟು ವರ್ಷಗಳಲ್ಲಿ, ನರೇಂದ್ರ ಮೋದಿ ಸರ್ಕಾರವು ನವೀಕೃತ ಇಂಧನ ವಿಚಾರದಲ್ಲಿ ಮಹತ್ತರವಾದ ಸಾಧನೆ ಮಾಡಿದೆ.

8 Years Of Narendra Modi Government: ನವೀಕೃತ ಇಂಧನದಲ್ಲಿ ನರೇಂದ್ರ ಮೋದಿ ಸರ್ಕಾರದ ಎತ್ತರದ ಸಾಧನೆ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on:May 25, 2022 | 1:27 PM

ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದು, ಎಂಟು ವರ್ಷಗಳನ್ನು ಪೂರ್ಣಗೊಳಿಸಿದೆ. ದೇಶದ ಎಲ್ಲ ವಲಯದಲ್ಲೂ ಬೆಳವಣಿಗೆ ಸಾಧಿಸಿರುವುದು ಒಂದು ಕಡೆಗಾದರೆ, ಈ ಅವಧಿಯಲ್ಲಿ ಹವಾಮಾನ ಬದಲಾವಣೆಯು ಆಧುನಿಕ ಕಾಲದ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಈ ನಿರ್ಣಾಯಕ ವಿದ್ಯಮಾನದಲ್ಲಿ ಭಾರತದ ಸ್ಥಿತಿಯು 2015ನೇ ಇಸವಿಯ ತನಕ ಇನ್ನೂ ವಿಕಸನಗೊಳ್ಳುತ್ತಲೇ ಇತ್ತು. ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 1980ರಲ್ಲಿ 0 ಮೆಗಾ ವಾಟ್​ನಿಂದ 2013 ರಲ್ಲಿ 27,542 ಮೆಗಾವಾಟ್​ಗೆ ಏರಿತು. ಮತ್ತು ಕಳೆದ 8 ವರ್ಷಗಳಲ್ಲಿ ಇದು 1,56,608 ಮೆಗಾವಾಟ್​ಗೆ ಹೆಚ್ಚಾಗಿದೆ. ಅಂದರೆ ಶೇ 460ಕ್ಕಿಂತ ಹೆಚ್ಚಿದೆ. ಮುಖ್ಯವಾಗಿ ಭಾರತವು ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ಹೊರಗೆ ನೋಡುವ ರಾಷ್ಟ್ರವಾಗಿದ್ದ ಸ್ಥಿತಿಯಿಂದ ಈಗ ಬದಲಾವಣೆ ಕಂಡಿದೆ. ಅದು ಈಗ ಭಾರತದಲ್ಲಿ ನಿರ್ಮಿತ ಸಂಪನ್ಮೂಲಗಳು ಮತ್ತು ಮನೆಯಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಸಾಮರ್ಥ್ಯವನ್ನು ಸೃಷ್ಟಿಸುವ ಮತ್ತು ನಿರ್ಮಿಸುವತ್ತ ಗಮನಹರಿಸಿದೆ.

2015ರಲ್ಲಿ ಭಾರತದ ರಾಷ್ಟ್ರೀಯ ವಿದ್ಯುತ್ ಯೋಜನೆ ಚಾಲನೆ ಮೂಲಕ ನವೀಕರಿಸಬಹುದಾದ ಇಂಧನ ವಲಯವನ್ನು ಉತ್ತೇಜಿಸುವ ಪ್ರಯತ್ನವನ್ನು ಪ್ರಾರಂಭಿಸಿತು. ಅದೇ ವರ್ಷದಲ್ಲಿ 2021-22ರ ರಾಷ್ಟ್ರೀಯ ಸೌರ ಮಿಷನ್‌ನ ಗುರಿಯನ್ನು 20,000 ಮೆಗಾವಾಟ್​ನಿಂದ 1,00,000 ಮೆಗಾವಾಟ್​ಗೆ ಪರಿಷ್ಕರಿಸಲಾಯಿತು – ಅಂದರೆ ಐದು ಪಟ್ಟು ಹೆಚ್ಚಳ ಆದಂತಾಯಿತು. ಪ್ಯಾರಿಸ್ ಹವಾಮಾನ ಒಪ್ಪಂದದ ಗುರಿಗಳಿಗೆ ಸಂಬಂಧಿಸಿದಂತೆ ಭಾರತವು ನಿರೀಕ್ಷೆಗಳನ್ನು ಮೀರಿದೆ ಎಂಬುದು ಇನ್ನೂ ಹೆಚ್ಚು ಸಂತೋಷಕರ ಸಂಗತಿಯಾಗಿದೆ. ಮೋದಿ ಅಧಿಕಾರಾವಧಿಯಲ್ಲಿ ಭಾರತದಲ್ಲಿ ನವೀಕರಿಸಬಹುದಾದ ಇಂಧನ (RE) ಉತ್ಪಾದನೆಯನ್ನು ಹೆಚ್ಚಿಸಲು PM-KUSUM ಮತ್ತು ಆನ್‌ಲೈನ್ ಪೋರ್ಟಲ್‌ಗಳಿಗಾಗಿ ಸೌರ-PV ಸ್ಥಾಪನೆಗೆ (SPIN) ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ.

ವರ್ಷಪೂರ್ತಿ ಸೂರ್ಯನ ಬೆಳಕನ್ನು ಹೊಂದಿರುವ ಭಾರತವು ಸೌರ ಶಕ್ತಿಯನ್ನು 55,000 MW (ಒಟ್ಟು ಸಾಮರ್ಥ್ಯದ ಶೇ 13.8) ಸ್ಥಾಪಿತ ಸಾಮರ್ಥ್ಯದೊಂದಿಗೆ REಯ ಅತಿದೊಡ್ಡ ಮತ್ತು ಆದ್ಯತೆ ಮೂಲವನ್ನಾಗಿ ಮಾಡುತ್ತದೆ. ಕಳೆದ 8 ವರ್ಷಗಳಲ್ಲಿ ಸ್ಥಾಪಿಸಲಾದ ಸೌರಶಕ್ತಿ ಸಾಮರ್ಥ್ಯವು 17 ಪಟ್ಟು ಹೆಚ್ಚಾಗಿದೆ. ಗಮನಾರ್ಹವಾಗಿ, 2014ರಿಂದ ಸೌರ ವಿದ್ಯುತ್ ದರವು ಶೇ 70ರಷ್ಟು ಕಡಿತವನ್ನು ಕಂಡಿದೆ. 2014-15ರಲ್ಲಿ ಸೌರ ಶಕ್ತಿಯ ಪ್ರತಿ/KWHಗೆ ರೂ. 6.17 ಇತ್ತು. ಆದರೆ 2020-21ರಲ್ಲಿ ಇದು 1.99/KWHಗೆ ಇಳಿದಿದೆ.

ಪ್ರಪಂಚದ ಎಲ್ಲ ದೊಡ್ಡ ಆರ್ಥಿಕತೆಗಳಲ್ಲಿ ಭಾರತವು ಕಳೆದ 8 ವರ್ಷಗಳಲ್ಲಿ RE ಸಾಮರ್ಥ್ಯದ ಸೇರ್ಪಡೆಯಲ್ಲಿ ವೇಗದ ಬೆಳವಣಿಗೆಯನ್ನು ಕಂಡಿದೆ. ಈ ಅವಧಿಯಲ್ಲಿ ಸೌರ ಶಕ್ತಿ ಸಾಮರ್ಥ್ಯವು 18 ಪಟ್ಟು ಹೆಚ್ಚಾಗಿದೆ, ಆದರೆ ನವೀಕೃತ ಇಂಧನ ಸಾಮರ್ಥ್ಯವು (ದೊಡ್ಡ ಜಲವಿದ್ಯುತ್ ಯೋಜನೆಗಳನ್ನು ಒಳಗೊಂಡಂತೆ) 1.97 ಪಟ್ಟು ಹೆಚ್ಚಾಗಿದೆ. ಪ್ಯಾರಿಸ್ (2015)ನಲ್ಲಿ COP 21ನಲ್ಲಿ ಭಾರತವು 2030ರ ವೇಳೆಗೆ ತನ್ನ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ 40ರಷ್ಟು ಕೊಡುಗೆ ನೀಡುವ ಫಾಸಿಲ್ ರಹಿತ ಇಂಧನ ಮೂಲಗಳಿಗೆ ಸಹಿ ಹಾಕಿದೆ. ಸಂತೋಷದ ಸಂಗತಿಯೆಂದರೆ, ರಾಷ್ಟ್ರವು 2021ರಲ್ಲಿ ಈ ಗುರಿಯನ್ನು ಗಡುವಿನ ಒಂಬತ್ತು ವರ್ಷಗಳ ಮುಂಚಿತವಾಗಿ ಸಾಧಿಸಿದೆ. ಈಗ, ಭಾರತವು 2030ರ ವೇಳೆಗೆ 500 GW ಸ್ಥಾಪಿತ ನವೀಕೃತ ಇಂಧನ ಸಾಮರ್ಥ್ಯದ ಗುರಿಯನ್ನು ಹೊಂದಿದೆ. ಇಂದು, ರಾಷ್ಟ್ರದ ವಿದ್ಯುತ್ ಬೇಡಿಕೆಯ ಶೇ 39.2ರಷ್ಟು ನವೀಕೃತ ಇಂಧನ ಮೂಲಗಳಿಂದ ಪೂರೈಸಲ್ಪಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: 8 Years Of Modi Government: ನರೇಂದ್ರ ಮೋದಿ ನೇತೃತ್ವ ಸರ್ಕಾರದ ಡಿಜಿಟಲ್ ಕ್ರಾಂತಿ; ಎಂಟು ವರ್ಷದಲ್ಲಿ ಎಷ್ಟೆಲ್ಲ ಬದಲಾವಣೆ!

Published On - 1:27 pm, Wed, 25 May 22

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ