ಆಧಾರ್ ಕಾರ್ಡ್ ಉಚಿತವಾಗಿ ಅಪ್​ಡೇಟ್ ಮಾಡುವ ಡೆಡ್​ಲೈನ್, ಸೆ. 14ರಿಂದ ಡಿ. 14ಕ್ಕೆ ವಿಸ್ತರಣೆ

|

Updated on: Sep 15, 2024 | 10:48 AM

Aadhaar card free document update: ಹತ್ತು ವರ್ಷಗಳಿಂದ ಯಾವುದೇ ಅಪ್​ಡೇಟ್ ಮಾಡದೇ ಇರುವ ಆಧಾರ್ ಕಾರ್ಡ್ ಅನ್ನು ಅಪ್​ಡೇಟ್ ಮಾಡಬೇಕು ಎಂದು ಸೂಚಿಸಲಾಗಿದೆ. ಐಡಿ ಪ್ರೂಫ್, ಅಡ್ರೆಸ್ ಪ್ರೂಫ್​ನ ಇತ್ತೀಚಿನ ದಾಖಲೆಗಳಿದ್ದರೆ ಅದನ್ನು ಆಧಾರ್ ಡಾಟಾಬೇಸ್​ಗೆ ಅಪ್​ಲೋಡ್ ಮಾಡಬೇಕು. ಆನ್​ಲೈನ್​ನಲ್ಲಿ ಉಚಿತವಾಗಿ ಈ ಕೆಲಸ ಮಾಡಬಹುದು. ಇದಕ್ಕೆ ಇರುವ ಗಡುವನ್ನು ಸೆ. 14ರಿಂದ ಡಿ. 14ಕ್ಕೆ ವಿಸ್ತರಿಸಲಾಗಿದೆ.

ಆಧಾರ್ ಕಾರ್ಡ್ ಉಚಿತವಾಗಿ ಅಪ್​ಡೇಟ್ ಮಾಡುವ ಡೆಡ್​ಲೈನ್, ಸೆ. 14ರಿಂದ ಡಿ. 14ಕ್ಕೆ ವಿಸ್ತರಣೆ
ಆಧಾರ್
Follow us on

ನವದೆಹಲಿ, ಸೆಪ್ಟೆಂಬರ್ 15: ಆಧಾರ್ ಕಾರ್ಡ್ ಅನ್ನು ಆನ್​ಲೈನ್​​ನಲ್ಲಿ ಯಾವುದೇ ಶುಲ್ಕ ಇಲ್ಲದೇ ಅಪ್​​ಡೇಟ್ ಮಾಡುವ ಅವಕಾಶವನ್ನು ವಿಸ್ತರಿಸಲಾಗಿದೆ. ಡೆಡ್​ಲೈನ್ ಮತ್ತೊಮ್ಮೆ ವಿಸ್ತರಣೆ ಆಗಿದೆ. ಸೆಪ್ಟೆಂಬರ್ 14ರವರಗೆ ಇದ್ದ ಗಡುವನ್ನು ಡಿಸೆಂಬರ್ 14ರವರೆಗೂ ಮುಂದುವರಿಸಲಾಗಿದೆ. ಯುಐಡಿಎಐನಿಂದ ಈ ಬಗ್ಗೆ ಎಕ್ಸ್ ಪೋಸ್ಟ್​ನಲ್ಲಿ ಮಾಹಿತಿ ಪ್ರಕಟವಾಗಿದೆ. ಆಧಾರ್ ನಂಬರ್ ಹೊಂದಿರುವ ಕೋಟ್ಯಂತರ ಜನರಿಗೆ ಅನುಕೂಲವಾಗಲೆಂದು ಆನ್​ಲೈನ್​ನಲ್ಲಿ ಉಚಿತವಾಗಿ ಡಾಕ್ಯುಮೆಂಟ್ ಅಪ್​ಲೋಡ್ ಸೌಲಭ್ಯವನ್ನು ಡಿಸೆಂಬರ್ 14ರವರೆಗೂ ವಿಸ್ತರಿಸಲಾಗಿದೆ. ಈ ಉಚಿತ ಸರ್ವಿಸ್ ಮೈ ಆಧಾರ್ ಪೋರ್ಟಲ್​ನಲ್ಲಿ ಮಾತ್ರ ಲಭ್ಯ ಇರುತ್ತದೆ. ಜನರು ಆಧಾರ್​ನಲ್ಲಿ ತಮ್ಮ ದಾಖಲೆಗಳನ್ನು ಅಪ್​ಡೇಟೆಡ್ ಆಗಿ ಇಟ್ಟುಕೊಳ್ಳಲು ಯುಐಡಿಎಐ ಉತ್ತೇಜಿಸುತ್ತದೆ ಎಂದು ಎಕ್ಸ್ ಪೋಸ್ಟ್​ನಲ್ಲಿ ತಿಳಿಸಲಾಗಿದೆ.

ಆಧಾರ್​ನಲ್ಲಿ ಡೆಮಾಗ್ರಾಫಿಕ್ ಮಾಹಿತಿಯನ್ನು ಅಪ್​ಡೇಟ್ ಮಾಡಬಹುದು. ಅದಕ್ಕೆ, ನಿಮ್ಮ ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್​ನ ದಾಖಲೆಗಳನ್ನು ಅಪ್​ಲೋಡ್ ಮಾಡಬೇಕು. ಯುಐಡಿಎಐನ ಮೈ ಆಧಾರ್ ಪೋರ್ಟಲ್​ಗೆ ಹೋಗಿ ದಾಖಲೆಗಳನ್ನು ಅಪ್​ಲೋಡ್ ಮಾಡುವ ಮೂಲಕ ನಿಮ್ಮ ಆಧಾರ್​ನ ಡೆಮಾಗ್ರಾಫಿಕ್ ಮಾಹಿತಿಯನ್ನು ಅಪ್​ಡೇಟ್ ಮಾಡಬಹುದು.

ಡಿಸೆಂಬರ್ 14ರ ಬಳಿಕವೂ ನೀವು ಆನ್​ಲೈನ್​ನಲ್ಲಿ ಆಧಾರ್ ಡಾಕ್ಯುಮೆಂಟ್ ಅಪ್​ಡೇಟ್ ಮಾಡಬಹುದಾದರೂ ಅದಕ್ಕೆ ಶುಲ್ಕ ನೀಡಬೇಕಾಗುತ್ತದೆ. ಆಧಾರ್ ಸೆಂಟರ್​ಗೆ ಹೋಗಿಯೂ ನೀವು ಅಪ್​ಡೇಟ್ ಮಾಡಿಸಬಹುದು. ಮನೆಯಲ್ಲೆ ಕೂತು ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಲು ಡಿಸೆಂಬರ್ 14ರವರೆಗೂ ಇರುವ ಅವಕಾಶವನ್ನು ಬಳಸಿಕೊಳ್ಳಬಹುದು.

ಇದನ್ನೂ ಓದಿ: ಐದು ಲಕ್ಷ ಕವರೇಜ್ ನೀಡುವ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್​ಗೆ ಅರ್ಜಿ ಸಲ್ಲಿಕೆ, ಅರ್ಹತೆ, ದಾಖಲೆ ಇತ್ಯಾದಿ ವಿವರ

ಆಧಾರ್ ಅಪ್​ಡೇಟ್ ಯಾಕೆ ಮಾಡಬೇಕು?

ಹತ್ತು ವರ್ಷಗಳಿಂದ ಯಾರಾದರೂ ತಮ್ಮ ಆಧಾರ್ ಅನ್ನು ಅಪ್​ಡೇಟ್ ಮಾಡಿಸಿಲ್ಲದೇ ಇದ್ದರೆ ಅಂಥವರು ಇತ್ತೀಚಿನ ದಾಖಲೆಗಳಿದ್ದರೆ ಅದನ್ನು ಅಪ್​ಲೋಡ್ ಮಾಡಬೇಕು ಎಂದು ಯುಐಡಿಎಐ ತಿಳಿಸಿದೆ. ಡೆಮಾಗ್ರಾಫಿಕ್ ಮಾಹಿತಿ ಹೆಚ್ಚು ನಿಖರವಾಗಿರಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಆಧಾರ್ ಸಂಬಂಧಿತ ಸೇವೆಯನ್ನು ನಿಖರಗೊಳಿಸಲು ಮತ್ತು ಅಥೆಂಟಿಕೇಶನ್ ಕಾರ್ಯವನ್ನು ಹೆಚ್ಚು ನಿಖರಗೊಳಿಸಲು ಸಾಧ್ಯವಾಗುತ್ತದೆ.

ಆಧಾರ್ ಅಪ್​ಡೇಟ್​ಗೆ ಯಾವ ದಾಖಲೆಗಳನ್ನು ಅಪ್​ಲೋಡ್ ಮಾಡಬೇಕೆಂದು ತಿಳಿಯಲು ಈ ಆರ್ಟಿಲ್ ಲಿಂಕ್ ಕ್ಲಿಕ್ ಮಾಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ