ಐದು ಲಕ್ಷ ಕವರೇಜ್ ನೀಡುವ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್​ಗೆ ಅರ್ಜಿ ಸಲ್ಲಿಕೆ, ಅರ್ಹತೆ, ದಾಖಲೆ ಇತ್ಯಾದಿ ವಿವರ

Ayushman Bharat PM JAY health insurance scheme details: ಪಿಎಂ ಜನ್ ಆರೋಗ್ಯ ಯೋಜನೆಯ ವ್ಯಾಪ್ತಿಗೆ ಈಗ 70 ವರ್ಷ ಮೇಲ್ಪಟ್ಟ ವೃದ್ಧರನ್ನು ತರಲಾಗುತ್ತಿದೆ. ಬಡವರು, ನಿರ್ಗತಿಕರು, ಎಸ್​ಸಿ ಎಸ್​ಟಿ ಇತ್ಯಾದಿ ದುರ್ಬಲ ಜನರಿಗೆ ಮಾತ್ರ ಈ ಸ್ಕೀಮ್ ಸೀಮಿತವಾಗಿತ್ತು. ಈಗ ಯಾವುದೇ ವರ್ಗದ ಹಿರಿಯ ನಾಗರಿಕರೂ ಈ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ ಪಡೆಯಬಹುದು. ಒಂದು ಕುಟುಂಬಕ್ಕೆ 5 ಲಕ್ಷ ರೂ ವಾರ್ಷಿಕವಾಗಿ ಕವರೇಜ್ ನೀಡುವ ಈ ಇನ್ಷೂರೆನ್ಸ್ ಯೋಜನೆ ಉಚಿತವಾಗಿ ಸಿಗುತ್ತದೆ.

ಐದು ಲಕ್ಷ ಕವರೇಜ್ ನೀಡುವ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್​ಗೆ ಅರ್ಜಿ ಸಲ್ಲಿಕೆ, ಅರ್ಹತೆ, ದಾಖಲೆ ಇತ್ಯಾದಿ ವಿವರ
ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 12, 2024 | 11:30 AM

ನವದೆಹಲಿ, ಸೆಪ್ಟೆಂಬರ್ 12: ಕೆಲ ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯನ್ನು 70 ವರ್ಷ ಮೇಲ್ಪಟ್ಟ ಎಲ್ಲಾ ವ್ಯಕ್ತಿಗಳಿಗೂ ವಿಸ್ತರಿಸಲು ಕೇಂದ್ರ ಸಂಪುಟ ನಿನ್ನೆ ಅನುಮೋದನೆ ಕೊಟ್ಟಿದೆ. ಇದು ಅಂದಾಜು ಆರು ಕೋಟಿ ಸಂಖ್ಯೆಯಲ್ಲಿರುವ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. ಇವರೆಲ್ಲರಿಗೂ ಉಚಿತವಾಗಿ ವರ್ಷಕ್ಕೆ ಐದು ಲಕ್ಷ ರೂ ಆರೋಗ್ಯ ವಿಮಾ ಕವರೇಜ್ ಸಿಗುತ್ತದೆ.

ಆಯುಷ್ಮಾನ್ ಭಾರತ್ ಹೆಲ್ತ್ ಸ್ಕೀಮ್​ಗೆ ಯಾರೆಲ್ಲಾ ಅರ್ಹರು?

ಬಡವರು, ಹಿಂದುಳಿದವರು, ನಿರ್ಗತಿಕರು, ಅನಾಥರು, ದುರ್ಬಲ ವರ್ಗದವರಿಗೆಂದು ಸರ್ಕಾರ 2018ರಲ್ಲಿ ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯನ್ನು ಆರಂಭಿಸಿತು. ಈ ಸ್ಕೀಮ್ ಪಡೆಯುವ ವ್ಯಕ್ತಿಗಳು ಈ ಕೆಳಗಿನ ಯಾವುದಾದರೂ ಒಂದು ಮಾನದಂಡವಾದರೂ ಹೊಂದಿರಬೇಕು.

  • ಮಣ್ಣಿನ ಮನೆಯಲ್ಲಿ ವಾಸಿಸುತ್ತಿರುವವರು
  • 16ರಿಂದ 59 ವರ್ಷದ ವಯಸ್ಸಿನ ಯಾವ ವ್ಯಕ್ತಿಗಳೂ ಕುಟುಂಬದಲ್ಲಿ ಇಲ್ಲದೇ ಇದ್ದರೆ
  • 16ರಿಂದ 59 ವರ್ಷದ ಯಾವ ಪುರುಷ ವ್ಯಕ್ತಿಯೂ ಕುಟುಂಬದಲ್ಲಿ ಇಲ್ಲದೇ ಇದ್ದರೆ
  • ವಿಶೇಷ ಚೇತನರಿರುವ ಕುಟುಂಬ
  • ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳು
  • ಭೂಮಿ ಹೊಂದಿಲ್ಲದ ಕುಟುಂಬ, ಹಾಗೂ ಕೂಲಿಯೇ ಪ್ರಮುಖ ಆದಾಯ ಮೂಲ ಇರುವ ಕುಟುಂಬ

ಈ ಮೇಲಿನ ಅಂಶಗಳಲ್ಲಿ ಕನಿಷ್ಠ ಒಂದಾದರೂ ಮಾನದಂಡ ಪೂರೈಸುವಂತಿರುವ ಕುಟುಂಬಗಳು ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಯೋಜನೆ ಪಡೆಯಲು ಅರ್ಹರಾಗಿರುತ್ತವೆ. ಇಡೀ ಕುಟುಂಬಕ್ಕೆ ಒಂದು ವರ್ಷಕ್ಕೆ 5 ಲಕ್ಷ ರೂ ಇನ್ಷೂರೆನ್ಸ್ ಕವರೇಜ್ ಸಿಗುತ್ತದೆ. ಅದೂ ಉಚಿತವಾಗಿ.

ಇದನ್ನೂ ಓದಿ: ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವ ಅವಕಾಶ ಸೆ. 14ಕ್ಕೆ ಕೊನೆ; ಇನ್ನು 2-3 ದಿನ ಮಾತ್ರವೇ ಬಾಕಿ

ಈಗ ಹಿರಿಯ ನಾಗರಿಕರಿಗೆ ಮಾನದಂಡಗಳೇನು?

ಹಿರಿಯ ನಾಗರಿಕರಿಗೆ ಇರುವ ಒಂದೇ ಮಾನದಂಡ ಎಂದರೆ ಅವರು 70 ವರ್ಷ ವಯಸ್ಸು ದಾಟಿರಬೇಕು. ಯಾವುದೇ ಆರ್ಥಿಕ, ಸಾಮಾಜಿಕ ಸ್ತರದವರಾದರೂ ಪ್ರತಿಯೊಬ್ಬ ಹಿರಿಯ ನಾಗರಿಕರೂ ಪಿಎಂ ಜೆಎವೈ ಯೋಜನೆಗೆ ಅರ್ಹತೆ ಹೊಂದಿರುತ್ತಾರೆ.

ಈಗಾಗಲೇ ಪಿಎಂ ಜನ್ ಆರೋಗ್ಯ ಯೋಜನೆಯ ಫಲ ಪಡೆಯುತ್ತಿರುವ ಕುಟುಂಬದ ಭಾಗವಾಗಿರುವ ಹಿರಿಯ ನಾಗರಿಕರು ಪ್ರತ್ಯೇಕವಾಗಿ ಯೋಜನೆ ಪಡೆಯಬಹುದು. ಅವರಿಗೆ ಪ್ರತ್ಯೇಕವಾಗಿ 5 ಲಕ್ಷ ರೂ ಕವರೇಜ್ ಸಿಗುತ್ತದೆ.

ಬೇರೆ ಇನ್ಷೂರೆನ್ಸ್ ಸ್ಕೀಮ್ ಹೊಂದಿರುವವರು?

ಖಾಸಗಿ ಹೆಲ್ತ್ ಇನ್ಷೂರೆನ್ಸ್ ಹೊಂದಿರುವವರು, ಇಎಸ್​ಐ ಹೊಂದಿರುವವರು ಕೂಡ ಆಯುಷ್ಮಾನ್ ಭಾರತ್ ವಿಮಾ ಯೋಜನೆ ಪಡೆಯಲು ಅವಕಾಶ ಇರುತ್ತದೆ. ಆದರೆ, ಸೆಂಟ್ರಲ್ ಗವರ್ನ್ಮೆಂಟ್ ಹೆಲ್ತ್ ಸ್ಕೀಮ್ (ಸಿಜಿಎಚ್​ಎಸ್), ಎಕ್ಸ್ ಸರ್ವಿಸ್​ಮೆನ್ ಕಾಂಟ್ರಿಬ್ಯೂಟರಿ ಹೆಲ್ತ್ ಸ್ಕೀಮ್ (ಇಸಿಎಚ್​ಎಸ್), ಆಯುಷ್ಮಾನ್ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್ (ಸಿಎಪಿಎಫ್) ಮೊದಲಾದ ಸರ್ಕಾರ ಹೆಲ್ತ್ ಇನ್ಷೂರೆನ್ಸ್ ಹೊಂದಿರುವವರು ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಪಿಎಂ ಜನ್ ಆರೋಗ್ಯ ವಿಮಾ ಯೋಜನೆ ಪಡೆಯುವುದು ಹೇಗೆ?

  • ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್​ಗೆ ಮೊದಲು ನೊಂದಾಯಿಸಿಕೊಳ್ಳಬೇಕು. ಈ ಕಾರ್ಯವನ್ನು ಆನ್​ಲೈನ್​ನಲ್ಲೇ ಮಾಡಬಹುದು. ಪಿಎಂ ಜೆಎವೈನ ಪೋರ್ಟಲ್​ಗೆ ಭೇಟಿ ನೀಡಿ: pmjay.gov.in/
  • ಇಲ್ಲಿ ರಿಜಿಸ್ಟ್ರೇಶನ್ ವಿಭಾಗಕ್ಕೆ ಹೋಗಿ ‘ಅಪ್ಲೈ ಫಾರ್ ಪಿಎಂ ಜೆಎವೈ’ ಸೆಕ್ಷನ್ ಕ್ಲಿಕ್ ಮಾಡಿ
  • ಆಧಾರ್ ನಂಬರ್, ಮೊಬೈಲ್ ನಂಬರ್ ಇತ್ಯಾದಿ ಮಾಹಿತಿ ಭರ್ತಿ ಮಾಡಿ.
  • ಹೆಸರು, ಜನ್ಮದಿನಾಂಕ, ವಿಳಾಸ ಇತ್ಯಾದಿ ಮಾಹಿತಿಯನ್ನೂ ತುಂಬಿರಿ.
  • ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್​ಲೋಡ್ ಮಾಡಬೇಕಾಗುತ್ತದೆ.
  • ಇದಾದ ಬಳಿಕ ಸಬ್ಮಿಟ್ ಕೊಡಬೇಕು.

ಇದನ್ನೂ ಓದಿ: Ayushman Bharat: ಮೋದಿ ಸರ್ಕಾರದ ಮಹತ್ವದ ನಿರ್ಧಾರ; 70 ವರ್ಷ ಮೇಲ್ಪಟ್ಟವರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ

ನಿಮ್ಮ ಅರ್ಜಿಗೆ ಅನುಮೋದನೆ ಸಿಗಲು 10 ದಿನಗಳಾಗಬಹುದು. ಅಪ್​ಲೋಡ್ ಮಾಡಬೇಕಾದ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯ. ಹಾಗೆಯೇ, ವೋಟರ್ ಐಡಿ, ಪಾಸ್​ಪೋರ್ಟ್ ಅಥವಾ ಡಿಎಲ್​ನಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಐಡಿ ಪ್ರೂಫ್ ಆಗಿ ನೀಡಬೇಕಾಗುತ್ತದೆ. ಅಡ್ರೆಸ್ ಪ್ರೂಫ್​ಗೆ ಒಂದು ದಾಖಲೆ, ಇನ್ಕಮ್ ಸರ್ಟಿಫಿಕೇಟ್, ಜಾತಿ ಪ್ರಮಾಣಪತ್ರ ನೀಡಬೇಕಾಗುತ್ತದೆ. ಹಿರಿಯ ನಾಗರಿಕರಾಗಿದ್ದರೆ ಆಧಾರ್ ದಾಖಲೆಯಾದರೆ ಸಾಕಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ