ನವದೆಹಲಿ, ಜೂನ್ 13: ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ (Aadhaar card free update) ಮಾಡುವ ಅವಕಾಶವನ್ನು ಇನ್ನಷ್ಟು ಕಾಲ ವಿಸ್ತರಿಸಲಾಗಿದೆ. ಜೂನ್ 14ರವರೆಗೂ ಇದ್ದ ಕಾಲಾವಕಾಶ ಈಗ ಸೆಪ್ಟಂಬರ್ 14ರವರೆಗೂ ಮುಂದುವರಿದಿದೆ. ಯುಐಡಿಎಐ ಇಂದು ಗುರುವಾರ ಈ ವಿಚಾರವನ್ನು ಪ್ರಕಟಿಸಿದೆ. ಆಧಾರ್ ಕಾರ್ಡ್ ಹೊಂದಿರುವವರು ಶುಲ್ಕ ಇಲ್ಲದೇ ಸೆಪ್ಟಂಬರ್ 14ರವರೆಗೂ ಆನ್ಲೈನ್ನಲ್ಲಿ ಮಾಹಿತಿ ಅಪ್ಡೇಟ್ ಮಾಡಬಹುದಾಗಿದೆ. ಆಧಾರ್ ಕೇಂದ್ರಕ್ಕೆ ಹೋಗಿ ಮಾಡಿಸುವುದಾದರೆ 50 ರೂ ಶುಲ್ಕ ಪಾವತಿಸಬೇಕಾಗುತ್ತದೆ. ಸೆಪ್ಟಂಬರ್ 14ರ ಬಳಿಕವೂ ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಮಾಡಬಹುದಾದರೂ 50 ರೂ ಶುಲ್ಕ ನೀಡಬೇಕಾಗುತ್ತದೆ.
ಯುಐಡಿಎಐನ ಆಧಾರ್ ಪೋರ್ಟಲ್ನಲ್ಲಿ ವಿವಿಧ ಸೇವೆಗಳನ್ನು ಒದಗಿಸಲಾಗುತ್ತದೆ. ಬಯೋಮೆಟ್ರಿಲ್ ಲಾಕ್ ಮಾಡುವುದು, ಅನ್ಲಾಕ್ ಮಾಡುವುದು ಇತ್ಯಾದಿಯೂ ಅದರಲ್ಲಿ ಇದೆ. ಹಾಗೆಯೇ, ಆಧಾರ್ ಕಾರ್ಡ್ನಲ್ಲಿರುವ ಕೆಲ ಮಾಹಿತಿಯನ್ನು ಅಗತ್ಯಬಿದ್ದಲ್ಲಿ ಬದಲಿಸಬಹುದು.
ಹೆಸರು, ವಿಳಾಸ ಇವುಗಳನ್ನು ಆನ್ಲೈನ್ನಲ್ಲಿ ಉಚಿತವಾಗಿ ಮಾಡಬಹುದು. ಜನ್ಮದಿನಾಂಕ ಮೊದಲಾದವುಗಳನ್ನು ಅಪ್ಡೇಟ್ ಮಾಡಲು ಆಧಾರ್ ಸೆಂಟರ್ಗೆ ಹೋಗಬೇಕಾಗುತ್ತದೆ.
ಇದನ್ನೂ ಓದಿ: ಭಾರತದಲ್ಲಿದೆ ಬೆಟ್ಟದಷ್ಟು ಬಂಗಾರ! ಸೌದಿಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕ! ಇದು ದೇಶದ ಆರ್ಥಿಕ ಸ್ಥಿರತೆಯ ದ್ಯೋತಕ, ಹೇಗೆ?
ಹತ್ತು ವರ್ಷಗಳಿಂದ ಒಮ್ಮೆಯೂ ಅಪ್ಡೇಟ್ ಆಗದ ಆಧಾರ್ ಕಾರ್ಡ್ ಅನ್ನು ಪರಿಷ್ಕರಿಸಬೇಕೆಂದು ಯುಐಡಿಎಐ ಕೆಲವಾರು ವರ್ಷಗಳಿಂದ ಹೇಳುತ್ತಾ ಬಂದಿದೆ. ಇಂಥವರು ತಪ್ಪದೇ ತಮ್ಮ ಆಧಾರ್ ಅನ್ನು ಅಪ್ಡೇಟ್ ಮಾಡತಕ್ಕದ್ದು. ಆಧಾರ್ನಲ್ಲಿರುವ ತಮ್ಮ ವಿವರದಲ್ಲಿ ಯಾವ ಬದಲಾವಣೆ ಇಲ್ಲದಿದ್ದರೂ ತಮ್ಮ ಗುರುತು ದಾಖಲೆ ಮತ್ತು ವಿಳಾಸ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
ಸಬ್ಮಿಟ್ ಒತ್ತಿದ ಬಳಿಕ ನಿಮಗೆ 14 ಅಂಕಿ ಯುಆರ್ಎನ್ ಸಂಖ್ಯೆ ಬರುತ್ತದೆ. ಅಲ್ಲಿಗೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿದಂತಾಗುತ್ತದೆ.
ಇದನ್ನೂ ಓದಿ: ಮೋದಿ 3.0 ಸರ್ಕಾರದ ಚೊಚ್ಚಲ ಬಜೆಟ್ ಯಾವಾಗ? ಇಲ್ಲಿದೆ ಡೀಟೇಲ್ಸ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ