Aadhaar Card Update Deadline: ಆಧಾರ್ ಅಪ್​ಡೇಟ್​ಗೆ ಯಾವ ದಾಖಲೆ ಬೇಕು, ಹೇಗೆ ಸಲ್ಲಿಸಬೇಕು? ಇಲ್ಲಿದೆ ಡೀಟೇಲ್ಸ್

|

Updated on: Mar 15, 2024 | 12:33 PM

ಆಧಾರ್ ಕಾರ್ಡ್​ನಲ್ಲಿರುವ ನಿಮ್ಮ ವಿವರಗಳನ್ನು ಆನ್​ಲೈನ್​ನಲ್ಲಿ ಉಚಿತವಾಗಿ ಮಾರ್ಪಡಿಸಲು ಮಾರ್ಚ್ 14ಕ್ಕೆ ಇದ್ದ ಡೆಡ್​ಲೈನ್ ಅನ್ನು ಜೂನ್ 14ಕ್ಕೆ ವಿಸ್ತರಿಸಲಾಗಿದೆ. ಮೈ ಆಧಾರ್ ಪೋರ್ಟಲ್​ನಲ್ಲಿ ವ್ಯಕ್ತಿಯ ವಿವರ ಮತ್ತು ವಿಳಾಸದ ವಿವರವನ್ನು ಬದಲಿಸಬಹುದು. ಅದಕ್ಕೆ ಸಂಬಂಧ ಪಟ್ಟ ಪ್ರೂಫ್ ದಾಖಲೆಗಳ ಸ್ಕ್ಯಾನ್ಡ್ ಕಾಪಿಯನ್ನು ಮೈ ಆಧಾರ್ ಪೋರ್ಟಲ್​ನಲ್ಲಿ ಅಪ್​ಲೋಡ್ ಮಾಡಬೇಕು.

Aadhaar Card Update Deadline: ಆಧಾರ್ ಅಪ್​ಡೇಟ್​ಗೆ ಯಾವ ದಾಖಲೆ ಬೇಕು, ಹೇಗೆ ಸಲ್ಲಿಸಬೇಕು? ಇಲ್ಲಿದೆ ಡೀಟೇಲ್ಸ್
ಆಧಾರ್
Follow us on

ಆಧಾರ್ ಕಾರ್ಡ್ ವಿವರಗಳನ್ನು ಅಪ್​ಡೇಟ್ (Aadhaar details update) ಮಾಡಲು ಅವಕಾಶ ಇರುತ್ತದೆ. ಆನ್​ಲೈನ್​ನಲ್ಲಿ ಉಚಿತವಾಗಿಯೂ ಅದನ್ನು ಮಾಡಬಹುದು. ಮಾರ್ಚ್ 14ರವರೆಗೂ ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಬಹುದಾಗಿತ್ತು. ಈ ಅವಕಾಶವನ್ನು ಜೂನ್ 14ರವರೆಗೂ ವಿಸ್ತರಿಸಲಾಗಿದೆ. ಯಾವುದಾದರೂ ಆಧಾರ್ ಸೆಂಟರ್​ಗೆ ಹೋಗಿಯೂ ಆಧಾರ್ ವಿವರ ಅಪ್​ಡೇಟ್ ಮಾಡಬಹುದು. ಅದಕ್ಕೆ ನಿರ್ದಿಷ್ಟ ಶುಲ್ಕ ಇರುತ್ತದೆ. ಜೂನ್ 14 ರ ಬಳಿಕ ಆನ್​ಲೈನ್​ನಲ್ಲೂ ಕೂಡ ಶುಲ್ಕ ಪಾವತಿಸಿ ಆಧಾರ್ ಡೀಟೇಲ್ಸ್ ಅಪ್​ಡೇಟ್ ಮಾಡಬಹುದು. ಯುಐಡಿಎಐನ ವೆಬ್​ಸೈಟ್​ನಲ್ಲಿ ಮೈ ಆಧಾರ್ ಪೋರ್ಟಲ್​ಗೆ ಹೋಗುವ ಮೂಲಕ ಆಧಾರ್ ವಿವರಗಳನ್ನು ಮಾರ್ಪಡಿಸಬಹುದು.

ಮೈ ಆಧಾರ್ ಪೋರ್ಟಲ್​ನ ವಿಳಾಸ ಇಂತಿದೆ: myaadhaar.uidai.gov.in/

ಆಧಾರ್ ವಿವರ ಮಾರ್ಪಡಿಸಲು ಯಾವ ದಾಖಲೆಗಳು ಬೇಕು

ಆಧಾರ್ ಕಾರ್ಡ್​ನಲ್ಲಿ ವ್ಯಕ್ತಿಯ ಗುರುತು ಮತ್ತು ವಿಳಾಸದ ವಿವರವನ್ನು ಮಾರ್ಪಡಿಸಬಹುದು. ಅದಕ್ಕೆ ಅವೆರಡರ ಸಾಕ್ಷ್ಯ ದಾಖಲೆಗಳು ಅಗತ್ಯ ಇದೆ. ಇಂಥ ದಾಖಲೆಗಳು ನಿಮ್ಮಲ್ಲಿದೆಯಾ ಖಚಿತಪಡಿಸಿಕೊಳ್ಳಿ.

  • ಐಡಿ ಮತ್ತು ಅಡ್ರೆಸ್ ಪ್ರೂಫ್ ಎರಡಕ್ಕೂ ಸಲ್ಲುವ ದಾಖಲೆಗಳು: ವೋಟರ್ ಐಡಿ, ಪಾಸ್​ಪೋರ್ಟ್, ಸರ್ಕಾರದಿಂದ ನೀಡಲಾದ ಮತ್ತು ವಿಳಾಸ ನಮೂದಾಗಿರುವ ಯಾವುದೇ ಐಡಿ ಕಾರ್ಡ್ ಅಥವಾ ಸರ್ಟಿಫಿಕೇಟ್.
  • ಐಡಿ ಪ್ರೂಫ್​ಗೆ: ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಶಾಲೆಯ ಅಂಕ ಪಟ್ಟಿ, ಸರ್ಕಾರದಿಂದ ನೀಡಲಾದ ಐಡಿ ಕಾರ್ಡ್ ಅಥವಾ ಪ್ರಮಾಣಪತ್ರ.
  • ಅಡ್ರೆಸ್ ಪ್ರೂಫ್​ಗೆ: ಹಿಂದಿನ ಮೂರು ತಿಂಗಳ ಎಲೆಕ್ಟ್ರಿಕ್ ಬಿಲ್, ನೀರಿನ ಬಿಲ್, ಗ್ಯಾಸ್ ಬಿಲ್, ಬ್ಯಾಂಕ್ ಪಾಸ್​ಬುಕ್, ಪೋಸ್ಟ್ ಆಫೀಸ್ ಪಾಸ್​ಬುಕ್, ಬಾಡಿಗೆ ಕರಾರು ಇತ್ಯಾದಿ ದಾಖಲೆಗಳು.

ಇದನ್ನೂ ಓದಿ: ವೈದ್ಯರಿಗೆ ಗಿಫ್ಟ್, ಉಚಿತ ಟೂರ್ ಪ್ಯಾಕೇಜ್ ಇತ್ಯಾದಿ ಕೊಡುವಂತಿಲ್ಲ; ಫಾರ್ಮಾ ಕಂಪನಿಗಳಿಗೆ ಸರ್ಕಾರ ಲಕ್ಷ್ಮಣರೇಖೆ

ಆಧಾರ್​ನಲ್ಲಿ ಈ ದಾಖಲೆಗಳನ್ನು ಸಲ್ಲಿಸುವ ಕ್ರಮ

ಮೈ ಆಧಾರ್ ಪೋರ್ಟಲ್​ನಲ್ಲಿಯೇ ನೀವು ಆಧಾರ್ ವಿವರ ಅಪ್​ಡೇಟ್ ಮಾಡುವುದಿದ್ದರೆ ಸಂಬಂಧಪಟ್ಟ ದಾಖಲೆಯ ಸ್ಕ್ಯಾನ್ಡ್ ಕಾಪಿಯನ್ನು ಇಟ್ಟುಕೊಂಡಿರಿ.

  • ಮೈ ಆಧಾರ್ ಪೋರ್ಟಲ್​ಗೆ ಹೋಗಿ ಲಾಗಿನ್ ಆಗಬಹುದು. ಅಥವಾ ಮುಖ್ಯಪುಟದಲ್ಲಿ ಕೆಳಗೆ ಡಾಕ್ಯುಮೆಂಟ್ ಅಪ್​ಡೇಟ್ ಟ್ಯಾಬ್ ಕ್ಲಿಕ್ ಮಾಡಿ.
  • ಅಲ್ಲಿ ಆಧಾರ್ ನಂಬರ್ ನಮೂದಿಸಿ, ಕ್ಯಾಪ್ಚಾ ಹಾಕಿ ಒಟಿಪಿ ಮೂಲಕ ಲಾಗಿನ್ ಆಗಿರಿ.
  • ಆಗ ನಿಮ್ಮ ಹೆಸರು, ಲಿಂಗ, ಜನ್ಮ ದಿನಾಂಕ ಮತ್ತು ವಿಳಾಸದ ವಿವರ ನೋಡಬಹುದು.
  • ಅಲ್ಲಿ ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಅಪ್​ಡೇಟ್ ಮಾಡಬಹುದು. ಸಂಬಂಧ ಪಟ್ಟದ ದಾಖಲೆಯ ಸ್ಯಾನ್ಡ್ ಕಾಪಿಯನ್ನು ಅಪ್​ಲೋಡ್ ಮಾಡಬೇಕಾಗುತ್ತದೆ.
  • ಬಳಿಕ ಅಕ್ನಾಲೆಡ್ಜ್​ಮೆಂಟ್ ಅನ್ನು ಡೌನ್​ಲೋಡ್ ಮಾಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ