ಆಧಾರ್ ಕಾರ್ಡ್ ಬಹಳ ಪ್ರಮುಖವಾದ ನಾಗರಿಕ ದಾಖಲೆ. ವ್ಯಕ್ತಿಯ ಹೆಸರು, ವಿಳಾಸದಿಂದ ಹಿಡಿದು ಬೆರಳಚ್ಚು, ಕಣ್ಣಿನ ಸ್ಕ್ಯಾನ್ ಇತ್ಯಾದಿ ವಿಶೇಷ ದತ್ತಾಂಶವು (biometric data) ಈ ಕಾರ್ಡ್ನಲ್ಲಿ ಶೇಖರಣೆ ಆಗಿರುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಹೆಸರು ಬದಲಾವಣೆ, ವಿಳಾಸ ಬದಲಾವಣೆ ಆಗುವ ಸಾಧ್ಯತೆಗಳಿರುತ್ತವೆ. ಹಾಗೆಯೇ, ಆಧಾರ್ ಕಾರ್ಡ್ ಮಾಡಿಸುವಾಗ ಕೆಲವೊಮ್ಮೆ ತಪ್ಪಾಗಿ ಜನ್ಮದಿನಾಂಕ ಕೊಟ್ಟಿರಬಹುದು. ಅದರ ಬದಲಾವಣೆ ಮಾಡಬೇಕಾಗಬಹುದು. ಇವತ್ತು ಆನ್ಲೈನ್ನಲ್ಲೇ ಕೆಲವೊಂದು ಆಧಾರ್ ಮಾಹಿತಿಯನ್ನು ಬದಲಿಸಲು ಸಾಧ್ಯವಿದೆ. ಆಧಾರ್ ಸೇವಾ ಕೇಂದ್ರಕ್ಕೆ ಹೋಗಿಯೂ ಮಾಡಿಸಬಹುದು. ನಿಮ್ಮ ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದರಿಂದ ಈ ಕಾರ್ಯಗಳನ್ನು ಸುಲಭವಾಗಿ ಮಾಡಬಹುದು.
ಆಧಾರ್ ಕಾರ್ಡ್ನಲ್ಲಿ ಜನ್ಮದಿನಾಂಕವನ್ನು ತಿದ್ದಲು ಒಮ್ಮೆ ಮಾತ್ರವೇ ಅವಕಾಶ ಇರುತ್ತದೆ. ಎರಡನೇ ಬಾರಿ ತಿದ್ದಲು ಅವಕಾಶವೇ ಇಲ್ಲ ಎನ್ನುವಂತಿಲ್ಲ. ಅದಕ್ಕೂ ಅವಕಾಶ ಇದೆ. ಆದರೆ, ಕೆಲವೊಂದು ನಿಯಮಗಳು ಅನ್ವಯ ಆಗುತ್ತವೆ.
ಇದನ್ನೂ ಓದಿ: ಟಾಟಾನಾ, ಬಿರ್ಲಾನಾ?; ದೇಶದ ಅತಿದೊಡ್ಡ ಸಾಲಗಾರರು ಯಾರು? ಇಲ್ಲಿದೆ ಟಾಪ್-10 ಪಟ್ಟಿ
ಆಧಾರ್ನಲ್ಲಿ ನಿಮ್ಮ ಡೇಟ್ ಆಫ್ ಬರ್ತ್ ಅನ್ನು ಎರಡನೇ ಬಾರಿ ಅಪ್ಡೇಟ್ ಮಾಡಲೇಬೇಕೆಂದಿದ್ದರೆ ಅದಕ್ಕೆ ಎಕ್ಸೆಪ್ಷನ್ ಪ್ರೋಸಸ್ ಅಥವಾ ವಿಶೇಷ ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ. ನಿಮ್ಮ ಹೊಸ ಜನ್ಮದಿನಾಂಕಕ್ಕೆ ಸಾಕ್ಷ್ಯವಾಗಿರುವ ದಾಖಲೆ ನಿಮ್ಮ ಜೊತೆ ಇರಬೇಕು.
ಇದನ್ನೂ ಓದಿ: ಕ್ರೆಡಿಟ್ ರಿಪೋರ್ಟ್ ಎಂದರೇನು? ಕ್ರೆಡಿಟ್ ಸ್ಕೋರ್ಗಿಂತ ಅದು ಹೇಗೆ ಭಿನ್ನ? ಇಲ್ಲಿದೆ ಡೀಟೇಲ್ಸ್
ವಿಶೇಷ ಪ್ರಕ್ರಿಯೆಗೆ ಬಿಬಿಎಂಪಿ ಅಥವಾ ನಿಮ್ಮ ಜಿಲ್ಲೆಯ ಪ್ರಾಧಿಕಾರ ನೀಡಿದ ಜನನ ಪ್ರಮಾಣಪತ್ರ ಹಾಗೂ ಸೆಲ್ಫ್ ಡಿಕ್ಲರೇಶನ್ ಅರ್ಜಿ ಇರಬೇಕು.
ಬಳಿಕ ಯುಐಡಿಎಐ ವೆಬ್ಸೈಟ್ಗೆ ಹೋಗಿ ಎಕ್ಸೆಪ್ಷನ್ ಪ್ರೋಸಸ್ಗೆ (exception process) ಮನವಿ ಸಲ್ಲಿಸಬೇಕು. ನಿಮ್ಮಲ್ಲಿರುವ ದಾಖಲೆಯನ್ನು ಯುಐಡಿಎಐಗೆ ಒದಗಿಸಬೇಕು. ಪ್ರಾಧಿಕಾರವು ಇದನ್ನು ಪರಿಶೀಲನೆ ನಡೆಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತದೆ.
ಒಂದು ವೇಳೆ ನೀವು ಜನ್ಮದಿನಾಂಕವನ್ನು ಮೊದಲ ಬಾರಿಗೆ ಅಪ್ಡೇಟ್ ಮಾಡುತ್ತಿದ್ದರೆ ಎಕ್ಸೆಪ್ಷನ್ ಪ್ರೋಸಸ್ ಅಗತ್ಯ ಇರುವುದಿಲ್ಲ. ನೇರವಾಗಿ ನೀವು ಆಧಾರ್ ಕೇಂದ್ರಕ್ಕೆ ಹೋಗಿ ಸೂಕ್ತ ದಾಖಲೆ ನೀಡಿ ಅಪ್ಡೇಟ್ ಮಾಡಬಹುದು. ಹಾಗೊಂದು ವೇಳೆ ನಿಮ್ಮ ಮೊದಲ ಅಪ್ಡೇಟ್ ಮನವಿ ತಿರಸ್ಕೃತಗೊಂಡರೆ ನೀವು 1947 ನಂಬರ್ಗೆ ಕರೆ ಮಾಡಿ, ಕಾರಣ ತಿಳಿಯಬಹುದು. ತಪ್ಪಿದ್ದರೆ ಅದನ್ನು ಸರಿಪಡಿಸಿ ಮತ್ತೊಮ್ಮೆ ಪ್ರಯತ್ನಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ