ತನ್ನ ಪೂರ್ತಿ ಪೇಟಿಎಂ ಪಾಲು ಮಾರಿಬಿಟ್ಟ ವಾರನ್ ಬಫೆಟ್; ಹೂಡಿಕೆತಜ್ಞನಿಗೆ ಆದ ನಷ್ಟ ಬರೋಬ್ಬರಿ 507 ಕೋಟಿ ರೂ

Warren Buffet Loss In Paytm: ಪೇಟಿಎಂ ಮೇಲೆ ಎರಡು ಸಾವಿರ ಕೋಟಿ ರೂಗೂ ಹೆಚ್ಚು ಮೊತ್ತದ ಹೂಡಿಕೆ ಮಾಡಿದ್ದ ವಾರನ್ ಬಫೆಟ್ ಮಾಲಕತ್ವದ ಬರ್ಕ್​ಶೈರ್ ಹಾಥವೇ ಸಂಸ್ಥೆ ಇದೀಗ ತನ್ನೆಲ್ಲಾ ಪಾಲಿನ ಷೇರುಗಳನ್ನು ಮಾರಿದೆ. ಆದರೆ, ಖರೀದಿಬೆಲೆಗಿಂತ ಕಡಿಮೆ ಬೆಲೆಗೆ ಈ ಮಾರಾಟವಾಗಿದೆ. ಈ ವ್ಯವಹಾರದಲ್ಲಿ ವಾರನ್ ಬಫೆಟ್ ಅವರ ಸಂಸ್ಥೆಗೆ 500 ಕೋಟಿ ರೂಗೂ ಹೆಚ್ಚು ನಷ್ಟವಾಗಿದೆ.

ತನ್ನ ಪೂರ್ತಿ ಪೇಟಿಎಂ ಪಾಲು ಮಾರಿಬಿಟ್ಟ ವಾರನ್ ಬಫೆಟ್; ಹೂಡಿಕೆತಜ್ಞನಿಗೆ ಆದ ನಷ್ಟ ಬರೋಬ್ಬರಿ 507 ಕೋಟಿ ರೂ
ಪೇಟಿಎಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 27, 2023 | 4:26 PM

ನವದೆಹಲಿ, ನವೆಂಬರ್ 27: ವಿಶ್ವಖ್ಯಾತ ಷೇರು ಹೂಡಿಕೆದಾರ ವಾರನ್ ಬಫೆಟ್ (Warren Buffett) ಮಾಲಕತ್ವದ ಬರ್ಕ್​ಶೈರ್ ಹಾತವೇ (Berkshire hathaway) ಸಂಸ್ಥೆ ಪೇಟಿಎಂನಲ್ಲಿ ಮಾಡಿದ್ದ ಹೂಡಿಕೆಯನ್ನು ಸಂಪೂರ್ಣವಾಗಿ ಹಿಂಪಡೆದಿದೆ. ಒನ್97 ಕಮ್ಯೂನಿಕೇಶನ್ಸ್ (ಪೇಟಿಎಂ) ಸಂಸ್ಥೆಯಲ್ಲಿ ತಾನು ಹೊಂದಿದ್ದ ಎಲ್ಲಾ 1 ಕೋಟಿಗೂ ಷೇರುಗಳನ್ನೂ ಬರ್ಕ್​ಶೈರ್ ಹಾತವೇ ಮಾರಿದೆ. ಘಿಸಾಲೋ ಮಾಸ್ಟರ್ ಫಂಡ್ (Ghisallo Master Fund) ಮತ್ತು ಕಾಪ್ಟ್​ಹಾಲ್ ಮಾರಿಶಸ್ ಇನ್ವೆಸ್ಟ್​ಮೆಂಟ್ ಸಂಸ್ಥೆ (Copthall Mauritius Investment) ಕ್ರಮವಾಗಿ 42,75,000 ಹಾಗೂ 75,75,529 ಷೇರುಗಳನ್ನು ಖರೀದಿಸಿವೆ. ಒಂದು ಷೇರಿಗೆ ಸರಾಸರಿ 877.2 ರೂನಂತೆ ಇವು ಬಿಕರಿಯಾಗಿವೆ. ಹಾಲಿ ಮಾರುಕಟ್ಟೆ ಬೆಲೆಗಿಂತ ಬಹಳ ಕಡಿಮೆಗೆ ಈ ಷೇರುಗಳ ವಹಿವಾಟು ನಡೆದಿದೆ.

ಸೆಪ್ಟೆಂಬರ್ ಅಂತ್ಯದಲ್ಲಿ ಪೇಟಿಎಂ ಸಂಸ್ಥೆಯ ಶೇ. 2.46ರಷ್ಟು ಪಾಲನ್ನು ಬರ್ಕ್​ಶೈರ್ ಹಾಥವೇ ಹೊಂದಿತ್ತು. ಶೇ. 2.46 ಅಂದರೆ ಸುಮಾರು 1,56,23,529 ಷೇರುಗಳನ್ನು ವಾರನ್ ಬಫೆಟ್ ಅವರ ಸಂಸ್ಥೆ ಹೊಂದಿತ್ತು. 2018ರ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 2,179 ಕೋಟಿ ರೂ ಮೊತ್ತಕ್ಕೆ 1,279.7 ರೂನಂತೆ ಪೇಟಿಎಂನ ಷೇರುಗಳನ್ನು ಬರ್ಕ್​ಶೈರ್ ಖರೀದಿ ಮಾಡಿತ್ತು. ಆಗಿನ್ನೂ ಪೇಟಿಎಂ ಐಪಿಒ ಆಫರ್ ಮಾಡಿರಲಿಲ್ಲ.

ಇದನ್ನೂ ಓದಿ: ಬೆಂಗಳೂರಿನ ಗರಡಿ ಮನೆಗೆ ಧೋನಿ ದುಡ್ಡು; ಸಾಂಪ್ರದಾಯಿಕ ವ್ಯಾಯಾಮಕ್ಕೆ ಆಧುನಿಕ ಪುನಶ್ಚೇತನ ಕೊಟ್ಟ ತಗ್ಡಾ ರಹೋ

2021ರ ನವೆಂಬರ್ ತಿಂಗಳಲ್ಲಿ ಪೇಟಿಎಂ ಐಪಿಒನಲ್ಲಿ 2,150 ರೂ ಬೆಲೆ ಪಡೆದಿತ್ತು. ಸಂದರ್ಭದಲ್ಲಿ ಬರ್ಕ್​ಶೈರ್ 301.70 ಕೋಟಿ ರೂ ಮೊತ್ತದ ಷೇರುಗಳನ್ನು ಮಾರಿತ್ತು. ಈಗ 1,371 ಕೋಟಿ ರೂ ಮೊತ್ತದ ಷೇರುಗಳನ್ನು ಮಾರಿದೆ. ಇದರೊಂದಿಗೆ ಒಟ್ಟು 1,672.7 ಕೋಟಿ ರೂ ಹಣ ಗಳಿಸಿದೆ. ಒಟ್ಟಾರೆ, ಪೇಟಿಎಂನಲ್ಲಿ ಹೂಡಿಕೆ ಮಾಡಿದ ಫಲಶ್ರುತಿಯಾಗಿ ಬರ್ಕ್​ಶೈರ್ ಹಾಥವೇ ಸಂಸ್ಥೆಗೆ 507 ಕೋಟಿ ರೂ ನಷ್ಟವಾದಂತಾಗಿದೆ.

ಪೇಟಿಎಂ ಷೇರುಗಳನ್ನು ಸಾಂಸ್ಥಿಕ ಹೂಡಿಕೆದಾರರು ಮಾರುತ್ತಿರುವುದು ಯಾಕೆ?

ಸಾಫ್ಟ್​ಬ್ಯಾಂಕ್, ಆಲಿಬಾಬಾ ಗ್ರೂಪ್ ಮೊದಲಾದ ಕೆಲ ಹೂಡಿಕೆದಾರ ಸಂಸ್ಥೆಗಳು ತಮ್ಮ ಕೆಲ ಪೇಟಿಎಂ ಷೇರುಗಳನ್ನು ಮಾರಿವೆ. ಹೂಡಿಕೆದಾರರಿಗೆ ಇರುವ ಲಾಕ್-ಇನ್ ಪೀರಿಯಡ್ ಅವಧಿ ನವೆಂಬರ್​ನಲ್ಲಿ ಮುಗಿದಿರುವುದರಿಂದ ಈ ಮಾರಾಟ ನಡೆದಿರುವುದು ತಿಳಿದುಬಂದಿದೆ. ಅಲ್ಲದೇ ಪೇಟಿಎಂನ 2ನೇ ತ್ರೈಮಾಸಿಕ ಅವಧಿಯಲ್ಲಿ 292 ಕೋಟಿ ರೂ ನಷ್ಟವಾಗಿರುವ ವರದಿ ಬಂದಿತ್ತು. ಅದೂ ಕೂಡ ಹೂಡಿಕೆದಾರರು ಹಿಂತೆಗೆಯಲು ಕಾರಣವಾಗಿರಬಹುದು.

ಇದನ್ನೂ ಓದಿ: ಅದಾನಿ-ಹಿಂಡನ್ಬರ್ಗ್ ರಿಪೋರ್ಟ್, ಚೀನಾ ಬೆಂಬಲಿಗರ ಕರ್ಮಕಾಂಡ: ರಾಜ್ಯಸಭಾ ಸಂಸದ ಮಹೇಶ್ ಜೇಠ್ಮಲಾನಿ ಅರೋಪ

ಮೇಲೇರುತ್ತಿರುವ ಪೇಟಿಎಂ ಷೇರು?

ಐಪಿಒನಲ್ಲಿ ಭರ್ಜರಿ ಬೆಲೆ ಪಡೆದಿದ್ದ ಪೇಟಿಎಂ ಆ ಬಳಿಕ ಅಚ್ಚರಿ ರೀತಿಯಲ್ಲಿ ಕುಸಿತ ಕಂಡಿತ್ತು. ಒಂದು ಹಂತದಲ್ಲಿ ಅದರ ಷೇರುಬೆಲೆ 440 ರೂಗೆ ಇಳಿದುಹೋಗಿತ್ತು. ಭಾರೀ ನಿರೀಕ್ಷೆಯಲ್ಲಿ ಪೇಟಿಎಂ ಷೇರು ಮೇಲೆ ಹೂಡಿಕೆ ಮಾಡಿದ್ದವರು ದಿಕ್ಕಾಪಾಲಗುವಂತಾಗಿತ್ತು. ಆದರೆ, 2023ರಲ್ಲಿ ಅದರ ಷೇರು ಕಂಬ್ಯಾಕ್ ಮಾಡಿದೆ. ಕಳೆದ ಗುರುವಾರದಂದು ಅದರ ಷೇರುಬೆಲೆ 922 ರೂ ದಾಟಿತ್ತು. ಈಗ ಸೋಮವಾರ ವಹಿವಾಟು ಅಂತ್ಯದಲ್ಲಿ 895 ರೂ ಬೆಲೆಗೆ ನಿಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ