Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಗರಡಿ ಮನೆಗೆ ಧೋನಿ ದುಡ್ಡು; ಸಾಂಪ್ರದಾಯಿಕ ವ್ಯಾಯಾಮಕ್ಕೆ ಆಧುನಿಕ ಪುನಶ್ಚೇತನ ಕೊಟ್ಟ ತಗ್ಡಾ ರಹೋ

MS Dhoni Invests In Bengaluru Startup Tagada Raho: ಸಾಂಪ್ರದಾಯಿಕ ಗರಡಿಮನೆ ಶೈಲಿಯ ವ್ಯಾಯಾಮ ಮತ್ತು ದೈಹಿಕ ಕಸರತ್ತಿಗೆ ಆಧುನಿಕ ಸ್ಪರ್ಶ ಕೊಟ್ಟಿರುವ ತಗ್ಡಾ ರಹೋ ಬೆಂಗಳೂರಿನಲ್ಲಿ ಖ್ಯಾತವಾಗುತ್ತಿದೆ. ಇದೀಗ ಬೇರೆ ಬೇರೆ ರಾಜ್ಯಗಳಲ್ಲಿ ಇದರ ಫ್ರಾಂಚೈಸಿಗಳು ವಿಸ್ತರಣೆ ಆಗುತ್ತಿವೆ. ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಗ್ಡಾ ರಹೋನಲ್ಲಿ ಹೂಡಿಕೆ ಮಾಡಿದ್ದಾರೆ.

ಬೆಂಗಳೂರಿನ ಗರಡಿ ಮನೆಗೆ ಧೋನಿ ದುಡ್ಡು; ಸಾಂಪ್ರದಾಯಿಕ ವ್ಯಾಯಾಮಕ್ಕೆ ಆಧುನಿಕ ಪುನಶ್ಚೇತನ ಕೊಟ್ಟ ತಗ್ಡಾ ರಹೋ
ತಗ್ಡಾ ರಹೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 27, 2023 | 3:19 PM

ಬೆಂಗಳೂರು, ನವೆಂಬರ್ 27: ಬೆಂಗಳೂರು ಮೂಲದ ಫಿಟ್ನೆಸ್ ಸ್ಟಾರ್ಟಪ್ ತಗಡಾ ರಹೋಗೆ (Tagada Raho) ಮಾಜಿ ಟೀಮ್ ಇಂಡಿಯಾ ಕ್ರಿಕೆಟ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೂಡಿಕೆ ಮಾಡಿದ್ದಾರೆ. ತಗ್ಡಾ ರಹೋ ಸಾಂಪ್ರದಾಯಿಕ ಶೈಲಿಯ ದೈಹಿಕ ವ್ಯಾಯಾಮ ಪದ್ಧತಿಗೆ ಆಧುನಿಕ ಸ್ಪರ್ಶ ನೀಡುವ ಕಂಪನಿ. ಸಾಂಪ್ರದಾಯಿಕ ಗರಡಿ ಮನೆಗಳಲ್ಲಿರುವ ವ್ಯಾಯಾಮ ಸಲಕರಣೆಗಳನ್ನು ಬಳಸಿ ಫಿಟ್ನೆಸ್ ಕಲ್ಪಿಸಲಾಗುತ್ತದೆ. ಮನೀಶ್ ಮಲ್ಹೋತ್ರಾ ಅವರು ಸಂಸ್ಥಾಪಿಸಿದ ಈ ಫಿಟ್ನೆಸ್ ಸ್ಟಾರ್ಟಪ್​ನ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ. ಡಗ್ ಔಟ್ ಎಂದು ಕರೆಯಲಾಗುವ ಇದರ ತರಬೇತಿ ಕೇಂದ್ರದಲ್ಲಿ ಬಹಳಷ್ಟು ಮಂದಿ ಟ್ರೈನಿಂಗ್ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಎರಡು ಕಡೆ ಇದರ ಟ್ರೈನಿಂಗ್ ಸೆಂಟರ್​ಗಳಿವೆ. ಅಲಸೂರಿನ ಎಸ್​ಯುಎಫ್​ಸಿ ಗ್ರೌಂಡ್ಸ್ ಹಾಗೂ ಹೆಚ್​ಎಸ್​ಆರ್ ಲೇಔಟ್​ನಲ್ಲಿ ಡಗ್ ಔಟ್​ಗಳಿವೆ. ಇಲ್ಲಿ ಬೆಳಗ್ಗೆ 6:30ಕ್ಕೆ ಆರಂಭವಾಗಿ 10 ಗಂಟೆಯವರೆಗೆ ತೆರೆದಿರುತ್ತೆ. ಸಂಜೆ 5ರಿಂದ 9ರವರೆಗೂ ತೆರೆದಿರುತ್ತದೆ.

ಸಾಂಪ್ರದಾಯಿಕ ಉಪಕರಣದ ಜೊತೆ ಆಧುನಿಕ ತಂತ್ರವನ್ನು ಈ ಡಗ್​ ಔಟ್​ನಲ್ಲಿ ಕಲಿಸಿಕೊಡಲಾಗುತ್ತದೆ. ಬೆಂಗಳೂರಿನಲ್ಲಿ ಇದರ ಡಗ್ ಔಟ್ ಯಶಸ್ವಿಯಾಗಿದೆ. ಮಹಾರಾಷ್ಟ್ರದಲ್ಲಿ ತಗಡಾ ರಹೋ ಮೊದಲ ಡಗ್​ ಔಟ್ ಮುಂದಿನ ತಿಂಗಳು ಆರಂಭವಾಗಲಿದೆ. ಮುಂದಿನ ವರ್ಷ 4-5 ರಾಜ್ಯಗಳಿಗೆ ಇದರ ಬಿಸಿನೆಸ್ ವಿಸ್ತರಣೆ ಆಗಲಿದೆ. ಇತರ ಹಲವು ಫಿಟ್ನೆಸ್ ಸೆಂಟರ್​ಗಳಂತೆ ತಗಡಾ ರಹೋ ಕೂಡ ಫ್ರಾಂಚೈಸಿ ಬಿಸಿನೆಸ್ ಆಫರ್ ಮಾಡುತ್ತಿದೆ.

ಇದನ್ನೂ ಓದಿ: ಅದಾನಿ-ಹಿಂಡನ್ಬರ್ಗ್ ರಿಪೋರ್ಟ್, ಚೀನಾ ಬೆಂಬಲಿಗರ ಕರ್ಮಕಾಂಡ: ರಾಜ್ಯಸಭಾ ಸಂಸದ ಮಹೇಶ್ ಜೇಠ್ಮಲಾನಿ ಅರೋಪ

ತಗ್ಡಾ ರಹೋ ಫ್ರಾಂಚೈಸಿ ಪಡೆಯುವುದು ಹೇಗೆ?

ತಗ್ಡಾ ರಹೋ ಫ್ರಾಂಚೈಸಿ ಪಡೆಯಬಹುದು. ಈ ಮುಂದಿನ ವೆಬ್ ವಿಳಾಸಕ್ಕೆ ಭೇಟಿ ನೀಡಿ: www.tagdaraho.in/contact-10

ಫೋನ್ ನಂ: 9972777744

ಅದರ ಇನ್ಸ್​ಟಾಗ್ರಾಮ್ ಲಿಂಕ್ ಇಲ್ಲಿದೆ; www.instagram.com/tagdaraho

ಎಂಎಸ್ ಧೋನಿ ಹೂಡಿಕೆ

ಮಹೇಂದ್ರ ಸಿಂಗ್ ಧೋನಿ ಸ್ವತಃ ಆಂಟ್ರಪ್ರನ್ಯೂರ್ ಎನಿಸಿದ್ದಾರೆ. ಹಾಗೆಯೇ, ಹೊಸಬರನ್ನು ಉತ್ತೇಜಿಸುತ್ತಾರೆ. ವಿಶೇಷವಾದ ಸ್ಟಾರ್ಟಪ್​ಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ತಗ್ಡಾ ರಹೋದಲ್ಲಿ ಅವರು ಎಷ್ಟು ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಗೊತ್ತಾಗಿಲ್ಲ. ಆದರೆ, ಆ ಸ್ಟಾರ್ಟಪ್ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ಇಸ್ರೋ ಬಿಟ್ಟು ಹೊಸ ಕಂಪನಿ ಕಟ್ಟಿದ ಐಐಟಿ ಪದವೀಧರರು; ಇಲಾನ್ ಮಸ್ಕ್ ಹಾದಿಯಲ್ಲಿ ಇಬ್ಬರು ಭಾರತೀಯರು

‘ತಗ್ಡಾ ರಹೋ ಬಹಳ ಕುತೂಹಕಾರಿ ಎನಿಸುತ್ತದೆ. ಜನರು ಮರೆತೇಹೋದ ದೈಹಿಕ ಕಸರತ್ತನ್ನು ಮರಳಿ ತರುತ್ತಿದೆ’ ಎಂದು ಎಂಎಸ್ ಧೋನಿ ಹೇಳಿದ್ದಾರೆ.

ತಗ್ಡಾ ರಹೋ ಮಾದರಿಯ ತರಬೇತಿಯನ್ನು ಲಕ್ನೋ ಸೂಪರ್ ಜೇಂಟ್ಸ್, ಹರ್ಯಾಣ ಸ್ಟೀಲರ್ಸ್ ಕಬ್ಬಡಿ ತಂಡ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಳವಡಿಸಲಾಗಿದೆ. ಈ ಉಪಕರಣಗಳು ಅಥ್ಲೀಟ್​ಗಳಿಗೆ ಗಾಯದ ಸಮಸ್ಯೆಯನ್ನು ನಿವಾರಿಸಬಲ್ಲುವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Horoscope: ಕರ್ಮಕಾರಕ ಶನಿ ಕುಂಭದಿಂದ ಮೀನ ರಾಶಿಯತ್ತ ಪ್ರವೇಶ
Daily Horoscope: ಕರ್ಮಕಾರಕ ಶನಿ ಕುಂಭದಿಂದ ಮೀನ ರಾಶಿಯತ್ತ ಪ್ರವೇಶ
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?